ಗೋಕುಲ ಬಿಟ್ಹ್ಯಾಂಗಿಲ್ಲಿಗೆ ಬಂದೆ ಶಿರಿಕೃಷ್ಣ ರಂಗಾ
ವ್ಯಾಕುಲದಲಿ ನೀ ಸಾಗರ ತ್ಯಜಿಸಿ
ಜೋಕೆಯಿಂದಲಿ ನಿಜಧಾಮಕೆ ಬಂದೆ ಪ
ಬನ್ನವ ಪಡುತಿಹ ಭಕುತನ ನೋಡಿ ಚಿಂತೆಯ ಮಾಡಿ
ಎನ್ನಂತರಂಗದ ಬಾಧೆಗಳು ಕಾಡೆ ಬಳಲುವುದಾ ನೋಡೆ
ಮನ್ನಿಸಿ ಶರಣನ ಬಾಧಿಸುವ ಪೀಡೆ ಪರಿಹಾರ ಮಾಡೆ
ಪನ್ನಗ ಶಯನ ಶ್ರೀಹರಿಯೇ ಓಡೋಡಿ ಬಂದೆ 1
ಪೊಕ್ಕಿಹೆನು ಸಂಸಾರಾರ್ಣವದೊಳಗೆ ಬಹು ದುಃಖದ ಅಲೆಗೆ
ಲೆಕ್ಕವಿಲ್ಲದಾ ಜಂತುಗಳದರೊಳಗೆ ಇಂಬಿಲ್ಲಾ ಅಲ್ಲಿಡಿಂಬಕೆ
ಸಿಕ್ಕಿ ಬಳಲುವಂಥ ಭಕುತನ ನೋಡಿ ಬಿಡುಗಡೆ ಮಾಡೆ
ಅಕ್ಕರದಿಂದಲಿ ಭರದಿ ಕಾಪಾಡಲು ಬಂದೆ 2
ಶರಣರ ಪೊರೆಯುವುದೇ ನಿನ ಗುಟ್ಟು ಬಣ್ಣಿಸಲಿನ್ನೆಷ್ಟು
ಕರುಣಿಸಿ ಬರುವಿ ಶಿರಿಯನು ಬಿಟ್ಟು ಭಕುತರೆ ನಿನಕಟ್ಟು
ನಿರುಪಮ ನಿನ್ನಯ ದಯಕೇನೆನ್ನಲಿ
ಶರಣರ ಪೊರೆಯುವಿ ನರಸಿಂºವಿoಲಾ ಬಂದೆ 3