ಒಟ್ಟು 2276 ಕಡೆಗಳಲ್ಲಿ , 103 ದಾಸರು , 1650 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ತಂದೆ ಎನ್ನತಾಯಿ ಎನ್ನ ಬಂಧುವೆ ನೀಇನ್ನಾರೊಡೆಯರಿಲ್ಲ ಕಾಯೊ ಲಕ್ಷ್ಮೀನಲ್ಲ ಪ.ಕರುಣ ನೋಟದಿ ನೋಡಿ ಹೊರಡಿಸಿದ ತಂದೆ ಮಂದರಧರನೆ ಬಸುರೊಳಿಟ್ಟ ತಾಯಿ ನೀನುಧÀರೆಗೆ ಪರಗತಿಗೆ ನೆಲೆಗೊಡುವ ಬಾಂಧವ ನೀನುದುರಿತಕರಿಗಣಕೆ ಸಿಂಹಾಸ್ಯ ನೀನು1ಷÀಟ್ಕರ್ಮ ಸಂಗ್ರಹವ ಮಾಡಿಸುವ ತಂದೆ ನೀದುಷ್ಕರ್ಮ ಖಂಡಿಸುವ ತಾಯಿ ನೀನುಷಟ್ಕೋಣ ಬಲದಿರುವ ತ್ರಿಕೂಟಾದ್ರಿವಾಸ ವಷಟ್ಕಾರಗೈದೆ ಕೌರವ ಕುಲಾರಿಯು ನೀನು 2ಶ್ರುತಿವಿರೋಧಿಗಳ ಮೋಹಿಪ ಸುರರ ತಂದೆ ನೀಅತುಳಧರ್ಮಾತ್ಮಕರ ತಾಯಿ ನೀನುಕ್ಷಿತಿಗೆ ವೈಕುಂಠವೆನಿಪ ಪ್ರಸನ್ವೆಂಕಟ ಬಂಧುಗತಿಗೆ ಗತಿಯಾದಾದಿಪುರುಷ ನಮೋ 3
--------------
ಪ್ರಸನ್ನವೆಂಕಟದಾಸರು
ಎನ್ನ ಭಕುತಿ ನೋಡಲು ಎಳ್ಳನಿತು ಹುರುಳಿಲ್ಲನಿನ್ನ ನಾಮವೆ ನಾ ನಂಬಿದಮುನ್ನೆಲೆಕೃಷ್ಣಪ.ನಿಚ್ಚನೀರೊಳಗೆ ಪೋಗಿ ಮುಳುಗಿ ಮುಳುಗಲೇನುಮತ್ಸ್ಯಸ್ನಾತಿಯೆನಿಸುವುದೆ ಮಹೀತಳದಿಅಚ್ಯುತನಿನ್ನಯ ಧ್ಯಾನವಿಲ್ಲದೆ ದ್ವಾದಶನಾಮಹಚ್ಚುವೆನು ಮೊಲನಾಳು[ವೇಷ]ವಿಟ್ಟ ತೆರದಿ 1ಬಯಲು ಡಂಬಕದಿಂದ ಬಹಳ ತುಲಸೀಮಾಲೆನಯದಿ ಕಂಠದೊಳಾಂತಪಾರ ಗರ್ವದಿಆಯಾಟೆಸಬಟ್ಟೆನು ಹರಿದಾಸನೆನಿಪೆನೆಂದು¥ಯೋನಿಧಿವಾಸ ನಿನ್ನ ಪದವ ಲಕ್ಷಿಸೆ ನಾ 2ಮುಸುಕು ಮೌನದಿ ಹರಿಯೆಂದು ಜಪಿಸಲಿಲ್ಲವಸುಧೆವಸುಕಾಂತೆಯರ ಚಿಂತಿಪೊಹರಿದಾಸ ಬೆಳ್ವಕ್ಕಿಯಂತೆನಗೆ ಹೇಯಂಗಳಿಲ್ಲಪ್ರಸನ್ವೆಂಕಟಪತಿ ತಪ್ಪ ಕಾಯೊಜೀಯ3
--------------
ಪ್ರಸನ್ನವೆಂಕಟದಾಸರು
ಎಲ್ಲಿರುವನೋ ರಂಗನೆಂಬ ಸಂಶಯ ಬೇಡ |ಎಲ್ಲಿ ಭಕುತರು ಕರೆದರಲ್ಲಿ ಬಂದೊದಗುವನು ಪ.ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು |ಬರೆದೋದಲವನ ಪಿತ ಕೋಪದಿಂದ ||ಸ್ಥಿರವಾದೊಡೀ ಕಂಬದಲಿ ತೋರು - ತೋರೆನಲು |ಭರದಿ ಬರಲಾಗ ವೈಕುಂಠವಲ್ಲಿಹುದೊ ? 1ಕುರುಪತಿಯು ದ್ರೌಪದಿಯ ಸೀರೆ ಸೆಳೆಯುತಿರೆ |ತರುಣಿ ಹಾ ಕೃಷ್ಣ ಎಂದೊದರೆಕೇಳಿ ||ಭರದಿಂದಲಕ್ಷಯಾಂಬರವೀಯೆ ಹಸ್ತಿನಾ |ಪುರವು ದ್ವಾರಾವತಿಗೆ ಕೂಗಳತೆಯೆ 2ಕರಿರಾಜನನುನೆಗಳು ನುಂಗುತಿರೆ ಭಯದಿಂದ |ಹರಿಯೆ ಕಾಯೆಂದು ಮೊರೆಯಿಡಲುಕೇಳಿ ||ಕರುಣದಿಂ ಬಂಧನವ ಬಿಡಿಸಲಾ ಗಜರಾಜ - |ನಿರುವ ಸರಸಿಗೆ ಅನಂತಾಸನ ಮುಮ್ಮನೆಯೆ 3ಪಾಪಕರ್ಮವ ಮಾಡಿದಜಮಿಳನ ಯಮಭಟರು ||ಕೋಪದಿಂದಲಿ ಸೆಳೆಯೆ ಭೀತಿಯಿಂದ ||ತಾ ಪುತ್ರನನು ಕರೆಯೆಕೇಳಿ ರಕ್ಷಿಸಿಶ್ವೇತ -ದೀಪವೀ ಧರೆಗೆ ಸಮೀಪವಾಗಿಹುದೆ ? 4ಅಣು - ಮಹತ್ತುಗಳಲ್ಲಿ ಪರಿಪೂರ್ಣನೆಂದೆನಿಸಿ |ಎಣೆಯಿಲ್ಲದ ಮಹಾಗುಣಪೂರ್ಣನು ||ಘನಮಹಿಮನಾದ ಶ್ರೀ ಪುರಂದರವಿಠಲನು |ನೆನೆದವರ ಮನದೊಳಗೆ ಇಹನೆಂಬ ಬಿರುದುಂಟು 5
--------------
ಪುರಂದರದಾಸರು
ಎಲ್ಲೆಲ್ಲಿ ಭಾಗವತಾಂಶ ಮತ್ತೆಲ್ಲೆಲ್ಲಿ ಹರಿಸನ್ನಿವಾಸಎಲ್ಲೆಲ್ಲಿ ಕರೆದರೆ ದಾಸರಲ್ಲಲ್ಲಿಗೆಬಾಹರಮೇಶಪ.ಆವೆಡೆ ಲಕ್ಷವಂದನೆಯು ಆವಾವೆಡೆಗೆ ಭಕ್ತ ನರ್ತನೆಯುಆವೆಡೆ ಸುಪ್ರದಕ್ಷಿಣೆಯು ಆವಾವೆಡೆ ರಂಗನಾರಾಧನೆಯು 1ಎಂತು ದಂಡಿಗೆ ತಾಳ ಘೋಷ ಎಂತೆಂತು ಕಥಾಮೃತ ವರುಷಎಂತು ತತ್ವಾರ್ಥ ಜಿಜ್ಞಾಸ ಅಂತಂತೆ ಶ್ರೀಕಾಂತನ ಹರುಷ 2ಎಷ್ಟು ತಂತ್ರಸಾರಾರ್ಚನೆಯು ಎಷ್ಟೆಷ್ಟುಶ್ರುತಿಸೂತ್ರಗಳ ಧ್ವನಿಯುಎಷ್ಟು ತಾತ್ಪರ್ಯ ವರ್ಣನೆಯು ಅಷ್ಟಷ್ಟು ಕೃಷ್ಣನಕಂಠ ಮಣಿಯು 3ಏಸುಶ್ರೀಹರಿವ್ರತ ಮೌನ ಏಸೇಸು ಶ್ರೀ ಹರಿರೂಪಧ್ಯಾನಏಸುಸದ್ವ್ಯಾಖ್ಯಾನ ದಾನ ಆಸನ್ನ ಕೈವಲ್ಯನಿದಾನ4ಎನಿತು ಗುರುಪಾದಗಳ ಸ್ಮರಣೆ ಎನಿತೆನಿತು ಮಧ್ವಯತಿಗಳ ಸ್ಮರಣೆಎನಿತೇಕಾದಶಿಯ ಜಾಗರಣೆ ಅನಿತನಿತು ಸುಲಭ ಹರಿಸ್ಮರಣೆ 5ಆರು ಆರೂರು ಮೆಟ್ಟಿಹರು ಮತ್ತಾರೂರರಸರ ಕಟ್ಟಿಹರುಆರೀರ್ವರ ಪೊರಮಟ್ಟಿಹರು ಆರಾರಾಗಲಿ ಕೃಷ್ಣನವರು 6ಹೇಗೆ ಸಜ್ಜನರ ಉಲ್ಲಾಸ ಹಾಗ್ಹಾಗೆ ಮಹಾಮಹಿಮರಭಿಲಾಷಹೇಗೆ ಬುಧರ ಪರಿತೋಷ ಹಾಗಾಗುವುದು ಪ್ರಸನ್ವೆಂಕಟೇಶ 7
--------------
ಪ್ರಸನ್ನವೆಂಕಟದಾಸರು
ಎಲ್ಲೆಲ್ಲು ನೋಡಿದರುಕೆಲದಿರಂಗನ ಪಾಡಿನಲ್ಲೆಯರುಕೋಲಹಾಕೋರಮ್ಮಪ.ಹಗಲು ಜ್ಯೋತಿಗಳು ಹೊಳೆವಂಥ ನಾರಿಯರ ಕೂಡನಗಧರಬಂದು ನಿಂತಾನಮ್ಮ1ಕೃಷ್ಣನರಸಿಯರು ನಿಂತಿರಲು ಸುರನಾರಿಯರೆಲ್ಲಉತ್ಕøಷ್ಟದಿ ಹಾಡಿ ಪಾಡೋರಮ್ಮ 2ರಂಗನರಸಿಯರು ನಿಂತಿರಲು ಅಂಬರದಿಗಂಧರ್ವರು ಹಾಡಿ ಪಾಡೋರಮ್ಮ 3ನಕ್ಷತ್ರ ಮಾಲೆಯಂತೆ ಹೊಳೆವೊ ನಾರಿಯರ ಕೂಡಲಕ್ಷುಮಿರಮಣ ನಿಂತಾನಮ್ಮ 4ಚಂದ್ರ ಜ್ಯೋತಿಗಳು ಹೊಳೆವಂಥ ಯಾದವರ ಕೂಡತಂದೆ ರಾಮೇಶ ನಿಂತಾನಮ್ಮ 5
--------------
ಗಲಗಲಿಅವ್ವನವರು
ಏಕೆ ದಯಮಾಡಲೊಲ್ಲೆ - ಎಲೊ ಹರಿಯೆ |ಮೂಕನಾಗುವರೆ ಹೀಗೆ ಪಲೋಕವನು ರಕ್ಷಿಪ ಲಕ್ಷ್ಮೀಕಾಂತನು ನೀನೇ |ವಾಕುಮೊರೆಗಳಕೇಳಿಒಲಿದು ದಯಮಾಡಯ್ಯಅ.ಪಅರ್ಥವಿಲ್ಲದ ಬಾಳ್ವೆಯು - ಇರುವುದಿದು|ವ್ಯರ್ಥವಾಗಿದೆ ಶ್ರೀಪತಿ ||ಕರ್ತುನಿನ್ನೊಳು ನಾನು ಕಾಡಿ ಬೇಡುವನಲ್ಲ|ಸತ್ವರದಿ ದಯಮಾಡೊ ತುಳಸೀದಳಪ್ರಿಯ 1ಮನದೊಳಗಿನ ಬಯಕೆ - ಎಲೈಸ್ವಾಮಿ |ನಿನಗೆ ಪೇಳುವೆನು ನಾನು ||ಬಿನುಗುದೇವತೆಗಳಿಗೆ ಪೇಳಲಾರೆವೊ ಹರಿಯೆ|ತನುಮನ ನಿನ್ನ ಕೂಡ ಇಹವು ದಯಮಾಡೊ 2ಮೂರು ಲೋಕವ ಪಾಲಿಪ - ಎನ್ನಯ ಸ್ವಾಮಿ |ಭಾರವೆ ನಿನಗೆ ನಾನು ||ಕಾರುಣ್ಯನಿಧಿ ನಮ್ಮ ಪುರಂದರವಿಠಲ ಶ್ರೀ - |ದಾರಾಮನೋಹರ ಸಾಕಾರ ದಯವಾಗೊ3
--------------
ಪುರಂದರದಾಸರು
ಏಕೆ ದೇಹವನು ದಂಡಿಸುವೆ ವೃಥಾ - ಬಿಡ - |ದೇಕ ಚಿತ್ತದಿ ಲಕ್ಷ್ಮೀಕಾಂತಹರಿಎನ್ನದೆಪ.ಸ್ನಾನವನು ಮಾಡಿ ಧ್ಯಾನಿಸುವೆನೆನುತಲತಿ - |ಮೌನವನು ಪಿಡಿದು ಬಕಪಕ್ಷಿಯಂತೆ |ಹೀನ ಬುಧ್ಧಿಗಳ ಯೋಚಿಸಿ ಕುಳಿತು ಫಲವೇನು ||ದಾನವಾಂತಕನ ನಾಮಕೆ ಮೌನವುಂಟೆ ? 1ಜಪವ ಮಾಡುವೆನೆನುತ ಕಪಟಬುದ್ಧಿಯ ಬಿಡದೆ |ಗುಪಿತದಿಂದಲಿ ನೀನು ಕುಳಿತು ಫಲವೇನು ||ಅಪರಿಮಿತಮಹಿಮ ಶ್ರೀ ನಾರಾಯಣನೆಂದರೆ ||ಸಫಲವಲ್ಲದೆ ಬೇರೆ ಗತಿಯುಂಟೆ ಮರುಳೆ 2ಅಂದಜಾಮಿಳಗೆ ಸ್ಮರಣೆಯ ಮಾತ್ರದಲಿ ಮುಕುತಿ |ಹಿಂದೆ ಶ್ರೀಹರಿಯು ತಾ ಕೊಡಲಿಲ್ಲವೇ ? |ಸಂದೇಹವೇಕೆ ನೀನೊಂದು ಕ್ಷಣವಗಲದೆ |ತಂದೆ ಶ್ರೀ ಪುರಂದರವಿಠಲ ನೆನೆಮನವೆ 3
--------------
ಪುರಂದರದಾಸರು
ಏಕೆಕಕುಲಾತಿಪಡುವೆ - ಎಲೆ ಮನವೆಪಲೋಕವನೆ ಸಲಹುವ ಶ್ರೀನಿವಾಸನು ನಮ್ಮ |ಸಾಕಲಾರದೆ ಬಿಡುವನೇ - ಮನವೆ ಅಪಆನೆಗಳಿಗೆಯ್ದಾರು ಮಣವಿನಾಹಾರವನು ಅಲ್ಲಿ ತಂದಿತ್ತವರದಾರೊ |ಜೇನುನೊಣ ಮೊದಲಾದ ಕ್ರಿಮಿ - ಕೀಟಗಳಿಗೆಲ್ಲ |ತಾನುಣಿಸದಲೆ ಬಿಡುವನೇ - ಮರುಳೆ 1ಕಲ್ಲಿನೊಳಗಿರುವ ಕಪ್ಪೆಗಳಿಗಾಹಾರವನುಅಲ್ಲಿ ತಂದಿತ್ತವರದಾರೊ |ಎಲ್ಲವನು ತೊರೆದು ಅರಣ್ಯ ಸೇರಿದ್ರ್ದವರ |ಅಲ್ಲಿ ನಡಸದೆ ಬಿಡುವನೇ - ಮರುಳೆ 2ಅಡವಿಯೊಳಗೇ ಪುಟ್ಟುವಾ ಮೃಗಕುಲಕ್ಕೆಲ್ಲಒಡೆಯನಾರುಂಟು ಪೇಳೊ |ಗಿಡದಿಂದ ಗಿಡಕೆಹಾರುವ ಪಕ್ಷಿಗಳಿಗಲ್ಲಿ |ಪಡಿಯ ನಡೆಸದೆ ಬಿಡುವನೇ - ಮರುಳೆ 3ಕಂಡಕಂಡವರ ಕಾಲಿಗೆ ಎರಗಿ ಎಲೆ ಮರುಳೆಮಂಡೆ ದಡ್ಡಾಯಿತಲ್ಲ |ಭಂಡ ಮನವೇ ನೀನು ಕಂಡವರಿಗೆರಗದಿರುಕೊಂಡಾಡಿ ಹರಿಯ ಭಜಿಸೋ - ಮರುಳೆ 4ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನ್ನುಬೆಂಬಿಡದೆ ಸಲುಹುತಿಹನು |ನಂಬು ಶ್ರೀ ಪುರಂದರವಿಠಲನ ಪಾದವನುನಂಬಿದರೆ ಸಲಹದಲೆ ಬಿಡುವನೇ - ಮರುಳೆ 5
--------------
ಪುರಂದರದಾಸರು
ಏನೇನ ದಾನವ ಮಾಡಲು - ಹರಿಯ |ಧ್ಯಾನಕೆ ಸಮವಾದ ದಾನಂಗಳುಂಟೆ ? ಪ.ದಿನಕೊಂದು ಲಕ್ಷ ಗೋದಾನವ ಮಾಡಲು |ಅನುದಿನ ಉದಕದಾನವ ಮಾಡಲು ||ಮನಶುದ್ಧವಾದ ಭೂದಾನವ ಮಾಡಲು |ವನಜನಾಭನ ಧ್ಯಾನಕೆ ಸಮವುಂಟೆ ? 1ಉತ್ತಮವಾದ ವಸ್ತ್ರವ ದಾನಮಾಡಲು |ಮುತ್ತು ಮಾಣಿಕವ ದಾನವ ಮಾಡಲು ||ಅತ್ಯಂತ ವಿದ್ಯಾ ಪ್ರದಾನವ ಮಾಡಲು |ಚಿತ್ತಜಪಿತನ ಧ್ಯಾನಕೆ ಸಮವುಂಟೆ ? 2ಶತಕೋಟಿ ಕನ್ಯಾಪ್ರದಾನವ ಮಾಡಲು |ಶತಶತ ಸುವರ್ಣ ದಾನವ ಮಾಡಲು ||ಮಿತಿಯಿಲ್ಲದೆ ಅನ್ನದಾನವ ಮಾಡಲು |ಕ್ಷಿತಿಪತಿಯ ಪಾದಧ್ಯಾನಕೆ ಸಮವುಂಟೆ ? 3ನಾನಾ ತೀರ್ಥದಲಿ ಸ್ನಾನವ ಮಾಡಲು |ಕಾನನದೊಳಗೆ ತಪವ ಮಾಡಲು |ಜಾÕನಿಯಾಗಿ ಕಾಶೀಯಾತ್ರೆಯ ಮಾಡಲು |ಜಾನಕೀಪತಿಯ ಧ್ಯಾನಕೆ ಸಮವುಂಟೆ ? 4ಧಾರಣಿ ಪಾರಣಿ ಭೀಷ್ಮಪಂಚಕ ಮಾಡಿ |ಹರುಷದಿ ವಿಷ್ಣುಪಂಚಕ ಮಾಡಲು ||ಪರಮ ಕಠಿಣ ಚಾಂದ್ರಾಯಣ ಮಾಡಲು |ಪುರಂದರವಿಠಲನ ಧ್ಯಾನಕೆ ಸಮವುಂಟೆ ? 5
--------------
ಪುರಂದರದಾಸರು
ಏಳಯ್ಯ ಶ್ರೀಹರಿ ಬೆಳಗಾಯಿತು ಪ.ಏಳು ದೇವಕಿತನಯ ನಂದನಕಂದಏಳು ಗೋವರ್ಧನ ಗೋವಳರಾಯ ||ಏಳುಮಂದರಧರ ಗೋವಿಂದ ಫಣಿಶಾಯಿಏಳಯ್ಯ ನಲಿದು ಉಪ್ಪವಡಿಸಯ್ಯ 1ಕ್ಷಿರಸಾಗರವಾಸ ಬೆಳಗಾಯಿತು ಏಳುಮೂರುಲೋಕದರಸು ಒಡೆಯ ಲಕ್ಷ್ಮೀಪತಿ ||ವಾರಿಜನಾಭನೆ ದೇವ ದೇವೇಶನೆಈರೇಳು ಲೋಕಕಾಧಾರ ಶ್ರೀ ಹರಿಯೇ 2ಸುರರುದೇವತೆಗಳು ಅವಧಾನ ಎನುತಿರೆಸುರವನಿತೆಯರೆಲ್ಲ ಆರತಿ ಪಿಡಿದರೆ ||ನೆರೆದು ಊರ್ವಶಿ ಭರದಿ ನಾಟ್ಯವಾಡಲುಕರುಣಿಸೊ ಪುರಂದರವಿಠಲ ನೀನೇಳೋ 3
--------------
ಪುರಂದರದಾಸರು
ಏಳು ನಾರಾಯಣ ಏಳು ಲಕ್ಷ್ಮೀರಮಣಏಳು ಶ್ರೀಗಿರಿಯೊಡಯ ಶ್ರೀವೆಂಕಟೇಶ ಪಕಾಸಿದ್ದ ಹಾಲನ್ನು ಕಾವಡಿಯೊಳ್ ಹೆಪ್ಪಿಟ್ಟುಲೇಸಾಗಿ ಕಡೆದು ಹೊಸ ಬೆಣ್ಣೆ ಕೊಡುವೆಶೇಷಶಯನನೆ ಏಳು ಸಮುದ್ರ ಮಥನವಮಾಡುದೇಶ ಕೆಂಪಾಯಿತು ಏಳಯ್ಯ ಹರಿಯೇ 1ಅರುಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳಸುರರುತಂದಿದ್ದಾರೆ ಬಲು ಭಕುತಿಯಿಂದಅರವಿಂದನಾಭ ಸಿರಿವಿಧಿಭವಾದಿಗಳೊಡೆಯಪಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ 2ದಾಸರೆಲ್ಲರು ಬಂದು ಧೂಳಿದರ್ಶನಕೊಂಡುಲೇಸಾಗಿ ತಾಳ ದಂಡಿಗೆಯ ಪಿಡಿದುಶ್ರೀಶಪುರಂದರವಿಠಲರಾಯ ನಿಮ್ಮ ಪಾದವನುಲೇಸಾಗಿ ಪೊಗಳುವರು ಹರಿಯೇ
--------------
ಪುರಂದರದಾಸರು
ಒಂದು ದಿನ ರುಕ್ಮಿಣಿಯ ಮಂದಿರಕೆ ಶ್ರೀಕೃಷ್ಣಅಂದ ಮಾತನುಕೇಳಿನೊಂದು ರುಕ್ಮಿಣಿ ತಾನುಅಷ್ಟ ಲಕ್ಷ್ಮಿಯರೊಳು ಅಧಿಕಳು ನೀನೆಂದುಎಷ್ಟು ಜನ್ಮದಿ ತಪವಗೈದೆನೊ ನಾ ಕಾಣೆ
--------------
ಗೋಪಾಲದಾಸರು
ಒಂದೇ ಕೂಗಳತೆ ಭೂವೈಕುಂಠಸಂದೇಹವಿಲ್ಲವು ಸಾಧು ಸಜ್ಜನರಿಗೆ ಪಅಂಬರೀಷನು ದ್ವಾದಶಿವ್ರತ ಮಾಡಲುಡೊಂಬೆಯ ಮಾಡಿದ ದುರ್ವಾಸನು ||ಕುಂಭಿನೀಪತಿ ಕೃಷ್ಣ ಕಾಯಬೇಕೆನುತಲೆಇಂಬಿಟ್ಟು ಚಕ್ರದಿ ಮುನಿಶಾಪ ಕಳೆದುದು 1ಕರಿರಾಜ ವನದಲಿ ಉಳುಹೆಂದು ಕೂಗಲುತ್ವರಿತದಿಂದಲಿ ಬಂದು ಕಾಯ್ದ ತಾನು ||ಕರುಣ ಸಾಗರ ಕೃಷ್ಣ ಕಾಯಬೇಕೆನುತಲೆತರಳ ಪ್ರಹ್ಲಾದನ ಕಂಬದಿ ಬಂದುದು2ದ್ರುಪದರಾಯನ ಪುತ್ರಿಗಾಪತ್ತು ಬರಲುಕೃಪೆಯಿಂದಲಕ್ಷಯವಿತ್ತನು ||ಕಪಟ ನಾಟಕ ಕೃಷ್ಣಪುರಂದರ ವಿಠಲನಗುಪಿತದಿ ನೆನೆವರ ಹೃದಯವೇ ವೈಕುಂಠ 3
--------------
ಪುರಂದರದಾಸರು
ಕಂಡೆ ಗುಣಗಣ ಸಾಂದ್ರಳಕೈಕೊಂಡೆ ಮುಕ್ತಿ ಫಲಗಳ ಪ.ಶೃತಿ ತತಿಗಳಿಂದ ಯುಕ್ತಳಲಕ್ಷ್ಮೀಪತಿಯ ದಯಕೆ ಪೂರ್ಣ ಪಾತ್ರಳಅತಿ ಭಕ್ತಿಯಿಂದ ಯುಕ್ತಳಮಧ್ವಮತಕ ಹಿತದಿಂದ ವ್ಯಾಪ್ತಳ 1ವ್ಯಾಳಾಶಯನನ ಭಕ್ತಳಗುಣಹೇಳಿದೆಮ್ಮ ಸುಶಕ್ತಳೆಏಳು ಲೋಕದಿ ವ್ಯಾಪ್ತಳಕರುಣಾಳು ಎನಿಸುತಿಪ್ಪಳ 2ರಮಿಯ ರೂಪಳೆ ರುಕ್ಮಿಣಿಯದಿವ್ಯ ಪ್ರಮೇಯ ತಿಳಿಸಿದೆ ಭಾಮಿನಿಅಮಿತ ಮಹಿಮಳೆಕಾಮಿನಿನಮಗೆ ಸುಮತಿದಾತಳೆ ಸುಗುಣಿ ನೀ 3
--------------
ಗಲಗಲಿಅವ್ವನವರು
ಕಂಡೆನಾ ಕನಸಿನಲಿ ಗೋವಿಂದನ ಪಕಂಡೆನಾ ಕನಸಿನಲಿ ಕನಕರತ್ನದ ಮಣಿಯ |ನಂದನ ಕಂದ ಮುಕುಂದನ ಚರಣವ ಅ.ಪಅಂದುಗೆಕಿರುಗೆಜ್ಜೆ ಘಲಿರೆಂಬ ನಾದದಿಬಂದು ಕಾಳಿಂಗನ ಹೆಡೆಯನೇರಿ ||ಧಿಂಧಿಮಿ ಧಿಮಿಕೆಂದು ತಾಳಗಳಿಂದಾನಂದದಿ ಕುಣಿವ ಮುಕುಂದನ ಚರಣವ 1ಉಟ್ಟ ಪೀತಾಂಬರ ಉಡಿಯ ಕಾಂಚಿಯದಾಮತೊಟ್ಟ ಮುತ್ತಿನ ಹಾರ ಕೌಸ್ತುಭವು ||ಕಟ್ಟಿದವೈಜಯಂತಿತುಲಸಿಯ ವನಮಾಲೆಇಟ್ಟ ದ್ವಾದಶನಾಮ ನಿಗಮಗೋಚರನ 2ಕಿರುಬೆರಳಿನ ಮುದ್ರೆಯುಂಗುರ ಮುಂಗಡೆಕರದಲಿ ಕಂಕಣ ನಳಿತೋಳುಗಳ ||ವರಚತುರ್ಭುಜ ಶಂಖಚಕ್ರದಿ ಮೆರೆವನನಿರುತದಿ ಒಪ್ಪುವ ಕರುಣಾ ಮೂರುತಿಯ 3ಬಣ್ಣದ ತುಟಿ ಭಾವರಚನೆಯ ಸುಲಿಪಲ್ಲಸಣ್ಣ ನಗೆಯ ನುಡಿ ಸವಿಮಾತಿನ ||ಪುಣ್ಯ ಚರಿತ್ರನ ಪೊಳೆವ ಕಿರೀಟನಕಣ್ಣು ಮನ ತಣಿಯದಕಂಸಾರಿಕೃಷ್ಣನ4ಮಂಗಳ ವರತುಂಗಭದ್ರದಿ ಮೆರೆವನಅಂಗಜಪಿತಶ್ರೀ ಲಕ್ಷ್ಮೀಪತಿಯ ||ಶೃಂಗಾರ ಮೂರುತಿಪುರಂದರವಿಠಲನಕಂಗಳಿಂದಲಿ ಕಂಡೆ ಹಿಂಗಿತು ಭವಭಯ 5
--------------
ಪುರಂದರದಾಸರು