ಒಟ್ಟು 2066 ಕಡೆಗಳಲ್ಲಿ , 85 ದಾಸರು , 1461 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾರೆನ್ನ ಕಾಯುವರು | ಶ್ರೀಹರಿಯೆ |ಹರಿಯೇ | ನೀ ದೂರ ಮಾಡುವರೇ ಪಘೋರಪಾತಕವೆಂಬೀ | ಶಾರೀರವನು ಪೊತ್ತು |ಪಾರಗಾಣದ ದುಃಖಕರ್ಹನಾದೆನು ಹರಿಯೆ 1ಜೀವದಂತ್ಯದಿ ಯಮನೀವ ಪಾಶವ ಕಡಿದುಕಾಯುವರಿಲ್ಲ | ದಯಾಕರ ಮೂರುತಿ 2ಕಾಸು ಕನಕವಿರಲಾಸೆ ಮಾಡುವರೆಲ್ಲ |ದೇಶ ಬಿಕ್ಷುಕನಾದ | ರೀಸು ಮೆಚ್ಚುವರಿಲ್ಲ 3ಬಂಧು ಬಳಗವೆಂಬುದೊಂದು | ಸಂಸಾರದಿ |ಬಂದು ನೋಯುವೆನು | ಗೋವಿಂದ ನೀನಲ್ಲದೆ 4
--------------
ಗೋವಿಂದದಾಸ
ಯಾವ ಭಯವು ನಮಗೆ |ಶಂಕರ ದೇವನೊಲಿದು ಕಡೆಗೆ ಪಸಾವಧಾನದಿ ಸರ್ವಭಕ್ತ ಜನರಕಾವ|ದೇವ ದೇವೇಶ ಸರ್ವೇಶ ನೀನೊಲಿದರೆ ಅಪದುರಿತದ ಭಯವೇನಲೇ | ಶಂಕರ ನಿನ್ನ |ಸ್ಮರಿಸಲು ದೂರವಲೇ |ಮರಣದ ಭಯವೆನೆ | ಅಂತಕಾಂತಕ ನೀನು ||ಉರಗನ ಭಯವೆನೆ | ಗರಳಕಂಧರನೂ 1ಚೋರರ ಭಯವೇನೂ | ದಧಿಘೃತ |ಚೋರ ನಿನ್ನಯ ಸಖನೂ ||ನಾರೀ ಚೋರನ ದೇವ | ಧೀರಕೈರಾತನೀ |ಘೋರರಕ್ಕಸರೆನೆ | ತ್ರಿಪುರಸಂಹಾರ2ಮೃಗಪಕ್ಷಿ ಭಯವೆನಲೇ |ಸತಿಸುತಸಖ|ಖಗಮೃಗವೇರ್ದರೆಲೇ |ಜಗದೊಡತಿಯು ಲಕ್ಷ್ಮೀ | ಗಗ್ರಜನೆನಿಸಿಹೆ ||ಭಗಪೀಠನು ಧನ | ಮಾನಾಭಿಮಾನಕೇ 3ವಸನಕ್ಕೆ ಚರ್ಮಾಂಬರನೂ |ಸಂಸಾರವೆಂಬ ವ್ಯಸನಕೆ ದಿಗಂಬರನೂ ||ತೃಷೆಗೆ ಗಂಗಾಧರ | ಅಶನಕ್ಕೆ ಬಿಕ್ಷುಕನೀ |ಅಂಗ ಶೃಂಗಾರಕೆ | ಭಸ್ಮಲೇಪನನೂ 4ಪೊಗಳಲಳವೇ ನಿನ್ನಾ | ಮಹೇಶ್ವರ |ಜಗದಿ ಭಕ್ತರ ಸಂಪನ್ನಾ ||ಭೃಗುಲಾಂಛನಧರ ಗೋವಿಂದದಾಸನ |ಹಗಲಿರುಳೆನ್ನದೆಪೊರೆಯೋ ಮಹಾದೇವ 5
--------------
ಗೋವಿಂದದಾಸ
ಯಾವಾಗ ಬರುವನಂತೆ ನಿನ್ನಯ ರಮಣ-ಗ್ಯಾವ ರೂಪವೊ ಕಾಂತೆ ಪದೇವರ ದೇವನಂತೆ ಜೀವಿಗಳೊಡೆಯನಂತೆಭಾವಜನಯ್ಯನಂತೆ ದೇವಿ ನಿನ್ನದು ಕಾಂತೆ ಅ.ಪನೀರೊಳಗಿರುವನಂತೆ ಬೆನ್ನೊಳುಘೋರಭಾರವ ತಾಳ್ದನಂತೆ ಕೋಟೆಯೊಳಗೆಕ್ರೂರದೈತ್ಯನ ಸೀಳ್ದನಂತೆಸಾರಿ ಕಂಬದಿ ಕರುಳ ಹಾರ ಧರಿಸಿರ್ದನಂತೆ 1ಬಡವ ಬ್ರಾಹ್ಮಣನಂತೆ ಹಡೆದವಳನ್ನುಕಡಿದ ಮಹಾವೀರನಂತೆಅಡವಿಯೊಳ್ಕೋಡಗಬಲದೊಡನಿರ್ಪಂತೆಪೊಡವಿಯೊಳ್ ನರನ ಬಂಡಿ ಹೊಡೆಯುವನಂತೆ 2ಬತ್ತಲೆಯಿರುವನಂತೆ ಅಲ್ಲಲ್ಲಿತೇಜಿಹತ್ತಿ ಸುತ್ತಾಡುವನಂತೆಕುತ್ತಿಗೆ ಮೇಲಣ ಕುದುರೆಯ ಮುಖವಂತೆಉತ್ತಮನಂತೆಶ್ರಿೀನಿವಾಸ ಗೋವಿಂದನಂತೆ 3
--------------
ಗೋವಿಂದದಾಸ
ರಂಗ ರಂಗ ಎಂಬ ನಾಮವ ನೆನೆವರ |ಸಂಗದೊಳಿರಿಸು ಎನ್ನ ಪಅಂಗದೊಳ್ಲೆವರು ದೆಸೆದಸೆಗೆಳೆಯುವ |ಭಂಗವ ಬಿಡಿಸೊ ಹರಿಯೆ-ಸ್ವಾಮಿ ಅ.ಪಹರೆಕೃಷ್ಣ ಎಂದೆಂಬೆಜಿಹ್ವೆತಾನಿರುತಿರೆ |ಬರಿಯೆ ಮಾತಾಡುವೆ ನಾ ||ಗುರು-ಹಿರಿಯರ ವಂದನೆಗೆ ಕರ-ಶಿರವಿರೆ |ಗುರುವಹಂಕಾರತನ ||ಪರಿಪರಿ ಪುಷ್ಪದಲಿ ಪೂಜಿಸದೆ ಅಚ್ಯುತನ |ಮರೆತಿಹೆ ನಾನನುದಿನ |ಅರಿವ ನೋಡಿದರೆ ಎನ್ನಲಿ ಕಾಣೆನೈ ದೇವ |ಮೊರೆಹೊಕ್ಕೆ ಸಲಹೊ ಎನ್ನ-ಸ್ವಾಮಿ 1ವೇದ ಶಾಸ್ತ್ರ ಪುರಾಣ ನಾಮವ ನೆನೆವರ |ಚೋದ್ಯವ ನಾನರಿಯೆನು ||ಹಾದಿಬೀದಿ ತಿರುಗುವ ಜಾರಸ್ತ್ರೀಯಳ ಕಂಡು-ವಿ-|ನೋದಗಳ ಮಾಡುತಿಹೆನು ||ಮಾಧವಗೋವಿಂದ ಎನ್ನದೆ ಕಾಲನ |ಬಾಧೆಗಳಿಗೊಳಗಾದೆನೊ ||ಈ ಧರೆಯೊಳಗೆನ್ನ ರಕ್ಷಿಸುವವರ ಕಾಣೆ |ಶ್ರೀಧರ ನೀನೆ ಸಲಹೊ-ಸ್ವಾಮಿ 2ಮಡದಿ-ಮಕ್ಕಳಿಗೆಲ್ಲ ಒಡವೆ ಬೇಕೆಂಬುವ |ಕಡುಲೋಭತನವ ಬಿಡಿಸೊ ||ಅಡಿಗೆ ಅಡಿಗೆ ನಾರಾಯಣನೆಂಬ ನಾಮವನು |ನುಡಿವ ನಾಲಗೆಗಿರಿಸೊ ||ಪೊಡವಿಯೊಳುಪುರಂದರವಿಠಲರಾಯನೆ ನಿನ್ನ |ಅಡಿಯದಾಸನೆನಿಸೊ-ಸ್ವಾಮಿ 3
--------------
ಪುರಂದರದಾಸರು
ರಾಜ ರಾಜ ಮಹಾರಾಜ ಶ್ರೀಧವಾಗೋವಿಂದರಾಜ ಅಚರಾಚರ ಸಬೀಜಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಆದಿಯುಗದಿಮತ್ಸ್ಯಕೂರ್ಮ- |ನಾದಿವರಾಹನರಸಿಂಹ- |ನಾದಿಹಿರಣ್ಯಕಶ್ಯಪನ |ಛೇದ ಮಾಡಿ ರಕ್ತ ಕುಡಿದಿ1ದ್ವಿತೀಯಯುಗದಿ ವಾಮನದ್ವಿತೀಯಉದರದಲಿ ಬಂದು | ಮಥಿಸಿ ಬಲಿಯ ಕ್ರೋಧದಿಂದ |ಸುತಳಕ್ಕೊತ್ತಿ ಬಿಟ್ಟೆಯಾ2ಪರಶುರಾಮ ರೇಣುಕಿಯ |ವರಸುಪುತ್ರನಾಗಿಜನಿಸಿ | ವೀರಸದಿಂದ ಕ್ಷತ್ರಿ (ಯರ)ನಿರಸ ಮಾಡಿ ಬಿಟ್ಟಿ3ರಾಮಚಂದ್ರ ದಾಶರಥಿಯ |ಶ್ಯಾಮನೀಲಮೇಘವರ್ಣ |ಸ್ತೋಮರಾವಣನ ಉದ್ದಾಮನವರ ವಂಶ ತರಿದಿ4ದ್ವಿತೀಯದ್ವಾಪರದಲ್ಲಿ | ಮಥಿಸಿ ಕಂಸ ಪೂತನೆಯ |ಕಾತರ ಮಾಡಿ ಕೌರವನು |ಪಥಕೆ ಹೊಂದಿಸಿ ಬಿಟ್ಟ ಕೃಷ್ಣ5ಕಲಿಯುಗ ಬರಲು ಬೌದ್ಧನಾಗಿ |ಛಲ ದ್ವೇಷಖಲಜನರ ಕಲಹ ಹೆಚ್ಚಲಾಗುತಿರೆ |ಕಲ್ಕಿ ಹಯಗ್ರೀವನಾದಾ6ಮೂರು ತಾಪದಿಂದ ಬೆಂದ |ಘೋರದುರಿತಭವದಮೂಲ ಬೇರ ಕಿತ್ತಿ ಬಿಸುಟಿದ ಶ್ರೀಶಪಾಲ ಶಂಕರೇಶ7
--------------
ಜಕ್ಕಪ್ಪಯ್ಯನವರು
ರಾಮ ಗೋವಿಂದ ಸೀತಾ - ರಾಮ ಗೋವಿಂದ ಪ.ತೃಪ್ತಿಯಹುದೆ ಹೆತ್ತ ತಾಯಿ ಇಕ್ಕದನಕಭಕ್ತಿಯಹುದೆ ಭಕ್ತಜನರ ಸಲಹದನಕಮುಕ್ತಿಯಹುದೆ ಭಾವಶುದ್ದಿ ಇಲ್ಲದನಕಚಿತ್ತಶುಧ್ಧಿ ಆತ್ಮನಿಜವು ತಿಳಿಯದನಕ 1ಓದಲೇಕೊ ಮನದಿ ಜ್ಞಾನವಿಲ್ಲದನಕಭೇದವೇಕೊ ಗತಿಯುಗಮನ ತಿಳಿಯದನಕಕಾದಲೇಕೊ ಭುಜದಿ ಶಕ್ತಿಯಿಲ್ಲದನಕವಾದವೇಕೊಶ್ರುತಿ- ಶಾಸ್ತ್ರ ತಿಳಿಯದನಕ2ನಳನವಿದ್ದರೇನು ತುಂಬಿಯೊದಗದನಕದಳವು ಇದ್ದರೇನು ಧೈರ್ಯಕೊಡದನಕಲಲನೆಯಿದ್ದರೇನು ಪುತ್ರರಿಲ್ಲದನಕಚೆಲುವನಾದರೇನುವಿದ್ಯೆಕಲಿಯದನಕ3ಮನವಿದ್ದೇಕೊಶುಕ - ಪಿಕವಿಲ್ಲದನಕತನುವಿದ್ದೇಕೊ ಪರಹಿತಕೆ ಬಾರದನಕಮನೆಯಿದ್ದೇಕೊ ಅತಿಥಿಯೊಬ್ಬರಿಲ್ಲದನಕಧನವಿದ್ದರೇನು ದಾನ - ಧರ್ಮಕ್ಕೊದಗದನಕ 4ಹರಿಯ ಚಿಂತೆಯಿರಲು ಅನ್ಯ ಚಿಂತೆಯೇತಕೊಹರಿಯ ಧ್ಯಾನವಿರಲು ಅನ್ಯ ಧ್ಯಾನವೇತಕೊಸಿರಿ ಪುರಂದರವಿಠಲನಿರಲು ಭಯವು ಏತಕೊಹರಿಯ ಒಲಿದ ಮನುಜನಿಗೆ ದೈನ್ಯವೇತಕೊ 5
--------------
ಪುರಂದರದಾಸರು
ರಾಮ ಗೋವಿಂದ ಹರೇ ಕೃಷ್ಣ ಗೋವಿಂದದಾಮೋದರಹರಿವಿಷ್ಣು ಮುಕುಂದಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಮಚ್ಛವತಾರದೊಳಾಡಿದನೆ -ಮಂದರಾಚಲ ಬೆನ್ನೊಳಾಂತವನೆಅಚ್ಛ ಸೂಕರನಾಗಿ ಬಾಳಿದನೆ - ಮದಹೆಚ್ಚಿ ಹಿರಣ್ಯಕನ ಸೀಳಿದನೆ1ಬಲಿಯೊಳು ದಾನವ ಬೇಡಿದನೆ - ಕ್ಷಾತ್ರಕುಲವ ಬಿಡದೆ ಕ್ಷಯ ಮಾಡಿದನೆಜಲನಿಧಿಗೆ ಬಿಲ್ಲ ಹೂಡಿದನೆ - ಕಾಮ-ಗೊಲಿದು ಗೊಲ್ಲತಿಯೊಳಾಡಿದನೆ2ಸಾಧಿಸಿ ತ್ರಿಪುರರ ಗೆಲಿದವನೆ - ಪ್ರತಿ-ವಾದಿಸಿ ಹಯವೇರಿ ನಲಿದವನೆಭೇದಿಸಿ ವಿಶ್ವವ ಗೆಲಿದವನೆ - ಬಾಡದಾದಿಕೇಶವರಾಯ ನಮಗೊಲಿದವನೆ3
--------------
ಕನಕದಾಸ
ರಾಮನಾಥಸ್ವಾಮಿ ಪಾಲಿಸೋ |ರಘುನಾಥಸ್ವಾಮಿ ಪಾಲಿಸೊಪಪಾಮರನಾದೆನ್ನಪರಾಧವ |ಪ್ರೇಮದಿ ಪಾಲಿಸಿಕೊಳ್ಳೋ ದೇವಾಚಭೂಮಿಜೆಸೀತೆಗೆ | ಪ್ರೇಮನೆಂದೆನಿಸಿದ1ನಿನ್ನನು ನಂಬಿದ ನಾಥನನೂ |ಮನ್ನಿಸದಿರೆ ಕೇಳ್ವರ್ಯಾರೋ ಇನ್ನೂ ||ಸನ್ನುತಗುಣಾಕರನೆನ್ನುವ ಬಿರುದನು |ಎನ್ನೊಳು ತೋರಿಸೊ ರಾಮ ನೀನೂ2ಎಂದಿಗೆ ನಿನ್ನಯ ಪಾದವನೂ |ಪೊಂದುವ ಸುಖವನು ಪೇಳೋ ನೀನೂ |ಮಂದರಧರಗೋವಿಂದನೆ ನಿನ್ನಯ |ಸುಂದರ ಚರಣಕೆ ನಮಿಸುವೆನೂ3xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಲಕ್ಷ್ಮೀದೇವಿನೀನನ್ನ ಹೇಳಬಾರದೇನೆ ತಾಯಿನಿನನ್ನವಾನರವಂದಿತ ಶ್ರೀನಿವಾಸಗೆ ಬುದ್ಧಿ ಪಶ್ರೀನಿಧಿಪರನೆಂದು ನಂಬಿ ಬಂದ ಬಡಪ್ರಾಣಿಯ ಪೊರೆಯಂದು ಜಾನಕಿ ದೇವಿಯೇ 1ಮೊರೆ ಹೊಕ್ಕವರಕರಪಿಡಿವನೆಂಬೊ ಘನಾಬರದು ಉಳಿಸಿಕೊ ಎಂದ್ಹರುಷದಿ ಸಿರಿದೇವಿ 2ಉರಗಶಾಯಿ ಶಿರಿಗೋವಿಂದ ವಿಠಲ ತುರುಗಗ್ರೀವನರಹರಿಗೆ ತ್ವರಿತದಲ್ಲಿ 3
--------------
ಸಿರಿಗೋವಿಂದವಿಠಲ
ಲಾಲಿ ತ್ರಿಭುವನಪಾವನಲಾಲಿ ಪ.ಗೋವಳ ಕುಲದೊಳು ಪುಟ್ಟಿದಗೆಲಾಲಿ <?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಗೋವರ್ಕಳನು ಸಲಹಿದೆಗೆಲಾಲಿ ||ಗೋವುಗಳನೆಲ ಕಾಯ್ದವಗೆಲಾಲಿಗೋವಿಂದ ಪರಮಾನಂದಗೆಲಾಲಿ..............ಲಾಲಿ1ನಖದಲಿ ಗಂಗೆಯ ಪಡೆದಗೆಲಾಲಿಶಕಟನ ಮುರಿದು ಒತ್ತಿದವಗೆಲಾಲಿ ||ಅಖಿಳ ವೇದಂಗಳ ತಂದಗೆಲಾಲಿರುಕುಮಿಣಿಯರಸ ವಿಠಲನಿಗೆಲಾಲಿ...........ಲಾಲಿ2ಗಗನವ ಮುರಿದು ಒತ್ತಿದಗೆಲಾಲಿನಿಗಮಗಳನು ತಂದಿತ್ತಗೆಲಾಲಿ ||ಹಗೆಗಳನೆಲ್ಲರ ಗೆಲಿದಗೆಲಾಲಿಜಗವನು ಉದರದಿ ಧರಿಸಿದಗೆಲಾಲಿ........ಲಾಲಿ3ಬೊಟ್ಟಿಲಿ ಬೆಟ್ಟವನೆತ್ತಿದಗೆಲಾಲಿಮೆಟ್ಟಿಲಿ ಭೂಮಿಯನಳೆದಗೆಲಾಲಿ ||ಜಟ್ಟಿಗರನೆಲ್ಲ ಗೆಲಿದಗೆಲಾಲಿಕಟ್ಟುಗ್ರ ಶ್ರೀ ನರಸಿಂಹಗೆಲಾಲಿ......................ಲಾಲಿ4ಶರಧಿಗೆ ಸೇತುವೆಗಟ್ಟಿದಗೆಲಾಲಿಸುರರ ಸೆರೆಯನು ಬಿಡಿಸಿದಗೆಲಾಲಿ ||ಕರಿಮೊರೆಯಿಡಲು ಬಂದೊದಗಿದಗೆಲಾಲಿವರದ ಪುರಂದರವಿಠಲಗೆಲಾಲಿ...........ಲಾಲಿ5
--------------
ಪುರಂದರದಾಸರು
ಲಾಲಿಮುಕುಂದಲಾಲಿಗೋವಿಂದಲಾಲಿಮಯ್ಯಲಾಲಿಲಾಲಿಮೂರೈದಲಿಪ್ಪೆಲ್ಲಾಲಯರ ಪ್ರಭುಲಾಲಿಮಯ್ಯಲಾಲಿಪ.ಜಗ ಜಗುಳಿಸಿ ವಟಪತ್ರದಿ ಮಲಗಿದೆಲಾಲಿಮಯ್ಯಲಾಲಿಮಗುವಾಗಿ ವ್ರಜದೊಳು ತೊಟ್ಟಿಲೊಳೊಪ್ಪಿದೆಲಾಲಿ ಮಯ್ಯಲಾಲಿ1ಸ್ವಗತ ಭೇದ ವಜ್ರ್ಯ ಪರಮಾತ್ಮ ಪರಬ್ರಹ್ಮಜಗದ ಜೀವರ ಬಿಂಬಮೂರ್ತಿಅನಂತನೆಪಯೋನಿಧಿವಾಸ ಪರೇಶ ಪರಿಪೂರ್ಣಶ್ರೀಯರಸ ವೈಕುಂಠವಲ್ಲಭ ಕೃಷ್ಣಯ್ಯಸುರರ ಪುಣ್ಯದವಲ್ಲಿಫಲಿಸಲಿಲ್ಲುದಯಾದೆಧರೆಯ ಪಾವನ ಮಾಡೆ ಪಾಂಡವರಕಾಯಬಂದೆಅಜಮಿಳ ಗಜರಾಜ ಧ್ರುವ ಅಂಬರೀಷಪಾಲಸುಜನಪ್ರಹ್ಲಾದನ ಸಲಹಿದ ನರಹರಿಅಸಮ ಬಾಲಕನಾದೆ ಅವ್ಯಾಕೃತಾಂಗನೆವಿಷಮ ವಿದೂರಾಗಣಿತ ಸುಗುಣಾರ್ಣವಸ್ಮøತಿಗಿರಿಧರೆಶಿಶು ಮೃಗಚೇಲಧರ ಭಾರ್ಗವಕ್ರತುಕೃಷ್ಣೆಭವಧರ್ಮಪಾಲ ಪ್ರಸನ್ವೆಂಕಟೇಶ
--------------
ಪ್ರಸನ್ನವೆಂಕಟದಾಸರು
ಲೇಸ ಪಾಲಿಸು ಜಗದೀಶನೆ ದಯದಿ |ದೋಷರಹಿತ ಪರಮೇಶನೆ ಮುದದಿ ಪದಾಸ ಜನರ ಮನದಾಸೆಯ ಸಲಿಸುವ |ಸಾಸಿರ ನಾಮ ಸರ್ವೇಶ ಶ್ರೀಶಂಕರ ಅ.ಪಕಾಮ ವ್ಯಾಮೋಹ ಮದಾಂಧಕಾರವು ಬಂದುಪ್ರೇಮದಿ ನಿನ್ನನು ಭಜಿಸಲು ಬಿಡದೂ |ಕಾಮಹರನೆ ಕಾಯೋ ಕಾಮಿತಾರ್ಥವನಿತ್ತು |ಪ್ರೇಮ ಗಿರಿಜಾರಮಣ |ಸೋಮಶೇಖರ ನಿನ್ನ ಲೇಸ ಪಾಲಿಸು 1ಫಾಲಲೋಚನಭವ|ಭಾರನಿವಾರಣ |ಶೂಲಪಾಣಿಯೆ ಮುನಿಜಾಲಸಂರಕ್ಷಣ |ಮಹಾಲಿಂಗೇಶನೆ | ಭಕ್ತಪಾಲಕನೆಂಬುವ |ಮೂಲ ಚರಿತ್ರವಕೇಳಿಬಂದೆನು ದೇವಾ 2ಹಿಂದೆ ಮಾರ್ಕಾಂಡೇಯ ಮುನಿವರ ನಿನ್ನನು |ಚಂದದಿ ಪೂಜಿಸಿ ವಲಿಸಲಾ ಯಮನೂ |ಬಂದು ಪಾಶವ ಕೊರಳ ಸಂದಿನೋಳ್ ಸೇರಿಸ- |ಲಂದು ಮೈದೋರಿ ಗೋವಿಂದಸಖ ನೀ ಕಾಯ್ದೆ 3
--------------
ಗೋವಿಂದದಾಸ
ಲೋಕನೀತಿ379ಇಂದೀಗ ಹರಿದಿನವು ಏಕಾದಶಿಯೆಂದುಶೋಭಿಪ ದಿನವುಪಚಂದಾದಿ ವಿಷ್ಣುಸಾಯುಜ್ಯ ಹೊಂದುವುದಕ್ಕೆಅಂದವಾಗಿಹ ದಿನ ಸಂದೇಹವಿಲ್ಲವುಅ.ಪಶರಧಿಮಥಿಸೆ ಸುಧೆಯೂ ಬರಲು ಕಂಡುದುರುಳರೊಯ್ಯಲೂ ಹರಿಯೂಸರ್ವರಿಗುಪವಾಸವೆಂದು ತಾನ್ ಸೆಳೆದನುವರವಿತ್ತ ಮಾಸಕ್ಕೆ ಎರಡೇಕಾದಶಿಯೆಂದೂ1ದಶಮಿ ಒಂದಶನಾಗೈದೂ ಏಕಾದಶಿ ದಿವಸುಪವಾಸವಿರ್ದುಕುಸುಮನಾಭನ ಪೂಜೆಗೈದು ತೀರ್ಥವಗೊಂಡುನಿಶೆಯೊಳ್ ಜಾಗರವಿದ್ದು ಹರಿಕಥೆ ಕೇಳ್ವುದೂ2ವೀಳ್ಯ ಭೋಜನ ಪಾನವೂ ಈ ದಿನರತಿಕೇಳಿನಿದ್ರೆಯು ವಜ್ರ್ಯವೂಖೂಳನಾದರೆ ಯಮನಾಳೊಳ್ ಪಿಡಿದೊಯ್ದುಗೋಳುಗುಡಿಸುವ ಹೇಳಲಸಾಧ್ಯವು3ಅಶನಕ್ಕೆ ಬಿಸಿ ಮಳಲು ತಿನಿಸೀ ವೀಳ್ಯವ್ಯಸನ ಪಾನಕೆ ಉಕ್ಕಂ ತರಸಿ ಬಾಯ್ಗೆರಸಿಮುಳ್ಳು ಹಾಸಿಗೆ ಮೇಲೆ ಮಲಗೆಂದು ಹೊ-ರಳಿಸಿ ಉರಿಕಂಭ ಧರಿಸೆಂಬರ್ಸತಿಪುರುಷರಿಗೆ4ಧ್ರ್ರುವ ಹರಿಶ್ಚಂದ್ರ ಪ್ರಹ್ಲಾದ ತನ್ನಭುವನಕಟ್ಟಳೆಯೊಳ್ ರುಕ್ಮಾಂಗದಭವಹರವ್ರತಗೈದು ಹರಿಪಾದ ಸೇರ್ವರುಭುವನದಿ ಸರ್ವರಿಗ್ಯೋಗ್ಯವೀ ವ್ರತವೂ5ದ್ವಾದಶಿ ವ್ರತವೆಂಬುದು ಶ್ರೇಷ್ಠವು ಬೇಗಸಾಧಿಸಿ ಪಾರಣೆಗೈವುದೂಮೇದಿನಿಯೊಳಂಬರೀಷ ನೀ ವ್ರತಗೈದೂಆದಿಮೂರುತಿ ಗೋವಿಂದನ ಪಾದಸೇರ್ದನೂ6<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ವಂದಿಪೆ ಶ್ರೀವರನೇ | ಸುಂದರನೇ |ವಂದಿಪೆ ಶ್ರೀವರನೇಪಆಶ ಪಾಶಕ್ಲೇಶವ ಬಿಡಿಸೈ |ದಾಸಗೆ ದಯತೋರಿ1ಧೀರನೆ ಶೂರನೆ | ವೇದೋದ್ಧಾರನೆ |ತೋರಿಸೊ ಮುಖವನ್ನೆ2ಶೋಕಮೋಹಾನೇಕದಿ ಬಳಲಿದೆ |ನೀ ಕೃಪೆ ತೋರಿನ್ನು3ನಂದನ ಕಂದ ಗೋವಿಂದನ ¥್ಞಲಿ¸Àುಚಂದದಿ ಮೈದೋರಿ4<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ವಂದಿಸಿದರೆ ವಂದ್ಯರು ಪೂಜಿತರು ಮುಕುಂದಗೋವಿಂದ ಶ್ರೀಹರಿಯನ್ನುಎಂದೆಂದು ಕುಂದದಾನಂದವೈದಿಸುವಇಂದಿರೆಯರಸ ಭವಬಂಧಮೋಚಕನ ಪ.ಹತ್ತಶ್ವಮೇಧಾವಭೃಥಸ್ನಾನ ಮಾಡಲುಮತ್ರ್ಯರ್ಗೆ ಪುನರ್ಜನ್ಮಗಳಿಲ್ಲವೊಸತ್ಯಭಾಮಾಧವನಿಗೆ ನಿಷ್ಕಾಮದಿ ನಮಿಸಿಮತ್ತೊಮ್ಮೆ ನಮಿಸೆ ಮುಕ್ತಿಗೆ ಸಾಧನ 1ಕೋಟಿಸಹಸ್ರ ತೀರ್ಥಗಳಲಿ ಮಿಂದುಕೋಟಿಸಹಸ್ರ ವ್ರತಗಳಾಚರಿಸೆಕೋಟಿ ಭಾಂತಕಗೆ ನಮಿಸಿದ ಫಲಕೆ ಸರಿ ಪಾಸಟಿಷೋಡಶಕಳೆಯೊಳೊಂದಲ್ಲ2ಹೇಳೆನೆ ಇಂದಾದರು ನಮಿಸಿ ಶ್ರೀಲೋಲಶಾಙ್ರ್ಗಪಾಣಿಯನಸಾಲು ಜನ್ಮದಘವ ಹಾಳುಮಾಡಿ ಮುಕ್ತಿಓಲಗಕೆ ಕರೆವ ವೈಷ್ಣವ ಜನರ 3ಉರಶಿರದೃಷ್ಟಿಲಿ ಮನವಾಚದಲಿಚರಣಕರಗಳಲಿ ಜಾನುಗಳಲಿಧರೆಯಲಿ ಅಷ್ಟಾಂಗಪ್ರಣಾಮ ಮಾಳ್ಪರ್ಗೆಹರಿದು ಹೋಗೆ ಪಾಪವರ ಮುಕ್ತಿಈವ4ಸರುವಾಂಗವ ಧರೆಗೊಂದಿಸಿ ಭಕುತಿಲಿಹೊರಳಾಡಿ ಭೂಮಿಲಿ ಪರವಶದಿಹರಿಗೆ ನಮಿಸಲು ಮೈಗೊರೆದ ಧೂಳಿಯ ಕಣಾಪರಿಮಿತ ಸಹಸ್ರಾಬ್ದ ಪರಮಾಣ ಪದವಕ್ಕು 5ಸಿರಿಅಜಭವೇಂದ್ರಸುರರುಮಹಾಮುನಿನಿಕರನೃಪಮನುಜೋತ್ತಮರೆಲ್ಲಪರಮಭಕುತಿಲಿ ನಮಿಸೆ ಹರಿವಶನಾಗುವಹರಿಜನಕೆ ಮುಕ್ತಿಪಥಕಿದೆ ಪಾಥೇಯ 6ಅರ್ಚಿತ ಕೃಷ್ಣನ ನೋಡುತಾನಂದಾಶ್ರುಹುಚ್ಚನಂತೆ ನಮಿಸಿ ನಗುತ ಸುರಿಸಿಅಚ್ಯುತಾನಂತ ಸದ್ಗುಣನಿಧಿ ಭಕ್ತಪ್ರಿಯನಿಚ್ಚಪ್ರಸನ್ವೆಂಕಟನೆಂದುಚ್ಚರಿಸಿ7
--------------
ಪ್ರಸನ್ನವೆಂಕಟದಾಸರು