ಹೂ ಬೇಕೆ ಹೂವು ಪರಿಮಳದ ಹೂವು ಪ
ಪರಮ ಪುರುಷ ನಮ್ಮ ಕೃಷ್ಣನ ತೋಟದ ಅ.ಪ
ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ
ಮಲ್ಲೆ ಗುಲಾಬಿ ತಾವರೆ ಪಾರಿಜಾತ
ಎಲ್ಲ ವಿಧದ ಮನಕ್ಲೇಶವ ಕಳೆಯಲು
ಪುಲ್ಲಲೋಚನ ನಮ್ಮ ಕೃಷ್ಣನು ಧರಿಸಿದ 1
ದಾರದಿ ಕಟ್ಟಿಲ್ಲ ಮಾರು ಹಾಕುವುದಿಲ್ಲ
ಕೇರಿ ಕೇರಿಗಳಲ್ಲಿ ಮಾರುವುದಲ್ಲ
ಭೂರಿಭಕುತಿ ಎಂಬ ಭಾರಿಯ ಬೆಲೆಗಿದ
ಮಾರೆಂದು ಪೇಳಿದ ಶೌರಿಯ ಸೊಬಗಿನ2
ರಂಗು ರಂಗುಗಳಿಂದ ಕಂಗೊಳಸುವ ಸ್ವಚ್ಛ
ಬಂಗಾರದ ಛವಿ ಹಂಗಿಸುವ
ಸಿಂಧು ಪ್ರಸನ್ನ ಶ್ರೀ ಮಾಧವ
ನಂಘ್ರಿಯ ಸಂಗದಿ ಮಂಗಳಕರವಾದ 3