ಒಟ್ಟು 2719 ಕಡೆಗಳಲ್ಲಿ , 119 ದಾಸರು , 1944 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುಜ ಭಾವಿ ಮುಖ್ಯಪ್ರಾಣನೆ ಪ ಚರಣಭಕ್ತರಲ್ಲಿ ಮುನ್ನ ಇರಿಸಿ ಸಲಹೊ ಕರುಣಶರಧಿಯೆ ಅ.ಪ. ಹರಿಯಮುಂದೆ ನಿಂದು ಸೇರಿ ಸ್ತುತಿಸೆ ದಿವಿಜವೃಂದ ಧೀರ ಲಾತವ್ಯ ಬಂದೆ ಹಾ ಚಾರು ಯುಕ್ತಿಮಲ್ಲಿಕಾದಿ ಸಾರಗ್ರಂಥರಾಶಿ ಇತ್ತು ಈರಮತವ ಮೆರೆಸಿ ಮೆರೆದ ಶೂರ ನಿನ್ನ ಪೊಗಳಬಲ್ಲೆವೆ 1 ಎರಡು ಹತ್ತು ಮೇಲೆ ನೂರುವರುಷ ಪೊರೆದು ಶಿಷ್ಯಸಂಘ ಕಾಯ ಕುಳಿತೆ ಭರದಿ ವೃಂದಾವನದಲೀ ತೊರೆಯಲಾಗದೇನೆ ನಿನ್ನ ತುರಗವದನ ರಾಮಕೃಷ್ಣ ಅರವಿದೂರ ವೇದವ್ಯಾಸ ಪೊರೆವರೆಲ್ಲ ಸೇವೆಕೊಳ್ಳುತಾ 2 ಸುರರು ಎಲ್ಲ ಮಣಿದು ಕುಣಿದು ನಿನ್ನ ಸಹಿತ ಮಣಿದು ಹರಿಯ ಭಜಿಸುತಿಹರು ತನುವ ಕೆಡಹಿ ರಾಗದಿಂದ ನೆನೆದು ನಿನ್ನ ನೋಡೆಸದನ ಜನುಮ ಜನುಮ ದೋಷ ಕಳೆವ ಘನ ಮಹಾತ್ಮೇಗೀಡುಕಾಣೆ 3 ಎರಡು ಕಮ್ಮಿ ಎರಡುನೂರು ವರವಿರಂಚಿ ಕಲ್ಪಗಳಲಿ ನಿಮ್ಮ ಮಹಿಮೆಗೇನೆಂಬೆ ಸುರರು ವಿವಿಧ ಬಲಿಗಳಿತ್ತು ಚರಣ ಪಿಡಿದು ನಡೆವರೆನಲು ನರನು ಪೊಗಳಬಲ್ಲನೇನು ಹರನಗುರುವೆ ಶಿರವ ಬಾಗುವೆ 4 ವರವಿಮಾನದಲ್ಲಿ ಕುಳಿತು ಚರಿಸುತಿರಲು ಒಮ್ಮೆಯೇನೆ ಸುರರು ಎಲ್ಲ ಕರೆಯೆನಿನ್ನ ಧರಿಸಿ ರೂಪ ನಿಚಯ ನಡೆದೆಯಾ ವರವಿಶೇಷಪೂಜೆಕೊಂಡು ಸ್ಥಿರವಗೈದು ಪದವಿಗಳನು ಕರೆದು ಹರುಷ ದಿವಿಜಗಣಕೆ ಪೊರೆದ ನಿನಗೆ ತುಲ್ಯ ಕಾಣೆವೈ5 ಸಿರಿಯಪತ್ರ ಹರಿಗೆ ಇತ್ತು ಮರುತನಂತೆ ಪಡೆದು ವರವ ಕೊಂಡು ಭುವಿಯಲಿ ಧರಿಸಿನಿಂದು ದಂಡ ಕಾಷ್ಠ ದುರುಳವಾದಿಗಜಗಳಳಿದು ಚರಿಸಿ ದೇಶವೆಲ್ಲ ಕೊನೆಗೆ ಕುರುಹು ತೋರಿನಿಂತ ಸ್ವಾದಿಲಿ6 ಏನು ನಿಮ್ಮ ಮಹಿಮೆ ಗುರುವೆ ತಾನೆ ಬಂದು ವಾಜಿವದನ ಸಾನುರಾಗದಿಂದ ಕೊಂಬ ಹೂರ್ಣಭಕ್ಷ್ಯವೆಲ್ಲ ಪೂರ್ಣ ಪೂರ್ಣನೀನು ಜೀವಗಣದಿ ಪೂರ್ಣತನ್ನ ಕಂದನೆಂದು ದಾನಗೈದ ನಿನ್ನ ಸತಿಗೆ e್ಞÁನಪೂರ್ಣಬಲನು ನೀನ ಹೋ 7 ಚಾರು ಭ್ರಾತೃನಿನ್ನ ಬದಿಲಿ ಮೀರಿ ಇಹುದು ಯಾವುದಿಲ್ಲ ಮೂರುಜಗದಿ ಸತ್ಯಸತ್ಯವೋ ಮೂರುಕಣ್ಣಿನಾತ ಮುಂದೆ ಭಾರಿಭೂತರಾಜ ನಿಮ್ಮ ಸಾರ ಚರಣ ಪಿಡಿದು ಭಜಿಪ ಯಾರು ಸಾಟಿ ಇಲ್ಲ ಸಾರುವೆ8 ಗಂಗೆಮೊದಲು ಎಲ್ಲ ತೀರ್ಥ ತಂಗಿ ಧವಳಗಂಗೆಯಲ್ಲಿ ತುಂಗ ಮಹಿಮ ನಿನ್ನ ಯಜಿಸಿ ಹಿಂಗಿಸುವರು ತಮ್ಮ ಶಮಲ ಭಂಗ ಸತ್ಯಸರ್ವಪಾಪ ಸುರರು ಕೈವಶ 9 ನಿನ್ನ ನಿಲಯ ಸುತ್ತ ನೃತ್ಯ ವನ್ನು ಗೈದು ಭಜಿಸೆ ಹರಿಯ ಘನ್ನ e್ಞÁನ ಚೆನ್ನ ಪಡೆದು ಸನ್ನು ತಾಂಗ ನೆಡೆಯಕಾಣುವ ಅನ್ನಸತ್ರ ನಿನ್ನ ಕ್ಷೇತ್ರ ಅನ್ನಪತಿಯ ತೋರ್ಪನಿನಗೆ ಇನ್ನು ಸರಿಯೆ ಕಾಮಧೇನು ಚಿಣ್ಣನೆಂದು ಪಿಡಿಯೊ ಶರಣನ 10 ಹತ್ತು ಐದು ನಾಲ್ಕು ಆರು ಹತ್ತು ಐದು ಸಹಿತ ಒಂದು ಹತ್ತು ಹತ್ತು ಮತ್ತೆ ಒಂದು ಹತ್ತುನೂರು ಹಾಗನಂತ ನಿತ್ಯ ನಿತ್ಯನುತಿಪೆ ಬೃಹತಿಯಿಂದ ಸತ್ಯಪದವಿಸಿದ್ಧ ನಿನಗೆಲೈ 11 ಗಿರಿಗಳರಸು ಮಗಳ ಸಹಿತ ಕರೆದು ನಿಮ್ಮ ರತ್ನರಾಶಿ ಸುರಿದು ಶಿರದಿ ಪೂಜೆಗೈದು ಪರಮ ಧನ್ಯನಾದ ತಾನಹೋ ತರಣಿ ಜನರು ಮಾರ್ಜನಾದಿ ಪರವಿಶೇಷ ಸೇವೆಗೈದು ಕೊಡುವೆ ಕಾಮಿತಾರ್ಥವ 12 ದೀಪಸಾಲು ಹಚ್ಚಿ ಭಜಿಸೆ ಪೋಪುದೈಯ್ಯ ಭವದ ತಾಪ ಆ ಪರೇಶ ಒಲಿದು e್ಞÁನ ದೀಪ ವಿಡುವ ಹೃದಯಕಮಲದಿ ತಾಪ ದೂರನಾಗಿ ಶ್ರೀಪತಿಯ ದಾಸನಾಗಿ ಕೂಪ ದಾಟ ಪೋಪ ಬೇಗಹೋ13 ಯಮನ ಪುರವ ಸಾರಿ ನೀನು ವಿಮಲರೂಪ ತೋರಿ ಹಾಗೆ ಅಮರ e್ಞÁನ ಬೋಧೆಯಿತ್ತು ಯಮನ ರಾಜ್ಯ ಬರಿದುಗೈದೆಹೊ ಕಮಲೆಕಂದ ಕಾಮಕೊರಗಿ ನಮಿಪ ನಿನ್ನ ರೂಪ ನೋಡಿ ಶ್ರಮವು ಆಯ್ತುಕಾಮನಿಂದ ಅಮರಸ್ತ್ರೀವೃಂದಕ್ಕೆಲ್ಲ ವೈ14 ದುಃಖಕೊಡದ ನಿನ್ನ ಅಸ್ಥಿ ಶಂಖಚಕ್ರ ಮಯವು ಹೌದು ಪಂಕಜಾಕ್ಷ ಅಂಗದಲ್ಲೆ ಅಂಕೆರಹಿತ ಸುಖವು ನುಂಬೆಹೊ ಸೂತ್ರ ತಾನು ಕಿಂಕಿಣೀ ಸುರಾವದಿಂದ ಶಂಕೆ ಕೊಡದೆ ಸಾರುತಿಹನು ಬಿಂಕವಾಗಿ ಪದವಿಬರ್ಪುದ15 ಮೇರುಗಿರಿಯ ಶಿಖರದಲ್ಲಿ ಕ್ರೂರಮದನ ತಾಪದಿಂದ ಚಾರುಕನ್ಯೆಯೊಬ್ಬಳಿನ್ನು ತೋರೆ ಸ್ವಾಂಗ ನಿನ್ನ ಬಯಸುತ ಧೀರನೀನು ಕದಲದಿರಲು ಕ್ರೂರ ತಪದಿ ಹರಿಯ ಒಲಿಸಿ ನೀರೆ ಪಡೆದ ಲೈಯ ನಿನ್ನ ಸೇರಿ ಸುಖಿಪ ಭಾಗ್ಯಮುಂದಕೆ 16 ಗರುಡನೇರಿ ನಿನ್ನ ಸಹಿತ ಹರಿಯು ತೋರಿಸಕಲಲೋಕ ಅಮೃತ ಕರದಿ ಕುಡಿಸಿ ಅರವಿ ದೂರ ನಿನ್ನ ತಬ್ಬಿದ ಮರುತನಂತೆ ವ್ಯಾಜರಹಿತ ಚರಣಭಜರ ನಿನಗೆ ತಾನೆ ಕರೆದು ಕೊಟ್ಟ ವಾಯುಪದವಿ ತುರಗವದನ ಪ್ರಥಮ ಭಕ್ತಹೋ17 ಗೆದ್ದು ವೀರಶೈವಗುರುವ ಗದ್ದುಗೆಯನು ಏರಿ ಮೆರೆದೆ ಮೆದ್ದು ಗರವ ಸುಖದಿ ನಿಂದೆ ತಿದ್ದಪಾಟು ತೋರ್ದೆ ಉಡುಪಿಲಿ ಬದ್ಧನಾದ ವಿಠಲ ನಿನಗೆ ಬಿದ್ದ ನೃಪನ ಗೇಸಿ ಕಾಯ್ದೆ ಶುದ್ಧ ವಿಷ್ಣುಭಕಿÀ್ತ ತೋರಿ ಮಧ್ವಸುತರ ಪೊರೆದ ದಾನಿಹೋ 18 ನೂರುನೂರು ಆನೆಮೀರಿ ಭಾರಿಬಲದ ಮೆರೆವ ಶಕ್ತ ನೇರನಿಲಿಸಿ ಧ್ವಜದಸ್ತಂಭ ದೂರಗೈದೆ ಶಿಷ್ಯಕಳವಳ ಭಾರ ಹೌರ ಸ್ಥೂಲಸೂಕ್ಷ್ಮ ತೋರಬಲ್ಲೆ ಇಚ್ಛೆಯಂತೆ ಮೇರೆ ಇರದ ಮಹಿಮನೆಂದು ಸಾರಿಸಾರಿ ನುತಿಪೆ ಜೀಯನೆ 19 ಗಂಗೆಪಡೆದ ರಂಗನನ್ನು ಅಂಗನಿಂದ ತರಿಸಿ ನೆಟ್ಟು ತುಂಗವಿಭವದಿಂದ ಯಜಿಸಿ ಕಂಗಳಿಂದ ನೋಡಿ ಉತ್ಸವ ಅಂಗಮರೆತು ನಂದ ಕುಡಿದೆ ಸಂಗದಿಂದ ಕಂಡ ಜನಕೆ ಭಂಗವಾಯ್ತು ಸಕಲ ಬಂಧ ಕೊಂಗಿ ಖಳರ ಬಿಟ್ಟು ಸತ್ಯವೈ 20 ಬರಿಯ ಕವನವಲ್ಲ ಕೇಳಿ, ಗುರುವೆ ದ್ವಿಜನ ಸ್ವಪ್ನದಲ್ಲಿ ಅರುಹಿ ತನ್ನ ಚರಿತೆಯನ್ನು ಬರೆಸಿ ಇಹನು ಪೊರೆಯೆ ಶಿಷ್ಯರ ಅರಸಿ ನೋಡಿ ಧನ್ಯರಾಗಿ ಒರೆಸಿ ಕಾಮಕ್ರೋಧವೆಲ್ಲ ಚರಣಪಿಡಿಯೆ ಭಕ್ತಿಯಿಂದ ಗುರುವು ಬಿಡನು ನಿಮ್ಮನೆಂದಿಗು 21 ಸುಧೆಯ ಕರ್ತ ಜಯಮುನೀಂದ್ರ ಹೃದಯವಾಸಿ ವಾಯುವಂದ್ಯ ಪದುಮೆ ರಮಣ ಕೃಷ್ಣವಿಠಲ ಸದರದಿಂದ ಮುಕ್ತಿ ನೀಡುವ ಸದನ ವಾಜಿವಕ್ತ್ರಗೆರಗಿ ಬದರಿನಿಲಯ ನನ್ನ ನೆನೆದು ಪದವನಿದನು ಪಠಿಪ ಭಕ್ತಗೆ22
--------------
ಕೃಷ್ಣವಿಠಲದಾಸರು
ಅನುದಿನ ಮರೆಯದೆ ಮರೆಯದೆ ಪ ಗಾತ್ರವೆ ಮಂದಿರ ಹೃದಯವೆ ಮಂಟಪನೇತ್ರವೆ ಮಹದೀಪ ಹಸ್ತ ಚಾಮರವುಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು 1 ನುಡಿವ ಶಬ್ದಗಳೆಲ್ಲ ಹೂವುಗಳಾಯಿತುನಡೆವುದೆಲ್ಲವು ಬಹು ನಾಟ್ಯಂಗಳುಉಡುವ ಹೊದಿಕೆಯೆಲ್ಲ ಉಚಿತವಾದ ವಸ್ತ್ರಕೊಡುವ ಭೂಷಣವೆಲ್ಲ ದಿವ್ಯಾಭರಣ2 ಧರಿಸಿದ ಗಂಧವೆ ಚರಣಕ್ಕೆ ಗಂಧವುಶಿರದಲ್ಲಿ ಮುಡಿಯುವ ಪುಷ್ಪವೆ ಮಾಲೆಸ್ಥಿರವಾಗಿ ಕೂಡಿದ ಬುದ್ಧಿಯೆ ಆರುತಿಅರಿತೊಡಲಿಗೆ ಉಂಬನ್ನವೆ ನೈವೇದ್ಯ3 ಎನ್ನ ಸ್ವರೂಪವೆಂಬುದೆ ರನ್ನಗನ್ನಡಿಎನ್ನ ಮನೋವೃತ್ತಿ ಎಂಬುದೆ ಛತ್ರಇನ್ನು ನುಡಿವ ಹರಿ ನಾಮಾಮೃತವೇ ತೀರ್ಥಎನ್ನ ಮನವೆಂಬುದೆ ದಿವ್ಯ ಸಿಂಹಾಸನ 4 ಅನ್ಯ ದೇವತೆ ಯಾಕೆ ಅನ್ಯ ಪ್ರತಿಮೆಯು ಯಾಕೆಅನ್ಯವಾದ ಮಂತ್ರ ತಂತ್ರವ್ಯಾಕೆಎನ್ನಲ್ಲಿ ಭರಿತ ಸಾಧನ್ನಂಗಳಿರುತಿರೆಚೆನ್ನಾಗಿ ಶ್ರೀಕೃಷ್ಣ ಸ್ವಾಮಿಯ ಪೂಜಿಪೆ 5
--------------
ವ್ಯಾಸರಾಯರು
ಅನುದಿನ ಮನದಲಿ ನೆನಿಯೋಮನುಜ ಪ ಮಂದರದರ ಗೋವಿಂದನ ಪಾದದ್ವಂದ್ವ ಯನಗೆ ಗತಿಯೆಂದು ಮುದದಿಂದನುದಿನ 1 ಮುರಹರ ಭವಸಾಗರ ದಾಟಿಸಿ ಶ್ರೀ ಗರುಡಾರೂಢನೆ ಕರುಣದಿ ಸಲಹೆಂದನುದಿನ 2 ಹರಿಸರ್ವೋತ್ತಮ ಕರುಣಾಕರ ರಮಾ- ವರ ಹೆನ್ನೆಪುರವರ ಹರಿ ಪೊರಿಯಂದನುದಿನ 3
--------------
ಹೆನ್ನೆರಂಗದಾಸರು
ಅನುದಿನ ವಿಷಯ ಸುಖವು ಎಂದು ಕನಸಿಲಾದರು ಸ್ಮರಿಸಲಾಗದು ಮನವೆ ಪ ಘನ ಸಂತೋಷವಿಲ್ಲವಿದು ನಿತ್ಯಾನಿತ್ಯ ಸುಖ ಬಯಸಿ ಮನದಲ್ಲಿ ನೀ ಸ್ಮರಿಸೆ ಹರಿಯೆ | ತೊರೆಯ ಅ.ಪ ಅಶನ ವಸನ ಪಶುವ್ರಾತ ವಶವಿರುವಾಭರಣ ಹಸನಾದ ರಥ ಪದಾತಿಗಳು ಸ್ವಸ್ವರೂಪವಲ್ಲ ಭಿನ್ನ ತಿಳಿಯೊ | ಮಮತೆ ಅಳಿಯೊ 1 ಬುದ್ಧಿ ವಿದ್ಯಾಕುಶಲ ಗತಿ ಅಧ್ವರ್ಯ ಪ್ರಭು ಮನ್ನಣೆ ಶುದ್ಧ ರೂಪ ಲಾವಣ್ಯ ಯೌವನ ಸಿರಿ ಶೌರ್ಯ ಪರಾಕ್ರಮ ವದ್ಯವಾಗಿ ಪೋಪುದು ಸ್ಥಿರವಲ್ಲ | ಸುಳ್ಳಲ್ಲ 2 ಇಚ್ಛೆಯಿಲ್ಲದೆ ನೀನು ಜನರ ಮೆಚ್ಚಿಗಾಗಿ ಮಾಡಿದ ದಾನ ವೆಚ್ಚವಾಗಿ ಪೋಪವೊ ಧನವಲ್ಲದೆ ನಿಚ್ಚಳ ಪುಣ್ಯಬಾರದು ಮನವೆ ಹೆಚ್ಚಿನ ಸ್ತೋತ್ರಕೆ ಮರುಳಾಗಿ ನೆಚ್ಚದಿರು ವಿಹಿತೋಕ್ತಿಯ | ಬಿಡದಿರು ಸನ್ಮತಿಯ 3 ಆರ್ತನಾಗದಲೆ ನೀನು ಕೀರ್ತಿಗೋಸುಗ ಕಥಾಶ್ರವಣ ಕರ್ತಭಾವದಿ ಸತತ ಮಾಡೆ ವರ್ತಿಸುವ ಪುಣ್ಯಪ್ರಾಪ್ತಿ ವೈಷಿಕ ಸುಖವಲ್ಲದೆ ಶಾಸ್ತ್ರಮರ್ಮ ತಿಳಿಯದೊ | ಅಹಂ ಮಮವಳಿಯದೊ 4 ಮಾನಿತನು ನಾನೆಂದು ನಾನಾ ಮತವಾಶ್ರಯಿಸಿ e್ಞÁನಿಗಳಿಗೆ ಶಿರಬಾಗಲೊಲ್ಲಿ ಏನು ಇದರಿಂದೆಂಬ ತ್ರಿಕರಣ ಶುದ್ಧಿಕಾರಣ ದ್ಯುನದಿ ಸ್ನಾನವಾಹವಲ್ಲಾ | ಇದು ಬಿಡಸಲ್ಲಾ 5 ಕೈಗೊಳುವುದೇ ಮಾನ ಅನ್ಯಾಧೀನವೆನ್ನದೆಂಬುದೇ ಲಜ್ಜಾ ಅನುಭವ e್ಞÁನಿಗಳ ಸಹವಾಸ ಸ್ನಾನ ಸಚ್ಛಾಸ್ತ್ರಾಲಾಪ ನಾನು ನನ್ನದು ಬಿಡುವುದೇ ತ್ಯಾಗ | ಇದೇ ಯೋಗ 6 ಕರಣ ವಿಷಯಗಳಲ್ಲಿ ಹರಿಯ ಚಿಂತಿಸುತ ನಿತ್ಯ ವರ ಯೋಗ ಭೋಗದಲ್ಲಿ ವರ ರಾಮಚಂದ್ರವಿಠಲರಾಯನು ನಿನ್ನ ದುರಿತ ಕಳೆದು ಪಾಲಿಸುವ7
--------------
ವಿಜಯ ರಾಮಚಂದ್ರವಿಠಲ
ಅಪರಾಧವೆಣಿಸದಲೆ ಕೃಪೆಮಾಡು ತಂದೆಅಪಣಾರ್ಯಕೃತ ಸ್ತೋತ್ರಪ್ರಿಯ ರಾಘವೇಂದ್ರ ಪವರ್ಣಾಶ್ರಮಕೆ ಉಚಿತ ಧರ್ಮಕರ್ಮವ ಬಿಟ್ಟುಹೊನ್ನು ಹೆಣ್ಣು ಮಣ್ಣಿಗಾಗಿ ಧಡಪಡಿಸಿಮನ್ನಿಸದೆ ಗುರು'ರಿಯರನು 'ೀಯಾಳಿಸಿಕಣ್ಣು ನೆತ್ತಿಯ ಮೇಲೆ ಬಂದು ನಾ ಮೆರೆದೆ 1ಹಂದಿಯಂದದಿ ಕಂಡ ಕಂಡಲ್ಲಿ ಬಾಯೊಳಗೆತಿಂಡಿ ತಿನಿಸು ತುರುಕಿ ಹೆಂಡಮದವೇರಿಖಂಡವನು ಬೆಳಸಿ ಮುಸಗಾಡುತ ಕೋಣನ ತೆರದಿಕಂಡದ್ದು ಮಾಡಿ ನಾ ದಣಕೊಂಡೆ ನಾ ತಂದೆ 2ದೇಹ ಕುಗ್ಗಿತು ಈಗ ದೇಹ ಹಾಳಾುತುಆ ಹರೆಯ ಮಬ್ಬಳಿದು ಮುದಿ ಮಂಗನಾದೆಶ್ರೀಹರಿ ಭೂಪತಿ'ಠ್ಠಲನು ನೆನಪಾದಕರುಣದಿಂದ ಕೈಪಿಡಿದು ಉದ್ಧರಿಸು ತಂದೆ 3
--------------
ಭೂಪತಿ ವಿಠಲರು
ಅಪ್ಪನ ನೋಡಿರೊ ವರಗಳ ತಪ್ಪದೆ ಬೇಡಿರೋ ಸರ್ಪನಮೇಲೆ ಉಪ್ಪವಡಿಸಿ ಮುಪ್ಪು ಇಲ್ಲದೆ ಭಕ್ತರನ ಪೊರೆವಾ ಪ ಬಲುವಾ ನಂದಗಡಲ ಸುಖವೊ ತೂಗುವ ಸುಳಿಗುರುಳ ಚುಂಚೊ ಸುಂದರದವತಾರ ಮಂದರಧರನೋ 1 ಅರಳಿದ ಸಂಪಿಗೆ ತೆನೆಯು ನಾಸಾ ಕೊನೆಯಲ್ಲಿ ಮಣಿಯು ತರುಳ ಹಾರವೋ ಮುಂದಲೆಯಲ್ಲಿ ಅರಳೆಲೆ ವೈಯಾರವೋ ತಿಲಕಾಂಬರದ ಬಿದಿಗೆ ತಿಂಗಳೊ ಮಕರ ಕುಂಡಲವೊ 2 ಕುಸುಮ ವನದ ಹಬ್ಬೊ ಗಲ್ಲದ ಚಿಬವೊ ಕಮಠದ ಬೆನ್ನೊ ಹೋಲಿಕೆ ಅಧರಾಮೃತದ ಸುರಿಯು ಅಲ್ಲಲ್ಲಿಗೆ ಕಿರಿಬೆವರಿಡೆ ನಿಲ್ಲದೆ ವೀಳ್ಯದ ಜೊಲ್ಲಿನ ಧಾರೆಯು 3 ಬಾಳಿದಿಂಡಿನ ತೋಳು ಕಟ್ಟಿದ ತಾಯಿತಗಳೇಳು ಕೀಲು ಕಡಗ ಝಣವೊ ದ್ವಾರೆ ಘಟ್ಟಿ ಕಂಕಣವೋ ನೀಲದುಂಗುರ ಹರಳೊ ಮುಂಗೈ ಸರಪಳಿಯ ಬೆರಳೊ ಬಾಲಲೋಲ ಗೋಪಾಲನೊ 4 ಪನ್ನಲಗ ಮುರಿಗ್ಯೂರಕ್ಷಿಯ ಮಣಿಯು ಥೋರ ದಾಸರಿಗೆ ಕೌಸ್ತುಭ ಶೃಂಗಾರವೊ ರನ್ನದ ಮಾಲೆ ತುಲಸಿ ಪದಕ ಹಾಕಿದ ಎಣ್ಣಿನುಲೊ ಗೋಪಿ ಮನ್ನಿಸುತಲಿ 5 ಹುಲಿಯುಗುರೂಮುತ್ತಿನಮಾಲಿಕಿಯುಪೂಸಿದಗಂಧಗರೊ ವೀಳೆಯರುಣನೊ ಅಂಗೈಯ ಗೆರೆಯು ವಿಸವ ಲಕ್ಷಣನೊ ವೈಜಯಂತಿ ಸುಳ್ಳುವೊ ಒಲಿಸಿದಳೊ ಮಗನ ಯಶೋದೆ 6 ಕಂಬು ಕೊರಳೊ ಮೂರೇಖಿಯು ಅಂಗೈಯಿವರಿಗೆ ಮರುಳೊ ತುಂಬಿ ಸೂಸುವ ಹೊಳೆಯು ಜಠರದ ನಾಭಿ ತ್ರಿವಳಿಯು ಬಿಸಲಿನ ಘನ ಹರಿಯು ಭೊಂ ಭೊಂ ಭೊಮೆಂದು ಕೊಂಬಿನ ಊದು ಎಂಬೊ ನುಡಿಯಲಿ ರಂಬಿಸಿ ಕೃಷ್ಣನ 7 ಕಮಲದ ಮಗ್ಗ್ಯೊ ಉಂಗುರ ನಡುವಿದು ಅಲಂಕಾರದ ಸುಗ್ಗ್ಯೊ ಅಮಮ ಧೊರೆಯು ನಾದದ ಘಂಟ್ಯೊ ಮಣಿಶಿಂಗನ ಮರಿಯು ಜಾನು ಕನ್ನಡಿ ಕ್ರಮವೊ ಧಿಮಿ ಧಿಮಿ ಎಂದು ರಂಗನ ಕುಣಿಯೆಂದು ನಿಮನಿಮಗೆಲ್ಲ 8 ಕಾಲಲಿಯಿಟ್ಯ ಗೆಜ್ಜ್ಯೋ ಅಂದಿಗೆ ತಪ್ಪು ತಪ್ಪು ಹೆಜ್ಜ್ಯೊ ನೀಳದ ದಂತೊ ಜಂಘ ಸರಪಳಿಯ ಗಗ್ಗರಿಯ ಯಿಂತೊ ನಖ ಕೇದಿಗೆ ಮುಳೆಯು ಲಾಲಿ ಲಾಲಿ ಕಂದ ಎನುತಲಿ ಶ್ರೀ ಲಕುಮಿ ಲೋಲನ ಎಬ್ಬಿಸಿ 9 ನೆರೆದವರಿಗೆ ತರುಳರನೆಲ್ಲಾ ಕರೆದು ಸುತ್ತಲು ನಿಲಿಸಿ ಹರಿಹರಿ ಎಂದು ಹರದಾಡುತಲಿ ಪರಮ ಸಂಭ್ರಮದಿಂದ ಕರೆಕರೆದು ವಿಜಯವಿಠ್ಠಲನ ತರಕಿಸಿ ಸಂತತ ಉಡಿಯಲಿ ಎತ್ತಿ 10
--------------
ವಿಜಯದಾಸ
ಅಬ್ಬಬ್ಬ ಈ ವರನ ಅದ್ಭುತಾಕೃತಿ ನೋಡಿ ಉಬ್ಬುಸವು ಮಿಗಿಲಾಯ್ತು ಸಹಿಪೆನೆಂತು ಕೆಮ್ಮೀಸೆ ಕೆಂಗಣ್ಣು ಕೆಂಪಾದ ರೋಮಗಳು ಹೆಮ್ಮಾರಿಯಂದದೊಳು ಮೊರೆವಮಿಗಿಲು ಕೆನ್ನೀರು ಪಾನದಿಂದುನ್ಮತ್ತನಂದದಿಂ ಘನ್ನಘಾತಕನಾಗಿ ಮೆರೆವ ಬೀಗಿ ಕರುಳ ಮಾಲೆಯ ಧರಿಸಿ ಮೆರೆಯುತಿಹನೀ ಸಹಸಿ ತರತರದಿ ಸುರನರರು ನಡುಗುತಿಹರು ಸ್ತಂಭವಿದೆ ಜನ್ಮಸ್ಥಲವಾಯಿತಿವಗೆ ಕುಂಭಿಣೀಯಂಬರಕೆ ಮಧ್ಯದೊಳಗೆ ಸಂಭ್ರಮದಿ ನೆಲಸಿಹನೆ ಪಡಿಯಮೇಲೆ ನಂಬಿದೆನು ಶೇಷಗಿರಿವರನ ಲೀಲೆ
--------------
ನಂಜನಗೂಡು ತಿರುಮಲಾಂಬಾ
ಅಭಾಗ್ಯಾದ ಲಕ್ಷ್ಮಿ ಹೋಗಮ್ಮ ದೊಡ್ಡಮ್ಮ ನೀ ಪ ಪೀಡೆಕಾಲುಗಳ ಮುಚ್ಚುತ ನೀವೋ ಡÉೂೀಡಿ ಪೋಗುತಲಿ ನಿಲ್ಲದೆ ವ್ಯಾಜ್ಯಗ- ಳಾಡುವ ಸ್ಥಳದಲಿ ನೆಲೆಯಾಗುತ ಹಾಳ ಗೋಡೆಯೊಳಿರುತಿಹ ಕತ್ತೆಯಂತೆ 1 ದೀಪದ ನೆರಳಲಿ ಕೋಪಿಯಮನದಲಿ ಲೋಪವಾದಕರ್ಮದಿ ಸಂತತವು ನಾಪರನೆಂಬುವ ಮಾಢನಲ್ಲಿ ನಿ- ವ್ರ್ಯಾಪಾರಿಯ ಚಿತ್ತದಿ ಯಾವಾಗಲು 2 ಪಾದ ಗದರಿಸುತಾಡುವ ಬಿರುನುಡಿಯಲಿ ನಿಂ- ದ್ಯದ ಮಾತಾಡುವವರÀ ಬಾಯಲಿನೀ ಮುದದೊಳಿದ್ದು ಅe್ಞÁನವ ಪಾಲಿಸೆ 3 ಪ್ರತಿದಿನದಲಿ ಅಳುತಿಹ ಸಂಸಾರದಿ ನೀ ಪತಿಯೊಡನವರೊಳಿರುತ ಮೂರ್ಖರಲಿಯ- ನೃತವಾಡಿಸಿ ನರಕವ ಪೊಂದಿಸಲು 4 ಮರವೆ ಸುಷುಪ್ತಿಯು ಬಹುವಿಧ ಮೋಹವು ನೆರೆನಂಬಿದವರಿಗೀವುತ ನೀಹಗ- ಲಿರುಳು ಕಲಿಯೊಡನೆ ಯೆಡೆಬಿಡದಲ್ಲಿಗೆ 5 ಹಾಳುಮಾಡಿಕೊಂಬುವ ಜನಗಳು ನಿ- ವೂಳಿಗವನು ಕೈಕೊಳ್ಳುತ ಬಿಡದೆ 6 ಗುರುರಾಮ ವಿಠಲನ ಶರಣ ಜನರ ಕ- ಣ್ದೆರದು ನೋಡದಿರು ಬೇಡುವೆ ನಿನ್ನನು ನಿರುತವು ನಿರ್ದಯ ಮಾಡುತ ದುರುಳರ ಪರಮ ಕೃಪಾದೃಷ್ಟಿಯಲಿ ನೋಡಲು 7
--------------
ಗುರುರಾಮವಿಠಲ
ಅಭಿಮಾನವ್ಯಾಕೊ ಮಾನವಾ ಪ ಸಭಯ ದುಃಖದೊಳಗಿರುವಾ ದುರಭಿಅ.ಪ ನೀರ ಮೇಲಿನ ಗುಳ್ಳೆಯಂದದಿ ತೋರ್ಪ ಶ- ರೀರ ಭೋಗಾಪೇಕ್ಷಿಸಿ | ನಾನು ನನ್ನದೆಂದು 1 ತನ್ನನೇನು ತಾ ಬಲ್ಲದೆ | ನಾನು ನನ್ನದೆಂದು 2 ಪೈಣ ದಾರಿಗೆ ದಾರಿಯಾವುದು | ನಾನು ನನ್ನದೆಂದು3 ಇಭದಂತೆ ಮದವೇರುತಾ | ನಾನು ನನ್ನದೆಂದು4 ಇದು ಸ್ಥಿರವಿಲ್ಲ ಇನ್ನೊಂದು ತಪ್ಪುವುದದಲ್ಲ ಪದರದೆ ನೀ ಕೇಳೀಸೊಲ್ಲ | ನಾನು ನನ್ನದೆಂದು 5 ವೇದಶಾಸ್ತ್ರ ಪುರಾಣವ್ಯಾರ ಪೊಗಳುವುದು ಶೋಧನೆ ಮಾಡಿ ತಿಳಿಯದೆ | ನಾನು ನನ್ನದೆಂದು6 ಗುರುರಾಮವಿಠಲನು ಗುರುತಾಗಿರುವ ನೆಲೆ ಅರಿತುಕೊಂಡವ ಧನ್ಯ | ನಾನು ನನ್ನದೆಂದು 7
--------------
ಗುರುರಾಮವಿಠಲ
ಅಭ್ಯಾಸವಮಾಡಿ ಅಭ್ಯಂತ್ರದೊಳಗಿಹುದು ಧ್ರುವ ಕಣ್ಣು ಕಾಣುವದ್ಹಚ್ಚಿ ಚೆನ್ನಾಗಿ ಚಿತ್ಸ ್ವರೂಪವ ಭಿನ್ನವಿಲ್ಲದೆ ಭಾಸುವದು ಪುಣ್ಯಪ್ರಭೆಯು 1 ಕಿವಿಯು ಕೇಳುವದ್ಹಚ್ಚಿ ಸವಿಸವಿ ಸಾರಾಯದ ಶ್ರುತಿ ಆವಾಗ ನಿಮ್ಮೊಳಾಲಿಸಿ ಪವಿತ್ರ ಪ್ರಣವ 2 ಘ್ರಾಣ ಗ್ರಹಿಸುವದ್ಹಚ್ಚಿ ದೇಹದೊಳಾವಾಗ ಪೂರ್ಣ ಸೋಹ್ಯ ಸೂತ್ರವಿದು ಸೋಹ್ಯವೆಂಬುದಾ 3 ಜೀವಕೆ ಜೀವ್ಹಾಳಚ್ಚಿ ಸುವಿದ್ಯಸೇವೆ ಸೂತ್ರದ ಸರ್ವದಾ ಸವಿಸಾರವ ನೋಡಿ ದಿವ್ಯನಾಮದ 4 ಶಿವಸುಖವಿದುರಿಡುವಾಂಗೆ ಜೀವ ಜೀವದಾ 5 ಮನಸಿಗೆ ಮನಹಚ್ಚಿ ಮನೋನ್ಮನಮಾಡಿ ಘನಸುಖದೊಳು ಬೆರೆದಾಡಿ ಅನುಭವಿಸಿ ನೋಡಿ 6 ಗುರುವಿಗೆ ಗುರುವೆಂದರಿದು ನರದೇಹದ ಭಾವನೆಯ ಮರೆದು ಕರಕೊ ಮಹಿಪತಿ ಇರುಳ್ಹಗಲೆ ಸ್ಮರಿಸಿದಾಕ್ಷಣ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅಮ್ಮಮ್ಮ ಗೋಪಿಯೆನೆ ಏನೆಂಬೆ ಪರ ಬೊಮ್ಮ ಮಗನೆಂಬೊ ಧೈರ್ಯಕೆ ಪ. ಬೊಮ್ಮನಯ್ಯನ ಸಿರಿರಮ್ಮೆ ಪತಿಯ ಘನ ಪೆರ್ಮೆ ಗುಣಗಣನಿಲಯನ ಅ.ಪ. ಹೊಳೆವ ಶ್ರೀರೂಪು ವಟಪತ್ರದಲ್ಲಿ ಪ್ರಳಯಜಲಧಿಯ ಶಯನನ ಸೆಳೆಮಂಚದ ಮ್ಯಾಲೆ ಮಗ್ಗುಲೊಳಿಟ್ಟು ತನ್ನ ಗೋಪಿ 1 ಚರಾಚರಂಗಳ ಸೃಷ್ಟಿ ಸ್ವಯಿಚ್ಛೆಯಿಂದ ಪುರುಷರೂಪವ ಧರಿಸಿದ ಪರಮಮಂಗಳ ಮೂರುತಿಯ ತನ್ನ ಗೋಪಿ 2 ಕತ್ತಲೆಯನು ನುಂಗಿ ತತ್ವಂಗಳನು ಕೊಂಡು ಮತ್ತೆ ಬೊಮ್ಮಾಂಡದೊಳಗೆ ಪೊಕ್ಕು ತತ್ವಸಾರದಿಂದೊಪ್ಪುವ ಕೊಮರನ ಗೋಪಿ 3 ಅದಭ್ರಸೃಷ್ಟಿಗಳಿಗಗೋಚರನಾದ ಆದಿಮೂರುತಿ ¸ಚ್ಚಿದಾನಂದನ ಸದಾ ತನಯನೆಂದೆತ್ತಿ ಮುದ್ದಿಸಿ ಸುಖ ಗೋಪಿ 4 ಚತುರುಭುಜ ಶಂಖ ಚಕ್ರ ಗದೆ ಪದುಮ ಸುತಪ ಪ್ರಶ್ನೆಗೆ ವರವಿತ್ತ ಶ್ರುತಿಶಿರೋಮಣಿಯೆಂದರಿಯದೆ ತಾ ಗೋಪಿ 5 ಬೊಮ್ಮಕಲುಷಾನಂತ ಸಹಸ್ರಗಳ ನಿಮಿಷಮಾತ್ರದಿ ಪಡೆದನ ಬೊಮ್ಮಾಂಡವೆ ತನ್ನ ರೋಮಕೂಪದಲ್ಲಿಪ್ಪ್ಪ ರನ್ನವೆ ಮಗನೆಂದಳೆ ಗೋಪಿ6 ಅನ್ನಂತ ರವಿತೇಜಕಿರೀಟದ ಅನ್ನಘ್ರ್ಯ ಸರ್ವಾಭರಣ ಪೊನ್ನ ವಸ್ತ್ರವನ್ನುಟ್ಟ ಅದ್ಭ್ಬುತ ಬಾಲಕನ ಗೋಪಿ 7 ಅನ್ನಂತಾನಂತ ಜೀವಗಣಗಳು ಅನ್ನಂತಾನಂತ ಕರ್ಮಗಳು ಅನ್ನಂತಾನಂತ ಗಾಯತ್ರಿಗೆ ಕÀರ್ತೃ ವಿಷ್ಣು ಗೋಪಿ 8 ಅನ್ನಂತಾಸನ ಶ್ವೇತದ್ವೀಪ ವೈಕುಂಠ ದನ್ನವರತ ವಾಸವಾಗಿಪ್ಪನ ಅನ್ನಿಮಿಷರ ಯೋಚನೆಗೆ ಒಲಿದನ ಗೋಪಿ 9 ಧರ್ಮದÀ ವೃದ್ಧಿಗೆ ಧರ್ಮದ ಹಾನಿಗೆ ತನ್ನಿಚ್ಛೆಯಲವತರಿಸಿದ ಮಮ ಪ್ರಾಣಾಹಿ ಪಾಂಡವನೆನಿಸಿದ ಗೋಪಿ 10 ಉದ್ದಾಮ ಕಾಂಚೀದಾಮ ಕಂಕಣ ಶ್ರೀ- ಮುದ್ರೆಯ ಶ್ರೀವತ್ಸಕೌಸ್ತುಭಧರನ ಮಧ್ವಮುನಿಗೆ ತಾನೊಲಿದು ಬಂದನ ಗೋಪಿ 11 ಸರಸಿಜಬೊಮ್ಮಾಂಡ ಒಡೆದಾಗ ವಿರಿಂಚಿ ತೊಳೆದ ಪಾದೋದಕವ ಹರ ಸೇವಿಸಲಾಗ ಶಿವನ ಮಾಡಿದ ಹರಿಯ ಮಗನೆಂದಳೆ [ಗೋಪಿ] 12 ದೇವಕಿ ಉದರದಲ್ಲಿದ್ದಾಗ ಬ್ರಹ್ಮಾದಿ ದೇವರಿಂದಲ್ಲಿ ಕೀರ್ತಿಸಿಕೊಂಡು ಭಾವಕಿ ದೇವಕಿ ವಸುದೇವನಲ್ಲಿ ಪಿತೃ ಗೋಪಿ 13 ಶಿಶುರೂಪವ ತೋರಿದ ಬೊಮ್ಮನ ಕಂಡು ವಸುದೇವಗೆ ನದಿ ಎಡೆ ಬಿಡೆ ಸಾಸಿರನಾಮ ಚಿತ್ರವಾಗಿದ್ದ ಜಗ- ಗೋಪಿ 14 ಪಾಲಗಡಲಲ್ಲಿ ಪವಡಿಸಿಪ್ಪನ ಕಾಲಮೇಲೆ ಮಲಗಿಸಿಕೊಂಡು ನೀಲಮೇಘಶ್ಯಾಮಯೆಂದು ಬಣ್ಣಿಸುತಲಿ ಗೋಪಿ 15 ಆದಿದೇವನು ಬ್ರಹ್ಮಸೂತ್ರವ ಕಲ್ಪಿಸಿ ವೇದ ವಿಭಾಗವ ಮಾಡಿದನ ಆದರದಿಂತುಂತೆಂದು ಕಲಿಸಿ ಸಂ ಗೋಪಿ 16 ಭಾನುಶತಕೋಟಿತೇಜಪ್ರಕಾಶನ್ನ ಆನಂದವನೆ ನೋಡಿ ಮನ ಉಬ್ಬಿ ಆನಂದನಿಧಿಯ ತೊಡೆಯ ಮ್ಯಾಲೆಯಿಟ್ಟು ಗೋಪಿ 17 ಶೃಂಗಾರನಿಧಿಯನ್ನು ಬಾಯೆಂದು ಕರೆದು ರ- ಥಾಂಗಪಾಣಿಯನೆ ಎತ್ತಿಕೊಂಡು ತಿಂಗಳನೋಡಯ್ಯ ಕಂದ ಎಂದಾತನ ಗೋಪಿ 18 ಸನ್ನಕಾದಿಗಳಯ್ಯನ ಪಿತನ ಕರೆ ದೆನ್ನ ಮಾಣಿಕವೆಯೆಂದಪ್ಪಿಕೊಂಡು ಹೊನ್ನ ತಾ ಗುಬ್ಬಿಯೆಂದಾಡು ಎನ್ನಯ್ಯನೆ ಗೋಪಿ 19 ಗಂಭೀರವಾರಿಧಿಗೆ ಅಂಬಾ ಹೂಡಿದ ತೋಳು ಇಂದಿರೆಯನೆ ಅಪ್ಪಿದ ತೋಳು ಶಂಭರಾರಿಯ ಪಿತ ತೋಳನ್ನಾಡೈ ಎಂದು ಗೋಪಿ 20 ಪಾದ ಉ- ದ್ದಂಡ ಬಲಿಯಮೆಟ್ಟಿದ ಪಾದ ಪುಂಡರೀಕಾಯತವಾದ ಪಾದದಿ ಪ್ರ- ಗೋಪಿ 21 ನಿತ್ಯತೃಪ್ತನು ಹಸ್ತ (ಸಿದ?) ನೆಂದೆನುತಲೆ ಇತ್ತ ಬಾ ಹೊರೀಯೆಂದಾದರಿಸಿ ಹೊತ್ತಾರಿಂದಮ್ಮೆ ಉಣ್ಣದಿರಲು ಹೊಟ್ಟೆ ಗೋಪಿ 22 ಅಮ್ಮೆ ಉಂಬುವ ಪುಟ್ಟ ಬಾಯ ಮುದ್ದಿನ ಮಾ ರಮ್ಮೆಯನರಸುವನಚ್ಚರಿಯ ಅಮ್ಮೆ ನೋಡಿ ನಗುವ ಮುದ್ದು ಬಾಲಕನ ಪರ ಗೋಪಿ 23 ತಾಯ ಮೊಗವ ನೋಡುತ್ತಾಕಳಿಸುತ ಬಾಯಲ್ಲೀರೇಳುಲೋಕವ ತೋರೆ ಆಯತೆ ನೋಡಿ ಮರಳಿ ಕಂಗೆಟ್ಟು ವಿಶ್ವ- ಗೋಪಿ 24 e್ಞÁನಘನನ ವಿಶ್ವತೋನಯನನ ಆನಂದಚರಿತ್ರನ ಅವ್ಯಕ್ತನ e್ಞÁನಿಗಳ ಹೃತ್ಕಮಲದೊಳಿಹನ ಕಣ್ಣಮುಚ್ಚಿ ಗೋಪಿ 25 ಹಾಲ ಹರವಿಯ ಒಡೆದು ಬಂದು ಗೋ- ಪಾಲ ನೀನೆಲ್ಲಿಗೆ ಪೋದೆಯೆಂದು ಕಾಲಕರ್ಮಂಗಳಿಗೆ ಕಾರಣವಾದೋನ ಗೋಪಿ 26 ಜಗದುದರ ಜಂಘಿಸುತ ಅಡಿಯಿಡೆ ಮೃಗಲೋಚನೆ ಮೈಮರೆದಿರೆ ಅಗಣಿತಮಹಿಮನು ಚರಿಸುತ ಬರ ಗೋಪಿ 27 ಆಮ್ಮಹಾ ಮತ್ತಿಯ ಮರನ ಮುರಿದು ಸುರರು ಜಯವೆನ್ನೆ ಶ್ರೀಮಣಿ ಶಿವರಿಂದ ಕೀರ್ತಿಸಿಕೊಂಬ ಗೋಪಿ 28 ಕತ್ತಲೆಯೊಳಗಿದ್ದು ಅಂಜಿದ ಮಗನೆಂದು ಶ್ರುತಿಮಂತ್ರಗಳಿಂದುಚ್ಚರಿಸಿ ಮೃತ್ಯುಂಜಯನ ಪಿರಿಯನೆತ್ತಿಕೊಂಡು ಗೋಪಿ 29 ಶೇಷಶಾಯಿಯ ಹಾಸಿ ಮಲಗಿಸಿ ಚಾರು- ವೇಷನ್ನ ನಿದ್ರಿಗೈಸುವೆನೆಂದು ಸಾಸಿರಮುಖಭೂಷಣನ ಪಾಡುತ್ತ ಸಂ- ತೋಷದಿ ಮೈಮರೆದಳೆ ಗೋಪಿ30 ತ್ರಿಗುಣಾತೀತನ್ನ ಪೊಂದೊಟ್ಟಿಲೊಳ್ಮಲಗಿಸಿ ಜೋಗುಳ ಪಾಡುವ ಯಶೋದೆÉಯ ಎಸೆವ ನೀಲವಸ್ತ್ರನು ಪಾಡೆನ್ನೆ ಕೃಷ್ಣ ಅನು- ಗೋಪಿ 31 ಹರಿಯ ಹೊರಿಸುವಳಲ್ಯಲ್ಲಿ ನಿಮ್ಮಣ್ಣ ವರ ಸಿಂಹಾಸನವಾಗಿಪ್ಪನೆಂದು ಸಿರಿಯಕೂಡೇಕಾಂತದಲಿಪ್ಪನ್ನ ಗೋಪಿ 32 ಪಾದ ನಿಮ್ಮಣ್ಣನ ಶಿರದಲೊಪ್ಪಿದೆÀಯೆಲೆ ಕಂದ ಸುರವರರ ಭಾಗ್ಯನಿಧಿಯೆ ಬಲರಾಮ ಗೋಪಿ 33 ಕಣ್ಣಮುಚ್ಚಿದ ಕೃಷ್ಣನೆಂದು ತೊಟ್ಟಿಲ ಬಿಟ್ಟು ಪುಣ್ಯಾಂಗನೆ ಮೈಮರೆದಿರೆ ಅಣ್ಣ ಆಶನು ಬೆಣ್ಣೆಯ ಕಳಹೋದ ಚಿಣ್ಣನ ಕಾಣೆನೆಂದಳೆ ಗೋಪಿ34 ನೀಲಾಂಬರನ ಬೆನ್ನ ಮೆಟ್ಟಿ ನೆಲವಿನ ಮ್ಯಾಲಿನ ಬೆಣ್ಣೆಯ ಮೆಲ್ಲೆ ಕೃಷ್ಣ ಬಾಲಕಿಯರು ಕೂಡಿ ಕಳ್ಳ ಸಿಕ್ಕಿದನೆಂದು ಗೋಪಿ 35 ಹುಟ್ಟ್ಟದ ಬೆಳೆಯದ ಹಸುಳೆ ಅಣ್ಣನ ಬೆನ್ನ ಮೆಟ್ಟಿ ನೆಲವು ಜಗ್ಗಿದನೆಂದು ರಟ್ಟು ಮಾಡಿದಿರೆಲ್ಲ ನೋಡಿರವ್ವಾ ಎನ್ನ ಗೋಪಿ 36 ಕಂದನ ಎತ್ತಿಕೊಂಡು ರಾಜ್ಯದಂಗನೆಯರ ಮಂದಿರವನೆ ಪೊಕ್ಕು ಬರುತಿರೆ ಒಂದೊಂದು ಕೌತುಕವನೆ ಕಂಡಾನಂದ ಗೋಪಿ 37 ಶಶಿಮುಖಿಯಂಗಳದ ಹಾಲಹಳ್ಳ ಮೊಸರ ಮಡುವು ಬಾಗಿಲ ಮುಂದೆ ಪ್ರಸಾದವೆಲ್ಲ ಬೆಣ್ಣೆ ಫಲಿತವಾಗಿರೆ ಗೋಪಿ 38 ವಾರಿಧಿಯೊಳಗಿದ್ದ ಪನ್ನಗಶಾಯಿಯ ತೇರ ಮೇಲೆ ಇದ್ದ ಬಾಲಕನ ಮೂರುತಿ ಒಂದೆಂಬೋ ಅ- ಗೋಪಿ 39 ದ್ರೌಪದಿಗಕ್ಷಯವಿತ್ತನ ಗುರು ಸಾಂ- ದೀಪಗೆ ಸುತನ ತಂದಿತ್ತನ ಪ್ರೀತಿಯಿಂದಲಿ ಯಜ್ಞಪತ್ಯರಿಗೊಲಿದ ಸುಪ್ರ- ಗೋಪಿ 40 ಘಾತಪುತ್ರರ ಆರು ಮಂದಿಯ ತರಹೇಳಿ ಮಾತೆಯೆಚ್ಚರಿಸೆ ಅಂಗೀಕರಿಸಿ ಅತಿ ಬೇಗದಿಂದಣ್ಣನ ತಂದು ತೋರಿದ ಅ- ಗೋಪಿ 41 ಭಕುತ ಶ್ರುತದೇವ ಬಹುಳಾಶ್ವರಾಯಗೊಲಿ ದೇಕ ಕಾಲದಿ ರೂಪೆರಡಾಗಿ ಆ ಕರುಣಾಬ್ಧಿಯ ಮಾಯಾರೂಪಿÀನ ಪರಿ- ಗೋಪಿ 42 ಪೂತನಿ ಶಕಟವತ್ಸಾಸುರ ವೃಷಭÀನ ಪಾತಕಿ ಚಾಣೂರ ಕುಂಜರನ ಘಾತಿಸಿ ಕಂಸನ್ನ ರಂಟೆಯಾಡಿದ ಬಲು ಭೂತನ್ನ ಮಗನೆಂದಳೆ ಗೋಪಿ43 ಬಾಲತನದಲ್ಲಿ ಸಖನಾಗಿ ಬಂದು ಕು- ಚೇಲ ತಂದವಲಕ್ಕಿಯ ಧರಿಸಿ ಮೇಲುತನದಿಂದ ಸೌಭಾಗ್ಯವಿತ್ತ ಶ್ರೀ ಲೋಲನ್ನ ಮಗನೆಂದಳೆ ಗೋಪಿ&ಟಿbsಠಿ
--------------
ವಾದಿರಾಜ
ಅಯ್ಯಾಜಗದಯ್ಯಾ ಪ ಅಯ್ಯಾ ಜಗದಯ್ಯಾ ಜೀಯಾನಂದ ನಿಮ್ಮ ಮಹಿಮೆಯ ಅಜ ಭವಾದಿಗಳಿಗೆ ತಾಯಿಯ ಮರೆವ ಶಿಶುವಿನ ಪರಿದಣಿದೆನಾ ಪ್ರೀಯದಲಿ ಸಲಹವು ಅವಗುಣ ನೋಡದೇ 1 ಧರೆಯೊಳಗ ಸಕಲಪತಿತರನ್ನು ಉದ್ಧರಿಸಲ್ಕೆ ಪರಬೊಮ್ಮತಾನೊಂದು ರೂಪನಾಗಿ ಕರುಣದಿಂದಲಿ ಅವತರಿಸಿದನೆಂದೆನ್ನದೆ ನರನೆಂದು ಬಗೆವವನು ಗುರುತಲ್ಪಕಾ2 ಸಾಕಾರ ನಿಮೈಲನಾಗಿ ಕ್ರೀಡಿಸಿದರೆಯು ಏಕ ಮೇವಾದ್ವಿತಿಯು ಶೃತಿಯೆನುತಿರೇ ಕಾಕು ಬುದ್ದಿಯಲಿ ಪರತರ ವಸ್ತು ನಿಮಗೆಂದ ಧಿಕ ಉಂಟೆಂಬುವ ಸುರಾಪಾನಿಯು 3 ಗಗನದಂದಲಿ ಸಕಲಾತೀತನಾಗಿನೀ ಮಿಗಿಲೆನಿಸಿ ಸಂಸಾರ ಸ್ಥಿತಿಯಲಿರಲು ಅಗಣಿತತೆ ಗುಣಬಂದನವ ಕಲ್ಪಿಸುವ ಜಗದೊಳಗ ಬ್ರಹ್ಮತ್ಯಕಾರನವನು 4 ಎನಗ ತಾರಕ ವಸ್ತು ಇದೆಯೆಂದು ನಿಶ್ಚೈಸಿ ತನು ಮನರ್ಪಿಸಿ ನಿಮ್ಮ ಚರಣಾಬ್ಜಕೆ ಘನನಂಬಿ ಶರಣವನು ಪೊಕ್ಕುನೆಲೆಗೊಂಬುದಕೆ ಅನುಮಾನ ವಿಡಿವವನ ಸ್ವರ್ಣಸ್ತೇಯಾ5 ಇಂತು ಪರಿಯಾದಾ ನಾಲ್ವರ ಸಂಗಡದಲಿ ಅ ತ್ಯಂತ ಹರುಷದ ತಾವ ಬಾಳುತಿಹನು ಅಂತಿಜನ ಸಮನಾದ ಸರ್ವದ್ರೋಹಿಯವನು ಸಂತತ ಬುಧ ಜನರು ಯನುತಿರುವರು 6 ಎಂದೆಂದು ಈ ಪಂಚ ಮಹಾಪಾತಕಿಳಗಳ ಮುಖ ತಂದೆ ತೋರಿದಿರೆನ್ನ ನಯನಗಳಿಗೆ ಎಂದು ಬಿಡದೇ ಕಾಯೋ ಮಹಿಪತಿ ಸುತ ಪ್ರಾಣ ಛಂದದಲಿ ಮಂದಮತಿ ತನ ಹರಸಿಯನ್ನಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅರವಿದೂರನೆ ತವ ಮಹಿಮೆಯು ಘನ್ನ ಪ ಬಂಡಿಕಾಲನು ಪಿಡಿದೆಯಂತೆ | ಹತ್ತು ಬಂಡಿರಾಯಗೆ ಸುತ ನೀನಾದಿಯಂತೆ ಬಂಡಿ ಅಸುರನ ಕೊಂದಿಯಂತೆ | ಧುರದಿ ಬಂಡಿ ನಡಸಿ ನರನ ಸಲಹಿದೆಯಣತೆ 1 ತಂದೆ ತಂದೆಗೆ ತಂದೆಯಂತೆ | ಜಗದ ತಂದೆ ನಿನಗೆ ತಂದೆ ತಾಯಿಗಳಂತೆ ತಂದೆ ನೃಪಾಲನ ಸುತೆಗೀಶನಂತೆ 2 ಸಿಂಧೂರದ್ವಯ ವರದನಂತೆ | ಮಧ್ಯ ಸಿಂಧೂರವದನವು ನಿನಗಿಹುದಂತೆ ಸಿಂಧು ಮಂದಿರ ನಿನಗಂತೆ ಶಾಮ ಸುಂದರ ನಿನಗೆ ಭಕ್ತರ ಚಿಂತೆಯಂತೆ 3
--------------
ಶಾಮಸುಂದರ ವಿಠಲ
ಅರಹು ಅಂಜನಾಗದನಕಾ ಪರಗತಿ ದೊರೆಯದು ಗುರುಕೃಪೆ ಆಗದನಕಾ ಧ್ರುವ ಕಣ್ಣುಕಂಡು ಕಾಣದನಕಾ ಅನುಮಾನ ಹೋಗದು ಉನ್ಮನವಾಗದನಕಾ ಙÁ್ಞನ ಉದಯವಾಗದನಕಾ ಮನ ಬೆರಿಯದು ಘನಮಯಾಶ್ಚರ್ಯವಾಗದನಕ 1 ತನ್ನೊಳು ತಾ ತಿಳಿಯದನಕಾ ಭಿನ್ನವಳಿಯದು ಅನುಭವ ಸುಖ ಹೊಳೆಯದನಕಾ ನೆನವು ನೆಲೆ ಗೊಳ್ಳದನಕಾ ಘನಪ್ರಭೆಯು ಹೊಳಿಯದು ಧ್ಯಾನ ನಿಜವಾಗದನಕ2 ಏರಿ ತ್ರಿಪುರ ನೋಡದನಕಾ ಗುರುಮಹಿಮೆ ತಿಳಿಯದು ತಾ ದೃಢಗೊಳ್ಳದನಕಾ ಮುರು ಹರಿಯಗುಡದನಕಾ ಹರಿಯದು ಜನ್ಮಗುರುಚರಣವ ನೋಡದನಕಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅರಿತವರಿಗತಿ ಸುಲಭ ಹರಿಯ ಪೂಜೆ ಪ ಅರಿಯದವ ನಿರ್ಭಾಗ್ಯತರ ಲೋಕದೊಳಗೆ ಅ.ಪ. ಹೈಮಾಂಡ ಮಂಟಪವು ಭೂಮಂಡಲವೆ ಪೀಠ ಸೋಮ ಸೂರ್ಯರೆ ದೀಪ ಭೂರುಹಗಳು ಚಾಮರಗಳತಿ ವಿಮಲ ವ್ಯೋಮ ಮಂಡಲ ಛತ್ರ ಯಾಮಾಷ್ಟಕರಗಳಷ್ಟದಳದ ಪದ್ಮವುಯೆಂದು 1 ಮಳೆಯೆ ಮಜ್ಜನವು ದಿಗ್ವಲಯಂಗಳೇ ವಸನ ಮಲಯಜಾನಿಲವೇ ಶ್ರೀಗಂಧ ಧೂಪಾ ಇಳೆಯೊಳಗೆ ಬೆಳೆದ ಧಾನ್ಯಗಳೆಲ್ಲ ನೈವೇದ್ಯ ಥಳ ಥಳಿಪ ಮಿಂಚು ಕರ್ಪೂರದಾರತಿಗಳೆಂದು 2 ನಕ್ಷತ್ರ ಮಂಡಲವೇ ಲಕ್ಷ ದೀಪಾವಳಿಯು ದಕ್ಷಿಣೋತ್ತರ ಅಯನಗಳೇ ಬನವು ವೃಕ್ಷ ವಲ್ಲಿಜ, ಸುಫಲ ಪುಷ್ಪಗಳೊಳಗೆ ಲಕ್ಷ್ಮೀ ವಕ್ಷ ವ್ಯಾಪಕನಾಗಿ ತಾನೆ ಭೋಗಿಪನೆಂದು 3 ಗುಡುಗು ಸಪ್ತ ಸಮುದ್ರ ಸಿಡಿಲು ಘೋಷವೇ ವಾದ್ಯ ಪೊಡವಿಪರಿಗೀವ ಕಪ್ಪವೇ ಕಾಣಿಕೆಗಳು ಉಡುಪ ಭಾಸ್ಕರರ ಮಂಡಲಗಳಾದರ್ಶಗಳು ನಡೆವ ನಡೆಗಳು ಹರಿಗೆ ಬಿಡದೆ ನರ್ತನವೆಂದೂ 4 ಯುಗ ಚತುಷ್ಟಯವೆ ಪರಿಯಂಕ ಪಾದಗಳಬ್ದ ಬಿಗಿವ ಪಟ್ಟಿಗಳು ಕಂದಾಯ ಕಸಿ ಯೊ ಗಗನ ಮೇಲ್ಗಟ್ಟು ಸಂಕ್ರಮಣಗಳೇ ಬಡವುಗಳೂ ಭಗವಂತಗುಪಬರ್ಹಣಗಳು ಷಡೃತುಗಳೆಂದೂ 5 ನಾಗವಲ್ಲೆಗಳೆ ದಿವಸಗಳು ಕರಣವೇ ಕ್ರಮಕೆ ಯೋಗಗಳೇ ಚೂರ್ಣ ರಾತ್ರೆ ತಾಂಶೊಕ ಭೋಗವತೀ ಜಲವೆ ಗಂಡೂಷೋದಕ ಶುದ್ಧ ಸಾಗರವೆ ಪಾದೋದಕ ವಿರಾಡ್ರ್ರೂಪಗೆಂದು6 ಶಾತಕುಂಭೋಧರಾಂಡಾಂತಸ್ಥ ರೂಪ ಸಂ ಪ್ರೀತಿಯಿಂದಲಿ ಯಜಿಸಿ ಮೋದಿಪರನಾ ಮಿತ ಶೋಕರ ಮಾಡಿ ಸಂತೈಸುತಿಹ ಜಗ ನ್ನಾಥ ವಿಠಲ ಒಲಿದು ಸರ್ವ ಕಾಲಗಳಲ್ಲಿ 7
--------------
ಜಗನ್ನಾಥದಾಸರು