ಭಕ್ತಿಲೇಸು ಮುಕ್ತಿಗಿಂತಲಿ ಪ
ಭಕ್ತಿಲೇಸು ಮುಕ್ತಿಗಿಂತಲಿ |
ಭಕ್ತಜನರಾ ಪಾಲಿಸುವನಾ |
ಭಕ್ತಿಗೊಲಿದು ಫಣಿಗಣ ಲೋಕದಿ |
ಯುಕ್ತಬಲಿಯ ಬಾಗಿಲಲೊಳಿಹ ರಂಗಯ್ಯನಾ |
ಸುರಪ್ರೀಯನಾ ಮುನಿಧ್ಯೇಯನಾ 1
ಸರಸಿಭವನ ಕಠಾರದಿಂದ ಲೋಗದನಾ |
ಅರಸೆನಿಪನಾ ತನುಭವನಾ | ಧರಿಸಿದನಾ |
ಅರಸಿಯ ಜನಕನ ಕುಲರಿಯನಿಪನಾ |
ಕುವರನ ಸ್ಯಂದನ ವಾಜಿಯನು ಪೊರೆದನಾ |
ಗೆಲಿಸಿದನಾ | ಮೆರಿಸಿದನಾ 2
ವನರುಹಸಖನ ಪೊಂದೇರ ನಡೆಸುತಿಹನಾ |
ಅನುಜನಾ ಅರಿಗಳಾ ಹರಿಯ ನಂದನನಾ |
ಘನವಾಲದಿಂದ ನೊಂದಿಹ ಪುರದರಸನಾ |
ಅನುಜನಾ ಸ್ಥಿರಪದವಿತ್ತು ನುಳುಹಿದನಾ |
ನಿಲಿಸಿದನಾ | ಕಾಯ್ವನಾ 3
ಸಿರಿಯ ಮದನಳಿದು ಗುರುಚರಣಕೆ ಹೊಂದಿ |
ದೊರಕಿ ನಿತ್ಯದಲಿ ಸಂತುಷ್ಟವಿರುತಾ |
ಗುರುವರ ಮಹಿಪತಿ ಸ್ವಾಮಿಯ ಷೋಡಶ |
ಪರಿಯಲಿ ತುಳಸಿಯ ತಂದು ಪೂಜೆ ಮಾಡುವ |
ಪಾದ ನೋಡುವಾ | ಪಾಡುವಾ 4