ಜಯ ರಮಾದೇವಿ ಸಾಗರ ಕನ್ನಿಕೆ ಪ
ಪದ್ಮ ಪದ್ಮಾಲಯೇ ಪದ್ಮದಳಲೋಚನೆ |
ಪದ್ಮಪ್ರಿಯೆ ದಿವ್ಯ ಪದ್ಮವದನೆ |
ಪದ್ಮವಕ್ಷೋಜಾತಿ ಪದ್ಮಕಲ ಶೋಭಿತೆ |
ಪದ್ಮಾಸನಾದೆನುತ ಪದ್ಮಚರಣೆ 1
ಮಂಗಲಾತ್ಮಕ ನೀಲಭ್ರಂಗ ಕುಂತಲಶಶಿ ಪ-
ತಂಗ ಸನ್ನಿಭ ಕೋಮಲಾಂಗಿ ವರದೆ ||
ಗಾಂಗೆಯ ವಸನ ಸರ್ವಾಂಗ ರತ್ನಾಭರಣೆ |
ಅಂಗಜಾಜನನಿ ಶ್ರೀರಂಗಪ್ರಿಯೆ 2
ಸತತ ಜಗದುತ್ಪತೆ ಸ್ಥಿತಿಯಂತೆ ಕಾರಿಣೆ |
ನುತಗುಣ ಮಹಿಮಾಯ ಶ್ರುತಿ ಪೂಜಿತೆ ||
ಪತಿತಪಾವನ ಮಹೀಪತಿನಂದನಿಷ್ಟ | ದೇ
ವತಿ ಭಕ್ತ ಜನಸುಖದಿ ಮತಿದಾಯಿತೆ 3