ಒಟ್ಟು 11460 ಕಡೆಗಳಲ್ಲಿ , 130 ದಾಸರು , 4806 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಪ್ಪು ಪೇಳ್ವೆ ನಿನ್ನೊಳೆನ್ನಪ್ಪಿ ಸಲಹಯ್ಯ ಅಪ್ಪ ಸಿರಿಪತಿಯೆನ್ನ ನೆಪ್ಪಿನೊಳಗಿರ್ದು ಪ ಅರಿವಿಟ್ಟು ತವಚರಣ ಸ್ಮರಿಸದಿರೆ ಎನ್ನ ತಪ್ಪು ಮರೆವೆಯನು ಪರಹರಿಸದಿರೆ ನಿನ್ನ ತಪ್ಪು ಧರೆಯ ಭೋಗವ ಮೀರಿ ನಡೆಯಿದಿರೆ ಎನ್ನ ತಪ್ಪು ಪರಮವೈರಾಗ್ಯ ಭಕ್ತಿ ಕೊಡದಿರೆ ನಿನ್ನ ತಪ್ಪು 1 ಅರ್ತಿಯಿಂ ತವಭಜನೆ ಮಾಡಿದಿರೆ ಎನ್ನ ತಪ್ಪು ಚಿತ್ತ ಚಂಚಲಗೊಳಿಸಿದರೆ ನಿನ್ನ ತಪ್ಪು ಸತ್ಯಭ್ರಷ್ಟನಾಗಾಚರಿಸಿದರೆ ಎನ್ನ ತಪ್ಪು ಸತ್ಯಜನಸಂಗ ಕೊಡದಿರೆ ನಿನ್ನ ತಪ್ಪು 2 ನಾಶವೊಂದೋ ಮಹಹೇಸಿಸಂಸಾರದ ವಾಸನೆಯ ಬಿಡದಿರೆ ಎನ್ನ ಘನತಪ್ಪು ಶ್ರೀಶ ಶ್ರೀರಾಮ ತವ ದಾಸತ್ವ ಕೊಡದಿರೆ ಸಾಸಿರಪಾಲಿಗೆ ನಿನ್ನ ಮಹತಪ್ಪು 3
--------------
ರಾಮದಾಸರು
ತಪ್ಪು ಮಾಡುವದು ಮನುಜ ಧರ್ಮ | ನಮ್ಮದು ಬೇಡುವದು ಕಾಡುವದು ಪ ನಡೆ ನುಡಿಗೆ ತಪ್ಪು ನೋಡುವದು ನ್ಯಾಯವೇ ನಿನಗೆ ||ಬಡವರಾಟಗಳೆಂದು ಸಲುಹಯ್ಯ | ಮಾಡಲಬೇಡ ತಡವ |ಕಡಿದ್ಹಾಕು ಕಮಳಲೋಚನಾ | ಎನ್ನ ನಿನ್ನಡಿಗೆಸೇರಿಸು | ಕಡಲಶಯನ ಮೋಹನ್ನಾ 1 ಮಡಹಿ ಮಲ್ಲನ ಕೆಡವಿ | ಜೋಡು ಮತ್ತಿಯ ಮರವ ತಡವಿ | ಮಧು ಮೊದಲಾದವರನ್ನು | ಅಡವಿ ಕಿಚ್ಚವ ನುಂಗಿ | ಕಡುವಿ ಮಡುವ ಧುಮುಕಿ | ಬಡವಿ ಕುಬ್ಜಿಯ ಕೈಪಿಡಿದು ಯಶವ ಪಡೆದಿ 2 ನಡೆವವನು ಎಡವುವನೆಂದು | ಅಪರಾಧಗಳನುಬಡಿದಾಡದೆ ಒಡಲೊಳಗೆ ಹಿಡಿವ | ಮಡದಿಯನುನಿಮ್ಮ ಜಡೆಯಲಿರಿಸಿದ ಮನೆಯಲಿ ಎನ್ನ |ಸಡಗರದ ರುಕ್ಮದಿಂದಿಡಿದು ಲಾಲಿಸು 3
--------------
ರುಕ್ಮಾಂಗದರು
ತಪ್ಪುಗಳೆಲ್ಲವು ಒಪ್ಪುಗೊಳ್ಳಯ್ಯ ಶ್ರೀ ಚಪ್ಪರ ಶ್ರೀನಿವಾಸಪ. ಸರ್ಪರಾಜಗಿರಿಯಪ್ಪ ತಿಮ್ಮಪ್ಪನೆ ದರ್ಪಕತಾತನೆ ತಾ ಸಜ್ಜನಪ್ರೀತಅ.ಪ. ಮಾಧವ ನಿನ್ನಯ ಮಹಿಮೆ ತಿಳಿಯದಪ- ರಾಧವ ಮಾಡಿದೆ ದಾರಿದ್ರ್ಯದ ಪಾದ ದರುಶನದ ಗಾದಿಯ ಕಾಣದಾದೆ ನಾ ದ್ರೋಹಿಯಾದೆ1 ತ್ರಾಣವಿರುವಾಗ ಕಾಣಿಕೆ ಹಾಕಿದೆ ದೀನದಾರಿದ್ರ್ಯದ ಹೊತ್ತಿನಲಿ ಮೇಣದರಿಂದಲಿ ತೆಗೆದು ತೆಗೆದು ಪಂಚ ಪ್ರಾಣಕ್ಕಾಹುತಿಯ ಕೊಟ್ಟೆ ಅಪರಾಧ ಪಟ್ಟೆ2 ಮಂದವಾರದಿಕ್ಕೊಂದೂಟವ ಸತ್ತ್ವ ದಿಂದಿರುವಾಗ ನಾ ನೇಮಗೈದೆ ಮಂದಭಾಗ್ಯ ಜ್ವರದಿಂದ ಪೀಡಿತನಾದ- ರಿಂದೆರಡೂಟವನೂ ಮಾಡಿದೆ ನಾನು3 ಶನಿವಾರಕ್ಕೊಂದಾಣೆ ಕಾಣಿಕೆ ಹಾಕುತ್ತ ಮಿನುಗುವ ಡಬ್ಬಿಯ ನಾ ಮಾಡಿದೆ ಎನಗೆ ದಾರಿದ್ರ್ಯವ ಕೊಟ್ಟ ಕಾರಣದಿಂದ ಹಣವೆಲ್ಲ ಗುಣ ನುಂಗಿತು ಪಾದಕೆ ಗೊತ್ತು4 ದೊಡ್ಡದಾರಿದ್ರ್ಯದ ಗುಡ್ಡೆ ಬಿದ್ದುದರಿಂದ ದುಡ್ಡೆಲ್ಲ ತೆಗೆದೆ ನಾ ದಡ್ಡನಾಗಿ ಅಡ್ಡಬಿದ್ದು ಕೈಯೊಡ್ಡಿ ಬೇಡುವೆ ಸ್ವರ್ಣ ಗುಡ್ಡೆಯ ಮೇಲಿರುವ ಮಹಾನುಭಾವ5 ಭಂಡಾರದ್ರೋಹ ಬ್ರಹ್ಮಾಂಡಪಾಪಾಗ್ನಿಯು ಮಂಡೆಯೊಳುರಿವುದು ಖಂಡಿತದಿ ಪುಂಡರೀಕಾಕ್ಷನೆ ಕರುಣಾಮೃತರಸ ಕುಂಡದೊಳ್ ಮೀಯಿಸಯ್ಯ ವೆಂಕಟರಾಯ6 ದೃಢಭಕ್ತಿಯನು ಕೊಟ್ಟು ಸಲಹಬೇಕಲ್ಲದೆ ಕೆಡುಕು ಮಾಡುವುದೇನು ಜಡಜನಾಭ ಕಡಲಶಯನ ಲಕ್ಷ್ಮೀನಾರಾಯಣ ನ- ಮ್ಮೊಡೆಯ ಪಡುತಿರುಪತೀಶ ರವಿಕೋಟಿಭಾಸ7
--------------
ತುಪಾಕಿ ವೆಂಕಟರಮಣಾಚಾರ್ಯ
ತಪ್ಪುವುದೇ ಬ್ರಹ್ಮಕೆ ಗುರಿಯು ನೀನುತಪ್ಪಿದರು ತಾನು ತಪ್ಪದು ಅರಿಯೋ ನೀನು ಪ ಕರವ ಭೂಮಿಗೆ ಬಡಿಯಲು ಪೆಟ್ಟಹೊರಗನೆ ಮಾಡುವುದು ಆವ ಪರಿಪರಿಪೂರ್ಣ ಬ್ರಹ್ಮ ತುಂಬಿರಲು ನೀನುಪರವೆಂದು ಕಾಣೆ ಸಂಶಯವೆ ನಿಜವಿರಲು 1 ಗುಡ್ಡಕೆ ಗುರಿಯ ನೋಡಿದೆ ಅದುಅಡ್ಡಬಿಟ್ಟು ಬೇರೆ ನಿಲ್ಲುವುದೆ ನೋಡೆಖಡ್ಡಿಕೊಳ್ಳದು ಬ್ರಹ್ಮವಾಡೆ ನಿನ್ನದೊಡ್ಡ ಬ್ರಹ್ಮವೆನಲು ಸಂಶಯ ನೋಡೆ 2 ಆಕಾಶ ನೋಡುವುದೇ ತಾನು ಆಆಕಾಶ ನೋಡಲು ನೂಕು ನುಗ್ಗೇನುಏಕ ಚಿದಾನಂದ ನೀನು ಜಗದೇಕ ಬ್ರಹ್ಮವೆಂದು ನಿನ್ನ ನೀನೇ ಕಾಣ 3
--------------
ಚಿದಾನಂದ ಅವಧೂತರು
ತಪ್ಪೆಣಿಸುವರೇನೋ | ತಾಮರದಳಾಕ್ಷ ಅಪ್ಪ ನೀ ಒಪ್ಪಿದರೆ ತಪ್ಪೆಲ್ಲಿ ಇಹುದೋ ಪ ಅಕ್ಕರದ ಅಜಮಿಳನು ಅಕ್ಕನಾಮಗ ನೇನೋ ಚಿಕ್ಕ ಧೃವನಾ ತಾಯಿ ಚಿಕ್ಕಮ್ಮನೇನೋ ರಕ್ಕಸಾ ಸುತ ನಿನಗೆ ರೊಕ್ಕ ಕೊಟ್ಟನೊ ಎನೋ ಇಕ್ಕಿ ನೀ ಭವದೊಳಗೆ ಹೀಂಗೆ ನೋಡುವರೇನೋ 1 ಅಂತ್ಯಜಳ ಕೂಡಿ | ಅನಂತ ಕರ್ಮವ ಮಾಡಿ ಅಂತರದಿ ನಿನ್ನೊಮ್ಮೆ ನೆನೆದನೇ ನೋ ಅಂಥ ಶೊಬಚನ ಮಗಳ ಕಾಂತನೆಂದೆನಿಸಿದೀ ಕಂತು ಪಿತನೇ ನಿನ್ನ ಕರುಣವಿದ್ದರೆ ಸಾಕೊ 2 ನಾಮಾಡಿದಪರಾಧ ನೀಕ್ಷಮಿಸದಿದ್ದರೆ ಯಾರು ಪೊರೆವರೊ ಎನ್ನ ವಾರಿಜಾಕ್ಷ ಧೀರ ನರಸಿಂಹ ವಿಠಲ ನಿನ್ನಾಧೀನಳಾದೆನೋ ಇನ್ನೇನು ಮಾಡಿದರು ಮಾಡೋ ನೀನು 3
--------------
ಓರಬಾಯಿ ಲಕ್ಷ್ಮೀದೇವಮ್ಮ
ತಪ್ಪೇನು ಮಾಡಿದೆನೋ ಬ್ರಹ್ಮಣ್ಯ ಗುರು ಪ ಅಪ್ಪಾ ನಿನ್ನಯ ಮನಕೊಪ್ಪದೇ ಇಪ್ಪಂಥ ಅ.ಪ ತಂದೆ ತಾಯಿಯು ನೀನೇ ಬಂಧು ಬಳಗ ನೀನೆ ಸಂದೇಹವಿಲ್ಲವೋ ಕಂದನೆಂದೆನ್ನದಂಥ1 ಒಂದೂ ತಿಳಿಯದಂಥ ಮಂದಮತಿಯು ನಾನು ಛಂದದಿಂದಲಿ ಬುದ್ಧಿ ಮುಂದೆ ಹೇಳಾದಂಥ 2 ಸಂದೇಹ ಕಳೆದಿನ್ನ ಬಂಧವಾಗಹ ಅಘ ವೃಂದ ಕ್ಷಮಿಸಿ ಬೇಗ ಮುಂದೆ ಕರೆಯದಂಥ 3 ದುರುಳರೆಲ್ಲರು ಸೇರಿ ಮರುಳುಗೊಳಿಸಿ ಎನ್ನ ಕರುಣಸಾಗರ ನಿನ್ನ ಕರುಣ ಪಡೆಯದಂಥÀ 4 ಶಾಂತ ಶ್ರೀ ನರಹರಿ ಪಂಥಾದಿಚರಿಸದೇ ಭವ ಕಾಂತಾರ ದಾಟಿಸದಂಥ 5
--------------
ಪ್ರದ್ಯುಮ್ನತೀರ್ಥರು
ತಮ್ಮ ಕೇಳಿದ್ಯಾ ಪರಬೊಮ್ಮ ನೀನಂತೊ ನಿತ್ಯ ತೃಪಿತನು ನೀನಂತಲ್ಲೊ ಕೃಷ್ಣಯ್ಯ ಸುತ್ತಿ ಬಂದೆನೆ ನಾಲಿಗಾರಿದೆ ಅಮ್ಮ ಹತ್ತು ಸಾವಿರ ಭಾನುಪ್ರಭೆಯುಳ್ಳವನಂತೊ ಕತ್ತಲೆಮನೆ ಪೋಗಲೊಬ್ಬನಂಜುವೆನೆ 1 ಪುರಾಣಪುರುಷ ನೀನಂತಲ್ಲೊ ಕೃಷ್ಣಯ್ಯ ಆರು ತಿಂಗಳು ಪೋದಾವಂದೆಲ್ಲ ಎನಗೆ ನಿರತಿಶಯ ಮಹಾ ಮಹಿಮೆ ಉಳ್ಳವನಂತೊ ಪೂರತಿ ಮನೆಯೊಳು ನಡೆಯಲಾರೆ 2 ಅಣ್ಣಾ ನೀ ಸರ್ವಜ್ಞನೆಂಬೋರೊ ಜಗವೆಲ್ಲ ಬೆಣ್ಣೆಯು ಸಿಗದಲ್ಲೆ ಪುಡುಕಿದರೆ ಸಣ್ಣವ ನೀನಲ್ಲವೆಂಬರೊ ಪಿರಿಯಾರು ಮಣ್ಣು ನಾ ಮೆದ್ದಾರೆ ಟೊಣದೆಲ್ಲವಮ್ಮ 3 ಜಗದುದರನು ನೀನಂತಲ್ಲೊ ಕೃಷ್ಣಯ್ಯ ನಗುಚಾಟಲು ಸಣ್ಣ ಪೊಟ್ಟಿ ನೋಡೆ ನಿಗಮಗಳು ನಿನ್ನ ತುತಿಯಂತೊ ಗೋವಿಂದ ನಗುವರಲ್ಲವೆ ಗೋಪ ನಾರಿಯರು 4 ಮೂಢ ದೈತ್ಯರಿಗೆಲ್ಲದಲ್ಲಣ ನೀನಂತೊ ಜಾಡ ಮೈಯನ ನೋಡಿ ಅಂಜುವೆನೆ ಬೇಡಿದ ಪುರುಷಾರ್ಥ ಕೊಡುವನು ನೀನಂತೊ ಬೇಡಿದೆ ನಮ್ಮಮ್ಮ ಅಮ್ಮೆ ಕೊಡೆಂದು 5 ಬೆಟ್ಟವ ನೀನೆತ್ತಿದಂತಲ್ಲೊ ಕೃಷ್ಣಯ್ಯ ಬಟ್ಟು ನಿನ್ನದು ನೋಡೆ ಎತ್ತಲಾರೆ ಘಟ್ಯಾಗಿ ವಿಪ್ರರು ಪೇಳೋದು ಪುಸಿ ಏನೊ ಹೊಟ್ಟಿಗೋಸುಗ ಸುಳ್ಳು ಪೇಳುವರೆ 6 ಏಸು ಲಕ್ಷ್ಮಣವಿವೆ ನೋಡಬೇಕೆಂದರೆ ಪುಸಿದ್ಯಾಕುಸರಾನು ನೋಡೆಂದನು ಪರಿ ಗೋಪಿಯ ಮೋಸಗೊಳಿಪ ಕೃಷ್ಣ ನಮ್ಮ ಸಲಹಲಿ 7
--------------
ವ್ಯಾಸತತ್ವಜ್ಞದಾಸರು
ತರಕಾರಿ ಹಾಡು ನಿನ್ನ ದಾಸರ ಬಿಟ್ಟನಾ ಬಾಳೆ ಕಾಯೋ ಪ ಮಾರ ಜನಕನೆ ಅಳಿದ ಮಾವನ್ನ ಕಾಯೋ ಸಾರಿ ಕರೆದರೆ ನೀ ಬಾರೆ ಕಾಯೋ ಮಾರ ಜನಕ ನರಸಿಂಹ ವಿಠಲ ನೀ ಮಾಡಿದ್ದೆಲ್ಲವು ಎನಗೆ ಸಮತೆ ಕಾಯೋ 1
--------------
ಓರಬಾಯಿ ಲಕ್ಷ್ಮೀದೇವಮ್ಮ
ತರುಣಿಯರೆಲ್ಲರು ಬಾರೆಂದು ಕರೆವರು ವರಮಣಿಪೀಠಕೆ ಮುದದಿ ಪ. ಕ್ಷೀರವಾರಿಧಿಜಾತೆ ಚಾರುಸುಂದರಗಾತ್ರೆ ಮಾರಜನಕದಯಿತೆ ಸಾರಸಾನನೆ ಮದ ವಾರಣಗಮನೆ ನಿನ್ನಅ.ಪ ಇಂದು ಕುಂದಣದ ಹಸೆಗೆ ಮಂದಹಾಸವ ತೋರಿ ಬಂದೆಮ್ಮ ಮನೆಯೊಳೆಂದೆಂದಿಗು ಕುಂದದಾನಂದವ ಬೀರೆಂದು 1 ಗಾಡಿಕಾರನಾ ಕೃಷ್ಣನ ದೃಢಭಕ್ತರ ಕೈ ಬಿಡದಾಧರಿಸುತ್ತ 2 ನಿರುತಸೇವಿಪ ವರವ ವರಶೇಷಗಿರಿವಾಸನರಸಿ ನೀನಲಿದಿಂದು 3
--------------
ನಂಜನಗೂಡು ತಿರುಮಲಾಂಬಾ
ತಲೆಯ ತೂಗಿ ನಗುವುದೇನೊ ಚೆಲುವ ತಿಮ್ಮರಾಯ ನೀ ತಿಳಿಸಿದಂತೆ ನುಡಿದೆನಿಂದು ಸಲುಹಬೇಕು ಜೀಯ ಪ. ಯೋಗ ಮಾಯ ಶಕ್ತಿ ತಾಳ ರಾಗ ರಚನೆಯರಿಯೆ ಲಾಘವಾದಿ ವರ್ಣಭೇದವಾಗಲಿದನು ತೊರೆಯೆ ಶ್ರೀಗುರು ಮುಖೇಡ್ಯ ನಿನ್ನಾದಾಗಲು ನಾ ಮರೆಯೆ ನಾಗಶಯನ ನಿನ್ನ ಪದಕೆ ಬಾಗಿ ನುಡಿವೆ ದೊರೆಯೆ 1 ಮಾನಸ ವಾಕ್ಕರ್ಮವೆಲ್ಲ ನೀನೆ ಮಾಳ್ಪಿಯೆಂದು ಧ್ಯಾನಿಸಿಕೊಂಡಿಹೆನು ಭಕ್ತಾದೀನ ಕರುಣಾಸಿಂಧು ಮಾನವಿಯ ನುಡಿಯೊಳಿರುವ ನಾನಾ ಥರವ ಕುಂದು ನೀನೆ ಕ್ಷಮಿಸಬೇಕು ಪದ್ಮಮಾನ ದೀನ ಬಂಧು 2 ಬುದ್ಧಿಹೀನ ಶಿಶುವು ನುಡಿವಾ ಬದ್ಧ ಮಾತಿನಿಂದ ಲೆದ್ದು ಬಂದು ಜನನಿ ತೊಡೆಯೊಳಿದ್ದು ಕೇಳುವಂದ ಸಿದ್ಧವಾಗು ಶ್ರೀನಿವಾಸ ಶುದ್ಧ ಪೂರ್ಣಾನಂದ ಗೋಪಿ ಕಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ತಾ ತಾ ತಾ ತಾ ತಾ ರಂಗ ನಿನ್ನ ಪಾದಥೈ ಥೈ ಥೈ ಥೈ ಥೈ ಯೆಂದು ಕುಣಿಯುತ ಪ ನಿಗಮವ ತಂದು ನಗವ ಬೆನ್ನಲಿ ಪೊತ್ತುಅಗೆದು ಬೇರು ತಿಂದು ಬಾಲನ ಸಲಹಿದೆ ಅಂದು 1 ಪೊಡವಿ ಈರಡಿ ಮಾಡಿ ಕೊಡಲಿ ಪಿಡಿದು ಮುನಿಮಡದಿಯ ಸಲಹಿದೆ ಎನ್ನೊಡೆಯ ಶ್ರೀಕೃಷ್ಣ 2 ಅಂಗನೆಯರ ವ್ರತಭಂಗವ ಮಾಡಿ(ದೆ)ತುಂಗ ಕುದುರೆಯೇರಿದ ರಂಗವಿಠಲನೆ3
--------------
ಶ್ರೀಪಾದರಾಜರು
ತಾತ್ವಿಕ ಕೃತಿಗಳು ನಾನಾವಿಧ ನರರಿವರಿಗೆ ಸರಿಯೆ ಪ ವಿಧಿನಿನ್ನ ಸ್ಮರಣೇವಿನಾನಿಷೇಧ ವಿಸ್ಮøತಿಯೆಂಬ ವಿಧಿಯನೊಂದನೆಬಲ್ಲರಲ್ಲದೆ ಮತ್ತೊಂದು ಅ.ಪ ನುಡಿವುದೆಲ್ಲ ಗಾಯಿತ್ರಿಮಂತ್ರಗಳು ಕೊಂಡುದೆಲ್ಲವು ವಿಷಯೇಂದ್ರಿಯಜ್ಞ ಹೋಮ ದೃಢ ಪ್ರಾಜ್ಞರೇನ ಮಾಡಿದರದೆ ಮರಿಯಾದೆ 1 ಕಂಡಕಂಡದ್ದೆಲ್ಲ ನಿನ್ನ ಮೂರ್ತಿಗಳು ಭೂ ಮಂಡಲಶಯನವೇ ನಮಸ್ಕಾರ ಮಂಡಿಯಾಗಿ ಬಿದ್ದುದೆ ಬಲಯುತರಿಗೆ 2 ಬಂದುದೆ ಪುಣ್ಯಕಾಲ ಸುಜನರು ಸಂದೇಹವೇಕೆ ಮದ್ದಾನೆ ಹೊದ್ದುದೆ ಬೀದಿ 3
--------------
ಕೋಸಲ ಪುರೀಶರ
ತಾತ್ವಿಕ ಹಿನ್ನೆಲೆಯ ಹಾಡುಗಳು (ಸರ್ವೋತ್ತಮತ್ವ ವರ್ಣನೆ) ಸಕಲವು ತ್ವದಧೀನವು ಶ್ರೀಶನೀ ಕೇಳು ಪ. ಸಕಲವು ತ್ವದಧೀನ ಸಾಕಯ್ಯ ಸತ್ಯಮಾನ ವಿಖನ ಸಗಣಧಾಮ ವಿಶ್ವಗುಣಾಭಿರಾಮ ಅ.ಪ. ಕಮಲ ಸಂಭವ ಮುಖರು ಶ್ರೀಶ ತ್ವತ್ಪಾದ ವಿಮಲ ಪದ್ಮ ಸೇವಕರು ಅಮಿತ ಗುಣಾಂಬುಧಿ ಆಡುವಿ ನಿರುತದಿ ದುರಿತ ಬೀಜ ಶ್ಯಾಮ ಸುಂದರ ರಾಜ 1 ದೇಹ ಗೇಹಾದಿಗಳೆಲ್ಲ ಸುವರ್ಣ ಪಕ್ಷಿ ವಾಹ ನಿನ್ನೊಶ ಭೂನಲ್ಲ ಮೋಹದಿ ತನ್ನದೆಂದು ಜೋಹಗೊಂಡ ಪರಿಗೆ ಬಾಹದಿರದು ಕೇಡು ಬಿಡದೆಂದು ನಗೆಗೇಡು 2 ಪರಮ ಕೃಪಾಳು ನಿನ್ನ ಪಾದವ ನಂಬಿ ಮರೆದೆ ದುರ್ಮಾನವನ್ನ ಉರಗ ಗಿರೀಂದ್ರನೋಳ್ಮೆರೆವ ಮಹಾತ್ಮನೆ ಶರಣ ಜನ ಮಂದಾರ ಸೇರಿಸು ಕೃಪಾಧಾರ3
--------------
ತುಪಾಕಿ ವೆಂಕಟರಮಣಾಚಾರ್ಯ
ತಾತ್ಸಾರಕಿದು ಕಾಲವಲ್ಲ ರಂಗಯ್ಯ ಶ್ರೀ- ವತ್ಸಲಾಂಛನ ಸುಖ ಚಿನ್ಮಯನೆ ವತ್ಸನ ಧ್ವನಿ ಕೇಳಿ ಒದಗುವ ಗೋವಂತೆ ಭೃತ್ಯರ ಸಲಹುವ ಬಿರುದುಳ್ಳ ನರಸಿಂಹ ಪ. ಹುಚ್ಚಾಗೆಲ್ಲರ ಕಚ್ಚುವ ನಾಯಂತೆ ತುಚ್ಛವಾದ ಬಗುಳುಚ್ಚರಿಸಿ ಇಚ್ಛಾನುಸಾರದಿಂದಿರುವ ಹೂಣನ ಬಾಯಿ ಮುಚ್ಚಿಸಿ ಮೂಲೆಯೊಳ್ಮುರಿದೊತ್ತು ಮುರಹರ 1 ನಿನ್ನ ಸೇವೆಯನ್ನು ನಿರುತದಿ ನಡೆಸುತ ಅನ್ಯರ ಲಕ್ಷಿಸದಿರಲೆನ್ನನು ಭಿನ್ನ ಭಾವದಿ ಭೀತಿ ಬಡಿಸುವ ದುಷ್ಟನ ಇನ್ನುಪೇಕ್ಷಿಸಿ ಸುಮ್ಮನಿರುವೆ ಯಾತಕೆ ಸ್ವಾಮಿ 2 ದುಷ್ಟ ಹಿರಣ್ಯಚರ್ಮಾದಿದಮನ ನಿನ- ಗೆಷ್ಟೆಂದು ಪೇಳಲಿ ವಿಧಿಜನಕ ಸೃಷ್ಟಿಗೊಡೆಯ ವೆಂಕಟೇಶನ ಹೂಣನ ಮಾಧವ 3
--------------
ತುಪಾಕಿ ವೆಂಕಟರಮಣಾಚಾರ್ಯ
ತಾಂಬೂಲ ಪ್ರತಿಗ್ರಹವ ಮಾಡು ಮಾರಮಣಾಜಾಂಬೂನದಾಕಾರ ಜಲಜದಳನಯನಾ ಪಜಾಂಬವತಿ ಮೊದಲಾದ ಅಷ್ಟಮಹಿಯರೆಲ್ಲಸಾಂಬಾದಿ ಪುತ್ರರೊಡಗೂಡಿ ಸೇವಿಸಲುಸಾಂಬರಾಲಂಕಾರ ಸಕಲ ಭೋಗಂಗಳನುತಾಂಬೂಲವಿದು ಶೋಭನವ ಮಾಡುತಿಹುದಾಗಿ 1ಶ್ವೇತವರ್ಣದ ದಿವ್ಯ ನಾಗವಲ್ಲಿಗಳಿಂದಖ್ಯಾತಿವಡೆದಿಹ ಕ್ರಮುಕಫಲಗಳಿವರಿಂದನೂತನದ ಮೌಕ್ತಿಕದ ಚೂರ್ಣ ಕರ್ಪುರದಿಂದಪ್ರೀತಿುಡುವಂದದಲಿ ರಮ್ಯವಾಗಿರುತಿರುವ 2ಸ್ಫುರಿಸುತಿದೆ ನಿನ್ನ ಮಂಗಳಕಾಂತಿ ಸೂರ್ಯನಲಿಸ್ಫುರಿಸುತಿದೆ ಚಂದ್ರಾಗ್ನಿಗಳಲೀ ಪರಿಯಲಿಸ್ಮರಿಸಿದರೆ ಕೈವಲ್ಯ ಮೊದಲಾದ ಪದವೀವತಿರುಪತಿಯ ಸ್ಥಿರವಾಸ ಶ್ರೀ ವೆಂಕಟೇಶ 3 ಓಂ ನವನೀತ ನಟಾಯ ನಮಃ
--------------
ತಿಮ್ಮಪ್ಪದಾಸರು