ಒಟ್ಟು 1951 ಕಡೆಗಳಲ್ಲಿ , 110 ದಾಸರು , 1438 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯಧಿಕ ಹರನಧಿಕ ಎಂದು ಹೋರಾಡದಿರಿ |ಹರಿಹರರ ಭಕ್ತರೇ ಸಾಕ್ಷಿ ಲೋಕದೊಳು ಪ.ಹರಿಯೆಂದು ಪ್ರಹ್ಲಾದ ಬಂದ ದುರಿತವ ಗೆಲಿದ |ಹರನೆಂದು ಅವನ ಪಿತ ತಾನೆ ಅಳಿದ ||ಹರಿಯೆಂದ ವಿಭೀಷಣನು ಸ್ಥಿರಪಟ್ಟವೈದಿದ |ಹರನೆಂದ ರಾವಣನು ಹತನಾದನಯ್ಯ 1ಹರಿಯೆಂದು ಭೀಮ ಪರಿಪೂರ್ಣಕಾಮನು ಆದ |ಹರನೆಂದ ಆ ಜರಾಸಂಧ ಹತನಾದ ||ಹರಿಯು ಬಾಗಿಲ ಕಾಯ್ದ ಬಲ ಭಾಗ್ಯವಂತನಾದ |ಹರನು ಬಾಗಿಲ ಕಾಯ್ದ ಬಾಣನಳಿದ 2ಹರನ ವರವನು ಪಡೆದ ಭಸ್ಮಾಸುರನು ಅವನ |ಶಿರದಲ್ಲಿ ತನ್ನ ಕರವಿಡಲು ಬರಲು ||ಹರಿ ನೀನೆ ಗತಿಯೆಂದು ತ್ರಿಪುರಾರಿ ಮೊರೆಯಿಡಲು |ವರದ ಪುರಂದರವಿಠಲ ಕಾಯ್ದುದರಿಯ ? 3
--------------
ಪುರಂದರದಾಸರು
ಹರಿಯೆ ಸರ್ವೋತ್ತಮ ಹರಿಯೆ ಪರದೈವತ |ಹರಿಯೆ ಸರ್ವಂ ವಿಷ್ಣುಮಯಂ ಜಗತು ಪ.ಹರಿಯಲ್ಲದನ್ಯತ್ರ ದೈವಗಳುಂಟೆಂದು |ಉರುಗನ ಮುಡಿಯನಾರಾದರೆತ್ತಲಿ ಅಪಜಗಂಗಳ ಪುಟ್ಟಿಸುವಬೊಮ್ಮ ನಿನ್ನ ಮಗ |ಜಗದ ಸಂಹಾರಕ ನಿನ್ನ ಮೊಮ್ಮಗನು ||ಜಗದ ಪಾವನೆ ಭಾಗೀರಥಿ ನಿನ್ನ ಮಗಳು |ಜಗದ ಜೀವನಮಾತೆ ನಿನ್ನರಸಿಯಲೆ ದೇವ 1ವಿಶ್ವತೋಮುಖ ನೀನೆ, ವಿಶ್ವತಶ್ಚಕ್ಷು ನೀನೆ |ವಿಶ್ವತೋಬಾಹುವಿಶ್ವ ಉದರ ನೀನೆ ||ವಿಶ್ವವ್ಯಾಪಾರ ವಿಶ್ವಸೂತ್ರಧಾರಕ ನೀನೆ |ವಿಶ್ವನಾಟಕ ವಿಶ್ವವಿಷ್ಣುವೇ ನಮೋ ನಮೋ 2ಆಗಮನಿಗಮ ಪೌರಾಣ ಶಾಸ್ತ್ರಂಗಳಿಗೆ |ಯೋಗಿಜನಕಗಮ್ಯಮೂರ್ತಿ ನೀನೆ ||ನಾಗಶಯನಸಿರಿ ಭೋಗಿಭೂಷಣವಿನುತ |ಭಾಗವತರ ಪ್ರಿಯ ಪುರಂದರವಿಠಲ 3
--------------
ಪುರಂದರದಾಸರು
ಹರಿಹರಿಧ್ಯಾನಿಸೊ ಲಕ್ಷ್ಮೀವರನ ಧ್ಯಾನಿಸೊಪಉರಗಶಯನನಾಗಿಘೋರಶರಧಿಯನ್ನು ಮಧಿಸಿರುವಸುರರಿಗಮೃತವೆರೆದ ನಮ್ಮ ಗರುಡಗಮನ ತಾನುಅ.ಪದಂಡಧರಗೆ ಸಿಲುಕಿ ನರಕ ಕೊಂಡದಲ್ಲಿ ಮುಳುಗಲ್ಯಾಕೆಪುಂಡರೀಕನಯನ ಪಾಂಡುರಂಗನೆನ್ನದೇಶುಂಡಲಾಪುರಾದಿ ಪಾಲ ಪಾಂಡುಪುತ್ರ ಧರ್ಮರಾಯಕಂಡು ನಮಿಸಿ ಪೂಜೆಗೈದ ಅಂಡಜವಾಹನನೆಂದು1ಬಾಯಬಡಿಕನಾಗಿ ಸರ್ವ ನ್ಯಾಯ ತಪ್ಪಿ ಮಾತನಾಡಿಕಾಯಬೆಳೆಸಿ ತಿರುಗಿ ಬಂದೆ ಸಾಯಲಾ ಕಥೆವಾಯುತನಯ ವಂದ್ಯಚರಣಕಾಯಜಛೆಂದೆರಗಿದವಗೆಆಯುಧವರೇಣ್ಯ ಸರ್ವಸಹಾಯವ ಮಾಡುವಾ2ಕಂದ ಅಬಲ ವೃದ್ಧರೆಂದು ಬಂಧು ಜನರು ಭಾಗ ಕಿರಿದುಕಂದುಕುಂದುರೋಗಿ ಸ್ತ್ರೀಯರೆಂದು ಭೇದವೊಇಂದಿರೇಶಗಿಲ್ಲ ನರರು ಒಂದೇ ಮನದಿ ಧ್ಯಾನಿಸಿದರೆಸುಂದರಾಂಗಮೂರ್ತಿಗೋವಿಂದ ಪೊರೆಯುವಾ3
--------------
ಗೋವಿಂದದಾಸ
ಹಾ ಹಾ ಸಾಧುರು ಮೆಚ್ಚದನಕ ಹರಿಗುರು ಮೆಚ್ಚ ಪ.ನನ್ನ ಗುಣಕೆ ನಾ ಮೆಚ್ಚಿದೆ ಬರಿದೆಪುಣ್ಯವಂತನೆಂದನ್ಯರ ಜರಿದೆಉನ್ನತ ಸೂಕ್ಷ್ಮ ಸುಧರ್ಮವ ಕಾಣೆನನ್ನೊಳು ನಾ ವೃಥಾ ಹಿಗ್ಗಿದರೇನು 1ಜನದೊಳು ದಣಿಯದೆ ಜ್ಞಾನವನೊರೆದುಘನವೈರಾಗ್ಯಕೆ ಹಿಂದಕೆ ಸರಿದುತನು ಮನ ಕದ್ದು ಭಕುತಿಯೊಳಿದ್ದುಹೆಣಗಾಡುತ ಭಾಗವತೆನಿಸಿದ್ದು 2ಸಂತರು ಒಪ್ಪಿದ ಜ್ಞಾನಿಯವ ಸಂತಸಂತರಿಗಾಗದವಿರತಿಭ್ರಾಂತಿಸಂತರುಕೂಡಿದಭಕುತಿ ಮುಕುತಿಸಂತರ ಪ್ರಿಯ ಪ್ರಸನ್ವೆಂಕಟಯ್ಯ 3
--------------
ಪ್ರಸನ್ನವೆಂಕಟದಾಸರು
ಹಿಂದಿನ ಬವಣೆಗಳೆಲ್ಲ ಆಗಲೆ ಮರೆದೆಯೇನೊ |ಇಂದುಬಂದ ಭಾಗ್ಯವು ನಿಜವೆ ವೆಂಕಟತಂದೆ?ಪತಲೆಗೆ ಹುಲಗಲ ಹೂವಕಟ್ಟಿತುರುಗಳ ಕಾಯುತಲಿದ್ದೆ |ಹಲವು ರತ್ನದ ಮುಕುಟ ಈಗ ಇಟ್ಟಿಹೆನೆಂದು 1ಒಪ್ಪಿಡಿಅವಲಕ್ಕಿಯನು ಒಪ್ಪದಿಂದ ಸವಿದೇ ಸವಿದೆ |ತಪ್ಪದೆ ಪಂಚಾಮೃತ ಉಂಡು ಸೊಕ್ಕಿದೆನೆಂದು 2ಭಾಗ್ಯವು ಬಂದರೆ ಭಕ್ತರನು ಮರೆವರೆ ಸೌ-|ಭಾಗ್ಯವಂತ ನೀನುಪುರಂದರವಿಠಲ3
--------------
ಪುರಂದರದಾಸರು
ಹಿಂದಿಲ್ಲಾ ಇನ್ನು ಮುಂದಿಲ್ಲಾ |ಹಿಂದಿಲ್ಲಾ ಮುಂದಿಲ್ಲಾ | ಒಂದಿನ ಸುಖವಿಲ್ಲಾಪನಂದ ಗೋಪನ ಮುದ್ದು | ಕಂದ ನೀನಲ್ಲದೆ ಅ.ಪಉಡುವರಿವೆ ಇಲ್ಲಾ ಉಂಬರನ್ನವು ಇಲ್ಲ |ನಡೆವರೆ ಮುಂದೆ ದಾರಿಯು ಕಾಣೆನಲ್ಲ ||ಪೊಡವಿ ಪಾಲಕ ಶ್ರೀಕೃಷ್ಣ ನೀನಲ್ಲದೇ |ಬಡವನ ಬಾರೆಂದು ಕರೆದು ಮನ್ನಿಪರಿಲ್ಲ1ಕಾಸು ಕೈಯೊಳಗಿಲ್ಲ | ಆಸೆ ದೇಹದೊಳಿಲ್ಲ ||ದೇಶ ದೇಶವ ಸುತ್ತಿ ಬಳಲಿದೆನಲ್ಲಾ ||ಭಾಸುರಾಂಗನೆ ಶ್ರೀನಿವಾಸ ನೀನಲ್ಲದೇ |ಲೇಸನೆಣಿಸುವರ ಕಾಣೆ ರುಕ್ಮಿಣಿನಲ್ಲ2ಸತಿಸುತರೆನಗಿಲ್ಲ |ಗತಿಮುಂದೆ ಶಿವ ಬಲ್ಲ ||ಹಿತದಿಂದಲಿರಲೊಂದು ಮನೆ ತನಗಿಲ್ಲ ||ಪೃಥವಿ ಪಾಲಕ ಸೀತಾರಾಮ ನೀನಲ್ಲದೇ |ಹಿತವ ಬಯಸುವರ ಕಾಣೆ ಜಗದ ನಲ್ಲ3ತಂದೆ ತಾಯಿಗಳಿಲ್ಲ | ಬಂಧು ಬಳಗವಿಲ್ಲ |ಒಂದು ವಿದ್ಯವ ನಾನು | ಕಲಿತವನಲ್ಲಾ ||ಇಂದಿರೆಯರಸ ಗೋವಿಂದ ನೀನಲ್ಲದೇ |ಬಂದ ಭಾಗ್ಯಗಳೊಂದು ನಿಜವಾದುದಲ್ಲಾ4<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ಹೀಗಿದ್ದರೆ ಲೇಸು ಜ್ಞಾನಿಗೆಹೀಗಿದ್ದರೆ ಲೇಸು ಪ.ಸತಿಇದ್ದರೆ ಸಮಹಿತದವಳಾಗಿಸುತನಿದ್ದರೆ ನಿಜಮತದವನಾಗಿ 1ಧನವಿದ್ದರೆ ಸಜ್ಜನಕೆ ವಿಭಾಗಮನೆ ಇದ್ದರೆ ಮಧ್ಯಾಹ್ನಕನ್ನತ್ಯಾಗ 2ಭಕುತಿ ಇದ್ದರೆ ಡಂಭಕವನಳಿದು ವಿರಕುತಿದ್ದರೆ ಭವದಾಶೆಯ ಕಳೆದು 3ಮತಿ ಇದ್ದರೆ ಶುಭಮತಿಯವನಾಗಿಧೃತಿ ಇದ್ದರೆ ದುಷ್ಕøತಿಗಳನೀಗಿ4ಪ್ರಸನ್ವೆಂಕಟೇಶನ ಪ್ರಸಾದವನುಣುತವಿಷಮ ಜನನ ಮೃತಿ ಗಸಣೆ ತಪ್ಪಿಸುತ 5
--------------
ಪ್ರಸನ್ನವೆಂಕಟದಾಸರು
ಹೆಂಡಿರನಾಳುವಳೀ ಕನ್ನಿಕೆ |ಗಂಡನಿಲ್ಲದ ಹೆಂಗುಸೀ ಕನ್ನಿಕೆ ಪಅಂಥಿಂಥಿವಳೆಂದು ಅಳವಡಿಸಲು ಬೇಡ |ಇಂಥ ಸೊಬಗನಂತ ಏನೆಂಬೆನೊ ||ಸಂತತಸುರ - ದನುಜರಿಗೆ ಪ್ರಪಂಚದಿ |ಪಂಕ್ತಿಯೊಳಮೃತವ ಬಡಿಸಿದಳು 1ಶಿಶುವು ಬೊಂಬೆಯ ತೋರ ಆಲದೆಲೆಯ ಮೇಲೆ |ಅಸುಮಯಜಲದಲಿ ಮಲಗಿ ಮೈಮರೆದಳು ||ಒಸಗೆಯಾಗದ ಮುನ್ನ ಹೊಕ್ಕುಳ ಹೂವಿನಲಿ |ಬಸುರಲಿ ಬೊಮ್ಮನ ಪಡೆದಳೀ ಕನ್ನಿಕೆ 2ಬೇಗೆಗಣ್ಣವನಿಗೆ ಬಿಸಿಗೈ ತಾಗುವಾಗ |ಭೋಗದ ಸೊಗತೋರಿ ಬೂದಿಯ ಮಾಡಿ ||ಭಾಗೀರಥಿಯ ಪಿತ ಬೇಲೂರ ಚೆನ್ನಿಗ |ಯೋಗಿ ಪುರಂದರವಿಠಲನೆಂಬ3
--------------
ಪುರಂದರದಾಸರು
ಹೆಸರು ತಂದಿರ್ಯಾ ಭಿಕ್ಷಕೆ |ಹೆಸರು ತಂದಿರ್ಯಾಪಅಸಮವೀರರೆಂಬ ಹೆಸರು |ಕುಶಲಗಾರರೆಂಬ ಹೆಸರುಶಶಿಯಂತೆ ಶೋಭಿಸುವ ಶಿಶುವು |ಕುಲಕೆ ಯೋಗ್ಯನೆಂಬ ಹೆಸರು ||ಹೆಸರು||1ದಾನಶೀಲರೆಂಬ ಹೆಸರು |ಮಾನವಂತರೆಂಬ ಹೆಸರು |ಸಾನುರಾಗದಲ್ಲೂ ಆತ್ಮ |ಜ್ಞಾನಿಗಳೆಂದೆಂಬ ಹೆಸರು2ಹಿರಿಯ ಮನೆತನದ ಹೆಸರು |ಗುರುಗಳಾ ಭಕ್ತಿಯಲಿ ಹೆಸರು |ಪರಮಭಾಗವತರ ತೆರದಿ |ಹರಿಯ ಶರಣರೆಂಬ ಹೆಸರು3ಪುತ್ರವತಿಯರೆಂಬ ಹೆಸರು |ಸತ್ಯಶೀಲೆಯರೆಂಬ ಹೆಸರು |ಪತಿಯ ಸೇವೆಯಲ್ಲಿನಿರತ|ಪತಿವ್ರತೇಯರೆಂಬ ಹೆಸರು4ಸತ್ಯಸಂಧರೆಂಬ ಹೆಸರು |ತತ್ವಜÕರೆಂದೆಂಬ ಹೆಸರು |ಚಿತ್ತ ಶುದ್ಧರೆನಿಸಿ | ಗೋವಿಂದಾನ |ದಾಸರೆಂಬ ಹೆಸರು5
--------------
ಗೋವಿಂದದಾಸ
ಹೇಗೆ ಉದ್ಧಾರ ಮಾಡುವನು - ಶ್ರೀಹರಿ|ಹೀಗೆ ದಿನಗಳೆದುಳಿದವನ ಪರಾಗದಿಂದಲಿ ಭಾಗವತರಿಗೆ |ಬಾಗದಲೆ ತಲೆ ಹೋಗುವಾತನ ಅ.ಪಅರುಣೋದಯಲೆದ್ದು ಹರಿಯೆನ್ನದಲೆ ಗೊಡ್ಡು |ಹರಟೆಯಲಿ ಹೊತ್ತು ಏರಿಸಿದವನ ||ಸಿರಿತುಲಸಿಗೆ ನೀರನೆರೆದು ನಿರಂತರ |ಧರಿಸದೆಮೃತ್ತಿಕೆತಿರುಗುತಲಿಪ್ಪನ ||ಗುರುಹಿರಿಯರ ಸೇವೆ ಜರೆದು ನಿರಂತರ |ಪರನಿಂದೆಯ ಮಾಡಿ ನಗುತಿಹನ ||ಪರಹೆಣ್ಣು ಪರಹೊನ್ನು ಕರಗತವಾಗಲೆಂದು |ಪರಲೋಕ ಭಯಬಿಟ್ಟು ತಿರುಗುವನ ||ತರುಣಿ ಮಕ್ಕಳನು ಇರದೆ ಪೋಷಿಸಲೆಂದು |ಪರರ ದ್ರವ್ಯ ಕಳವು ವಂಚನೆ ಮಾಳ್ಪನ2ನಡೆಯಿಲ್ಲ ನುಡಿಯಿಲ್ಲ ಪಡೆಯಲಿಲ್ಲ ಪುಣ್ಯವ |ಬಿಡವು ನಿನ್ನ ಪಾಪಕರ್ಮಗಳೆಂದಿಗು ||ಸಡಲಿದಾಯುಷ್ಯವು ಕಡೆಗೂ ಸ್ಥಿರವೆಂದು |ಕಡುಮೆಚ್ಚಿ ವಿಷಯದೊಳಿಪ್ಪನ ||ಒಡೆಯ ಶ್ರೀಪುರಂದರ ವಿಠ್ಠಲರಾಯನ |ಅಡಿಗಳ ಪಿಡಿಯದೆ ಕಡೆಗೂ ಕೆಟ್ಟವನ 3
--------------
ಪುರಂದರದಾಸರು
ಹೇಗೆ ಶ್ರೀಹರಿದಯ ಮಾಡುವನೋ-ನಮಗೆ-|ಹೇಗೆ ಶ್ರೀಹರಿ ದಯ ಮಾಡುವನೊ ಪಯೋಗಿವರೋದಿತ ಭಾಗವತಾದಿ-ಸ-|ದಾಗ ಮಗಳನನುರಾಗದಲಿ ನೆನೆಯದಗೆ 1ಶಕ್ತಿಮಿರಿ ಗುರುಭಕ್ತಿಪೂರ್ವಕ ಹರಿ-|ಭಕ್ತಿ ಇಲ್ಲದ ಕುಯುಕ್ಕಿವಂತರಿಗೆ 2ದಾಸದಾಸ ಎನ್ನೀಶಗೆ ಮೊರೆಯಿಡೆ |ಲೇಸು ಕೊಡುವ ನಮ್ಮ ಪುರಂದರವಿಠಲ 3
--------------
ಪುರಂದರದಾಸರು
ಹೇಮದ ತೊಟ್ಟಿಲ ಭಾಮೆಯರ್ಹೂಡಿಕೋಮಲ ಕಾಂಚನಧಾಮವ ಮಾಡಿಕಾಮಜನಕನೊಳು ಕಾಮಿತ ಬೇಡಿಪ್ರೇಮದಿ ತೂಗಿದರ್ನಾಮದಿ ಪಾಡಿ ಜೋ ಜೋ 1ಚೆನ್ನಿಗರರಸ ಮೋಹನ್ನ ಸುಶೀಲಕನ್ನಡಿ ಕದಪಿನಕಮನೀಯಬಾಲಪುಣ್ಯವೃಕ್ಷಗ ಫಲ ಪೂರ್ಣೇಂದು ಲೀಲನಿನ್ನ ರಕ್ಷಿಸಲಿ ಪ್ರಸನ್ನ ಗೋಪಾಲ ಜೋ ಜೋ 2ಕೆಂದಾವರೆಯಂತೆ ಚೆಂದುಳ್ಳಚರಣಚಂದಿರವದನ ಗೋವಿಂದನ ಶರಣಮುಂದಿನ್ನು ಸೌಭಾಗ್ಯ ಹೊಂದೆನ್ನ ತರುಣಕಂದ ಕಂದರ್ಪನ ಸುಂದರಾಭರಣ ಜೊ ಜೋ 3ಶ್ರೇಯಾರೋಗ್ಯ ದೀರ್ಘಾಯು ಸಂಪೂರ್ಣನ್ಯಾಯ ನೀತಿ ಸದುಪಾಯ ಸಂಪನ್ನಪ್ರೀಯನೆ ಕರ್ಣಾಂತಾಯತನಯನಕಾಯಲಿ ಲಕ್ಷ್ಮೀನಾರಾಯಣ ನಿನ್ನ ಜೋ ಜೋ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹೇಳೆಕಾಮಿನಿರಂಗಗೆ ಬುದ್ಧಿಯಹೇಳೆಕಾಮಿನಿರಂಗಗೆಪ.ಹೇಳಿದಂದದಿಕೇಳಿಕಾಲಿಗೆರಗುವಳಮ್ಯಾಲೆ ಕೋಪಿಸಿಕೊಂಡು ಬಾಲೇರ ನೆರೆವಂಗೆ ಅ.ಪ.ತನ್ನ ಮೈಗಂಪು ಕಸ್ತೂರಿಗಿಂದಧಿಕ ಕಂಡೆತನ್ನಧರದ ರಸಾಮೃತಗಿಂತ ಸವಿದುಂಡೆತನ್ನ ದಂತದ ಘಾಯಕೆ ಅಂಜದೆಕರಜನ್ನಟ್ಟಿಸಲು ಕುಚಕ್ಕೆ ಸುಂದರಿಯರನ್ನು ಮೆಚ್ಚಿದ ದಾನಕ್ಕೆ ಇನಿಯಳಿರೆಅನ್ಯರ ಮೋಹಿಪಗೆ ಕಲಿಮಾನವಗೆ 1ಸ್ನೇಹ ನೋಟಕೆ ಮೆಚ್ಚಿ ಸುಖಭಾರ ತನಗಿತ್ತೆಬಾ ಹೆಣ್ಣೆ ಎನಲು ಭಾಗ್ಯಾಂಬುಧಿಗೊಶವಾದೆತಾ ಹೊನ್ನಾಸೆಗೆ ಮಂಚದಿ ಘಾತಿಸಿದರೆನೇಹಿಯ ಬೆರದೆಕೆಲದಿಕರಾಳ ಚೇಷ್ಟೆಗೆನೇಹದಾರದಲೊಪ್ಪಿದೆ ಎನ್ನನು ಬಿಟ್ಟುಬಾಹು ಜೋರಿನಬುದ್ಧವಾಜಿಯಲ್ಲೇರ2ಚಪಲತೆಯಲ್ಲಿಕಪಟವಿದ್ಯದಲಿ ಭೂಪಕುಪಿತಾಶಾಯಿಲ್ಲ ಹೆಜ್ಜೆ ಹೆಜ್ಜೆಗೆ ಕಥೆಯಿಲ್ಲನೃಪಕೃಷ್ಣ ಸಲಹೆಂದರೆ ಎನ್ನಿಂದಾದಅಪರಾಧ ಕ್ಷಮಿಸೆಂದರೆ ಪ್ರಸನ್ವೆಂಕಟಕೃಪಿ ಧರ್ಮಿಯೆಂದರೆ ಇದಕೆ ತಾವಿಪರೀತ ತಿಳುಹನಂತೆ ಹಾಗಲ್ಲಂತೆ 3
--------------
ಪ್ರಸನ್ನವೆಂಕಟದಾಸರು