ಒಟ್ಟು 201 ಕಡೆಗಳಲ್ಲಿ , 53 ದಾಸರು , 178 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಶರೀರ ಜರಿಯಬೇಡಾ | ಬೆರಿಯಬೇಡಾ | ಸ್ಥಿರವಿದ್ದ ಕೈಯಲಿ ಗುರು ಶರಣವ ಹೊಕ್ಕು | ತಾರಿಸೋ ಭವದಿಂದ ನೀ ಮರಳು ಜೀವವೇ ಪ ಲೋಕದೊಳು ವಾರಿಜೋದ್ಭವ ನಿನ್ನ ಜನ್ಮ ಕೊಟ್ಟು | ನೂಕಲಾಗ ತಾಯಿ ಗರ್ಭದೊಳಾವರಿಸಿ ತಾನು ಧರಿಸಿ | ರೇಖೆ ರೂಪ ಲಾವಣ್ಯ ಅವಯವಂಗಳಿಂದ | ಸಾಕಾರವಾಗಿ ಸುಂದರೆನಿಸಿ ವರನೆನಿಸಿ | ಬೇಕಾದ ವಿದ್ಯವನು ಸರ್ವ ಸಂಪಾದಿಸಲು | ತಾ ಕಾರ್ಯವಾಗಿ ಅಭ್ಯಾಸದಿಂದಾ ಧ್ಯಾಸದಿಂದಾ | ವಾಕ್ಪಟುದಲಿ ಸಮರ್ಥನೆಂಬನಾಮ ಪಡೆದು | ಪ್ರಖ್ಯಾತವಾದೆ ಈ ಕಾಯದಿಂದ 1 ಸ್ನಾನವನು ಮಾಡಿ ತ್ರಿಕಾಲ ಸಂಧ್ಯಾನ ವಿಧಿಯನು | ಮೌನ ಜಪಗಳವನು ತಪಗಳನು | ಸ್ವಾನುಭಾವ ಸೂರ್ಯಾಡಲಾಗಿ ನೇಮವನುಷ್ಠಾನ ಮೊದಲಾದ | ಧ್ಯಾನ ಧಾರಣವನು ಕಾರವನು | ಜ್ಞಾನ ಭಕ್ತಿ ವೈರಾಗ್ಯ ಶಮದಮ ಕರುಣನು ದಿನಮಾಳ್ಪಾ | ಕರ್ಮ ನೈಮಿತ್ಯವಾದಾ ನಿತ್ಯವಾದಾ | ತಾನು ತನ್ನ ಉದ್ಧರಿಸಿಕೊಳಲಿಕ್ಕೆ ಭಾವದಿಂದಾ | ಮಾನುಭಾವg ದಯ ಪಡೆವುದರಿಂದಾ 2 ತಾನು ಕುಣಿಯಲಾರದೆ ಅಂಕಣವು ಡೊಂಕು ಎಂದು | ಹೀನೋಯಿಸಿ ನುಡಿವ ನಟ ವೇಷಿಯಂತೆ | ನೀನು ನೀಟ ನಡಿಯದ್ಹೋಗಿ ದೇಹ ಕಶ್ಮಲವೆಂದು | ಜ್ಞಾನ ರಹಿತನಾಗಿ ಹಳಿವುದು ಉಚಿತ ಇದು ಪ್ರಾಚೀತ | ಈ ನಾಲ್ಕೆರಡು ವೈರಿಗಳ ದಂಡಿಸದೇ ಬರಿದೇ | ಹೀನ ವೈರಾಗ್ಯವಾ ಶಣಸಬೇಡಾ ದಣಿಸಬೇಡಾ | ಕಾನನದ ಹುತ್ತಮ್ಯಾಲ ಬಡಿದರೇನು ವರಗಿರುವಾ | ಆ ನಾಗದರ್ಪಗುಂದದು ಕಂಡಾ 3 ಪರಿಪರಿ ಮುಮ್ಮುಳಿ ವಳಗಾಗಿ ಜೀವಿಸುವ | ತೆರನಂತೋಯಂದು ಚಿಂತಿಸಬಹುದು ಸುರಿಸಬಹುದು | ನೂರು ಭಂಡಿಗಳ ತÀುಂಬಿ ಬಂದರೇನು ತಾ | ಧರೆಯೊಳು ಸೂಲ ತಾ ಹಾವುದೊಂದೇ ನೋವುದೊಂದೇ | ಬರೆದ ಬರಹವೇ ಪಣಿಯಾಲಿದ್ದಪರಿ ತಪ್ಪದೈ | ವರ ಕೂಡಿ ಕೊಟ್ಟಡವಿ ಮಾಡುವದೇನು ನೋಡುದೇನು | ಪರಿ | ಪಡಿ ನೀನು 4 ಸಾಕ್ಷರಾವೆಂಬ ಮೂರಕ್ಷರವ ಬರೆದು ತಾ | ರಾಕ್ಷಸಾವೆಂಬುದೇ ಅರ್ಥವಹುದು ಅನರ್ಥ ವಹುದು | ಪರಿ ವಳಿತು ಹೊಲ್ಲೆ | ಪಕ್ಷದ್ವಯಕ ಬಾಹುದು ಮಾಡಿದಾಂಗ ಕೂಡಿದಾಂಗ | ರಕ್ಷಿಸೆಂದು ಮಹಿಪತಿಸುತ ಜೀವನಾದಿ ವಿಶ್ವಾ | ಭವ ಹಿಂಗು ಬ್ಯಾಗ 5
ಶ್ರೀ ಅಕ್ಷೋಭ್ಯ ತೀರ್ಥರ ಚರಿತ್ರೆ ಅಕ್ಷೋಭ್ಯ ತೀರ್ಥಗುರು ಸಾರ್ವಭೌಮರು ಎಮ್ಮ ರಕ್ಷಿಪ ಕೃಪಾನಿಧಿಗೆ ಶರಣು ಶರಣೆಂಬೆ ಪಕ್ಷೀಶ ವಾಹನ್ನ ಲಕ್ಷ್ಮೀಶ ಕಮಲಾಕ್ಷ ವಿಷ್ಣು ಆತ್ಮಗೆ ಪ್ರಿಯ ಸತ್ತತ್ವವಾದಿ ಪ ಅಖಿಳಗುಣ ಆಧಾರ ನಿರ್ದೋಷ ಶ್ರೀರಮಣ ಜಗದಾದಿ ಮೂಲಗುರು ಅಗುರು ಶ್ರೀ ಹಂಸ ವಾಗೀಶ ಸನಕಾದಿ ದೂರ್ವಾಸಾದಿಗಳ ಪೀಳಿಗೆ ಗುರುಗಳಿಗೆ ಶರಣು ಶರಣೆಂಬೆ 1 ಅಚ್ಯುತ ಪ್ರೇಕ್ಷಾಖ್ಯ ಪುರುಷೋತ್ತಮತೀರ್ಥ ಅಚ್ಯುತ ಪ್ರೇಕ್ಷರ ಶಿಷ್ಯರೆಂದೆನಿಪ ಅಚ್ಯುತನ ಮುಖ್ಯಾಧಿಷ್ಠಾನ ಶ್ರೀಮಧ್ವ ಖಚರೇಂದ್ರ ಫಣಿಪಮೃಡ ಅಮರೇಂದ್ರವಂದ್ಯ 2 ಕರ ಅಬ್ಜಜರು ಪದ್ಮನಾಭನೃಹರಿ ಮಾಧವಾಕ್ಷೋಭ್ಯ ಈ ಮಹಾಗುರುಗಳು ಸರ್ವರಿಗು ಆನಮಿಪೆ ಸುಮನಸ ಶ್ರೇಷ್ಠರು ಮಹಿಯಲಿ ಪುಟ್ಟಿಹರು 3 ಸಾಧು ವೈದಿಕ ವೇದಾಂತ ಸತ್ತತ್ವ ಮತ ಮಧ್ವ ಮತವೇ ಅನ್ಯ ಯಾವುವೂ ಅಲ್ಲ ಎಂದು ನಿಶ್ಚೈಸಿ ಶೋಭನಭಟ್ಟಸ್ವಾಮಿ ಶಾಸ್ತ್ರಿ ಮೊದಲಾದವರು ಮಧ್ವಗೆರಗಿದರು 4 ಸೂರಿವರ ಶೋಭನ ಭಟ್ಟಾದಿಗಳಂತೆ ಸಾರಾಸಾರ ವಿವೇಕಿ ಗೋವಿಂದ ಶಾಸ್ತ್ರಿಯು ಮಹಾ ದೊಡ್ಡ ಪಂಡಿತರು ತಾನೂ ಎರಗಿ ಶರಣಾದರು ಮಧ್ವರಾಯರಲಿ 5 ಇಂಥಾ ಮಹಾತ್ಮರ ಇನ್ನೂ ಬಹು ಸಜ್ಜರನ ಉದ್ಧರಿಸಲಿಕ್ಕೇವೆ ಹರಿ ಅಜ್ಞೆಯಿಂದ ಈ ಧರೆಯಲ್ಲಿ ತೋರಿಹ ಮಧ್ವರಾಯರ ಶಾಸ್ತ್ರಿ ಬೇಡಿದರು ಸಂನ್ಯಾಸ ಕೊಡು ಎಂದು 6 ಸಚ್ಚಾಸ್ತ್ರ ಪ್ರವಚನ ಪಟು ವಿದ್ವನ್ಮಣಿಯು ನಿಶ್ಚಲ ಭಕ್ತಿಮಾನ್ ಸವೈರಾಗ್ಯ ವಿಪ್ರ ಅಚಲ ಸತ್ತತ್ವನಿಶ್ಚಯ ಜ್ಞಾನಿ ಶಾಸ್ತ್ರಿಗೆ ಅಕ್ಷೋಭ್ಯ ನಾಮನ ಇತ್ತರಾಚಾರ್ಯ 7 ಪ್ರಣವ ಮೂಲಾದಿ ಸುಮಂತ್ರ ಉಪದೇಶಿಸಿ ತನ್ನ ಮಠದಲ್ಲಿ ಅಕ್ಷೋಭ್ಯತೀರ್ಥರಿಗೆ ವನರುಹನಾಭರಿಂದ ನಾಲ್ಕನೇ ಸ್ಥಾನವ ಘನದಯದಿ ಇತ್ತರು ಆನಂದಮುನಿಯು 8 ಬದರಿಗೆ ಮೂರನೇ ಬಾರಿ ತೆರಳುವ ಪೂರ್ವ ಮಧ್ವ ಮುನಿ ನೇಮಿಸಿದ ಕ್ರಮದಿಂದಲೇವೆ ಮಾಧವ ತೀರ್ಥರು ವೇದಾಂತ ಪೀಠದಲಿ ಕುಳಿತುಜ್ವಲಿಸಿದರು 9 ಪದ್ಮನಾಭತೀರ್ಥರ ಪಾದಪದ್ಮಗಳಿಗೆ ಸದಾ ನಮೋ ನಮೋ ಎಂಬೆ ಇವರ ಪೀಳಿಗೆಯ ವಿದ್ಯಾಕುಶಲರು ಸೂರಿಗಳ ಚರಣಕ್ಕೆ ಸಂತೈಪರೆಮ್ಮ ಸದಾ ನಮೋ ಸರ್ವದಾ 10 ನರಹರಿತೀರ್ಥರು ಚರಣ ಸರಸೀರುಹದಿ ಶರಣಾದೆ ಕಾಯ್ವರು ಈ ಮಹಾನ್ ಇಹರು ವರಾಹ ತನಯಾ ಸರಿದ್ವರಾಕ್ಷೇತ್ರದಲಿ ಶ್ರೀ ವೃಂದಾವನದೊಳು ಹರಿಯ ಧ್ಯಾನಿಸುತ 11 ಮಾಧವತೀರ್ಥರ ಪಾದಪದ್ಮಗಳಿಗೆ ಸದಾನಮೋ ನಮೋ ಎಂಬೆ ಇವರ ಪೀಳಿಗೆಯ ಯತಿಗಳೂ ಭಕ್ತಿಮಾನ್ ಜ್ಞಾನಿಗಳ ಚರಣಕ್ಕೆ ಆದರದಿ ನಮಿಸುವೆ ಸದಾ ಪೊರೆವರೆಮ್ಮ 12 ಸುಲಭರು ಸುಜನರಿಗೆ ಶರಣರ ಸಲಹುವರು ಮಾಲೋಲನೊಲಿದಿಹ ಅಕ್ಷೋಭ್ಯತೀರ್ಥ ಬಲು ಖಿನ್ನ ಬ್ರಾಹ್ಮಣನು ಬ್ರಹ್ಮ ಹತ್ಯ ಮಾಡಿದವ ಕಾಲಲ್ಲಿ ಬಿದ್ದು ಶರಣಾದ ಗುರುಗಳಲಿ 13 ಗುರು ದಯಾನಿಧಿ ಅಕ್ಷೋಭ್ಯತೀರ್ಥರು ಆಗ ಶರಣಾದ ಪುರುಷನ ಪಶ್ಚಾತ್ತಾಪ ಖರೆಯೇ ಎಂಬುವುದನ್ನು ಜನರಿಗೆ ತಿಳಿಸಲು ಏರಿ ಮರ ನದಿಯಲಿ ಬೀಳೆ ಹೇಳಿದರು 14 ತನ್ನಯ ಮಹಾಪಾಪ ಕಳೆಯುವ ಗುರುಗಳು ಏನು ಹೇಳಿದರೂ ಮಾಡುವೆ ತಾನೆಂದು ಸನ್ನಮಿಸಿ ಗುರುಗಳಿಗೆ ನದಿ ಬದಿ ಮರಹತ್ತೆ ದೀನ ರಕ್ಷಕ ಗುರು ಇಳಿಯೆ ಹೇಳಿದರು 15 ವೃಕ್ಷದಿಂದಿಳಿದ ಆ ವಿಪ್ರಘಾತುಕನ ಮೇಲೆ ಅಕ್ಷೋಭ್ಯತೀರ್ಥರು ಶಂಖತೀರ್ಥವನ್ನ ಪ್ರೋಕ್ಷಿಸಿ ಆತನ ಮಹಾ ಬ್ರಹ್ಮಹತ್ಯಾ ದೋಷ ಕಳೆದರು ಪಂಕ್ತಿಯಲಿ ಸೇರಿಸಿದರು 16 ಶಂಖತೀರ್ಥದ ಮಹಿಮೆ ಅಲ್ಲಿದ್ದ ಜನರಿಗೆ ಶಂಕೆಯಲ್ಲದೆ ತಿಳಿಸಿ ಬಂದು ಬೇಡುವವರ ಡೊಂಕು ಕೊರತೆಗಳೆಲ್ಲ ನೀಗಿಸಿ ಯೋಗ್ಯದಿ ಶ್ರೀಕಾಂತನಲಿ ಭಕ್ತಿ ಪುಟ್ಟಿಸಿಹರು 17 ತಮ್ಮಲ್ಲಿ ಬೇಡುವ ಅಧಿಕಾರಿಯೋಗ್ಯರಿಗೆ ಶ್ರೀಮಧ್ವಶಾಸ್ತ್ರದ ದಾಢ್ರ್ಯ ಜ್ಞಾನ ಶ್ರೀ ಮನೋಹರನನ್ನ ಅಪರೋಕ್ಷಿಕರಿಸುವ ಸುಮಹಾ ಉಪಾಯವ ಅರುಹಿಹರು ದಯದಿ 18 ಮಧ್ವಸಿದ್ಧಾಂತ ಸ್ಥಾಪನ ಮಾತ್ರವಲ್ಲದೇ ವೇದ ವಂಚಕ ದುರ್ಮತಗಳ ಖಂಡನವ ಪೋದಕಡೆ ಮಾಡುತ್ತಾ ದಿಗ್ವಿಜಯ ಜಯಶೀಲ - ರೆಂದು ಮರ್ಯಾದೆಗಳ ಕೊಂಡಿಹರು ಜಗದಿ 19 ಅದ್ವೈತವಾದಿಯು ಶಾಂಕರ ಮಠಾಧೀಶ ವಿದ್ಯಾರಣ್ಯರು ಪ್ರಸಿದ್ಧ ಪಂಡಿತರು ಎದುರು ನಿಂತರು ಅಕ್ಷೋಭ್ಯ ತೀರ್ಥರ ಮುಂದೆ ವಾದಿಸಿದರು ಮುಳುಬಾಗಿಲು ಸಮೀಪ 20 ಶ್ವೇತಕೇತು ಉದ್ದಾಲಕರ ಸಂವಾದ ತತ್ವ ಮಸಿ ವಾಕ್ಯವೇ ವಾದದ ವಿಷಯ ವೇದಾಂತ ದೇಶಿಕರು ರಾಮಾನುಜೀಯತಿಯ ಅಧ್ಯಕ್ಷತೆಯಲ್ಲಿ ಸಭೆಯು ಕೂಡಿತ್ತು 21 ಛಾಂದೋಗ್ಯ ಉಪನಿಷತ್ತಲ್ಲಿರುವ ವಾಕ್ಯವು ಸಆತ್ಮಾ ತತ್ವಮಸಿ ಎಂಬುವಂಥಾದ್ದು ಭೇದ ಬೋಧಕವೋ ಅಭೇದ ಬೋಧಕವೋ ಎಂದು ವಾದವು ಆ ಈರ್ವರಲ್ಲಿ 22 ಆತ್ಮ ಶಬ್ದಿತ ನಿಯಾಮಕಗು ನಿಯಮ್ಯ ಜೀವನಿಗೂ ಭೇದವೇ ಬೋಧಿಸುವುದು ಆ ವಾಕ್ಯವೆಂದು ಸಿದ್ಧಾಂತ ಬಹುರೀತಿ ಸ್ಥಾಪಿಸಿದರು ಅಕ್ಷೋಭ್ಯರು ಸೋತಿತು ವಿದ್ಯಾರಣ್ಯರ ಐಕ್ಯವಾದ 23 ಅಸಿನಾತತ್ವ ಮಸಿನಾ ಪರಜೀವಪ್ರಭೇದಿನಾ ವಿದ್ಯಾರಣ್ಯ ಮಹಾರಣ್ಯಂ ಅಕ್ಷೋಭ್ಯ ಮುನಿರಚ್ಛಿನತ್ ಎಂದು ಬರೆದರು ತಮ್ಮಯ ಗ್ರಂಥದಲ್ಲಿ ಮಧ್ಯಸ್ತ ವೇದಾಂತದೇಶಿಕ ಸ್ವಾಮಿಗಳು 24 ಇಳೆಯ ಸಜ್ಜನರಿಗೆ ಜಯತೀರ್ಥರನಿತ್ತ ಮಾಲೋಲಪ್ರಿಯ ಅಕ್ಷೋಭ್ಯರ ಮಹಿಮೆ ಅಲ್ಪಮತಿ ನಾನರಿಯೆ ಇಲ್ಲಿ ಒಂದೋ ಎರಡೋ ಸ್ಥಾಲಿ ಪುಲೀಕ ನ್ಯಾಯದಲಿ ಪೇಳಿಹುದು 25 ನದಿ ದಡದಿ ಕುಳಿತಿದ್ದ ಅಕ್ಷೋಭ್ಯತೀರ್ಥರು ಎದುರಾಗಿ ನದಿಯಲ್ಲಿ ಆಚೆ ದಡದಿಂದ ಕುದುರೆ ಸವಾರನು ವರ್ಚಸ್ವಿ ಯುವಕನು ಬೆದರದೆ ಪ್ರವಾಹದಲಿ ಬರುವುದು ಕಂಡರು 26 ಕುದುರೆ ಮೇಲ್ ಆಸೀನನಾಗಿದ್ದ ಯುವಕನು ಕ್ಷುತ್‍ತೃಷಿ ಶಮನಕ್ಕೆ ಯತ್ನ ಮಾಡುತ್ತಾ ಉದಕವ ಕೈಯಿಂದ ತುಂಬಿಕೊಳ್ಳದಲೇ ಎತ್ತುಗಳು ಕುಡಿವಂತೆ ಬಾಯಿ ಹಚ್ಚಿದನು 27 ಮಾಧವ ಮಧ್ವರು ಮೊದಲೇ ಸೂಚಿಸಿದಂತೆ ಇಂದು ಆ ಕುರುಹರಿತು ಅಕ್ಷೋಭ್ಯರು ಇದು ಏನು ಪಶುವಂತೆ ಎಂದು ಧ್ವನಿಗೂಡಲು ಹಿಂದಿನ ಜನ್ಮ ಯುವಕಗೆ ನೆನಪು ಬಂತು 28 ಪಶು ಶಬ್ದ ಗುರುಮುಖದಿಂಬಂದಲಾಕ್ಷಣ ಪೂರ್ವ ಸಂಸ್ಕಾರ ಪ್ರತಿಭೆಯು ಉದಯವಾಯ್ತು ದಶಪ್ರಮತಿಗಳ ತಾನು ಎತ್ತಾಗಿ ಸೇವಿಸಿದ್ದು ಹಸನಾಗಿ ಟೀಕೆ ಬರೆಯಲಾಜÉ್ಞ ಕೊಂಡದ್ದು 29 ನಗಾರಿಸಮ ಬಲಿಯುವಕನು ಪ್ರವಾಹದ ವೇಗ ಲೆಕ್ಕಿಸದಲೇ ದಡಕೆ ತಾ ಬಂದು ಮುಗಿದುಕರ ಬಾಗಿಶಿರ ನಮಿಸಿ ಅಕ್ಷೋಭ್ಯರ ಆಗಲೇ ಸಂನ್ಯಾಸ ಕೊಡಲು ಬೇಡಿದನು 30 ಗಾಧಿ ಅರ್ಜುನ ಸಮ ಬಲರೂಪದಲಿ ತೋರ್ಪ ಈತ ರಾಯರ ಸುತನಾದರೂ ವೈರಾಗ್ಯ ಯುತ ಭಕ್ತಿಮಾನ್ ಸುಶುಭಲಕ್ಷಣನು ಎಂದು ಹರಿ ಮಧ್ವನಿಯಮಿತ ಅವಗೆ ಕೊಟ್ಟರು ಸಂನ್ಯಾಸ 31 ಶ್ರೀಯಃಪತಿಗೆ ಪ್ರಿಯತರ ಜಯತೀರ್ಥನಾಮವ ದಯಾಶೀಲ ಹೊಸಯತಿಗೆ ಇತ್ತು ಅಭಿಷೇಕ ಅಕ್ಷೋಭ್ಯ ಗುರುಮಾಡೆ ಗಗನದಿಂ ಪೂವರ್ಷ ಜಯ ಘೊಷ ಹರಡಿತು ಪರಿಮಳ ಸುಗಂಧ 32 ಶ್ರೀಮಧ್ವಾಚಾರ್ಯರು ಬೋಧಿಸಿ ತೋರಿಸಿದ ರಮಾಪತಿ ಪೂಜಾಸತ್ತತ್ವವಾದ ದುರ್ಮತ ಖಂಡನದ ರೀತಿಯ ಜಯಾರ್ಯರಿಗೆ ಸುಮ್ಮುದದಿ ಅರುಹಿದರು ಗುರುಸಾರ್ವಭೌಮ 33 ಶೀಲತಮ ಗುರುವರ್ಯ ಅಕ್ಷೋಭ್ಯತೀರ್ಥರು ಇಳೆಯಲ್ಲಿ ಮಧ್ವಮತ ಹರಿಭಕ್ತಿಯನ್ನ ಬೆಳೆಸಲು ಪ್ರತ್ಯೇಕ ಮಠವ ಸ್ಥಾಪಿಸಿದರು ತ್ರೈಲೋಕ ಭೂಷಣ ತೀರ್ಥರ ಮೊದಲ್ಮಾಡಿ34 ಆದಿ ಮಠ ಹರಿನೈದು ಸಮೀಪ ಪಟ್ಟವ ಆಳಿ ಹನ್ನೊಂದು ನೂರು ಅರವತ್ತೇಳ ಶಕವರುಷ ವದ್ಯ ಪಂಚಮಿ ಮಾರ್ಗಶಿರ ವಿಶ್ವಾವಸುವಲ್ಲಿ ಮಧ್ವ ಹೃದಯಾಬ್ಜಗನ ಪುರವ ಐದಿದರು 35 ಮತ್ತೊಂದು ಅಂಶದಲಿ ಮಳಖೇಡ ಗ್ರಾಮದಲಿ ನದಿ ತೀರದಲಿ ಹರಿಯ ಧ್ಯಾನ ಮಾಡುತ್ತಾ ಬಂದು ಬೇಡುವವರಿಷ್ಟಾರ್ಥ ಪೂರೈಸುತ ವೃಂದಾವನದಲ್ಲಿ ಕುಳಿತಿಹರು ಕರುಣಿ 36 ಶಾಶ್ವತ ಸರ್ವಾಶ್ರಯ ಗುಣಗಣಾರ್ಣವ ಅನಘ ಜೀವ ಜಡ ಭಿನ್ನ ಪರಮಾತ್ಮ ವಿಧಿತಾತ ಮಧ್ವಹೃತ್ಪದ್ಮಗ ಶ್ರೀ ಪ್ರಸನ್ನ ಶ್ರೀನಿವಾಸಗೆ ಸರ್ವದಾಪ್ರಿಯ ಅಕ್ಷೋಭ್ಯ ಗುರೋ ಶರಣು 37 ಪ || ಶ್ರೀ ಅಕ್ಷೋಭ್ಯ ತೀರ್ಥಚರಿತೆ ಸಂಪೂರ್ಣಂ ||
ಶ್ರೀ ಇಭರಾಮಪುರ ಕೃಷ್ಣಾಚಾರ್ಯರ ಸ್ತೋತ್ರ (ಅಪ್ಪಾವರು) 140 ಇಭರಾಮಪುರ ಅಪ್ಪ ಸೌಭಾಗ್ಯದಾಯಕರೇ | ಶುಭನಾಮ ಶ್ರೀ ಕೃಷ್ಣಾಚಾರ್ಯರೇ ನಮಸ್ತೇ || ಇಭರಾಜ ವರದನಿಗು ದ್ರುಪದಾತ್ಮಜಾಪತಿಗು | ಶುಭಚರಿತ ರಾಘವೇಂದ್ರಾರ್ಯರಿಗು ಪ್ರಿಯ ಪ ಶ್ರೀರಾಮನರಹರಿ ಶ್ರೀಕರನಾರಾಯಣ | ವರಾಹ ಹಯಶೀರ್ಷ ಶ್ರೀಕೃಷ್ಣನ ಪೂರ್ಣಾ || ನುಗ್ರಹಕೆ ಪೂರ್ಣಪಾತ್ರರೇ ನಿಮ್ಮ ಚರಣ | ಅರವಿಂದದಲಿ ನಾನು ಶರಣು ಶರಣಾದೆ 1 ಪಂಚಮುಖ ಹನುಮಂತ ನರಸಿಂಹ ಗರುಡ ವರಾಹ ಹಯವದನ || ಈ ಅಂಜನಾಸುತನನ್ನು ತತ್ ಅಂತಸ್ಥ | ಪಂಚರೂಪ ಶ್ರೀಶನ್ನ ಪೂಜಿಪಮಹಂತ 2 ಅಪ್ಪಾವರೆಂದು ಪ್ರೇಮದಿ ಕರೆಸಿಕೊಂಡು ಅಪ್ಪಮಕ್ಕಳಂತೆ ಕಾಯ್ದಿರಿ ಜನರ || ಅಪ್ಪಾ ಎಂದೀಗಲೂ ಸ್ಮರಿಸಿದರೂ ನಿಮ್ಮ ಸಹ ಶ್ರೀಪ ತಿಮ್ಮಪ್ಪ ಬಂದೆಮ್ಮನು ಕಾಯ್ವ 3 ಮೇಲಿಂದ ಬಿದ್ದವನ್ನ ದೂರ ಇದ್ದರೂ ಕಾಯ್ದು ತಾಳಿಗೋರೂಪ ಪಾದಜ ಧಾನ್ಯ ಉಂಡು || ಜಲದಿಂದ ವಿಪ್ರತಮ ಭಕ್ತವರನನ್ನ ಕಾಯ್ದು | ಜಲಜನಾಭನ ಗಾಯಕನೆಂದು ಆಶಿಸಿದಿರಿ 4 ಬೊಮ್ಮನ ಪಿತ `ಶ್ರೀ ಪ್ರಸನ್ನ ಶ್ರೀನಿವಾಸನಲಿ' ಪ್ರೇಮ ಅಚ್ಛಿನ್ನ ಭಕ್ತಿ ನಿಮಗೆ ದ್ವಿಜವರರೆ || ನಿಮ್ಮವನು ಭುವಿಯಲ್ಲಿ ತೋರಿಹ ಎನ್ನನ್ನು ಪ್ರೇಮಾನುಗ್ರಹದಯದಿ ಪಾಲಿಪುದು ಶರಣು 5 ಪ || ಸಂಪೂರ್ಣಂ ||
ಶ್ರೀ ಕೃಷ್ಣದೇವ ಸದಾನಂದ ಶ್ರೀ ಕೃಷ್ಣದೇವ ಪ ಶ್ರೀ ಕೃಷ್ಣ ಕರುಣಾನಿಧೇ ಭಕ್ತವತ್ಸಲ ಶ್ರೀ ಕೃಷ್ಣ ಪರಮ ಪುರುಷ ಸಚ್ಚಿದಾನಂದ ಅ.ಪ ವಸುದೇವ ನಂದನ ಕಂಸನಿಷೂದನ ಕುಸುಮೇಷು ಕೋಟಿ ಸಮಾನ ಪದಾಂಭೋಜ 1 ಲೀಲಾಮಾನುಷ ಮೂರ್ತೇ ಶ್ರೀವತ್ಸ ವಕ್ಷಸ್ಕ ನಿರಂಜನ 2 ಪೂತನಾ ಶಕಟ ತೃಣಾವರ್ತ ಭಂಜನ ಪಾತಕಹರ ಪುಣ್ಯಕೀರ್ತೇ ಜನಾರ್ದನ 3 ದರ ಪದ್ಮ ಚಕ್ರ ಗದಾಧರ ರವಿಕೋಟಿ ಸಂಕಾಶ 4 ಮಣಿ ರಂಜಿತ ಪದಯುಗ್ಮ ನೀಲಮೇಘಶ್ಯಾಮ ನೀರಜಲೋಚನ 5 ಕೌಸ್ತುಭಮಣಿ ಭೂಷ ಕನಕಕುಂಡಲ ಕರ್ಣ ಸಂಸ್ತುತ ಮಹಿಮ ಶ್ರೀ ಧರಣೀ ಸೇವಿತ ಪಾಶ್ರ್ವ 6 ನಂದ ಕಿಶೋರ ಯಶೋದಾ ಮನೋಹರಸುಂದರ ತಿರುಪತಿ ಧರಣೀಧರಾವಾಸ 7
ಶ್ರೀ ರಘುವರತೇ ನಮೋ ನಮೋ ಪ ಆಶ್ರಿತ ಪರಿಪಾಲತೇ ನಮೋ ನಮೋ ಅ.ಪ ಸರಸಿಜಭವಪಿತ ಸರಸಿಜಲೋಚನ ಪರಮಪುರಷ ಖಗಪತಿ ಗಮನ ಸುರಕಿನ್ನರ ಭೂಸುರನರವರನುತ ಸೂರಿಜನಪ್ರಿಯತೇ ನಮೋ ನಮೋ 1 ಮದನಕೋಟಿ ಲಾವಣ್ಯ ಶರಣ್ಯ ನಾ- ರದ ವೀಣಾಗಾನ ವಿಲೋಲ ಮುದತೀರ್ಥವರದ ಮುನಿಜನಪಾಲಕ ಸದಮಲಾತ್ಮಕತೇ ನಮೋ ನಮೋ 2 ರಾಮಭೂವರ ವಿರಾದಾಂತಕಬಲ- ರಾಮಾನುಜ ರಘುರಾಮವಿಭೋ ಸೋಮಸೂರ್ಯನಯನ ಶುಭ- ತಮ ಶ್ರೀ ಗುರುರಾಮವಿಠ್ಠಲತೇ ನಮೋ 3
ಶ್ರೀ ವಿಷ್ಣ್ವಾಷ್ಟಕ (ಪಾಲಯಾಚ್ಯುತ ಎಂಬತೆ) ಕಾವುದೋ ಹರಿ | ಕಾವುದೋ ಹರಿಕಾವುದೊ ಕರುಣಾರ್ಣವ ಪ ಜೀವರಂತರ ಬಾಹ್ಯ ನೆಲಸಿಹಶ್ರೀವರಾ ಶ್ರೀ ಭೂಧರಾ ಅ.ಪ. ನಿತ್ಯ ನೂತನ | ನಿರ್ವಿಕಾರನೆ | ಸತ್ಯನೆ ನೀ ನಿತ್ಯನೇಭೃತ್ಯ ವತ್ಸಲ | ಭವವನಾನಲ | ಕೃತ್ಯನೆ ದಯ ಪೂರ್ಣನೇ ||ಮೃತ್ಯು ವರ್ಜಿತ | ಪ್ರತ್ಯಗಾತ್ಮನೆ | ಕರ್ತನೇ ನಿರ್ಲಿಪ್ತನೇಸತ್ಯ ಕಾಮ ಶರಣ ಶಾಶ್ವತ | ಸ್ತುತ್ಯನೇ ಜಗ ವ್ಯಾಪ್ತನೇ 1 ಅಮಿತ ತೇಜನೆ | ಸರ್ವರನ ಸಲಹೂವನೇ ||ಸರ್ವ ಶಬ್ದ ಪ್ರವೃತಿ ಕಾರಣ | ಸರ್ವಗುಣ ಪರಿಪೂರ್ಣನೆಸರ್ವತೊಮುಖ ಬಾಹು ಚರಣನೆ | ಶರ್ವ ವಂದ್ಯ ಸುಮಹಿಮನೆ2 ವೀತಭಯ ವಿಶ್ವೇಶ ವಿಧಿಪಿತ | ಮಾತುಳಾಂತಕ ಪಾಲಕಾಭೂತ ಭಾವನನಂತ ಭಾಸ್ಕರ | ದ್ಯೋತಕ ಮಹಕೌತುಕ ||ಗೌತಮ ಪ್ರಿಯ ಮಡದಿ ಕಾಯ್ದಾ | ನಾಥ ರಕ್ಷಕ ಶಿಕ್ಷಕಾಖ್ಯಾತ ರಾವಣ ಕುಂಭಕರ್ಣನ | ಹಂತಕ ವಿಶ್ವಾಸಕ 3 ಮಣಿ ಭವ ಮೋಚಕಅಣು ಮಹದ್ಗತ ವ್ಯಾಪ್ಯವ್ಯಾಪಕ | ಸಾಧಕ ಖಲ ಬಾಧಕ |ತೃಣ ಮೊದಲು ಬ್ರಹ್ಮಾಂತ ಜೀವರ | ಪಾಲಕ ಪರಿಪೋಷಕ 4 ಮೀನ ಕಮಠನೆ ಕೋಲ ನರಹರಿ | ವಾಮನಾ ಸುಭಾಮನಾರೇಣುಕಾತ್ಮಜ ರಾವಣಾಂತಕ | ದಾಶರಥಿ ನರ ಸಾರಥೀ ||ಧೇನುಕಾಸುರ ಮಥನ ತ್ರಿಪುರವ | ಹಾನಿಗೈದನೆ ಬುದ್ಧನೆಮಾನುಷಾಕೃತಿಲ್ಹಯವನೇರಿದ | ಕಲ್ಕಿಯೇ ಕಲಹ ಪ್ರಿಯೆ 5 ಉದಿತ ಭಾಸ್ಕರನಂತ ತೇಜನೆ | ಉದರ ನಾಮಕ ಪಾಚಕಸುದತಿಯರು ಹದಿನಾರು ಸಾವಿರ | ವಾಳ್ದನೇ ಬ್ರಹ್ಮಚರ್ಯನೇ||ಮಧು ವಿರೋಧಿಯೆ ಮಧ್ವಮಾನಸ | ಮಂದಿರ ಬಹುಸುಂದರಹೃದಯದಲಿ ನೀ ಬದಿಗನೆನಿಸುತ | ಪೂಜಿತ ಸುರ ಪೂಜಿತ 6 ಸೃಷ್ಟಿ ಸ್ಥಿತಿ ಮೊದಲಾದ ಅಷ್ಟಕ | ಕರ್ತೃಕ ಪ್ರಾವರ್ತಕಅಷ್ಟದಳ ಸತ್ಕಮಲಧಿಷ್ಠಿತ | ಪ್ರಾಜ್ಞಾನೇ ವಿಶ್ವಜ್ಞನೇಜಿಷ್ಣು ಸಖ ಶ್ರೀಕೃಷ್ಣ ಕೃಷ್ಣೆಯ | ಭೀಷ್ಟದಾ ಶಿಷ್ಟೇಷ್ಟದಾಪುಷ್ಟ ಮಹಿಮಾ ಪ್ರವಿಷ್ಟ ರೂಪನ | ವಿಷ್ಟನೇ ನಿವಿಷ್ಟನೇ 7 ಗೋವಿದಾಂಪತಿ ಗೋವಪಾಲಕ | ಮಾವ ಮಾರಕ ಕಾರಕ ||ಭೂವರಾಹ ಸುಭಾವಜಾರಿಜ | ಷಣ್ಮುಖ ಪರಿಪಾಲಕ ||ಗೋವಿಂದ ಗುರು ಗೋವಿಂದವಿಠಲ | ಗೋವ್ಗಳ್ವರ್ಧನ ಗಿರಿಧರಪಾವಮಾನಿಯ ಪ್ರೀಯ ಸಿರಿಧರ | ಕಾವ ಶರಣರ ಭವಹರಾ 8|
ಶ್ರೀ ವ್ಯಾಘ್ರಗಿರಿವಾಸ ಶ್ರೀ ಶ್ರೀನಿವಾಸ ಸೇವ್ಯ ಪಾದಾಜ್ಜ ಪ ಕಮಲಸಂಭವಜನಕ ಕಮಲಾಪ್ತ ಕುಲತಿಲಕ ಕಮಲ ಸನ್ನಿಭಚರಣ ಕಲುಷಗಣಹರಣ ಕಮನೀಯ ಗುಣಹಾರ ಕಲ್ಯಾಣಗುಣ ಪೂರ ಕಮಲಾ ಮನೋಹರ ಕಲಿತ ಶೃಂಗಾರ 1 ಲೋಕಮೋಹನರೂಪ ಲೋಕರಕ್ಷಣ ಚಾಪ ಸುಕೃತಿ ಪರಿವಾರ ನಾಕನಿಲಯ ಸಮಾಜ ನಮಿತ ಪಾದಾಂ ಭೋಜ ಪಾಕರಿಪು ಮಣಿನೀಲ ಪದ್ಮಾನುಕೂಲ2 ಮಾಂಡವ್ಯ ಮುನಿಸೇವ್ಯ ಮಾನಸಾಂಬುಜಭವ್ಯ ಪಾಂಡುಸುತ ಪರಿಪಾಲ ಪಾವನ ಸುಶೀಲ ಭಾಗವತ ಸನ್ಮೋದ ಗಾಂಡೀವಿ ಸುಶ್ಯಾಲ ಗಾನರಸಲೋಲ 3 ತವಚರಣ ಪಂಕಜಂ ತೃಪ್ತಜನ ಸುರಕುಜಂ ಭವಜಲಧಿಕಾರಣಂ ಭವತು ಮಮ ಶರಣಂ ತವನಾಮಕೀರ್ತನಂ ತಾಪಪರಿಮೋಚನಂ ಶ್ರವಣಯೋರ್ದೇಹಿಮಮ ಶಮಿತಾಘಮಹಿಮಾ 4 ಸಕಲಲೋಕ ಶರಣ್ಯ ಸರ್ವದೇವವರೇಣ್ಯ ನಿಖಿಲಭೂತವಾದ ನಿರ್ಮಲ ಸುವೇಷ ಅಕಲಂಕ ಚರಿತ ನಿತ್ಯಾನಂದ ಗುಣಭರಿತ ಶಿಖಿರಿಷ ವಿಹರಣ ಕುಶಲ ಶ್ರೀವರದ ವಿಠಲ 5
ಶ್ರೀ ವ್ಯಾಘ್ರಗಿರಿವಾಸ-ಶ್ರೀ ಶ್ರೀನಿವಾಸ ಸೂರಿ ಸೇವ್ಯ ಪಾದಾಬ್ಜ ಪ ಕಮಲಸಂಭವ ಜನಕ ಕಮಲಾಪ್ತಕುಲತಿಲಕ ಕಮಲ ಸನ್ನಿಭಚರಣ ಕಲುಷಗಣ ಹರಣ ಕಮನೀಯ ಗುಣಹಾರ-ಕಲ್ಯಾಣಗುಣ ಪೂರ ಕಮಲಾ ಮನೋಹರ ಕಲಿತಶೃಂಗಾರ 1 ಲೋಕ ಮೋಹನ ರೂಪ ಲೋಕರಕ್ಷಣ ಚಾಪ ಶೋಕಮೋಹವಿದೂರ ಸುಕೃತಿಪರಿವಾರ ನಾಕನಿಳಯ ಸಮಾಜ ನಮಿತ ಪಾದಾಂಭೋಜ ಪಾಕರಿಪು ಮಣಿನೀಲ ಪದ್ಮಾನುಕೂಲ 2 ಮಾಂಡವ್ಯ ಮುನಿಸೇವ್ಯ ಮಾನಸಾಂಬುಜ ಭವ್ಯ ಪಾಂಡುಸುತ ಪರಿಪಾಲ ಪಾವನ ಸುಶೀಲ ಭಾಗವತ ಸನ್ಮೋದ ಗಾಂಡೀವಿ ಸುಶ್ಯಾಲ-ಗಾನರಸಲೋಲ 3 ತವಚರಣ ಪಂಕಜಂ-ತೃಪ್ತಜನ ಸುರಕುಜಂ ಭವಜಲಧಿತಾರಣಂ ಭವತುಮಮ ಶರಣಂ ತವನಾಮ ಕೀರ್ತನಂ ತಾಪಪರಿಮೋಚನಂ ಶ್ರವಣಯೋರ್ದೇಹಿಮಮ-ಶಮಿತಾಘಮಹಿಮಾ4 ಸಕಲ ಲೋಕ ಶರಣ್ಯ ಸರ್ವದೇವ ವರೇಣ್ಯ ನಿಖಿಲ ಭೂತವಾಸ-ನಿರ್ಮಲಸುವೇಷ ಅಕಲಂಕ ಚರಿತ-ನಿತ್ಯಾನಂದ ಗುಣ ಭರಿತ ಶಿಖರಿಷವಿಹರಣ ಕುಶಲ-ಶ್ರೀವರದವಿಠಲ5
ಶ್ರೀಕೃಷ್ಣಪರಬ್ರಹ್ಮ ನಮೊ ಶೇಷತಲ್ಪಶಯಶೌರಿ ನಮೊಪ್ರಾಕೃತರ'ತಾನಂತ ನಮೊ ಪರಮಪುರುಷ ಭವದೂರ ನಮೊ 1ಮದನಾರ್ವಧುಸುರಸ್ತೌತ್ಯ ನಮೊ ಮಧುಕೈಟಭದೈತ್ಯಾರಿ ನಮೊಯದುಕುಲಾಂಬುಧಿಸುಧಾಂಶ ನಮೊ ವಾಸುದೇವ ಪರಮಾತ್ಮ ನಮೊ 2ದೇವಕಿದೇ'ಕಿಶೋರ ನಮೊ ದ್ವಿಜಸುತಪ್ರಾಣಸುರಕ್ಷ ನಮೊಭಾವಜಪಿತ ಜಗನ್ನಾಥ ನಮೊ ಭಕ್ತಪ್ರಿಯಗೋಂ'ದ ನಮೊ 3ಅಷ್ಟಮಗರ್ಭಸಂಜಾತ ನಮೊ ಅ'ುತಧೈರ್ಯಗಾಂಭೀರ್ಯ ನಮೊದುಷ್ಟಪೂತನಧ್ವಂಸ ನಮೊ ಧೇನುಕಶಕಟ'ದೂರ ನಮೊ 4ಗೋವರ್ಧನಗಿರಿಧಾರಿ ನಮೊ ಗೋಪಗೋಪಿಕಾಲೋಲ ನಮೊಶ್ರೀವಸುದೇವಾನಂದ ನಮೊ ಸಾಂದೀಪಪ್ರಿಯಬೋಧ ನಮೊ 5ಯಶೋದನಂದೋತ್ಸಾಹ ನಮೊ ವೇಣುಗಾನ'ನೋದ ನಮೊಶಿಶುಪಾಲಶಿರಚ್ಛೇದ ನಮೊ ಶಂಖಚಕ್ರಕರಧಾರಿ ನಮೊ 6ಕೌರವಗರ್ವ'ದಾರಿ ನಮೊ ಕುಬ್ಜಪಾಲಕಮಲಾಕ್ಷ ನಮೊಪಾರಿಜಾತಮಪಹಾರಿ ನಮೊ ಪಾವನತೀರ್ಥಪದಾಯ ನಮೊ 7ತೃಣಾವರ್ತನಾಶಾಯ ನಮೊ ದ್ವಾರಕಾಪುರ'ಹಾರಿ ನಮೊಮೌನಿಮಾನಸೊಲ್ಲಾಸ ನಮೊ ಮಧುರಾಪುರಿನಾಥಾಯ ನಮೊ 8'ದುರ ಅಕ್ರೂರಸ್ತೌತ್ಯ ನಮೊ ವೃಷಭ ಮ್ಟುಕ ಮುರಾರಿ ನಮೊ (?) 9ಶ್ರೀರುಕ್ಮಣಿಹೃದಯೇಶ ನಮೊ ಸಿಂಧುಶಯನ ಕಂಸಾರಿ ನವನೀತ ನಮೊ ಜಂಭಭೇದಿಸುತಪ್ರೇಮ ನಮೊ 10ವೈಜಯಂತಿವನಮಾಲ ನಮೊ ವನದಶ್ಯಾಮಲವರ್ಣ ನಮೊವಜ್ರಸ್ಥಗಿತಕಿರೀಟ ನಮೊ ವರಮಣಿಕುಂಡಲಧರಣ ನಮೊ 11ಭುಜಕಿರೀಟಶುಭಗಾತ್ರ ನಮೊ ಭುವನಮೋಹನಾಕಾರ ನಮೊಅಜಪಿತಕನಕಸುಚೇಲ ನಮೊ ಆರ್ತಶರಣ್ಯೋದ್ಧಾರ ನಮೊ 12ಕಾಲಯವನಮದಖಂಡ ನಮೊ ಕೋಟಿರ'ಪ್ರಭಾಭಾಸ ನಮೊಮಾಲಾಕಾರುಪಕಾರ ನಮೊ ಲೀಲಾಮಾನುಷವೇಷ ನಮೊ 13ದ್ರೌಪತಿಕಭಯೋದ್ಧಾರ ನಮೊ ಧನಂಜಯಾದಿಸುಪಕ್ಷ ನಮೊಶ್ರೀಪತಿಸಕಲಾಧಾರ ನಮೊ ಸರ್ವಭೂತಹೃದಯಾತ್ಮ ನಮೊ 14ನಿಖಿಲಚರಾಚರದೂಪ ನಮೊ ನಾಮರೂಪಕ್ರಿಯರ'ತ ನಮೊಅಖಂಡಮಚಲಾಕಾರ ನಮೊ ಅದ್ಭುತಮ'ಮಾಪಾರ ನಮೊ 15ಸಗುಣನಿರ್ಗುಣಾತೀತ ನಮೊ ಸತ್ಯಾಸತ್ಯಸುಬೋಧ ನಮೊನಿಗಮಾಗನಶೃತಿಸಾರ ನಮೊ ನಿರ್ವಿಷಯಾಭವಪ್ರಣವ ನಮೊ 16ಅಜಪಸೂತ್ರಸಂಕೇತ ನಮೊ ಹಂಸತತ್ವಸುಪ್ರಕಾಶ ನಮೊತ್ರಿಜಗಾಂತರ್ಬ'ವ್ಯಾಪ್ತ ನಮೊ ತ್ರಿಗುಣಾಪ್ರತಿಭಾಗಮ್ಯ ನಮೊ 17ತುಳಸಿರಾಮ ಗುರುಸ್ತೌತ್ಯ ನಮೋ ತಾಕ್ಷ್ರ್ಯಾಚಲವರವಾಸ ನಮೊಮುಳಬಾಗಿಲಪುರಿಪಾಲ ನಮೋ ಮಹಾನುಮಪ್ರಿಯ ವಂದ್ಯ ನಮೋ 18ಮಂಗಳಮಘಚಯಭಂಗ ನಮೋ ಮಂಗಳಂ ಪಾ' ಪಾ' ನಮೋರಂಗಸ್ವಾ'ುದಾಸ ಪೋಷ ನಮೋ ಮಂಗಳಾಂಗ ಶ್ರೀಕೃಷ್ಣ ನಮೋ 19
ಶ್ರೀನಿಕೇತನ ಸರ್ವಪತಿಯು ಸಕಲ ಸಜ್ಜನಾನಂದ ಕರುಣಾ ಮೂರುತಿಯ ಕಂಠೇಧೃತ ಸತಿಯ ಮಣಿ ಮಯ ಪೀಠದಿ ಧ್ಯಾನಿಸಿ ಪರಮಾನುರಾಗದಿ ಪಾಡುತ ಮಾನಿಸಿ ಕರೆವೆ ಮುದದಿಂದ ಶೋಭಾನೆ 1 ಸಕಲ ಲೋಕಾಧಿನಾಥ ದೇವಾ ವಿಧಿ ನಾವ ವಿಕಸಿತ ಮುಖ ಕಂಜಭಾವ ಭಕ್ತರ ಸಂಜೀವ ಕುಂಡಲ ಶುಭ ಮುರುವಿಲಾಸಿತ ಕಪೋಲ ಸುಶೋಭಿತ ಕರುಣದಿ ಭಕುತಿಯನಿತ್ತು ದಯವಾಗು 2 ಕಂಧರಲಂಬಿ ವನಮಾಲಾ ಮಧ್ಯಸ್ಥ ಕೌಸ್ತುಭೇಂದಿರಾಸಕ್ತ ವಕ್ಷೋಲೀಲ ಕರುಣಾಲವಾಲ ಬಂದಹರಾರಿದ ರೆಂದಿವರ ಶುಭಾನಂದ ಕಾದಿದರ ಸುಂದರ ಶುಭಕರ ನಿಂದೀ ಮಂಟಪಕೆ ದಯವಾಗು 3 ವಿಧಿಯಾಸನಾದ ಕಂಜನೆ ಗದಾ ಗಂಭೀರ ವೃತ್ತ ನಾಭ ವಾಸಃ ಶೋಭ ಕರ ಭೋರ್ವಬ್ದಾಭ ಶುಭ ಪದಯುಗ ಕಂಜವ ಹೃದಯದಿ ತೋರುತ ಸದಯದೊಳಗರಿಗಳ ಸದೆವುತ ಹಸೆಗೆ ದಯವಾಗು 4 ಮೂರ್ತಿ ಸುರವರ ನುತಕೀರ್ತಿ ಶ್ರೀನಿಧಿ ಪರಿಹರಿಸಾರ್ತಿ ಪರಿಪೂರಿಸುತರ್ಥಿ ದೀನ ಬಂಧು ಸ್ವಜನಾನುಕಂಪ ಕರ್ಣಾನುಜಸಾರಥಿ ಶೇಷ ಗಿರೀಶ ಸುಮ್ಮಾನವ್ಯಾಕಿನ್ನು ಹಸೆಗೇಳು 5
ಶ್ರೀನಿವಾಸಗಾರುತೀಯ ಮಾನುನೀಯರು ಬೆಳಗಿರೀಗ ಪ ಗಾನಲೋಲ ದೀನಪಾಲ ಆನಂದಕಂದ ಸುಂದರಾಂಗ ಅ.ಪ ಭಕ್ತಪಾಲಾಸಕ್ತÀ್ತಶೀಲಾ ಮುಕ್ತೀಶ ರಮಾಲೋಲಗೀಗ ಮುತ್ತಿನಾರುತೀಯನೆತ್ತೀರೆ ಭಕ್ತವತ್ಸಲ ದೇವಗೆ ಬೇಗ 1 ಆದಿಮೂಲನೆ ವೇದೋದ್ಧಾರನೆ ಸಾಧುವಂದ್ಯ ಗಿರಿಧರನೆ ಕಂದಗೊಲಿದಾನಂದ2 ಭೂಮಿ ಅಳಿದ ಭೂಪರ ಕೊಂದ ಭೂಮಿಜೆ ಅರಸ ಭೂಪ ಕೃಷ್ಣಾ ಭಾಪುರೆ ಬೌದ್ಧ ಭೂಪ ಕಲ್ಕಿ ಶ್ರೀಪ ಶ್ರೀಶ್ರೀನಿವಾಸನಾದ 3
ಶ್ರೀಮತೇ ಶ್ರೀ ಭಾಷ್ಯಕರಾಯನೇ [ಮಾಮವ] ದೇವಾ ಕರುಣಿಸು ಮಹರಾಯನೇ ಪ ಮಂತ್ರ ರಹಸ್ಯದಿ ಜ್ಞಾನ ತ್ರಯಂಗಳ ನಿಂತು ನೀ ಕೃಪೆ ಮಾಡಿದೇ ಅ.ಪ [ವರ]ತತ್ವದುಯ್ಯಾಲನಾಡಿದೆ ಭರಗೈದು ಬಂದಿಲ್ಲಿ ಪರತತ್ವವನು ಗೂಡಿದೇ 1 ಸಿರಿಮಾತೇ [ಮೂಲಕ] ಹರಿಯಾಜ್ಞೆಯನುಗೊಂಡು ಪರಮಭಕ್ತರಿಗೆಲ್ಲಾ ಪ್ರತ್ಯಕ್ಷವಾದಂಥಾ ಪರಮಪದವಿ ಮಾಡಿದೇ 2 ಯದುಶೈಲವಾಸದೊಳಧಮರಾದವರಿಗೆ ಸುಧೆಯ ಸುರಿದು ತೋರಿದೆ ಸದುಪಾಯದಿಂ ಬಂದು ಸರ್ವಸ್ವತಂತ್ರದೊ ಳಿದು ನೋಡೆನುತ ಸಾರಿದೆ 3 ಪರಕಾಲಗುರು ಸರ್ವತಿರುಮಳಿಶಯ್ಯಾಳ್ವಾರೆಂ ಬೆರುಮಾನರಡಿಯಾದೆನೈ ಗುರುಕುಲದೊಳಗೆನ್ನ ಕರೆದಿತ್ತ ಹರಿನಾಮ ನುಡಿಯದೆ ನಾ ಹೋದೆನೈ 4 ಅದ್ವೈತ ಕುಲವನ್ನು ಪರಿಶೋಧಿಸಿ ಬಿಟ್ಟು ಶ್ರೀ ಮದ್ರಾಮಾನುಜಾಚಾರ್ಯನೇ ಮದ್ಗುರುವಾದ ಶ್ರೀತುಲಶೀರಾಮದಾಸ [ರೈ ದಾಸಕುಲತೂರ್ಯರೈ] 4
ಶ್ರೀರಮಾಧವಾಶ್ರೀತಜನಪಾಲಿತ ಮಾರಕೋಟಿರೂಪ ವಾರಿಧಿಶಯನ ಮುರಾರಿ ಕೇಶವ ಶ್ರೀಮ- ನ್ನಾರಾಯಣ ನೀರಜದಳಲೋಚನಪ. ಮಾನುಷತ್ವವಾಂತ ಸಮಯದಿ ಹೀನ ಭೋಗದ ಚಿಂತೆ ನಾನು ನೀನೆಂಬಾಭಿಮಾನದಿ ಮನಸು ನಿ- ಧಾನವಿಲ್ಲದೆ ಅನುಮಾನದಿಂದಿಹುದೈ ಏನು ಕಾರಣ ಹೃದಯನಳಿದೊಳು ನೀನೆ ನೆಲಸಿಕೊಂಡೀ ನರಯೋನಿಗೆ ನೀನೆ ಬರಿಸಿಯವಮಾನ ಬಡಿಸುವದು ಊನವಲ್ಲವೆ ಪದದಾಣೆ ಸತ್ಯವಿದು1 ಬಾಲಕತನದೊಳಗೆ ಕಾವ್ಯದ ಶೀಲವಿತ್ತೆಯೆನಗೆ ಕೀಳುಮಾಡದೆ ಯೆನ್ನ ಬಾಲಭೂಷಿತಂಗಳ ಕೇಳೈ ಶ್ರೀಲಕ್ಷ್ಮೀಲೋಲ ವೆಂಕಟರಾಯ ಕಾಲಕಾಲಪ್ರಿಯ ಪಾಲಿಸೊಲಿದು ಕರು- ಣಾಲವಾಲ ನತಪಾಲಶೀಲ ಮುನಿ ಜಾಲವಂದ್ಯ ವನಮಾಲದಾರಿ ಜಗ ಮೂಲಸ್ವರೂಪ ವಿಶಾಲ ಗುಣಾರ್ಣವ2 ಹಿಂದಾದುದನರಿಯೆ ಇದರಿಂ ಮುಂದಾಗುವುದು ತಿಳಿಯೆ ಹಿಂದು ಮುಂದಿಲ್ಲದೆ ಬಂಧನದೊಳು ಬಲು ನೊಂದೆನೈ ನಿನಗಿದು ಚಂದವೆ ಶ್ರೀಹರಿ ತಂದೆ ತಾಯಿ ಬಂದು ಬಾಂಧವ ಬಳಗ ನೀ ನೆಂದು ನಿನ್ನಯ ಪದದ್ವಂದ್ವವ ಭಜಿಪಾ ನಂದಸುಜ್ಞಾನದಿಂದೆಂದಿಗೂ ಸುಖ ದಿಂದಿರುವಂದದಿ ತಂದೆ ನೀ ಪಾಲಿಸು3 ಧಾರಿಣಿಗಧಿಕವಾದ ಮೆರೆವ ಕು ಮಾರಧಾರೆಯ ತಟದ ಚಾರುನೇತ್ರಾವತಿ ತೀರ ಪಶ್ಚಿಮ ಭಾಗ ಸಾರಿ ತೋರುವ ವಟಪುರದೊಳು ನೆಲಸಿಹ ವೀರ ವೆಂಕಟಪತಿ ವಾರಿಜನಾಭ ಖ- ರಾರಿ ತ್ರಿದಶಗಣವಾರವಂದ್ಯ ಭಾ- ಗೀರಥೀಪಿತ ದುರಿತಾರಿ ದೈತ್ಯಸಂ- ಹಾರಿ ಶ್ರೀಲಕ್ಷ್ಮೀನಾರಾಯಣ ಹರಿ4
ಶ್ರೀರುಕ್ಮಿಣೀರಮಣ ತಾನುಡಿಸಿದಂತೆ ನಾಂ ಧಾರುಣಿಪ ಜನಮೇಜಯಂಗೆ ಮುನಿ ಪೇಳಿಸಿದ ಹದಿನೆಂಟುಪದ್ಯಗಳೊಳಾಲಿಸುವುದು ದನುಜದಿವಿಜರೀ ಭುವಿಯೊಳವತಿರಿಸಿದರುಸುಯೋ ಧನಪಾಂಡುತನಯರಂ ಸೈರಿಸದೆಭೇದಮಂ ಕಟ್ಟಿಸಿಯರಗಿನಮನೆಯೊಳವರನಿಡಲು | ವನಜಲೋಚನನ ಕೃಪೆಯಿಮದದಂದಾಟಿಕಾ ನನದಲಿ ಹಿಡಿಂಬಬಕರಂ ಮುರಿದುದೃಪದರಾ ಪುತ್ರರಪಡೆದರಾದಿಪರ್ವದಲ್ಲಿ 1 ರಾಜಸೂಯಾಭಿಧಾನದ ಯಾಗಕಾರಣದೊ ಳಾಜರಾಸಂಧಾದಿಗಳ ಕೊಲಿಸಿನೃಪಧರ್ಮ ಜೂಜಿನಲಿಸೋಲಿಸಲು ಪಂಚಪಾಂಡವರಂ ಸ ರೋಜಾಕ್ಷಿ ದ್ರೌಪದಿಯ ಭಂಗಪಡಿಸಲ್ಕೆಪಂ- ಸಭಾಪರ್ವದಲಿ 2 ಅಡವಿಯೊಳು ವಾಸವಾಗಿರಲು ಪಾಂಡುಸುತರ್ಗೆ ಪೊಡವಿ ಸುರರರುಹಿಸಲ್ ಸತ್ಕಥೆಗಳಾಲಿಸುತ ಘೋಷಯೊಳಹಿತನ ಬಿಡಿಸಿದಂ ಗಂಧರ್ವಪತಿಯಿಂದ ಪಾರ್ಥನೀ ರಡಿಸಿ ನಾಲ್ವರುಮೂರ್ಛೆಪೊಂದಲ್ಕೆಯಕ್ಷಂಗೆ ಅರಣ್ಯಪರ್ವದೊಳಗೆ 3 ಬಂದುಮಾತ್ಸ್ಯಾಲಯದಲಜ್ಞಾತವಾಸದೊಳ ಗಂದುಪಾಂಡವರಿರಲ್ ಕೀಚಕಾಧಮನು ಸೈ- ಭೀಮಗಂಧರ್ವ ವ್ಯಾಜದಿಂದ ಕೊಂದವಾರ್ತೆಯ ಕುರುಪಕೇಳಿ ಸೇನೆಸಹಿತ ಪಾರ್ಥಗೆ ವಿರಾಟಪರ್ವದಲ್ಲಿ 4 ದೇವಕೃಷ್ಣಸಂಧಿಗೆ ತರಲ್ ಕುರುಪದು ರ್ಭಾವದೊಳಗಿರಲದಂ ತಿಳಿದುವಿದುರನ ಮನೆಯೊ ಕೌರವಸಭೆಗೆಪೋಗಿ ಈವುದೈದೂರುಗಳ ಪಾಂಡವರಿಗೆನೆ ಭೇದ ಭಾವದಿ ಸುಯೋಧನಂಸೂಜ್ಯಾಗ್ರಭೂಮಿಯಂ ತಾ ನೀವುದಿಲ್ಲವೆನೆ ಯುದ್ಧನಿಶ್ಚಯಗೈದನುದ್ಯೋಗಪರ್ವದಲಿ 5 ಕುರುಪತಿಯು ಗಂಗಾಸುತಗೆ ಪಟ್ಟಗಟ್ಟಿದಂ ಎರೆಡುಬಲಮಂ ಸೇರಿಯಿರಲರ್ಜುನಂ ತನ್ನ ವರಕೊಲ್ವದೆಂತೆನಲ್ ಹರಿವಿಶ್ವರೂಪಮಂ ತೋರಿತತ್ವವತಿಳಿಸಲು ತರುವಾಯ ಹತ್ತುದಿನಕಾದುತಿರಲಾಗಭೀ ಷ್ಮರಿಗೆಷಂಡನನೆವದಿ ಶಸ್ತ್ರಸಂನ್ಯಾಸ ವಾ ಭೀಷ್ಮಪರ್ವದಿಕಥೆಯಿದು 6 ಗುರುಗಳಿಗೆ ಪಟ್ಟಾಭಿಷೇಕವಾಯಿತುದ್ರೋಣ ದೊರೆಯಹಿಡಿತಹೆನೆಂದು ತಪ್ಪೆಸಂಶಪ್ತಕರ ನರನೊಡನೆ ಕಾದಿದರು ಪಾರ್ಥಸುತಪೊಕ್ಕುಪದ್ಮವ್ಯೂಹ- -ದೊಳುಮಡಿಯಲು ನರಪ್ರತಿಜ್ಞೆಯಗೈದು ಸೈಂಧವನ ವಧಿಸಿದನ ಸುರ ಘಟೋತ್ಕಚ ರಾತ್ರಿಯುದ್ಧದೋಳ್ ಸಂದನಾ ದಿನದಲಿದ್ರೋಣಪರ್ವದೊಳಗೆ 7 ಕುರುಸೈನ್ಯಬತ್ತಿರುವ ಶರಧಿಯೋಲಾಯ್ತು ದಿನ ಕರಸುತಗೆ ಪಟ್ಟವಂಗಟ್ಟಿ ದುರ್ಯೋಧನಂ ಹರನುತ್ರಿಪುರವ ಗೆದ್ದಕಥೆಯವಿಸ್ತರಿಸಿ ಸಾರಥಿಯ ಮಾಡಲು ಶಲ್ಯನ ನರನವಿಕ್ರಮಪೊಗಳಿ ಕರ್ಣನಬಲವನುಧಿ ಕ್ಕರಿಸೆಮಾದ್ರೇಶ್ವರಂ ಕರ್ಣನತಿ ಖಾತಿಯಿಂ ದೆರಡುದಿನ ಕಾದಿಯರ್ಜುನನಿಂದ ಮಡಿದ ಸೂತಜ ಕರ್ಣಪರ್ವದಲಿ 8 ಸೂತಜನಮರಣದಲಿ ಶಲ್ಯಗಾಯಿತು ಪಟ್ಟ ಶಕುನಿಯಂಸಹದೇವಸಂಹರಿಸಲು ಪಾತಕಿ ಸುಯೋದನಂ ಕೊಳನಪೊಕ್ಕಿರಲು ಯಮ ಜಾತಾದಿಗಳು ಪೋಗಿ ನುಡಿಸಲ್ಕೆಜಲ ಪೊರಟು ಕುರುಪನು ಶಲ್ಯಪರ್ವದೊಳಗೆ 9 ಗುರುಜಂಗೆ ಬೆಸಸಿದಂ ಕುರುರಾಯ ಪಾಂಡವರ ಶಿರವತಹುದೆನುತಲಶ್ವತ್ಥಾಮಪಾಳಯದಿ ಜೀವಬಿಡಲು ನರಭೀಮಸೇನರಾವಾರ್ತೆಯಂ ಕೇಳುತಲೆ ತರುಬಿ ಹಿಡಿದೆಳೆ ತಂದು ದ್ರೌಣಿಯಂ ಶಿಕ್ಷಿಸಲ್ ಸುಪ್ತಪರ್ವದಲಿ 10 ರಣದಿ ಮಡಿದಿರುವ ನೃಪರರಸಿಯರ್ ಅಂಧಭೂ ಪನು ಸತಿಯುಸಹಿತಲೈತರುತಿರಲ್ ಕಳನೊಳಗೆ ತಮ್ಮಪತಿಗಳನಪ್ಪಲು ಪೆಣಗಳೊಟ್ಟೈಸಿ ಸಂಸ್ಕಾರಕ್ರಿಯೆಗಳವಿದು ರನುಗೈದನನ್ನೆಗಂ ಧೃತರಾಷ್ಟ್ರನರಸಿ ಕೃ ಸ್ತ್ರೀಪರ್ವದಲಿ 11 ತನಗೆ ಕರ್ಣಸಹೋದರನೆಂಬ ವಾರ್ತೆಯಮ ಜನು ಕೇಳಿ ಶೋಕದಿವಿರಕ್ತಿಯಿಂದಿರೆ ಸಕಲ ಘನಬಂಧುವಧೆ ಮಹಾದೋಷವೆಂತೆಂದು ಭೀ ಷ್ಮನ ಕೇಳಲರುಹಿದಂ ರಾಜನೀತಿಯ ಧರ್ಮ ವನು ಕಷ್ಟಕಾಳಧರ್ಮವ ಮೋಕ್ಷಧರ್ಮವೆಂಬಿದುಶಾಂತಿಪರ್ವದಲಿ 12 ಅತಿಶಯ ದಾನಧರ್ಮದ ಲಕ್ಷಣಗಳಂ ನಿ ಯತಮಾದ ವರ್ಣಾಶ್ರಮಾಚಾರಕ್ರಮದಸಂ ತತಿಗಳಂ ಶಿವವಿಷ್ಣುಗಳಮಹಿಮೆ ಬ್ರಹ್ಮಸಾಕ್ಷಾತ್ಕಾರಸದ್ಬೋಧೆಯ ಕಥೆಗಳರುಹಿಸಿ ನದೀಸುತಧರ್ಮಜನ ಮನೋ ಪತಿ ಕೃಷ್ಣನಂ ಧ್ಯಾನಿಸುತ ಮುಕ್ತನಾದನಿದು- -ಮಾನುಶಾಸನ ಪರ್ವದಿ 13 ಗುರುಸುತನ ಬ್ರಹ್ಮಾಸ್ತ್ರಮಂಚಕ್ರದಿಂದಸಂ ಹರಿಸಿ ಕೃಷ್ಣಂಕಾಯ್ದನುತ್ತರೆಯಗರ್ಭಮಂ ನೇಮದಿಂದ ಪರಿಪರಿಸುವಸ್ತುಗಳನೆಲ್ಲ ತಂದುಯೈ ವರು ಮಹಾಸಂತಸದಿಹರಿ ಸಹಾಯದಿ ಮಾಡಿ ಸಂಪೂಜಿಸಿದರಶ್ವಮೇಧಕಪರ್ವದಿ 14 ಅಂಧಭೂಪತಿ ಕೌರವಸ್ತ್ರೀಯರುಂ ಕುಂತಿ ಗಾಂಧಾರಿ ಸಹಿತಬರೆ ತೆರಳಿದಂತಪಗೈಯ್ಯೆ ಮುವ್ವರುಪವಾಸದೊಳಿರೆ ಬಂದುದಾಕಾಳ್ಗಿಚ್ಚಿನೋಲ್ ಮಹಾಜ್ವಾಲೆಯೋಳ್ ಪೊಂದಿದರ್ ವಿದುರಧರಾತ್ಮಜನಕೂಡಿದಂ ಬಂದುಯಮಜನುಪುರದಿ ಶ್ರಾದ್ಧಗಳಮಾಡ್ದನಾಶ್ರಮ- -ವಾಸಪರ್ವದೊಳಗೆ 15 ವರುಷಗಳು ಷಟತ್ರೀಂತಿಯು ರಾಜ್ಯವಾಳುತಿರೆ ಬರುಬರುತಲುತ್ಪಾತಗಳುಪುಟ್ಟಿದವು ಯಾದ ಮಡಿದರೆಂಬವಾರ್ತೆಯನು ಕೇಳಿ ನರನು ನಡೆತಂದು ಶೋಕದೊಳುಳಿದವರನುತಾ ಕರದೊಯಿದು ವಜ್ರಾಖ್ಯನಂ ಯಿಂದ್ರಪ್ರಸ್ಥದೋಳ್ ಮುಸಲಪರ್ವದಕಥೆಯಿದು 16 ನರನಮೊಮ್ಮಗೆ ಪಟ್ಟವಂಗಟ್ಟಿಯೈವರುಂ ತೆರಳಿದರ್ಪಾಂಡವರ್ ಸತಿಸಹಿತಬರುತ ಹಿಮ ನಕುಲನುಂ ಸುರಪಸುತನು ವರಭೀಮಸೇನನುಂ ಬಿದ್ದರಾನೃಪತಿಯೋ ರ್ವರನುಕಾಣದೆಯೊಬ್ಬನೇಪೋಗುತಿರೆ ಕಷ್ಟ ಪ್ರಸ್ಥಾನಪರ್ವದೊಳಗೆ 17 ಮ್ಮಂದಿರೆಲ್ಲೆನಲವಂ ಸುರನದಿಯತೋರಲ್ಕೆ ತನ್ನವರೆಲ್ಲರ ನೋಡುತ ಪೊಂದಿದಂ ಯಮನೊಡನೆ ಪವನನೋಳ್ ಭೀಮನರ ನಿಂದನಂ ಯಮಳರಶ್ವಿನಿಯರೊಳ್ಕಲಿಮುಖ್ಯ ಸಂದೋಹದೋಳ್ ಸುಯೋಧನ ಪ್ರಮುಖರೊಂದಿದರ್ ಸ್ವರ್ಗಾರೋಹಣಪರ್ವದಿ 18 ಈಮಹಭಾರತ ಶತಸಹಸ್ರಗ್ರಂಥವನು ಹಾ ಮುನಿ ಪರಾಶರಾತ್ಮಜಪೇಳ್ದನದುವೆ ಗುರು ಸಂಕ್ಷೇಪಭಾರತವನು ಪ್ರೇಮದಿಂದಾಲಿಸುವ ಸಜ್ಜನರಿಗನುದಿನಂ ಕಾಮಿತಾರ್ಥವನಿಹಪರಂಗಳೊಳ್ಸುಖವಗುರು ರಾಮವಿಠ್ಠಲಕೊಡುವಭಾಗ್ಯವಲ್ಲೀನಗರ- -ನಿಲಯನರಹರಿಕರುಣದಿ 19
ಶ್ರೀವಧೂ ಮನೋಹರಾ ನಮೋ ನಮೋ ಪ. ದೇವದೇವ ದೇವರೇ ವಸುದೇವನಂದನ ಭಾವಾತೀತ ವಿಧಿಭವಾರ್ಚಿತ ಅ.ಪ. ವಾಸವಾರ್ಚಿತಾಂಘ್ರಿಯುಗ ನಮೋ ನಮೋ ಶ್ರೀಸಮೇತ ಭೂಸಹಿತ ನೀಳಾಸಮನ್ವಿತ ಶೇಷಾದ್ರೀಶ ಜಯಲೀಲಾಮಾನುಷ 1 ರಾಜೇಂದ್ರಪುರೀನಾಥ ನಮೋ ನಮೋ ರಾಜರಾಜ ದ್ವಿರಾಜತೇಜ, ರಾಮಚಂದ್ರ ಭೂಪತಿ ಜಯರಾಜೇಂದ್ರ ರಾಜರಾಜ ಪೂಜಿತ 2