ಒಟ್ಟು 8021 ಕಡೆಗಳಲ್ಲಿ , 132 ದಾಸರು , 4501 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ ಪ್ರಾಣನಾಯಕನ ತಿಳಿವುದೊಂದೆ ಜ್ಞಾನಾಭ್ಯಾಸ ಮಾಡಿ ಧ್ರುವ ಕರಿಮಣಿ ಒಂದಿಲ್ಲದೆ ಹೆಂಗಸಿಗೆ ಸರಮುತ್ತು ಯಾಕೆ ಸಾರ ಸಂಜೀವನಿಲ್ಲದೆ ನೂರು ಗಿಡಮೂಲಿಕೆ ಯಾಕೆ ನೆರೆ ಇಲ್ಲದೆ ಸಾಧುಸಜ್ಜನರು ಸರ್ವಬಳಗವ್ಯಾಕೆ ಪರಮ ತತ್ವಜ್ಞಾನ ಒಂದಿಲ್ಲದೆ ಸುರಿಯುವ ಮಾತಿನ್ಯಾಕೆ 1 ಪ್ರಾಣವಿಲ್ಲದ ಸುಂದರವಾದ ಶರೀರ್ಯಾಕೆ ಕಾಲ ಬದಕುವುವದ್ಯಾಕೆ ಸ್ವಾನುಭವದ ಸುಖ ನೆಲೆಯುಗೊಳ್ಳದೆ ಒಣ ಡಂಭವ್ಯಾಕೆ ತಾನಾಗಿಹ್ಯ ವಸ್ತು ದೊರಕಿಲ್ಲದೆ ನಾ ನೀನೆಂಬುದ್ಯಾಕೆ 2 ಶ್ರೀ ಹರಿಮಹಿಮೆಯ ಸೋಹ್ಯ ತಿಳಿಯದೆ ದೇಹ್ಯವ್ಯಾಕೆ ಗುಹ್ಯಗುರುತವಿಲ್ಲದೆ ಸಾಯಸಬಡುವದ್ಯಾಕೆ ಸಾಹ್ಯಮಾಡುವ ಸದ್ವಸ್ತು ನೋಡದ ಕಣ್ಣು ನೋಟವ್ಯಾಕೆ ಮಹಿಪತಿಸ್ವಾಮಿ ಸದ್ಗುರುಪಾದ ಕಾಣದ ಜನ್ಮವ್ಯಾಕೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಾನಕಿಯು ನಮ್ಮಮ್ಮ ನಮಗೆ ಭಯವೇನು ಪ ಪವಮಾನ ತನಯನು ಪಾಲಿಪ ಗುರುವಯ್ಯಾ ಅ.ಪ ಕಾಲಕಾಲದಿ ತಪ್ಪದೆ | ಭತ್ಯವ ಹಾಕಿ ಬಾಲಲೀಲೆಗಳಾಡಿಸಿ ಮೇಲೆ ತುಡುಗಾಟವಾಡಿದರೆ ಕೆನ್ನೆಯ ಹಿಂಡಿ ಹಾಲ ಕುಡಿಸಿ ಮಕ್ಕಳರ್ಥಿಯ ನೋಡುವ 1 ಇತರ ಮಕ್ಕಳಿಗೆಲ್ಲಾ | ಅವರ ಮಾತಾ ಪಿತರು ವಡವೆಗಳಿಟ್ಟು ಮಿತಿಯಿಲ್ಲದೆ ಬೈದು ಬಲು ಚಿಂತೆಯ ಪಡುವರು 2 ಕಳ್ಳರಿಗೆ ಸಿಕ್ಕದೈಯ್ಯ | ನಮ್ಮೊಡವೆಗಳ್ ಕಳಚುವುದಕೆ ಬಾರದು ಒಳ್ಳೆ ವಸ್ತ್ರವ ಉಡಿಸಿ ಉಚಿತ ತಿಂಡಿಯ ಕೊಡಿಸಿ ಸುಳ್ಳಾಡದಂದದಿ ಸುತ್ತಿಸಿ ನಗುವರು 3 ಓದು ಬರಹವ ಕಲಿಸಿ | ನಮ್ಮನು ಕೆಲವು ಹೊತ್ತು ಆಟಗಳಾಡಿಸಿ ಆದರಿಸುತ ಜನ್ಮ ಜನ್ಮಗಳಲಿ ಬಿಡದೆ ಕಾದು ಕೊಂಡಿರುವರು ಕಡೆಗೂ ನಮ್ಮಗಲರು 4 ಇಂತಹ ನಮ್ಮವರ ಬಿಟ್ಟು | ಬರಿದೇ ಲೋಕ ಸಂತೆಯವರನು ನಂಬುವರೆ ಎಂತಾದರೂ ಗುರುರಾಮ ವಿಠಲನ ನಾಮ ಸ್ವಂತವಾದರೆ ಮುಕ್ತಿ ಸ್ವಾಧೀನವಾಗುವುದು5
--------------
ಗುರುರಾಮವಿಠಲ
ಜಾನಕೀಮನೋಹರ ಪ್ರಭೋ ಜರಾಮರಣವಿದೂರ ರಾಮ ಪ ನಾನಾವತಾರ ಚಿದಾ ನಂದಾತ್ಮ ಶರೀರ ಅ.ಪ ಧರ್ಮಾತ್ಮ ಸತ್ಯಸಂಧ ದಿನಕರ ವಂಶಾಬ್ಧಿಚಂದ್ರ 1 ಶಾಶ್ವತ ತ್ರಿಜಗನ್ಮೋಹನ 2 ಶಿವಚಾಪಖಂಡನ ಆ ಶ್ರಿತಲೋಕ ಮಂಡನ 3 ರಾವಣಾದಿ ದನುಜ ಮಥನ ದೇವಪರಾತ್ಮರ ರಘುವರ 4 ತಾಮಸಗುಣ ವಿರಹಿತ ಗುರು ರಾಮವಿಠಲ ನಮೋ ನಮೋ 5
--------------
ಗುರುರಾಮವಿಠಲ
ಜಾನಕೀವರತೇ ಜಯ ಮಂಗಳಂ ಪ ಮಾನವಾಧಿಪತೇ ಮಂಗಳಂ ಅ.ಪ ರಾವಣಾನುಜಮಿತ್ರ ರಮಣೀಯ ಸುಚರಿತ್ರ ದೇವಾಧಿದೇವ | ತೇ ಮಂಗಳಂ 1 ಅಪವರ್ಗಪ್ರದ ತೇ ಮಂಗಳಂ 2 ಖರದೂಷಣನಿಹಂತ ಕರಧೃತಶರಚಾಪÀ ಗುರುರಾಮವಿಠಲತೇ ಮಂಗಳಂ 3
--------------
ಗುರುರಾಮವಿಠಲ
ಜಾನಕೀಶ ವಿಠಲ ನೀನಿವನ ಪೊರೆಯೋ ಪ ಮೌನಿಕುಲ ಸನ್ಮಾನ್ಯ | ಆನತೇಷ್ಟಪ್ರದನೆಆನಮಿಸಿ ಪ್ರಾರ್ಥಿಸುವೆ | ಭಿನ್ನಪವ ಪಾಲಿಸೋ ಅ.ಪ. ಸತಿ ಸ್ವಪ್ನದಲಿ | ಅವನಿಜೆಯ ವಲ್ಲಭನೆ ತವನಾಮ ಸೂಚಿಸಿಹೆ | ಎನ್ನ ರೂಪದಲೀಭವವನಧಿ ದಾಟಲ್ಕೆ | ತವನಾಮ ಸಂಸ್ಮರಣೆನವಪೋತವೆನಿಸಿಹುದು | ಪವನಾಂತರಾತ್ಮಾ 1 ನಿತ್ಯ ತವ ಪದದಲ್ಲಿ | ಭಕ್ತಿ ಕರುಣಿಸೋ 2 ಮಧ್ವಮತ | ಸಾಕಷ್ಟು ತಿಳಿಸುತ್ತಾಮಾಕಳತ್ರನೆ ಇವನಾ | ವ್ಯಾಕುಲದಲ್ಹರಿಸೀಲೌಕಿಕವೆಲ್ಲ ವೈ | ದೀಕ ವೆಂದೆನಿಸುತ್ತಪ್ರಾಕ್ಕು ಕರ್ಮವ ಕಳೆಯೊ | ಲೋಕ ಲೋಕೇಶಾ 3 ತಾರತಮ್ಯ ಜ್ಞಾನ | ಮೂರೆರಡು ಭೇದಗಳಸಾರತಮ ಹರಿಯು ನಿ | ಸ್ಸಾರ ಜಗವೆಂಬಾಚಾರುಮತಿಯನೆ ಇತ್ತು | ಪಾರಗಾಣಿಸು ಭವವಧೀರ ನೀನಲ್ಲದಲೆ | ಆರು ಕಾಯುವರೋ 4 ಜೀವ ಬಹು ಪರತಂತ್ರ ದೇವ ನಿಜ ಸ್ವತಂತ್ರಈ ವಿಧದ ಸುಜ್ಞಾನ | ಸಾರ್ವಕಾಲದಲೀದೇವ ನೀ ದಯದಿ ಈ | ಜೀವಂಗೆ ಕರುಣಿಸೇಭಾವದಲಿ ಬೇಡ್ವೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಜಾಂಬುವತಿ ಪ್ರಿಯ ವಿಠಲ | ಅಂಬುಜದಳಾಕ್ಷ ಪ ನಂಬಿ ಬಂದಿಹನ ಮನ | ದಂಬಲವ ಸಲಿಸೋ ಅ.ಪ. ಲೌಕಿಕಾನೇಕದಲಿ | ಸಿಲ್ಕಿ ನೊಂದವನಾಗಿಏಕಾಮೇವಾದ್ವಿತೀಯ | ನೀನೇವೆಯಂಬಾವಾಕು ನುಡಿವಾ ಇವಗೆ | ಪ್ರಾಕ್ಕು ಕರ್ಮವ ಕಳೆದುತೋಕನ್ನ ಸಲಹೆಂದು | ಪ್ರಾರ್ಥಿಸುವೆ ಹರಿಯೇ 1 ನೀಚೋಚ್ಛ ಸುಜ್ಞಾನ | ದಾಸ್ಯಕಿದುವೇ ಮೂಲವಾಚಿಸೋ ಇವನಲ್ಲಿ | ಕೀಚಕಾರಿಪ್ರಿಯಾವಾಚಾಮಗೋಚರನೆ | ಖೇಚರೋತ್ತಮಸವ್ಯಸಾಚಿ ಸಖನೇ ಇವನ | ಕಾಪಾಡೊ ಹರಿಯೇ 2 ಸಂಗೀತ ಲೋಲ ಹರಿ | ಮಂಗಳಾಂಗನೆ ಸಾಧುಸಂಗವನು ಇವಗಿತ್ತು | ಕಾಪಾಡೊ ಹರಿಯೇಇಂಗಿತಜ್ಞನೆ ವಿಷಯ | ನಿಸ್ಸಂಗನೆಂದೆನಿಸಿಸಂಗೀತದಲಿ ತವ ಪ್ರ | ಸಂಗವಿತ್ತು ಕಾಯೋ 3 ಮೂರೆರಡು ಭೇದಗಳ | ತಾರತಮ್ಯ ಜ್ಞಾನವಾರವಾರಕೆ ತಿಳಿಸಿ | ಕಾಪಾಡೊ ಇವನಾಸೂರಿಜನ ಸಂಪ್ರೀಯ | ಸೂರಿಸಂಗವನಿತ್ತುಪಾರುಗೈ ಭವದ ಕೂ | ಪಾರ ಹರಿಯೇ 4 ಗರುಡವಾಹನ ಕೃಷ್ಣ | ಗರುವಗಳ ಪರಿಹರಿಸಿಸರ್ವಾಂತರಾತ್ಮಕನೆ | ಕಾಪಾಡೊ ಹರಿಯೇ |ನಿರವಧಿಕ ಗುಣ ಪೂರ್ಣ | ಸರ್ವೇಷ್ಟ ಪ್ರದನಾಗಿಪೊರೆಯ ಬೇಕಿವನ | ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಜಿಜ್ಞಾಸುವಿನ ಲಕ್ಷಣಾ ಕೇಳು ನೀಕ್ಷಣಾ ಪರಮಸುಖಾಕಾಂಕ್ಷಕನಾ ಬಾಳಿನ ವಿಷಯದಿ ಬೇಸರಗೊಳು ತಾ ವಿರತಿಯಿಂದರುವಾ ಬೋಧ ಕೇಳ್ವನಿವಾ ಚಿತ್ತದಿ ಭಕ್ತಿಭಾವನಾ ತಾಳುತ ಸಾಧನಾ ಮಾಡುತಲಿಹನಿವ ಕಾಣಾ ಆತ್ಮಾನಾತ್ಮನಿವೇಕ ವಿಚಾರ ಕೇಳುತ ತನ್ನೊಳಗÉೀ ಮಿಥ್ಯಾರೊಪಿತ ಜೀವಭಾವನನಾ ಜರÉಯುತ ಮನದೊಳಗೇ ಮಾಡುವ ಸುವಿಚಾರಾ ಇವನೆ ಧೀರ ಪರಮಸುಖಕಾಂಕ್ಷಕನಾ ವಿಷಯದಿ ಹರಿಯುವ ಮನವÀನೆಳೆÀದು ಬೋಧದೊಳಗಿರುವಾ ಮೋದ ಹೊಂದುವ ತಾ ಶ್ರೀ ಗುರುಶಂಕರನಾ ಆನಂದರೂಪನಾಬೆರೆತು ನಾ ಸುಖಿಸುವನಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಜೀವ ನಿಮ್ಮದೊ ಗುರು ಭಾವ ನಿಮ್ಮದೊ ಜೀವ ಭಾವದ ಶಿವಸೂತ್ರ ನಿಮ್ಮದೊ ಧ್ರುವ ಕಾಯ ಮಾಯ ನಿಮ್ಮದು ಅಂತ್ರ ಬಾಹ್ಯ ನಿಮ್ಮದು ನಿರ್ಮಿಸಿಹ್ಯ ಇದು ಉಪಾಯ ನಿಮ್ಮದು 1 ಪೃಥ್ವಿ ಅಪ್ಪು ನಿಮ್ಮದು ತೇಜ ತತ್ತ್ವ ನಿಮ್ಮದು ವಾಯುವಾಕಾಶವೆ ತಾ ತತ್ತ್ವನಿಮ್ಮದು 2 ಪ್ರಾಣವೇ ನಿಮ್ಮದು ಪಾನವೇ ನಿಮ್ಮದು ವ್ಯಾನ ಉದಾನ ಸಮಾನ ನಿಮ್ಮದು 3 ಅಂತಃಕರಣ ನಿಮ್ಮದು ಬುದ್ದಿಮನ ನಿಮ್ಮದು ಚಿತ್ತ ಚೈತನ್ಯ ಚೇತನ ನಿಮ್ಮದು 4 ನುಡಿನೋಟ ನಿಮ್ಮದು ಆಟಕೂಟ ನಿಮ್ಮದು ಕರ್ನ ಕೇಳಿಕೆಯಾಟವು ನಿಮ್ಮದು 5 ಸ್ಥೂಲ ಸೂಕ್ಷ್ಮ ನಿಮ್ಮದು ಕಾರಣವು ನಿಮ್ಮದು ಮಹಾ ಕಾರಣವು ಆನಂದ ನಿಮ್ಮದು6 ಜಾಗ್ರತೆ ನಿಮ್ಮದು ಶೀಘ್ರತಿ ನಿಮ್ಮದು ಪ್ರವೃತ್ತಿನಿವೃತ್ತಿ ಸುವ್ಯಕ್ತಿ ನಿಮ್ಮದು 7 ಸ್ವಪ್ನಾವಸ್ಥೆ ನಿಮ್ಮದು ಸುಷಪ್ತಿ ನಿಮ್ಮದು ಸರ್ವಾವಸ್ಥೆಗಳ ಲಕ್ಷಣ ನಿಮ್ಮದು 8 ಅರಹು ಮರಹು ನಿಮ್ಮದು ಖೂನ ಕುರಹು ನಿಮ್ಮದು ಸೂತ್ರ ನಿಮ್ಮದು 9 ಇಹಪರ ನಿಮ್ಮದು ಸಾಹ್ಯ ಸರ್ವ ನಿಮ್ಮದು ಗುಹ್ಯ ಗುರುತ ದೋರುವ ಸೋಹ್ಯ ನಿಮ್ಮದು 10 ಮಹಿಪತಿ ಜೀವ ನಿರ್ಮಿತ ಙÁ್ಞತಿ ನಿಮ್ಮದು ಸದ್ಗತಿಗೈಸುವ ಖ್ಯಾತಿ ನಿಮ್ಮದು 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜೀವ ಮಾನಿ ಸಂಕರುಷಣ ಪಾಹಿ | ಜೀವ ಮಾನೀ ಪ ಗಾತ್ರ ಅ.ಪ. ಶ್ರದ್ದೆಯ ಸುತ ನೀ | ನಿದ್ದುದೆ ಸರಿ ಹರಿಶ್ರದ್ದೆಯ ನೀಯುತ | ಉದ್ದರಿಸೆಮ್ಮ 1 ಬಲನೆನಿಸುತ ಗೋ | ಕುಲದೊಳಗುದಿ ಸುತಅಲವ ಪೂರ್ಣ ಹರಿ | ಒಲವನು ಪಡೆದೇ 2 ತಾಮಸ ಹರ ಪಿತ | ತಾಮಸ ಕಳೆ ಸು-ತ್ರಾಮ ವಂದ್ಯ ತ್ರೈ | ಧಾಮಗೆ ಪ್ರೀಯ 3 ರಾಮಾಭಿಧ ಹರಿ | ಸೋಮಾಸ್ಯನ ಸಂ-ಪ್ರೇಮಾಸ್ಪದ ಗುರು | ಸೌಮಿತ್ರೀಯೆ 4 | ವೈರಿ ಗುರು | ಗೋವಿಂದ ವಿಠಲನಭಾವವ ನೋಳ್ಪ ಸು | ಭಾವವ ನೀಯೋ 5
--------------
ಗುರುಗೋವಿಂದವಿಠಲರು
ಜೀವನ ಶಟವಿ ಹೇಳುವೆ ಕೇಳುಜೀವನವೆಂಬುವ ಮಾತೇ ಶಟವಿದೇವ ಚಿದಾನಂದ ನೀನಿಹೆಶಟವಿ ಎಲೆ ಜೀವನ ಶಟವಿ ಪ ಒಗೆತನ ಶಟವಿ ಎಲೆ ಜೀವನ ಶಟವಿ 1 ಆರ ಸಂಗಡ ಜಗಳವು ಶಟವಿಆರನಾದರು ಅಣಕಿಪೆ ಶಟವಿಊರು ನನ್ನದೆಂಬ ಶಟವಿ ಎಲೆ ಜೀವನ ಶಟವಿ 2 ನನ್ನದು ನನ್ನದು ಎಂಬೆ ಶಟವಿನಿನ್ನ ತಂದೆಯು ಹೋದನೆ ಶಟವಿನನ್ನದೆನೆ ನಾಚಿಕೆ ಬಾರದು ಶಟವಿ ಜೀವನ ಶಟವಿ3 ಗುರು ಹಿರಿಯರ ನೀ ನಿಂದಿಪೆ ಶಟವಿಗುಣ ನಿನಗೇನೇನಿಲ್ಲವೊ ಶಟವಿಬರಿದೇ ಬಯಲಿಗೆ ಹಂಬಲಿಪೆ ಶಟವಿ ಎಲೆ ಜೀವನ ಶಟವಿ4 ಶರೀರವು ಸ್ಥಿರವಲ್ಲವು ಶಟವಿತೆರಳುವೆ ನೀನು ಬೆಳಗಿಗೆ ಶಟವಿತರಳನ ಆರ ಕೈಯಲಿಟ್ಟೆ ಶಟವಿ ಎಲೆ ಜೀವನ ಶಟವಿ 5 ನಿನ್ನ ಸಂಸಾರ ಸುಳ್ಳಿದು ಶಟವಿನೀರಲಿ ಅಕ್ಷರ ಬರದಂತೆ ಶಟವಿನಿನ್ನನು ಏನಂತ ಕಂಡಿಹೆ ಶಟವಿ ಎಲೆ ಜೀವನ ಶಟವಿ 6 ನಿನಗೆ ಅನಂತ ಜನ್ಮವು ಶಟವಿನೀನು ಹೆಣ್ಣು ಗಂಡಲ್ಲ ಶಟವಿನಿನಗೆ ಹೇಳಲು ಹೆಸರಿಲ್ಲ ಶಟವಿ ಎಲೆ ಜೀವನ ಶಟವಿ 7 ಪಾಪದ ವಿದ್ಯದ ಮೂಲದಿ ಶಟವಿರೂಪಿಗೆ ಬಂದಿಹೆ ನೀನೀಗ ಶಟವಿ ಆ ಪರಿಚಂದ್ರನು ಹೊಳೆದಂತೆ ಶಟವಿ ಎಲೆ ಜೀವನ ಶಟವಿ 8 ಭೂಪ ಚಿದಾನಂದನ ಹೊಂದೆಲೋ ಶಟವಿರೂಪು ವಿರೂಪು ಆಗುವಿ ಶಟವಿದೀಪದೊಳು ನಿಜದೀಪ ನೀ ಶಟವಿ ಎಲೆ ಜೀವನ ಶಟವಿ 9
--------------
ಚಿದಾನಂದ ಅವಧೂತರು
ಜೀವನೇ ಶಶಿಹಾಸ ಕೇರಳ ಜಡಪ್ರಕೃತಿ ಕುಂತಳಪುರ ಶರೀರವಿದು ಸಮ್ಯಕ್ ಜ್ಞಾನ ಪಾವನದ ಶಾಸ್ತ್ರಗಳು ಗಾಲವ ಭಾವಿಸಲು ಶುಭಫಲವು ಚಂಪಕ ಮಾಲಿನಿಯು ಕನ್ಯೆ 1 ಮದನ ಚಂದ್ರಮುಖಿ ವಿಷಯೆಯು ವಿಷಯವುಮು ಕುಂದನಾತ್ಮನು ಸಾಲಿಗ್ರಾಮವು ಕಂದನೊಯ್ದ ಕಟುಕರು ಪಂಚಾಘಗಳು ತಿಳಿಯುವುದೂ 2 ಕೆಟ್ಟಕರ್ಮವು ಕಾಲೊಳಾರನೆ ಬೆಟ್ಟುನೋಡಲು ಕಾಳಿಕೆಯು ತಾ ಶ್ರೇಷ್ಠಮೂಲಪ್ರಕೃತಿ ಖಡ್ಗವು ನಿಷ್ಠೆಯೆನಿಸುವುದೂ ಸೃಷ್ಟಿಯೊಳಗೀ ವಿವರ ತಿಳಿದು ತ್ಕøಷ್ಟವೆಂದಾಲಿಪರ ಗುರುರಾಮ ವಿಠ್ಠಲನು ಕೈಪಿಡಿದು ಕೊಡುವನಭೀಷ್ಟಸಿದ್ಧಿಗಳಾ 3
--------------
ಗುರುರಾಮವಿಠಲ
ಜೀವನ್ಮುಕ್ತನೆ ಇದ ಮಾಡು ನಿನಗುಂಟೆ ಜೋಡುದಿವಸದಿಂದಲಿ ದೃಢನಾಗಿ ಸಾಧಿಸುಕೇವಲ ಶಿವನೀನಾಗುವಿ ಆಗುವಿ ಪ ಏರಿಸು ವಾಯುವನು ಏರಿಸಿದ ಬಳಿಕಪೂರಿಸು ಕುಂಭವನು ಘಳಿಗಿಂತಿರಲಲ್ಲಿಭೇರಿಯ ಕಹಳಾರವ ಮೃದಂಗವಸಾರಿಯೆ ಕೇಳುತ ಶ್ರಮವನು ಹರಿಸುತ 1 ಆರು ನೆಲೆಗೆ ಮುಟ್ಟಿನಿಲ್ಲು ನಿಂತ ಬಳಿಕಕಾರಣ ಮೃಡನಾಳಪೊಕ್ಕು ಮರವೆಂದು ಕಳೆದಿಕ್ಕುವಾರಿಯಮೃತಧಾರೆ ತ್ರಿವೇಣಿಯಸಾರಸನದಿಯಲಿ ಮುಳುಗುತ ಮುಳುಗುತ 2 ಚಂದ್ರಮಂಡಲ ಎದುರಲಿ ಇರಲು ನೋಡುತಲಿಮುಂದೆ ಜೋತಿರ್ಮಯವಿರಲು ಬ್ರಹ್ಮವೆ ತಾನಿರಲುಇಂದ್ರಾದಿಗಳಿಗಳವಡದಿಹ ಸ್ಥಾನವಾನಂದದೆ ಎರೈ ಗುರು ಕೃಪೆಯಿಂದಲಿ 3 ಕರ್ಮ ಅವಿದ್ಯೆಯನುಳಿದುತಾಮರ ಸಾಧಿಪ ನಂದದಿ ಬೆಳಗುತ4 ನಿತ್ಯ ಆಗುವುದು ತಥ್ಯಾಯೋಗಿ ಜನಕೆ ಇದು ಪಥ್ಯಾ ಸತ್ಯವಿದು ಸತ್ಯಭೋಗೈಶ್ವರ್ಯದ ಮುಕ್ತಿಗಧಿಪತಿಯಾಗು ಚಿದಾನಂದ ಗುರು ನೀನಾಗಿಯೆ5
--------------
ಚಿದಾನಂದ ಅವಧೂತರು
ಜೀವವು ತಲ್ಲಣಿಸುವುದು ಪ ದೇವರ ಪೂಜೆಯಿಂದು ಮಾಡೋದಿಲ್ಲ ನೀವೆಲೆಯ ಹಾಕಿ ಕರೆದರೆ ನಾ ಸಿದ್ಧ ಅ.ಪ ಜಣುಗಿ ಜಣುಗಿ ಕಾಲಕಳೆಯುವುದಲ್ಲ 1 ಮುಸುಕನಿಟ್ಟುಕೊಂಡು ಮಲಗಿದ್ದರಿನ್ನು 2 ಕುಟ್ಟಿ ಬೀಸೋರಿಲ್ಲ ಅಟ್ಟುಂಬೋದೆ ಭಾರ ಇಷ್ಟು ನುಡಿದುದಕೆ ಸಿಟ್ಟು ಬಹುಪೂರ 3 ಹತ್ತುಗಂಟೆಯಾಯ್ತು ಹೊತ್ತು ಬಹಳ ಹೋಯ್ತು ಬತ್ತಿ ಹಚ್ಚಿ ಒಲೆಯ ಹೊತ್ತಿಡ ಬಾರದೆ 4 ಬಿಸಜಾಕ್ಷಾಗುರುರಾಮ ವಿಠಲನಾಣೆ ಬ್ಯಾಡ 5
--------------
ಗುರುರಾಮವಿಠಲ
ಜೀವಾ ತಿಳಿ ತಿಳಿ ನಿಜದರಿವಾ ಪ ಶಾಂತಮಯಾ ಆನಂದನಿಕಾಯ ಮನಸಿನ ಮೂಲದಾ ಘನಪದವಾ ಅ.ಪ. ಕಲ್ಪನಾಜಾಲದಾ ನಾಶದ ಸ್ಥಿತಿಯೇ ಪರಮಸೌಖ್ಯದಾ ನಿಧಿಯನು ನೀನೇ ಮನದಲಿ ಯೋಚಿಸಿ ತಿಳಿನಿನ್ನಾ 1 ಜನನಮರಣದಾ ಸಂಕಲೆ ಹರಿಯೋ ಘನವಿವೇಕದಾ ಬಲದಲಿ ತಿಳಿಯೋ ಸನ್ನುತ ಶಂಕರಗುರುಬೋಧಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಜೋ ಜೋ ಜೋ ಜೋ ಗೋಪಿಯ ಕಂದಾಜೋ ಜೋ ಜೋ ಜೋ ಸಚ್ಚಿದಾನಂದಾಜೋ ಜೋ ಜೋ ಜೋ ಮಲಗೋ ಮುಕುಂದಾಜೋ ಜೋ ಇಂದಿರಾರಮಣ ಗೋ'ಂದಾ ಜೋ ಜೋ ಪಅಣುರೇಣು ತೃಣಕಾಷ್ಠ ಪರಿಪೂರ್ಣ ಜೋ ಜೋಪ್ರಣತಕಾಮದ ಪದ್ಮಜಾರ್ಜಿತ ಜೋ ಜೋಜಾಣೆರುಕ್ಮಿಣಿಯರಸಿ ಶ್ರೀಕೃಷ್ಣ ಜೋ ಜೋಜಾನಕಿ ಜೀವನ ಶ್ರೀರಾಮ ಜೋ ಜೋ 1ಸ್ಟೃಸ್ಥಿತಿಲಯ ಕಾರಣ ಜೋ ಜೋಇಟ್ಟಿಗೆ ಮೇಲ್ನಿಂತ 'ಠ್ಠಲ ಜೋ ಜೋಬೆಟ್ಟದ ತಿಮ್ಮಪ್ಪ ಶೆಟ್ಟಿಯೆ ಜೋ ಜೋದಿಟ್ಟ ಶ್ರೀ ಉಡುಪಿಯ ಕೃಷ್ಣನೆ ಜೋ ಜೋ 2ಜೋ ಜೋ ಶ್ರೀರಾಮದೂತ ಹನುಮಂತಾಜೋ ಜೋ ಜೋ ಭೀಮ ದ್ರೌಪದಿಕಾಂತಾಜೋ ಜೋಯತಿವರ ಆನಂದತೀರ್ಥಾಜೋ ಜೋ ಮೂರಾವತಾರ 'ಖ್ಯಾತ ಜೋ ಜೋ 3ಜೋ ಜೋ ಮಧ್ವ ಸಂತಾನ ಮುನಿವೃಂದಾಜೋ ಜೋ ಪ್ರಲ್ಹಾದ ವ್ಯಾಸ ರಾಜೇಂದ್ರಾಜೋ ಜೋ ಗುರುಸಾರ್ವಭೌಮಯತೀಂದ್ರಾಭೂಪತಿ'ಠ್ಠಲನ ಮೋಹದಕಂದಾ ಜೋ ಜೋ 4
--------------
ಭೂಪತಿ ವಿಠಲರು