ಒಟ್ಟು 13948 ಕಡೆಗಳಲ್ಲಿ , 132 ದಾಸರು , 6945 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೊ ಕರುಣಾನಂದ ಶ್ರೀಗುರು ಕೃಪಾನಿಧೆ ಕಾಯೊ ಕರುಣಿಸಿ ಎನ್ನ ಪೂರ್ಣ ನೀ ಕಾಯೊ ಪರಮದಯಾನಿಧೆ ಧ್ರುವ ತೊಡಿಸಿ ಕರುಣಾನಂದ ಕವಚವ ಇಡಿಸೊ ಭಗುತಿ ವೈರಾಗ್ಯವ ದೃಢಗೊಳಿಸುವ ಙÁ್ಞನಪೂರ್ಣ ನೀ ಕಡಿಸೊ ಕಾಮಕ್ರೋಧವ ನಡೆಸಿ ನಿತ್ಯವಿವೇಕ ಪಥದಲಿ ಕೂಡಿಸೊ ನಿಜಸುಬೋಧವ ಬಿಡಿಸೊ ಭವಭವ ಮೂಲದಿಂದಲಿ ಬಡಿಸೊ ಹರುಷಾನಂದವ 1 ಬಟ್ಟೆ ಕೊಟ್ಟು ಕಾಯೊ ಸತ್ಸಂಗವ ಮುಟ್ಟಿಮುದ್ರಿಸೊದೃಷ್ಟಾಂತವ ಸಟೆಯ ಮಾಡೊ ಅವಿದ್ಯವ ನಿಷ್ಠತನ ನೆಲೆಗೊಳಿಸಿ ಕಾಯೊ ನೀ ಇಟ್ಟು ಶಿರದಲಿ ಅಭಯವ 2 ಭಿನ್ನವಿಲ್ಲದೆ ನೋಡಿ ಎನ್ನನು ಧನ್ಯಗೈಸೊ ನೀ ಪ್ರಾಣವ ಕಣ್ದೆರಿಸಿ ಅಣುರೇಣುದಲಿ ಪೂರ್ಣಖೂನದೋರೊ ಸಾಕ್ಷಾತವ ಎನ್ನೊಳಗೆ ನಿಜಾನಂದ ಸುಖದೋರಿ ಪುಣ್ಯಗೈಸೊ ನೀ ಜೀವನ ಚಿಣ್ಣಕಿಂಕರ ದಾಸ ಮಹಿಪತಿ ರಕ್ಷಿಸೊ ಸಂತತವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕಾಯೊ ಕಾಯೊ ಕಾಯೊ ಕೃಪಾನಿಧಿ ಕಾಯೊ ಕೃಪಾಳು ಸದ್ಗುರು ದಯ ನೀ ಪಾಲಿಸಿ ಸೋಹ್ಯಸೊನ್ನೆ ಸೂತ್ರಗುಹ್ಯ ಗೂಢದೋರಿ ಸಾಹ್ಯಮಾಡೊ ಸ್ವಾಮಿ ಸಾಕ್ಷಾತ್ಕಾರ ನೀ ದೋರಿಸಿ ನ್ಯಾಯದಲಿ ಮಿಥ್ಯಾಮಾಯ ಮೊನೆಮುರಿಸಿ ತೋಯಜಾಕ್ಷ ನಿಮ್ಮ ಶ್ರಯ ಸುಖ ಬೀರಿ ಭವ ಭಯ ಹರಿಸೊ ಗುರು ಕರುಣಿಸೊ 1 ನಾನಾರು ಎಂದು ಸಾಖೂನ ತಿಳಿಯದೆ ನಾನಾ ಯೋನಿಮುಖ ಜನಿಸಿ ಬಂದೆÀನಯ್ಯ ಜನುಮ ಜ್ಞಾನಗಮ್ಯವಾದ ಸ್ಥಾನದೋರಿ ನಿಜ ಧ್ಯಾನ ಮೌನದನುಭವ ಸುಖ ನೀಡೊ ನಿಮ್ಮ ನ್ಯೂನ ಪೂರ್ಣ ಎನ್ನ ನೀ ನೋಡದೆ ಸ್ವಾಮಿ ಸ್ವಾÀನುಭವದ ಸುಜ್ಞಾನ ದೀಪಲಿಡೊ ನಮ್ಮ ಮನೋನ್ಮನವಾಗಿ ಘನ ಕೈಗೂಡುವಾ ಸನ್ಮತ ನೋಡಿ ಸುವರ್ಮ 2 ನೋಡದೆ ಗುಣದೋಷ ಮಾಡಿ ಉಪದೇಶ ದೃಢಭಾವದ ಸುಪಥ ಒಡನೆ ಗೂಡಿಸೊ ನೋಡಿ ದೃಷ್ಟಿಲೆನ್ನ ಒಡೆಯ ಸದ್ಗುರು ಪೂರ್ಣ ಓಡಿಹೋಗುವಂತೆ ಭಕ್ತಿ ಜ್ಞಾನ ವೈರಾಗ್ಯವಿಡಿಸೊ ನೀಡಿ ಅಭಯಕರುಣಕವಚವ ತೊಡಿಸೊ ಪಿಡಿದು ಎನ್ನ ಕೈಯಾ ಮೂಢ ಮಹಿಪತಿಯ ಬಿಡದೆ ಕಡೆಗಾಣಿಸೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕಾಯೊ ಗುರುನಾಥತ್ರಯಗುಣಾತೀತ ಧ್ರುವ ಭಾನುಕೋಟಿ ಸುಪ್ರಭೆಯ ಅನುದಿನಕ್ಷಯ ಘನಮಹಿಮರ ಹೃದಯ ಆನಂದೋದಯ ಅನಾಥರಿಗೆ ಆಶ್ರಯ ನೀನಹುದೊನÀಮ್ಮಯ 1 ದೇಶಿಕÀರಿಗೆ ನೀ ದೇವ ಲೇಸಾಗಿ ಕಾವ ಋಷಿ ಮುನಿಗಳ ಸಂಜೀವ ವಾಸವಾಗಿವ್ಹ ವಿಶ್ವಾತ್ಮನಹುದೊ ಶ್ರೀದೇವ ಭಾಸುತಲಿವ್ಹ ಭಾಷೆಯ ಪಾಲಿಸುವ ಈಶ ನೀನೆ ಕೇಶವ 2 ಬಾಹ್ಯಾಂತ್ರ ನೀ ಸದೋದಿತ ಗುಹ್ಯಗುರುತು ಶ್ರೀಹರಿ ನೀನೆ ಸಾಕ್ಷಾತನಹುದೊ ಸ್ವಹಿತ ಇಹಪರ ನೀನು ದಾತಮಹಿಪತಿ ಪ್ರಾಣನಾಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕಾಯೊ ಜಿತಕಾಯ ಗುರು ಬಾದ ರಾಯಣ ತತ್ವಜ್ಞರಾಯ ಪ ನಾ ಯಾರಿಗೆ ಬಿನ್ನೈಪೆ | ಹೇಯಸಂಸಾರದ ಎರಡೊಂದು ಮಠದಲಿ ಧರಿಸಿ ತೂರ್ಯಾಶ್ರಮ ಸಿರಿಯರಸನ ದಿವ್ಯ ಮೂರ್ತಿಗಳ ಕರದಿಂದ ಪೂಜಿಸಿ | ಮರುತ ದೇವನ ಮತ ಪರಮಾನಂದವೆಂದು ಧರೆಗೆ ಬೀರಿದ ಕರುಣಿ 1 ಜ್ಷಾನಿಗಳರಹುವ | ವಾಣಿಯಿಂದಲಿ ದೇ ಮೌನಿವರಿಯ ಎನ್ನ | ಹೀನಪಾತಕವೆಂಬ ಕಾನನ ದಹಿಸೆಂದು | ಸಾನುರಾಗದಿ ನೋಡಿ 2 ಭೂಸುರ ಪರಿಪಾಲ | ಶ್ರೀ ಶಾಮಸುಂದರನ ಲೇಸಾಗಿ ಒಲಿಸುತಲಿ ಕಿಟಜದಲಿ ಭಾಸುರ ಘನವೇಣಿ | ಭೇಶಪುರದಿ ನೆಲಸಿ ದಾಸರ ಮನದಭಿಲಾಷೆ ನೀಡುವ ದಾನಿ 3
--------------
ಶಾಮಸುಂದರ ವಿಠಲ
ಕಾಯೊ ಬಾರೊ ಹರಿಯೆ ಕರುಣಾ ಪಯೋಂಬುಧಿ ಪ. ಕಾಯೊ ಬಾರೊ ಕರುಣಾಂಬುಧಿ ಕಮಲದ- ಳಾಯತ ನೇತ್ರ ರಸಾಯನ ಸುರಿವುತ ಅ.ಪ. ಸಿಲುಕಿ ಬಾಧೆಗೊಂಡು ಬಹು ಬೆದರುವ ದಾಸನ ಕಾದುಗೊಳ್ಳು ಕಂಬ್ವರಿಗದಾಬ್ಜಧರ ಮಾಧವ ಮಧುಮಥನ ಮನದಿ ವಿನೋದಿಸುವ ಕಥನ ಶ್ರೀ ಪದಾಬ್ಜಾಮೋದಯುಗ ಸಾಸ್ವಾದನಾತ್ಮಕ ವಿನೋದ ನಲಿವುತ 1 ಕತ್ತಲೆ ಮುಸುಕಿರುವ ಸಮಯದಿ ಸುತ್ತ ವ್ಯಾಘ್ರವಿರುವ ವನದಲಿ ಸತ್ವಹೀನವಾದೆತ್ತಿನ ಕೆಡಹುವದುತ್ತಮವೆ ಪುರುಷೋತ್ತಮ ನಿನ್ನಯ ತತ್ವಮಾರ್ಗ ತಿಳಿಸಿ ತ್ರಿಕರಣವೆತ್ತಿ ಬೋಧೆಗೊಳಿಸಿ ಜನೋತ್ತಮನೆನಿಸುತ 2 ಇಂದಿರೇಶ ನಿನ್ನ ಚರಣವನೆಂದಿಗು ನಂಬಿದನ ಬಂಧ ಬಿಡಿಸಿ ಕೃಪೆಯಿಂದ ಪೊರೆವನೆಂಬಂದಕಪಾಯವ ಕರುಣಾಸಿಂಧು ನಿನ್ನ ಕೀರ್ತಿ ಮನೋಗತ ಸಂದಣಗೊಳಿಸುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಯೊ ಸುಖಸಾರ ಮಾಯಾವಿದೂರ ಭಾವಜನಯ್ಯ ಭಕುತರ ಪ್ರಿಯಕರ ಪ ಕಾಯಕಾಂತಾರದೊಳು ನೋಯುತ ವಿಧ ವಿಧ ಬಾಯ ಬಿಡುವೆನಯ್ಯ ತೋಯಜಾಕ್ಷನೆ ನೋಡೊ 1 ಸಂಸಾರತೆರೆಯೊಳು ಹಿಂಸೆ ಪಡುತ ಮತಿ ಕಂಸಾರಿ ಕರುಣಿಸೊ 2 ಜಡಭವತೊಡರನು ಕಡೆಹಾಯ್ಸಿ ಕೊಡುಮುಕ್ತಿ ಕಡುದಯಾನಿಧೆ ಎನ್ನೊಡೆಯ ಶ್ರೀರಾಮನೆ 3
--------------
ರಾಮದಾಸರು
ಕಾಯೊನೀನೆ ಕರುಣದಿ ಪ ರಾಮರಾಮಯೆಂದು ಪೊಗಳುವನು ಮಹಾರಾಜ ಸಾರ್ವಭೌಮ ಪೂರ್ಣ ಕಾಮನೆ ದಶರಥಾವನೀಶ ಕುಮಾರ 1 ದೇವದೇವನೆ ಕೃಪಾವಲೋಕನದಿ ದೀನಜನರ ನೋಡೊ ನೀದಯಮಾಡೊ ನೀಡೋಯನ್ನದುರಿ- ಜಯಜಯ ಪ್ರಭೋ ಭಂಜನ ಜಗ ಜ್ಜೀವನ ನತಜನ ಸಂಜೀವನಸು- ಶುಭ ಕುಶೀಲವರತಾತ ಸುಪ್ರೀತ2 ಸರಿಸಿಜೋದ್ಭವಾದ್ಯಮರನಾಯಕ ಸಾಧುರಕ್ಷಸ್ಸದ್ಧರ್ಮ ಪಾಲಕ ಮನುಜವೇಷ ದುರ್ಜನ ಕಾಲ ಶರಧಿ ಸೇತು ಬಂಧನ ಕಂಜೇಕ್ಷಣ ಮಾಂ ಪಾಹಿ ರಘುವೀರ 3
--------------
ಗುರುರಾಮವಿಠಲ
ಕಾಯೋ ಕರುಣ ಕೃಪೆಯಿಂದ ಹರಿ ಮುಕುಂದ ಧ್ರುವ ಕರುಣಾನಂದದ ಸಾಗರ ಕರಿವರ ಶರಣಾಗತಜನರ ಮಂದಾರ ಪರಮ ಉದ್ಧಾರ ಸುರ ಸಂಸಾರಾಯದಾಗರ ಪರಾತ್ಪರ ತರಣೋಪಾಯದಾಧಾರ 1 ಅನಾಥ ಜನರಾಶ್ರಯ ನೀನೆ ನಿಶ್ಚಯ ಅನುಭವಾನಂದಾ ಹೃದಯ ಘನಮಯ ದಿನಕರಕೋಟಿ ಪ್ರಭೆಯೆ ಜನವನಲಿಹ್ಯ ಮುನಿಜನರ ಹೃದಯ ಅನುದಿನದಲಕ್ಷಯ 2 ವಿಹಿತವಿಚಾರದ ವಿವರ ಈಹ್ಯಶ್ರೀಧರ ಸ್ವಹಿತ ಸುಖದ ಸುಸಾರ ಬಾಹ್ಯಾಂತರ ಮಹಿಮೆ ನಿನ್ನದು ಅಪಾರ ಮಹೇಶ್ವರ ಇಹ್ಯ ಪರದ ದಾತಾರ ಮಹಿಪತಿ ಸಹಕಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೋ ಕರುಣಾನಿಧೆ | ಶ್ರೀ ಹರಿ | ಖಗವರ ಗಮನಾ ಪ ಘೋರ ಸಂಸಾರದ ತಾಪದಿ ನೊಂದೆ | ಭವ ಭಯ ಅಘಕುಲ ಶಮನಾ 1 ಜ್ಞಾನ ಧ್ಯಾನದ ನಿಜ ಸಾಧನವರಿಯೆ | ನೀನೆ ಗತಿಯೆನುತ ಮಾಡುವೆ ನಮನಾ2 ಗುರು ಮಹೀಪತಿ ಪ್ರಭು ಅನಾಥ ಬಂಧು | ಚರಣದ ಭಜನೆಯ ಲಿರಿಸೆನ್ನ ಮನ |3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯೋ ಕೇಶವ ದೇವ ದೂರ್ವೆಶಾ ಪಾಯವ ನರಿಯೆನು ಪೊರೆಯೊ ಸರ್ವೇಶಾ ಪ ಸುಜನರ ರಕ್ಷಿಸಿ ಭಜಕರ ಸಲಹುವ ಅಜಪಿತ ಶ್ರೀಹರಿ ಸೇವೆಯ ಗೈವೆ 1 ಸಾಸಿರ ನಾಮಗಳಿಂದ ರಂಜಿಪ ದೇವ ವಾಸುಕಿಶಯನನ ಸೇವೆಯ ಗೈವೆ 2 ವೇದವ ಪಾಲಿಸಿ ಧರಣಿಯ ಸಲಹಿದ ಮಾಧವ ಶ್ರೀಹರಿ ಸೇವೆಯ ಗೈವೆ 3
--------------
ಕರ್ಕಿ ಕೇಶವದಾಸ
ಕಾಯೋ ತೋಯಜ ನೇತ್ರ ಪ ಸುಮಿತ್ರ ಪವಿತ್ರ ಚರಿತ್ರ ಅ.ಪ. ಮಾನವ ಜನುಮದಿ ನೀ ತಂದೆಯೊಎನ್ನ ಗ್ಲಾನಿಯ ಕಳೆದು ಸುಜ್ಞಾನವನಿತ್ತು 1 ಕಠಿಣ ಸಂಸಾರದ ಕಟು ಅನುಭವವ ಸೈಸೆಸಟಿಯಲ್ಲೋ ಇದ ಸಂಕಟವ ಪರಿಹರಿಸಿ 2 ಹೃದಯದಿ ನೆಲಿಸಿ ನೀ ಸದಾವಕಾಲದೊಳುಗದುಗಿನೊಳ್ಮೆರೆಯುವ ವೀರನಾರಾಯಣ 3
--------------
ವೀರನಾರಾಯಣ
ಕಾಯೋ ನೀ ಅನಸೂಯಾ ಪುತ್ರನೇ ಜೀಯಾ ದತ್ತಾತ್ರೇಯ ದೇವನೇ ಪ ಪತ್ರೇಂದ್ರ ಗಮನಾ ಪರಮಾನಂದಾ ಶತ ಪತ್ರದಳ ನಯನಾ ಕೇಶವಾ ಮಿತ್ರ ಶತಕೋಟಿ ಪ್ರಕಾಶ ಸುರೇಶನೇ ಅತ್ರಿ ಗೋತ್ರ ಸಮುದ್ಭವಾ 1 ಸರ್ವಾಧಾರವ್ಯಯ ತ್ರಯ ಮೂರು ಸರ್ವ ಲೋಕ ವ್ಯಾಪ್ತನು ಚಾರು ತತ್ವರಿತ ಸರ್ವಾತೀತ ಮುಕುಂದನೇ 2 ಯೋಗಿ ಜನರ ಮಾನಸ ಹಂಸಾ ಸಂತ ಗುಣ ಸಂಪನ್ನನು ಅನಂತ ರೂಪ ಮಹಿಪತಿ ನಂದನ ಪ್ರಭು ಅನಂತ ಮಹಿಮ ಶ್ರೀ ಕೃಷ್ಣನೇ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯೋ ಪರಮಾನಂದಾ ನಾರಾಯಣಾ | ತೋಯಜಾದಳ ನಯನ ಗರುಡ ಗಮನಾ ಪ ಕರವರಗ ದುಷ್ಟ ಜಲಚರ ಬಂದು ಪಿಡಿಯಲ್ಕೆ | ಭರದಿಂದ ನಿನ್ನ ಸ್ಮರಣೆಯಾ ಮಾಡಲು | ತ್ವರಿತದಿಂದಲಿ ದೇವ ಬಂದು ಆತನ ಮಹಾ | ದುರಿತವನು ಪರಿಹರಿಸಿ ಕಾಯಿದೆ ಹರಿಯೇ1 ಅರಗಿನಾ ಮನಿಯೊಳುಪಾಂಡವರುಸಿಲುಕಿರಲು | ಹರಿ ನೀನೇ ಗತಿಯೆಂದು ಸುಮ್ಮನಿರಲು | ಸಿರಿಲೋಲ ಅದುಕೊಂದು ಪಾಯವನು ರಚಿಸಿದಾ | ವರಕಡಿಗೆ ಪೊರಮಡಿಸಿಕಾಯಿದೆ ಹರಿಯೇ2 ಶರಣ ಪ್ರಲ್ಹಾದಂಗ ದನುಜ ಪೀಡಿಸುತಿರಲು | ಕರುಣ ಸಾಗರ ನಿಮ್ಮ ಧ್ಯಾನಿಸಲ್ಕೆ | ಕರುಳ ಬಗೆದುಕಾಯಿದೆ ಹರಿಯೇ | ನರಹರಿಯ ರೂಪದಿಂದ ಸ್ಥಂಬದೊಳಗುದ್ಭವಿಸಿ3 ದ್ರುಪದ ತನು ಸಂಭವಿಯ ಸೀರೆಯನ್ನು ಸೆಳೆಯಲ್ಕೆ | ತ್ರಿಪುರಾರಿ ಸಖ ನಿಮಗೆ ಮೊರೆಯಿಡಲು | ಕಪಟನಾಟಕ ದಯಾನಂದ ಹರಿಯೆ 4 ಈ ರೀತಿಯಲ್ಲಿ ಬಹು ಭಕ್ತರನು ಕಾಯಿದೆ | ಮುರಹರಿ ಧ್ಯಾನ ಸ್ಮರಣೆ ಯಂಬನದನು | ದಾರಿಯನು ಅರಿಯದ ಅಜ್ಞಾನಿಯ ಪರಾಧವನು ಸೈ ರಿಸುದು ಮಹಿಪತಿ ಸುತ ಪ್ರಿಯನೇ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯೋ ಬಾರೋ ಹರಿ ಈಯ್ಯೋ ವರ ಥೋರೀ ಜಾರಚೋರಖರ ಅರಿನಾಶಕಾರಿ ಪ ವಾಯುದೇವಪಿತ ತೋಯಜಾಕ್ಷಿ ಸೀತಾ ಪ್ರಿಯ ನೀನು ತ್ರಾತ ರಾಯ ಜಗನ್ನಾಥ 1 ಕಾಮನಯ್ಯ ನೀನು ಮಾಮನೋಹರನು ವಾಮನಾದಿ ನೀನು ರಾಮನಾಮಕನು 2 ಕರಿರಾಜನನ್ನು ತ್ವರಿತಾದಿ ಕಾಯ್ದಿ ಶ್ರೀವತ್ಸಾಂಕಿತ ಹರಿ ವೆಂಕಟೇಶ3
--------------
ಸಿರಿವತ್ಸಾಂಕಿತರು
ಕಾಯೋ ಸಿದ್ದೇಶಾ ಪ ಭಕ್ತಿಯ ಗುಣಂಗಳಿಲ್ಲಾ ವಿರಕ್ತಿಯ ಅಂಕುರವಿಲ್ಲಾ 1 ಸಾಧು ಜನಸಂಗ ಮಾಡೀ ನಿಜ ಬೋಧಾಮೃತ ಸವಿಯಲಿಲ್ಲಾ ವಾದ ಗುಣ ಹಿಂಗಲಿಲ್ಲಾ ಕಾಮ, ಕ್ರೋಧ ಸುಳಿಯಲಿ ಬಿದ್ದೆ2 ಪಂಥ ಪರಮಾರ್ಥದೋರೋ ಶ್ರೀ ಕಾಂತ ಗುರು ಮಹಿಪತಿ ಸುಖವ ನೀಡಬೇಕು ಸಿದ್ದೇಶಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು