ಇಂದು ಎನ್ನ ಜನುಮ ಸಾಫಲ್ಯವಾಯಿತು |
ಬಂದು ಎನ್ನ ಮೊದಲೆ ಪುಣ್ಯ ಕೈಗೂಡಿತು ಧ್ರುವ
ಭಾನುಕೋಟಿ ತೇಜವಾಗಿ ರೂಪದೋರಿತು
ತಾನೆ ತನ್ನಿಂದೊಲಿದು ದಯವು ಬೀರಿತು
ಜ್ಞಾನ ಭಕುತಿ ವೈರಾಗ್ಯವನ್ನು ಅರುಹಿತು
ನಾನು ನೀನು ಎಂಬ ಅಹಂಭಾವ ಹರಿಯಿತು 1
ಎಂದು ಇಂದಿರೇಶನ ಕಾಣದ ಕಣ್ಣದೆರೆಯಿತು
ಬಂದು ಬೀಳುವ ಭವಪಾಶದ ಬಲಿಯು ಹರಿಯಿತು
ಚಂದವಾಗಿ ಸದ್ಗುರು ಕರುಣ ಮಳೆಯು ಗರೆಯಿತು
ಹೊಂದಿ ಹರುಷ ಪಡುವಾನಂದ ಪಥವು ದೋರಿತು 2
ಕಣ್ಣು ಕಂಡು ಪಾವನವಾಯಿತು ವಾಸುದೇವನ
ಎನ್ನ ಮನಸಿನಂತಾಯಿತು ಪುಣ್ಯಸಾಧನೆ
ಧನ್ಯಗೈಸಿತು ಮಹಿಪತಿ ಪ್ರಾಣಜೀವನ 3