ಒಟ್ಟು 422 ಕಡೆಗಳಲ್ಲಿ , 63 ದಾಸರು , 380 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೊಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲ ತಿಲಕರ ಪ ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ ತೂಗಿರೆ ಗುರುರಾಘವೇಂದ್ರರ ಅ.ಪ ಕುಂದಣಮಯವಾದ ಛಂದ ತೊಟ್ಟಿಲೊಳು ನಂದದಿ ಮಲಿಗ್ಯಾರ ತೂಗಿರೆ ನಂದನಂದನ ಗೋವಿಂದ ಮುಕುಂದನÀ ನಂದದಿ ಭಜಿಪರ ತೂಗಿರೆ 1 ಯೋಗನಿದ್ರೆಯನ್ನು ಬೇಗನೆಮಾಡುವ ಯೋಗೀಶ ವಂದ್ಯರ ತೂಗಿರೆ ಭೋಗಿಶಯನನಪಾದ ಯೋಗದಿ ಭಜಿಪರ ಭಾಗವತರನ ತೂಗಿರೆ 2 ನೇಮದಿ ತಮ್ಮನು ಕಾಮಿಪಜನರಿಗೆ ಕಾಮಿತ ಕೊಡುವರ ತೂಗಿರೆ ಪ್ರೇಮದಿ ನಿಜಜನರ ಆಮಯವನಕುಲ - ಧೂಮಕೇತೆನಿಪರ ತೂಗಿರೆ 3 ಅದ್ವೈತಮತದ ವಿಧ್ವಂಸನ ನಿಜ ಗುರು ಶುದ್ಧ ಸಂಕಲ್ಪದಿ ಬದ್ಧ ನಿಜಭಕ್ತರ ಉದ್ಧಾರಮಾಳ್ಪರ ತೂಗಿರೆ 4 ಭವ ತ್ಯಜನೆ ಮಾಡಿಸಿ ಅವರ ನಿಜಗತಿ ಇಪ್ಪರ ತೂಗಿರೆ ನಿಜಗುರು ಜಗನ್ನಾಥವಿಠಲನ್ನ ಪದಕಂಜ ಭಜನೆಯ ಮಾಳ್ಪರ ತೂಗಿರೆ 5
--------------
ಗುರುಜಗನ್ನಾಥದಾಸರು
ತೋರೊ ತೋರೊ ನಿನ್ನ ಚರಣವ ಪ ಸಾರಥಿ ಕೋರಿ ಭಜಿಪೆ ಬೇಗ ಬಾರೊ ಗುರುವರ ಅ.ಪ ವೋ ಮಧ್ವಮುನಿರಾಯ ವಂದಿಪೆ ಜೀಯ 1 ತಾವರೆಗಣ್ಣನದಾಸವರ್ಯನೆ 2 ದಿಟ್ಟ ಶ್ರೀ ಗುರುರಾಮವಿಠ್ಠಲರಾಯನ ಪಟ್ಟದಾನೆಯು ನೀನು ಪಾಲಿಸೆಮ್ಮನು 3
--------------
ಗುರುರಾಮವಿಠಲ
ತ್ವರದಿ ಭಜಿಪೆ ನಮ್ಮ ಗುರುಪಾದಾಂಬುಜ ಕೆರಗುತಲನುದಿನ ಭಕುತಿಯಲಿ ಪ ನೆರೆನಂಬಿದವರ ಬಿಡದೆ ಪೊರೆವರೆಂಬ ಉರುತರ ಕೀರ್ತಿಯ ಸ್ಮರಿಸುತಲಿ ಅ.ಪ ಭವ ಬಂಧನದಿ ಬಳಲುವ ಮಂದಿಗಳನು ಉದ್ಧರಿಸುವರ ಮಂದಮತಿಗಳಾದರು ನಿಂದಿಸದಲೆ ಮುಂದಕೆ ಕರೆದಾದರಿಸುವರ ಬಂಧು ಬಳಗ ಸರ್ವಬಾಂಧವರಿವರೆಂದು ಒಂದೆ ಮನದಿ ಸ್ಮರಿಸುವ ಜನರ ಕುಂದುಗಳೆಣಿಸದೆ ಕಂದನ ತೆರದೊಳು ಮುಂದಕೆ ಕರೆದಾದರಿಸುವರ 1 ಗುಪ್ತದಿಂದ ಶ್ರೀಹರಿನಾಮಾಮೃತ ತೃಪ್ತಿಲಿ ಪಾನವ ಮಾಡಿಹರ ನೃತ್ಯಗಾಯನ ಕಲಾನರ್ತನದಿಂ ಪುರು- ಷೋತ್ತಮನನು ಮೆಚ್ಚಿಸುತಿಹರ ಸರ್ಪಶಯನ ಸರ್ವೋತ್ತಮನನು ಸರ್ವತ್ರದಲಿ ಧ್ಯಾನಿಸುತಿಹರ ಮತ್ತರಾದ ಮನುಜರ ಮನವರಿತು ಉ- ನ್ಮತ್ತತೆಯನು ಪರಿಹರಿಸುವರ2 ಕಮಲನಾಭ ವಿಠ್ಠಲನು ಪೂಜಿಸಿ ವಿಮಲಸುಕೀರ್ತಿಯ ಪಡೆದವರ ಶ್ರಮಜೀವಿಗಳಿಗೆ ದಣಿಸದೆ ಮುಂ- ದಣಘನ ಸನ್ಮಾರ್ಗವ ಬೋಧಿಪರ ನವನವ ಲೀಲೆಗಳಿಂದೊಪ್ಪುವ ಹರಿ ಗುಣಗಳನ್ನು ಕೊಂಡಾಡುವರ ನಮಿಸಿಬೇಡುವೆ ಉರುಗಾದ್ರಿವಾಸ ವಿ-ಠ್ಠಲದಾಸರು ಎಂದೆನಿಸುವರ 3
--------------
ನಿಡಗುರುಕಿ ಜೀವೂಬಾಯಿ
ದಯವ ಮಾಡೋ ಎನ್ನ ಭಯವ ಬಿಡಿಸೋ ಪ ರಥಾಂಗ ಮಾವಿನಕೆರೆರಂಗಾ ಅ.ಪ ಅನುದಿನ ಭಜಿಪರೋ ತನು ಮನ ಧನಗಳ ನಿನಗೊಪ್ಪಿಸಲು ಘನ ತಪೋಶಕ್ತಿಯಿಂದ ಮನವೊಲಿಸುವರು ನಿನ್ನಾ ಅನಿತನರಿಯದೆನ್ನೊಳು ಸನುಮತದಿಂದಲಿಯೆನ್ನೊಳು 1 ಕಾಮ ಕ್ರೋಧಂಗಳಿಂ ಭ್ರಾಮಕನಾದೆನ್ನ ನೇಮವೊಂದಿಲ್ಲ ನಿನ್ನ ನಾಮಂಗಳುಲಿಯೆ ನಾ ಭೂಮಿಯೊಳನೇಕ ಜನ್ಮನಾಮದಿಂದೆ ಜನಿಸಿ ಪಾಪ ಕರ್ಮವ ತಳೆದೆಂ ರಾಮದಾಸಾರ್ಚಿತನೆ ಯೆನ್ನೊಳು 2 ಕರಿಯ ಪೊರೆದೆ ಹರೀ ತರಳಗೊಲಿದೇ ಶೌರಿ ದುರುಳನ ಪೊರೆದೆ ಉದಾರಿ ಸರಸಿಜಾಕ್ಷ ಮುರಾರಿ ಸುರಪತೆ ರಕ್ಕಸಾರಿ ಕರುಣಿಸೋ ಸೂತ್ರಧಾರಿ ಕರವಪಿಡಿದು ಯೆನ್ನೊಳು 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದರಿಶಕುಪ್ಪ ವೆಂಕಟದಾಸರಿಂದಗುರುರಂಗಸ್ವಾ'ುಕೃಪಾಂಗಾ ಸತ್ಕøಪಾಂಗಾಭಜಿಪೆ ವರತುಲಸೀರಾಮಪಾದ ಸಾರಸಭೃಂಗ ಪಗುರ್ರಮಾಂಬ ಕುವರನೆ ಗುರುಸೇವಾ ದುರಂಧರನೆಕರುಣಿಸೊಯಮ್ಮನು ನಿರುತವು ಬೇಡುವೆ 1ಅಗಣಿತಮ'ಮನೆ ಭಾಗ್ಯಾದಣ್ಣಯ್ಯಸುತನೆಭಗವಂvನಪ್ರಿಯನೆ ಹಗಲಿರಳು ಭಜಿಪೆವು 2ದುಂದುಭಿಶಾಲೆಯಂತೆ ಧನುರ್ಮಾಸಭಜನೇಗೆಬಂದು ಪಾಮರರ ಭವಬಂಧನ ಬಿಡಿಸಿದ 3ರಾಮನ ನಾಮವ ಪ್ರೇಮಾದಿಂ ಬೊಧಿಸಿನೇಮವತೋರಿಸಿ ಸ್ವಾ'ುೀಕೃಪೆ ಪಡೆದ 4ತುಲಸೀಮಹಾತ್ಮರ ತತ್ವಾಬೊಧಾನುಭವತಿಳಿದುನಿರ್ಮಲ ಹೃದಯದಲ್ಲಿ ಭಕ್ತಕೃತಮುಖನೆ 5ಪರಿಪೂರ್ಣ ತುಲಸೀರಾಮ ಮರೆಯದೆ ಇರಿಸೆನ್ನದರಿಶಕುಪ್ಪದ ದಾಸ ಕರವೆತ್ತಿ ಮುಗಿಯುವೆನೂ 6
--------------
ಮಳಿಗೆ ರಂಗಸ್ವಾಮಿದಾಸರು
ದಾತನೀತ ಯತಿನಾಥ ನಿಜಪದ ದೂತಜನರ ಪೊರೆವಾ ಪ ಧಾತನಾಂಡದೊಳತಿ ಖ್ಯಾತನಾಗಿ ಶಿರಿ ನಾಥ ನೊಲಿಸಿ ಮೆರೆವಾ ನೀತಮನದಿ ತನ ಮಾತು ಮೀರಿದಿಹ - ಗೀತೆರದಿ ತಾನೆ ಒಲಿವಾ ತಾತನೆ ಮನೋಗತ ಭೀತಿಯ ಬಿಡಿಸೆನೆ ಪ್ರೀತಿ ಮನದಿ ತಾ ಬರುವಾ ಅ.ಪ ರಾಮ ಕೃಷ್ಣ ನರಹರ್ಯಂಘ್ರಿಯ ಪ್ರೇಮಮನದಿ ಭಜಿಪಾ ನೇಮದಿ ತನ್ನನು ಕಾಮಿಪ ಜನರಿಗೆ ಕಾಮಿತ ಫಲರೂಪಾ ಈ ಮಹಾ ಮಹಿಮೆಯ ನೇಮದಿ ತೋರುವ ಭೂವಿ ಸುರರ ಭೂಪಾ ತಾಮಸ ಮತಿ ನಿರ್ಧೂಮ ಗೈಸುವ ಧೂಮಕೇತುನೆನಿಪಾ 1 ಮಂದ ಜನರಿಗೆ ಎಂದಿಗಲಭ್ಯನ - ಪೊಂದಿದ ಜನರಾ ಕುಂದೆÀಣಿಸದೆ ತಾ ನಂದ ಕೊಡವೊ ಮಹಾರಾಯಾ ವಂದಿಪ ಜನರಘ - ವೃಂದವ ದರುಶನ - ದಿಂದ ತರಿವೊ ಜೀಯಾ ಸುಂದರತರ ವೃಂದಾವನ ನಿಜ ಮಂದಿರ ಗತ ಧ್ಯೇಯಾ 2 ದಾತಗುರು ಜಗನ್ನಾಥ ವಿಠಲನತಿ ಪ್ರೀತಿಯಿಂದ ಭಜಿಪಾ ದೂತ ಜನರು ಬಲು ಆತುರದಲಿ ಕರಿಯೆ ಪ್ರೀತ ಮನದಿ ತಾ ಬಪ್ಪ ಮಾತೆಯತೆರ ನಿಜ ದೂತರÀ ಮನಸಿನ ಮಾತು ನಡೆಸುವ ನೀಭೂಪಾ ಈತಗೆ ಸರಿಯತಿನಾಥ ಕಾಣೆನೊ ಭೂತಳೇಶರಧಿಪಾ 3
--------------
ಗುರುಜಗನ್ನಾಥದಾಸರು
ದಾಸ ದಾಸರ ಮನೆಯ ದಾಸಿಯರ ಮಗ ನಾನುಸಾಸಿರ ನಾಮದೊಡೆಯ ರಂಗಯ್ಯನ ಮನೆಯ ಪ ಶಂಕು ದಾಸರ ಮನೆಯ ಮಂಕುದಾಸನು ನಾನುಮಂಕುದಾಸನು ನಾನು ಮರುಳುದಾಸಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ ಬಿಂಕದಿ ಬಾಗಿಲ ಕಾಯ್ವ ಬಡ ದಾಸ ನಾನಯ್ಯ 1 ಕಾಳಿದಾಸರ ಮನೆಯ ಕೀಳುದಾಸನು ನಾನುಆಳುದಾಸನು ನಾನು ಮೂಳದಾಸಫಾಲಾಕ್ಷ ಸಖ ನಿನ್ನ ಭಜಿಪ ಭಕ್ತರ ಮನೆಯಆಳಿನಾಳಿನ ದಾಸ ಅಡಿದಾಸ ನಾನಯ್ಯ 2 ಹಲವು ದಾಸರ ಮನೆಯ ಹೊಲೆಯ ದಾಸನು ನಾನುಕುಲವಿಲ್ಲದ ದಾಸ ಕುರುಬ ದಾಸಛಲದಿ ನಿನ್ನ ಭಜಿಪರ ಮನೆಯ ಮಾದಿಗ ದಾಸಸಲೆ ಮುಕ್ತಿ ಪಾಲಿಸೆನ್ನೊಡೆಯ ಕೇಶವನೆ 3
--------------
ಕನಕದಾಸ
ದಾಸ ದಾಸರು ಪೇಳುತಿಹರಲ್ಲಾ ಕೇಶವಾ ಎಂದು ತಾಸು ತಾಸಿಗೆ ಪೇಳುತಿಹರಲ್ಲಾ ಪ ರಾಮನೆಂಬರು ನಿಮಿಷ ನಿಮಿಷಕೆ ನೇಮದಿಂದಲಿ ಹರಿಯ ಭಜಿಪರು ರಾಮನಾಮವ ಹಲವು ವಿಧದಲಿ ಪ್ರೇಮದಿಂದಲಿ ಸ್ಮರಿಸುತಿಹರು 1 ಮಾತು ಮಾತಿಗೆ ಕೃಷ್ಣಯೆಂಬರು ನೀತಿ ನೀತಿಗೆ ವಿಠಲಯೆಂಬರು ಸೇತು ಬಂಧನ ಸ್ವಾಮಿ ನಾಮವ ನಿತ್ಯ ನುಡಿಯಲಿ ನೆನೆಯುತಿಹರು 2 ಕಾಲ ಕಾಲಕೆ ಶೇಷಶಾಯಿಯ ನೀಲರೂಪನ ನಾಮ ಸವಿಯುತ ಮೂರ್ತಿ ಕೀರ್ತನೆ ವೇಳೆ ವೇಳೆಗೆ ಮಾಡುತ 3 ನಿತ್ಯ ಮಾರ್ಗದಿ ನಾವೆ ರೂಪವ ಧರಿಸಿ ಭವದೊಳು ರಾವಣಾಂತ ಕನಡಿಯ ಸೇರುವ 4
--------------
ಕರ್ಕಿ ಕೇಶವದಾಸ
ದಾಸನಾಗುವೆ ಭಜಿಪ ಭಕ್ತಿಯನು ನೀಡೆನ್ನ ನಾನೇನೂ ಮಾಡಲಾರೆ ರಂಗಯ್ಯ ನೀನೆನ್ನ ಸಲಹ ಬೇಕು ಪ ಗಾನಲೋಲನ ನಾಮ ಭಜನೆಯೊಂದುಳಿದು ನಾ ನನ್ಯರೀತಿಯ ಕಾಣೆ ಸಲಹಯ್ಯ ಹರಿಯೇ ಅ.ಪ. ತರಳಾ ಧ್ರವನಂತೆ ತಪನ ನಾನರಿಯನು ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ ಹರಿದಾಸರಂತೆ ದಾಸತ್ವ ನಾನರಿಯೆನು ಪರಮ ಸೇವಕರಂತೆ ಸೇವೆಯ ನರಿಯೇ 1 ಅಸುರನಂದನನಂತೆ ಕೀರ್ತನೆಯರಿಯೆನು ವಸುಧೀಶನಂತೆ ನಾ ವ್ರತಗಳನರಿಯೇ ವಸುಮತಿಯಂತೆ ನಾ ಯಾಚನೆಯರಿಯೆನು ಋಷಿ ವೃಂದದಂತೆ ನಾ ಭಕ್ತಿಯನರಿಯೇ 2 ಸಿರಿಯಂತೆ ನಿನ್ನನು ಸೇವಿಸಲರಿಯನು ಕರಿಯಂತೆ ಸ್ಮರಣೆಯ ಮೊದಲು ನಾನರಿಯೆ ಸುರಮುನಿಯಂತೆ ನಾ ಗಾಯನವರಿಯೆನು ಸಿರಿ ಚನ್ನಕೇಶವ ಭಜನೆಯನರಿವೇ 3
--------------
ಕರ್ಕಿ ಕೇಶವದಾಸ
ದಾಸನಾದಮೇಲಿ ನಿನಗಾ ಯಾಸವ್ಯಾಕೊ ಮರುಳೆ ಪ ಮೋಸಪಾಶಗಳ ನಾಶಮಾಡುವಂಥ ದಾಸರ ಪ್ರಾಣ ಲಕುಮೀಶನ ಚರಣಅ.ಪ ಚಿಂತೆಗೈವುದ್ಯಾಕೊ ಹಲವು ಭ್ರಾಂತಿಗಳಿನ್ಯಾಕೊ ಕಂತುಜನಕ ಅಂತರಂಗ ನಿ ಪಾದ 1 ಮಿಡುಕುವುದಿನ್ಯಾಕೊ ನಿನಗೆ ಬಡತನಗೊಡವ್ಯಾಕೊ ಬಡವರ ಭಾಗ್ಯನೆಂದು ದೃಢದಿ ಪಾಡ್ವರ ಬೆಂ ಪಾದ 2 ಹಾರೈಸುವುದ್ಯಾಕೋ ನೀ ಬಲು ಘೋರಬಡುವುದ್ಯಾಕೊ ಬಾರಿಬಾರಿಗೆ ಸೇರಿ ಭಜಿಪರ ಭಾರಹೊತ್ತು ಕಾಯ್ವ ಧೀರ ಶ್ರೀರಾಮಪಾದ 3
--------------
ರಾಮದಾಸರು
ದಾಸನಾದವನಿಗೆ ಭವಭೀತಿಯುಂಟೆ ಆಸೆಬಿಟ್ಟವನಿಗೆ ಘಾಸಿಯಿನ್ನುಂಟೆ ಪ ವನಿತೆಯರಾಸ್ಯಳಿದವಗೆ ಮನಸಿಜನರ ಭೀತಿಯೆ ಮಣ್ಣಿನಾಸೆ ಪೋದವಗೆ ಅವನಿಪರ ಭಯವೆ ಧನದಾಸೆ ಪೋದವಗೆ ಬಿನುಗುಜನರಂಜಿಕೆಯೆ ತನುಮೋಹ ಬಿಟ್ಟವಗೆ ಮರಣದ ಭಯವೆ 1 ನಿಂದೆಯನು ಬಿಟ್ಟವಗೆ ಬಂಧಸೋಂಕುವ ಭಯವೆ ಸಂದೇಹವಳಿದವಗೆ ಕರ್ಮಗಳ ಭಯವೆ ಮಂದಿಗೋಷ್ಠಿಯಿಲ್ಲದವಗೆ ಅಪವಾದ ಭೀತಿಯೆ ಸಿಂಧುಶಯನನರ್ಚಕಗೆ ಕಾಲನ ಭಯವೆ 2 ಪರಮ ಧಾರ್ಮಿಕನಿಗೆ ಬಡತನದ ಭೀತಿಯೆ ಪರವ ಸಾಧಿಪನಿಗೆ ಕಷ್ಟಗಳ ಭಯವೆ ಅರಿವಿಟ್ಟು ನಡೆವವಗೆ ದುರಿತದ ಭಯವಿಹುದೆ ಶರಣರೊಳಾಡುವಗೆ ನರಕಂದಜಿಕೆಯೆ 3 ತತ್ವದರ್ಥಿಕನಿಗೆ ಮಿಥ್ಯಶಾಸ್ತ್ರದ ಭಯವೆ ನಿತ್ಯನಿರ್ಮಲನಿಗೆ ಮಡಿ ಮುಟ್ಟು ಭಯವೆ ಸತ್ಯಸನ್ಮಾರ್ಗಿಕಗೆ ಮತ್ರ್ಯದವರಂಜಿಕೆಯೆ ಸತ್ಯರೊಳಾಡುವಗೆ ಮೃತ್ಯುವಿನ ಭಯವೆ 4 ಕೊಟ್ಟು ಹುಟ್ಟಿದವಗೆ ಹೊಟ್ಟೆ ಬಟ್ಟೆಯ ಭಯವೆ ಇಟ್ಟು ಹಂಗಿಸದವಗೆ ಹೊಟ್ಟೆ ಬೇನೆ ಭಯವೆ ಸೃಷ್ಟಿಯೊಳಗೆ ನಮ್ಮ ದಿಟ್ಟ ಶ್ರೀರಾಮನಡಿ ಮುಟ್ಟಿ ಭಜಿಪಗೆ ಮತ್ತೆ ಹುಟ್ಟುವ ಭಯವೆ 5
--------------
ರಾಮದಾಸರು
ದಾಸನಾದೆನು ಶ್ರೀಶ ದಾಸನಾದೆನು ವಾಸುದೇವನಂಘ್ರಿ ಪಿಡಿದು ಹೇಸಿ ವಿಷಯ ಸುಖವನಳಿದು ದಾಸನಾದೆನು ಶ್ರೀಶ ದಾಸನಾದೆನು ಪ ಭಾರ ಪೊತ್ತು ಕೋರೆಯಿಂದಲಿಳಿಯ ಪಿಡಿದು ಘೋರ ರೂಪವನ್ನು ತಾಳ್ದ ನಾರಸಿಂಹನನ್ನು ನುತಿಪ 1 ತಿರಿದು ನೋಡಿ ಪರಶುವಿಡಿದು ಭರದಿ ಪತ್ತು ತಲೆಯನಳಿದು ಮರಳು ಕಂಸನನ್ನೆ ತುಳಿದ ವರದ ಕೃಷ್ಣನನ್ನೆ ಭಜಿಪ ದಾಸ 2 ದಿಟ್ಟ ಶ್ರೀ ನರಸಿಂಹ ವಿಠ್ಠಲನ್ನ ಪಾಡುವಂಥ ದಾಸ 3
--------------
ನರಸಿಂಹವಿಠಲರು
ದಾಸರ ನೆರೆನಂಬಿರೊ ಚಲುವ ವಿಜಯದಾಸರ ನೆರೆನಂಬಿರೊ ಪ ದಾಸರ ನೆರೆನಂಬಿ ಯೇಸು ಜನ್ಮದ ಭವಪಾಶವ ಹರಿಸಿ ರಮೇಶನ್ನ ಮಹಿಮೆಯಲೇಸಾಗಿ ವಿರಚಿಸಿ ಪರಮೋಲ್ಹಾಸದಲಿ ಜೀ-ವೇಶ ಭೇದವ ಯೇಸು ಬಗೆಯಲಿ ತಿಳಿಯುತಲೆ ನೆರೆ-ದೋಷ ಬುದ್ಧಿಯ ನಾಶಗೈವರ ಅ.ಪ. ಇಂದು ನಿಜವು ಕಂದುಗೊರಳಮ-ರೇಂದ್ರವಂದ್ಯ ಮುಕುಂದನನು ಬಿಡ-ದಂದು ಭಜಿಪ ಪುರಂದರನ ಪದದ್ವಂದ್ವಯುಗಳರವಿಂದ ಮಧುಪರ ನಂದದಲಿ 1 ಕಂಟಕ ಬಂಧಹರವೆಂದು ಮನದಲ್ಲಿ ನೆರೆ ತಿಳಿದರಿಂದ || (ದುಡುಕು) ಪರಮ ಧನ್ಯರು ಧರಿಗೆ ಯಾದವ-ರರಸೆ ಪೊರೆವನು ಕರುಣದಲಿ ಭೂಸುರರಗುರುದೊರೆ ಮರುತ ಪೊರೆವನುಸುರರವರ ಕಾದಿಹರು ಯೆನಿಪರ2 ಸಿರಿ ಮಾ-ಧವ ಮೋಹನ ವಿಠಲರೇಯನಅವಸರದ ಕಿಂಕರರ ಭಜಕರು 3
--------------
ಮೋಹನದಾಸರು
ದಾಸರಾಗಿರೊ ವೈಷ್ಣವ ದಾಸರಾಗಿರೊ ದಾಸರಾಗಿ ಬಯಲಾಸೆಯ ನೀಗಿ ರ- ಮೇಶನ ಗುಣವಾರಾಶಿಯೊಳಿರಿಸುವ ಪ. ಸುಂದರ ಮಾನಾನಂದತೀರ್ಥಮತ ಸಾಂದ್ರ ಸುಖಾಂಬುಧಿಮಿಂದ ಮಹಾತ್ಮರ 1 ದಿವ್ಯಲೋಕಜನ ಭವ್ಯೋಭಯವಿಧ ಕಾವ್ಯರಚನ ಲಾತವ್ಯಯತೀಂದ್ರರ 2 ಸೀತಾಪತಿ ರಘುನಾಥನ ಮನದೊಳ- ಗಾತು ಭಜಿಪ ಗಣನಾಥ ಜನಕನ 3 ಶ್ರೀ ಮಹೇಶ ವಟು ವಾಮನ ಪದಯುಗ ಸಾಮಜವಾಹನ 4 ಕಾಕರಟನದೊಳ ಭೀಕರ ಮತವ ನಿ- ರಾಕರಿಸಿರುವ ಸುಧಾಕರ ಮೂರ್ತಿಯ 5 ತಂತ್ರ ದೀಪಿಕಾ ಯಂತ್ರವ ರಚಿಸಿದ ಮಂತ್ರಾಲಯವರ ಮಂತ್ರದೇವತೆಯ 6 ಗೋಪಿನಾಥನೆ ಭೂಪನೆಂದು ಸಂ- ತಾಪವ ಬಿಡಿಸುವ ಶ್ರೀಪಾದರ ಪದ 7 ಮಂದಕಲಿಯ ಕಾಲಿಂದಲೊರಿಸಿದ ಪು- ರಂದರದಾಸರ ಹೊಂದಿ ಹರಿಯ ನಿಜ8 ಸುಜನ ಹೃದಂಬುಜ ಸುಖಕರ ದಿನಮಣಿ ವಿಜಯರಾಜ ಪದ ಭಜನೆಯ ಮಾಡುತ 9 ಭಂಗುರ ಭವಭಯ ಭಂಗದ ಸುಗುಣ ತರಂಗನ ಒಲಿಸಿದ ಮಂಗಳ ಮಹಿಮರ 10 ಹರಿಕಥಾಮೃತದ ತೆರೆಗಳೊಳಾಡುವ ಪರತರಸಾರವ ಸುರಿದ ಮಹಾತ್ಮರ 11 ಸಿಡುಕರ ಸಂಸ್ಕøತಿ ಕಡಲೊಳು ಮುಳುಗಲು ಬಿಡದಲೆ ಕೈಪಿಡಿದೊಡೆಯನ ತೋರ್ಪರ 12 ಅರಿಷಡ್ವರ್ಗವ ತರಿದು ಬಿಸುಟು ಶ್ರೀ- ವರನ ಕೃಪಾರಸ ಸುರಿಸಿದ ಧನ್ಯರ 13 ಮೂಕನ ವಾಗ್ಮಿಯ ಮಾಡಿ ಮುರಾರಿಗೆ ಸಾಕ ಕೊಟ್ಟಿ ದೀನಾಕರದಾಸರ 14 ಮಾತಿಗೆ ಕಂಸಾರಾತಿನಲಿಯೆ ಜಗ ನ್ನಾಥರೆಂ¨ ವಿಖ್ಯಾತಿ ಪಡೆದವರ 15 ತಾಪತ್ರಯಗಳ ತಪ್ಪಿಸಿ ವೆಂಕಟ ಭೂಪನ ಸದಯಾರೋಪಗೈದವರು 16
--------------
ತುಪಾಕಿ ವೆಂಕಟರಮಣಾಚಾರ್ಯ
ದಾಸರಾಯ ವಿಜಯದಾಸರಾಯ | ದೋಷವೆಣಿಸದೆ ಸದಾ ಪೋಷಿಸು ಕರುಣದಿ ಪ ಸಕಲಜಗತ್ತಿಗೆ ಲಕುಮೀಶಪರೆನೆಂದು ಮಖವಾಚರಿಪ ಮುನಿ ನಿಕರಕೆÉ ಸಾರಿದ 1 ಜ್ಞಾನಿ ಶಿರೋಮಣಿ ಧೇನುಪಾಲಾರ್ಯರ | ಮಾನಸ ಕುಮುದಕೆÉ ಏಣಾಂಕನೆನಿಸಿದ 2 ಮುದ ತೀರ್ಥಾಗಮ ಮರ್ಮ ಮಧುರ ಕನ್ನಡದಲಿ ವಿಧ ವಿಧ ರಚಿಸಿದ ಸದಮಲ ಸುಚರಿತ್ರ 3 ಬೇಸಿಗೆ ಬಿಸಲೊಳು ರಾಸಭ ತೃಷೆಯಿಂದ | ಷಾಸಿಯಾಗಿರೆ ಜಲಪ್ರಾಶನಗೈಸಿದ ದಾಸರಾಯ 4 ನಿಷ್ಟೆಯಿಂದಲಿ ಮನ ಮುಟ್ಟಿ ಭಜಿಪರಿಗೆ ಇಷ್ಟಾರ್ಥಗರೆಯುವ ಪುಟ್ಟ ಬದರಿವಾಸ 5 ಪೊರೆವ ಚಿಪ್ಪಶಿಖರನಿಲಯ 6 ಪಾಮರನಾದೆನಗೆ ಶಾಮಸುಂಧದರ ಸ್ವಾಮಿ ನಾಮಾಮೃತಪಾನ ಪ್ರೇಮದಿ ನೀಡಯ್ಯ ದಾಸರಾಯಾ 7
--------------
ಶಾಮಸುಂದರ ವಿಠಲ