ಒಟ್ಟು 299 ಕಡೆಗಳಲ್ಲಿ , 73 ದಾಸರು , 241 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸು ಪಾಲಿಸು ಪಾಲಿಸು ಸುಮನಾ ಪಾರ್ವತಿ ತಾಯೇ ಪ. ಪಾಲಿಸು ಶ್ರೀ ರಜತಾದ್ರಿನಿವಾಸಿ ಶೀಲಮೂರುತಿ ಶಿವಶಂಕರಿ ದೇಹಿಮೆ ಅ.ಪ. ಮನಕಭಿಮಾನಿ ಮಾನುನಿರನ್ನೆ ಸರ್ವ ತನುಮನನಿನಗರ್ಪಿಸಿಹೆನೆ ತಾಯೆ ಕಾಯೆ ಅನುದಿನ ನಿನ್ನಯ ಚರಣವ ಪೂಜಿಪ ಮನವಿತ್ತು ಕರುಣದಿ ನಿನ್ನ ತನುಜರಿಗೇ ನೀಡೆ 1 ಪಂಕಜಗಂಧಿನಿ ಪಂಕಜಾಕ್ಷಿಯೆ ಶಿವ ನಂಕದಿ ಅಲಂಕೃತ ಮಾತೆ ಸುಗೀತೆ ತಾಯೆ ಅಂಕುರವಾಗುವ ತೆರ ನಿನನಾಮವ ಕಿಂಕರರಿಗೆ ನೀಡಿ ದಯಮಾಡೆ ತಾಯೆ 2 ಶ್ರೀಶ ಶ್ರೀ ಶ್ರೀನಿವಾಸ ಸಹೋದರಿ ಈಶನೈಯ್ಯನೈಯ್ಯನೊಲಿಸುವ ಮರೆಯ ಶಂಕರಿ ಶುಭಕರಿ 3
--------------
ಸರಸ್ವತಿ ಬಾಯಿ
ಪಾಲಿಸು ಶಂಕರನೆ ಪಾರ್ವತಿ ಪತೆ ಪಾಲಿಸು ಶಂಕರನೆ ಪ. ಹರಚರ್ಮಾಂಬರ ಗೌರಿ ಮನೋಹರ ಸುರನರ ವಂದಿತ ಗರಳಕಂಧರನೆ 1 ಮನದಭಿಮಾನಿಯೆ ಸನುಮತದಲಿ ಎನ್ನ ಮನದಲಿ ಶ್ರೀ ಹರಿ ವನಜ ಪಾದವ ತೊರೋ2 ಪುಟ್ಟ ಮೊಮ್ಮಗ ನೀನೆ ತುಷ್ಟಿಯಿಂದಲಿ ಕಾಯೊ 3
--------------
ಅಂಬಾಬಾಯಿ
ಪಾಲಿಸೆನ್ನ ಪಾರ್ವತಿ ರನ್ನಾ ಪ ಪಾರ್ವತಿ ಪರ್ವತ ರಾಜಕುಮಾರಿಯೆ ಘನ್ನ ಅ.ಪ. ಸತಿ ಸುಮ್ಮನೆ-ದೊಳಗಿದ್ದು ಪರಿಪಾಲಿಸೆ ಬೊಮ್ಮನ ಸೊಸಿಯೆ 1 ಸತಿ ಅಂಬಕೇಶನ ಜನನಿ ಜಗದಂಬೆ ಭವಾನಿಯೆ 2 ಪಾದ ಸತಿ 3
--------------
ತಂದೆವರದಗೋಪಾಲವಿಠಲರು
ಪಾಲಿಸೆನ್ನ ಪಾರ್ವತೀಶ ಫಾಲಲೋಚನ ಲಾಲಿಸೆನ್ನ ನುತಿಯ ದೇವ ಕಾಲಕಂಧರ ಪ ಪುಲ್ಲನಯನ ಚಲ್ವವದನ ಮಲ್ಲಿಕಾರ್ಚಿತ ಬಿಲ್ವ ಪಲ್ಲವಾದಿಪ್ರಿಯನೆ ಶೈಲಜಾಪತೆ 1 ವಿನುತ ಪಂಕಜಪ್ರಿಯ ಸಂಕಟಾದ್ರಿ ದೇವರಾಜ ಲೋಕಪಾಲಕ 2 ಪಾಹಿ ಪಾಹಿ ಕಾಲಕಾಲ ಮೋಹನಾಶಕ ಸ್ನೇಹದಿಂದಲೆನ್ನ ಬಿಡದೆ ವಾಮದೇವನೆ 3 ಧಾನವಾಂತಕಾದಿ ಹೃದಯ ಜೀವ ರೂಪನೆ ಕಮಲ ಭಾನುರೂಪನೆ 4
--------------
ಬೇಟೆರಾಯ ದೀಕ್ಷಿತರು
ಪಾಲಿಸೆನ್ನ ಪಾಲಿಸೋ ಎನ್ನಾ ಪ ಪಾಲಿಸೆನ್ನ ಗುರು ಫಾಲನಯನಾಸುರಪಾಲನ ಪಿತ ಶ್ರೀ ಪಾರ್ವತಿರಮಣಅ.ಪ. ಲಿಂಗವೇರಿ ಸುರರಂಗದಿ ಚರಿಸುವ ಶಿರಿರಂಗನ ಪದ ಪವನನ ಭೃಂಗಾ 1 ಕವಿ ವಿನುತ ಪರರಾಳಿಯ ಪ್ರಿಯಬಾಲಾ 2 ನವಿಲನೇರಿ ಬರುತಿಪ್ಪನ ಪಿತತಂದೆವರದಗೋಪಾಲವಿಠಲನ ಆಪ್ತಾ 3
--------------
ತಂದೆವರದಗೋಪಾಲವಿಠಲರು
ಪಾಲಿಸೆನ್ನನು ಪಾಹಿ ಪಾರ್ವತೀಶ ಈಶ ಕಾಲಕರ್ಮವಿದೂರಪಾಪನಾಶ ಪ ಪರಮ ಪುರುಷ ಪರೇಶ ಪರಮಾತ್ಮ ಪರಿಪೂರ್ಣ ವರ ಪರಂಜ್ಯೋತಿ ರೂಪಾತ್ಮನೇ ಕರಿ ಚರ್ಮಧರ ಭಸ್ಮ ಭೂಷಣ ದಿಗಂಬರನೇ ಶರಣು ಜನಸುರಧೇನು ನಿಸ್ಸಂಗನೇ 1 ಉಮೆಯರಸ ಪಂಚವದನ ನಿರ್ಮಲನೆ ವಿಮಲತರ ಗಂಗಾಜೂಟಧರನೇ ಅಮಿತಬಲ ವೃಷಭವಾಹನನೆ ಶಾಶ್ವತನೆ ಕಮಲ ಪಿತ ಸುತ ಹರನೇ ಶಿವರೂಪನೇ 2 ವರವ್ಯಾಘ್ರ ಚರ್ಮಧರ ಇಂದುಶೇಖರ ಹರನೆ ಕರದಿ ಡಮರುಗಧರನೇ ಶೂಲ ಪಾಣಿ ಮೆರೆವ ನಾಗಾಭರಣ ಗಿರಿಜೆವರ ಯೋಗೀಶ ಮೂರ್ತಿ ಶ್ರೀ ಶಂಭು ಶಂಕರನೆ 3
--------------
ಕವಿ ಪರಮದೇವದಾಸರು
ಪಾಲಿಸೋ ಸದಾ ಪರಿಪಾಲಿಸೋ ಪಾಲಿಸೋ ಪಾರ್ವತಿ ರಮಣ | ತ್ರಿದ ನಾಲಿಗೆಯಿಂದಲಿ | ಶ್ರೀಲಕುಮೀಶನ ಕಾಲ ಕಾಲಕ್ಕೆ ಕೊಟ್ಟು ಅ.ಪ ಭೇಷಪಾವಕ ಪತಂಗ | ನಯನ ಭಾಸುರ ಸ್ಪಟಿಕ ನಿಭಾಂಗ | ಹರಿ ದಾಸ ಜನರ ಸುಸಂಗವಿತ್ತು ದೋಷ ಕಳೆಯೊ ರಾಮಲಿಂಗ ಆಹಾ 1 ಕೇರ ಕುಮಾರ ಕುಮಾರ | ಪಿತ ಕೀರನಾಮಕನವತಾರ |ಕೀರಾ ದೇವನ ಗರ್ವಪರಿಹಾರ | ತಾಟ ಕಾರಿನಾಮ ಸವಿಗಾರ | ಆಹಾ ಶರಧಿ ವೈಕಾರಿಕÀ | ತತ್ವಾಧಿ ಕಾರಿ ವಿಕಾರಿ ಷಕಾರ ಪದಾರ್ಚಕ 2 ನಂದಿವಾಹನ ನಾಗಶರನೆ | ನೀಲ ಸುರನದಿ ಧರನೆ | ಶಾಮ ಸುಂದರ ವಿಠಲನ ಸಖನೆ ಮಹಿ ಶ್ಯಂದನ ಶಿವಶಂಕರನೆ | ಆಹಾ ಒಂದೂರಾರ್ಯರ ಕರದಿಂದ ಪೂಜಿತನಾಗಿ ನಿಂದು ಭಜಿಪರಿಗಾನಂದವೀವ ದೇವ 3
--------------
ಶಾಮಸುಂದರ ವಿಠಲ
ಪಾಹಿ ಪದ್ಮದಳಾಯತಾಂಬಕ ಪಾಹಿ ಪದ್ಮಾರಮಣ ಪರಾತ್ಪರ ಪಾಹಿ ಪದ್ಮಾಸನ ಜನಕ ಮಾಂ ಪಾಹಿ ಪ್ರಪನ್ನ ಪಾಲಕ ಪ ವಾಸುದೇವ ಕೃತೀಶ ಶಾಂತಿಪ ಕೇಶವಾಚ್ಯುತ ವಾಮನ ಹೃಷೀಕೇಶ ಪ್ರಶ್ನಿಗರ್ಭ ಋಷಭ ನೃಕೇಸರಿ ಹಯಗ್ರೀವ ವೇದ ವ್ಯಾಸ ದತ್ತಾತ್ರಯ ಉರುಕ್ರಮಾ ವಾಸವಾನುಜ ಕಪಿಲ ಯಜ್ಞ ಮ ಹೇಶ ಧನ್ವಂತ್ರಿ ಹಂಸ ಮಹಿ ದಾಸ ನಾರಾಯಣ ಕೃಷ್ಣಹರೆ 1 ಮಾಧವ ಪ್ರದ್ಯುಮ್ನ ಶ್ರೀ ದಾಮೋದ ರಾಧೋಕ್ಷಜ ಜನಾರ್ದನ ಶ್ರೀಧರ ಶ್ರೀ ಪದ್ಮನಾಭ ವೃಕೋದರ ಪ್ರಿಯತಮ ತ್ರಿವಿಕ್ರ ವಿರಿಂಚಿ ವಿನುತ ಗದಾಧರ ಗಯಾಸುರ ವಿಮರ್ದನ ಸಾಧಿತ ಜಗತ್ರಯ ಪುರಾತನ ಪಾದ ಪರಮ ಕೃಪಾಂಬುಧೇ ಮಾಂ 2 ನಂದಗೋಪನ ಕುಮಾರ ಗೋಪಿ ವೃಂದ ಪೋಷಿತನಮಿತ ಸಂಕ್ರಂಡನ ಕೃಪಾ ಸಾಂದ್ರ ವರ ಕಾಳಿಂದಿ ತಟನಿ ವಿಹಾರ ಪಾಂಡವ ಬಂಧು ದ್ರೌಪದಿವರದ ನೃಪ ಮುಚು ಕುಂದಸ್ತುತಿ ಸಂಪ್ರೀತ ಲಕ್ಷ್ಮೀ ನಂದಮಯ ನಿಜ ಭಕ್ತವತ್ಸಲ 3 ಮೀನಕೂರ್ಮವರಾಹ ಪಂ ದಿತಿಸುತ ವಾಮನ ಕ್ಷೋಣಿಪಾರ್ವನ ಬ್ರಾಹ್ಮಣ ಪ್ರಿಯ ವನೌಕಸನಾಥ ಮುಖ್ಯ ಪ್ರಾಣಸಖ ವಸುದೇವ ದೇವಕಿ ಸೂನು ಸುಂದರಕಾಯ ಪುರಹರ ಬುದ್ಧ ಕಲ್ಕಿ ಪ್ರ ಧಾನ ಪುರುಷೇಶ್ವರ ದಯಾಕರ 4 ನಿಂತ ನಿಜಬಲ ಮಾತುಳಾಂತಕ ಶ್ವೇತವಾಹನ ಸೂತ ತ್ರಿಗುಣಾ ತೀತ ಭವನಿಧಿ ಪೋತ ಮೋಕ್ಷನಿ ಕೇತನಪ್ರದ ಭೂತಭಾವ ಧೌತ ಪಾಪ ವ್ರಾತ ತ್ರಿಜಗತಾತ ನಿರ್ಗತ ಭೀತ ಶ್ರುತಿ ವಿಖ್ಯಾತ ಭಕ್ತಿಸುವೇತನ ಪ್ರಿಯ ಭೂತಿದ ಜಗನ್ನಾಥ ವಿಠ್ಠಲ 5
--------------
ಜಗನ್ನಾಥದಾಸರು
ಪಾಹಿ ಪಾರ್ವತಿ ನಿನ್ನ ಪಾದವ ಪೊಂದಿಹೆಪ್ರೇಮದಿಂದಲಿ ಹರಿಯ ಪೂಜೆ ಮಾಡಿಸೆ ಪ ನಿತ್ಯ ಶ್ರವಣ ಮಾಡಿಸೆ 1 ಹರನ ತೊಡೆಯೊಳು ಪೊಳೆವ ಸರಸಿಜಾಕ್ಷಿಯೆಹರಿಯ ಬೋಧವ ಕೇಳಿ ಹಟವಗೆಲಿದೆಯೆ2 ಸರ್ವಮಂಗಳೆ ನಿನ್ನ ಶರಣು ಬಂದಿಹೆ ನಾನುಹರಿಯ ಗುಣಗಳ ವಾಣಿಯಲ್ಲಿರಿಸು ಕರುಣದಲಿ 3 ಹರಿಯ ಶಾಸ್ತ್ರದ ಸ್ಮರಣೆ ಮನದಿ ನಿಲ್ಲಿಸುಮರವು ಕೊಡದೆಲೆ ಹರಿಚರಣ ತೋರಿಸು 4 ಬಂದ ಭಕ್ತರ ಬಿಡುವುದಿಂದುಚಿತವೆಇಂದಿರೇಶನ ಮನದಿ ತಂದು ತೋರಿಸೆ 5
--------------
ಇಂದಿರೇಶರು
ಪಾಹಿಮಾಂ ಕಾರ್ತಿಕೇಯಾ | ಪಾರ್ವತಿಯ ಕುವರಾ ಪಾಹಿಮಾಂ ಕಾರ್ತಿಕೇಯಾ ಪ ಪಾಹಿ ಕರುಣಿಯೆ ಸುಬ್ರಹ್ಮಣ್ಯ ಅ ಸುಗುಣಾಭರಿತ ಶರಜಾ ಸಚ್ಚಿದಾನಂದ ಅಗಜೆಯ ಪ್ರಿಯ ತನುಜ ನಿಗಮ- ನಿತ್ಯ ಜಗೆದೊಡೆಯ ಪರಿಶುದ್ಧ ಪಾವನ ಮೃಗಧರನ ಸುತ ಸುಬ್ರಹ್ಮಣ್ಯ | ಪಾಹಿ | 1 ಬಾಲಾರ್ಕ ಕೋಟಿ ತೇಜ ನಿತ್ಯಾನಂದ ನೀಲಗ್ರೀವನ ಸುಧ್ವಜ ಖೂಳ ತಾರಕನೆಂಬ ಕಾಲ ಸುರಾಳಿಯಂಬುಧಿ ಚಂದ್ರ ವರಮುನಿ ಜಾಲವಂದಿತ ಸುಬ್ರಹ್ಮಣ್ಯ 2 ಭೂಸುರ ಪ್ರಿಯ ಸುಬ್ರಹ್ಮಣ್ಯ 3
--------------
ಬೆಳ್ಳೆ ದಾಸಪ್ಪಯ್ಯ
ಪ್ರಮಾಣ ಕೊಟ್ಟ ತರುವಾಯ ತಪ್ಪುವ ನೀನಲ್ಲ ಪ ಅಸುರ ತಾರಕನು ಸುಮನಸರ ಬಳಲಿಸುತಿರಲು ಬಿಸಿಗಣ್ಣವನ ತಪಸು ಹಾನಿಮಾಡಿ ಶಶಿವದನೆ ಪಾರ್ವತಿಯಲ್ಲಿ ಗರ್ಭವನಿಡಿಸಿ ಹಸುಳೆ ಕೈಯಿಂದ ರಾಕ್ಷಸನ ಕೊಲ್ಲಿಸಿದೆ 1 ಶಂಬರ ದೈತ್ಯಜನ ವರದಿಂದ ಅನಿಮಿಷ-ಕ ದಂಬವನು ಸೋಲಿಸಿ ಮೆರೆವುತಿರಲು ಅಂಬುತನಯುದರದಲ್ಲಿ ಹೊಕ್ಕು ಬೆಳೆದದು ಬಂಡು ಅಂಬರರು ನಲಿಯೆ ವನಶಿರವ ಚಂಡಾಡಿದಾ 2 ಮನಮುಟ್ಟಿ ನಿನ್ನನು ವಂದನೆಮಾಡಿ ನರಗೆ ಮನದ ತಾಪವ ಬಿಡಿಸಿ ಮುಕ್ತಿ ಕೊಡುವಾ ಸಿರಿ ವಿಜಯವಿಠ್ಠಲರೇಯನ ಅನುಸರಿಸಿ ಬಾಳುವಂತೆ ಏಕಚಿತ್ತವನೀವಾ 3
--------------
ವಿಜಯದಾಸ
ಪ್ರಾಣರಾಯ ನೀನಲ್ಲದೆ ಮತ್ತನ್ಯ |ಪ್ರಾಣರು ಜಗದೊಳುಂಟೇ ||ದೀನರಕ್ಷಕನೆಂಬ ಬಿರುದಿಗೆ | ಪ್ರೇಮಾದಿ (ಪ್ರೇಮದಿ)ನೀನೆ ರಕ್ಷಿಸಬೇಕೈ ಪರಾಕೈ ಪ ಭವ |ಬಂಧನ ಪರಿಹರಿಸೋ ಉದರಿಸೋ 1 ವಂದಿಪ ಶರಣರ ಪೊರೆಯಬೇಕೆನುತಲಿ |ಬಂದು ಬಾಗಿಸೋಪಿಲಿ ||ಛಂದದಿ ವನದೊಳು ನಿಂದಾದಲತ ಗೋ |ವಿಂದರಾಯವಲದೀ ನೀ ನಲಿದೀ 2 ಈಸು ಮಹಿಮೆಯನು ತುತಿಸಲು ಖಗಪಾರ್ವ |ತೀಶರಿಗಸದಳವೈ ||ಶ್ರೀಶ ಪ್ರಾಣೇಶ ವಿಠಲದ ದಾಸಾಗ್ರಣಿ |ಈ ಸಮಯದಿ ಪಾಲಿಸೋ, ಲಾಲಿಸೋ 4
--------------
ಶ್ರೀಶಪ್ರಾಣೇಶವಿಠಲರು
ಬರಿದೆ ಮೋಹದೊಳು ಬೆರೆದೆ ನಮ್ಮ ಗುರುವಾದಿರಾಜಾರ್ಯ ಚರಣಗಳ ಮರೆದೆ ಪ. ಸರ್ವಜ್ಞಗುರುಮತವ ನಿರ್ವಹಿಸಿ ಮಾಯಿಗಳ ಗಣಪತಿಶಕ್ತಿ ಪೂರ್ವದೇವತೆಗಳನು ಸರ್ವ ಪರರೆಂದೊರೆವ ದುರ್ವಾದಿಗಳ ಭಂಗಿಸಿ ಹಯವದನ- ಪರ ದೈವವೆನಿಸಿ ಮೆರೆವಂಥ ಪಾರ್ವತೀವರವಂದ್ಯಪದ ಪಾತ್ರನೆನಿಸದೆ 1 ಅಂತರ್ಬಹಿಃಶತ್ರು ಸಂತತಿಯ ಗೆಲುವ ತೋರಿಸುವ ಚಂತಿತಾಭೀಷ್ಟಗಳ ಪರಮಾಂತರಂಗದಿ ಕೊಡುವ ಕಂತುಕೃತ ಬಾಧೆಯನ್ನು ನಿಲದಂತೆ ಸಂತೈಸಿಸುವರನ್ನು ಕಾವ ಕ- ಲ್ಪಾಂತದಲಿ ಪವಮಾನನಾಗುವನ ಮರೆದೆ 2 ಮೂರಾರು ಎಂಬತ್ತು ಭಾರಿ ಕಲ್ಪಗಳಲ್ಲಿ ಶ್ರೀ ರಮಾರಮಣಪದ ವಾರಿಜಗಳನು ಭಜಿಸಿ ತೋರಿ ವೈಷ್ಣವ ತತ್ವ ಸಾರವನು ಸಮಧರಿಸಿ ಮಾರುತನ ಮತವೆ ಮಧುವೈರಿಪ್ರಿಯಕರವೆನಿಸಿ ಧೀರ ಕವಿ ಶುಭಕರವಜ್ಞಾನ ಸುಖ ಸಾರ ವೆಂಕಟಪತಿಯ ಮನದಿ ಧರಿಸಿರುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬಾರೆ ಪಾರ್ವತಿ ಸಾರೆ ಸುಖವ ತೋರೆ ನಿನ ದಯವ ಪ ಬಾರಿ ಬಾರಿಗು ಪ್ರಾರ್ಥಿಸುವೆನೆ ಸಾರಸಾಕ್ಷಿಯೆ ಸರ್ಪವೇಣಿಯೆ ಅ.ಪ ದಕ್ಷಕುವರಿಯೆ ಈಕ್ಷಿಸೆನ್ನನು- ಪೇಕ್ಷೆ ಮಾಡದಲೆ ಅಕ್ಷಿತ್ರಯನ ಸತಿಯೆ ಭಕ್ತರ ಕಷ್ಟ ಬಡಿಸುತಲಿ ಸೂಕ್ಷ್ಮ ಮತಿಯನಿತ್ತು ಕೃಷ್ಣನ ಸ್ತೋತ್ರಗಾನದಲಿ ಅ- ಪೇಕ್ಷೆಯೊದಗುವ ಮನವ ಪಾಲಿಸು ರಕ್ಷಿಸೀಗಲೆ ಭಕ್ತವತ್ಸಲೆ 1 ಮಂದಗಮನೆ ಮತ್ತೊಂದು ಪೇಳುವೆ ನಂದಿವಾಹನನಾ ಮುಂದೆ ಸ್ತುತಿಪ ಭಕ್ತವೃಂದ ವಿ- ದೆಂದು ಪೇಳಿದೆ ನಾ ಸುಂದರ ಶ್ರೀ ಹರಿಯ ಸೇವೆಗೆ ಪೊಂದಿಸೆನ್ನ ಮನ ಚಂದದಿಂದ ಪ್ರಾರ್ಥಿಸುವೆನೆ ಸುಂದರಾಂಗಿಯೆ ನಿನ್ನನನುದಿನ 2 ಕಮಲನೇತ್ರೆಯೆ ವಿಮಲ ಸದ್ಗುಣಗುಣಿಯೆ ಪಾರ್ವತಿ ಕಮಲಸಂಭವ ಭವಸುರಾರ್ಚಿತನ ಸ್ಮರಿಸುವ ಮತಿ ಹೃ- ತ್ಕಮಲದೊಳಗೆ ನಿಲಿಸುವಂತೆ ಮಾಡು ಸದ್ಗತಿ ಕಮಲನಾಭ ವಿಠ್ಠಲ ಕೊಡುವ ನೆನುತ ಕೀರುತಿ 3
--------------
ನಿಡಗುರುಕಿ ಜೀವೂಬಾಯಿ
ಬಿಂದುಮಾಧವ ಮಾಡÀದಿರೆನಗೆ ತಂದೆ ಭೇದವಕಂದುಗೊರಳಾಧೀಶ ಕಾಶಿಯ ಪುರವಾಸಕಂದನ್ನ ತಡೆಯದೆ ಕಾಯನುದ್ಧರಿಸೊ ಪ. ಮೋಕ್ಷದಾಯಕ ರಕ್ಷಿಸೊ ಎನ್ನ ಲಕ್ಷ್ಮೀನಾಯಕಕುಕ್ಷಿಯೀರೇಳು ಭುವನವ ತಾಳ್ವನಭಿಕ್ಷಾಪಾತ್ರ ಶಿವನ ಧ್ಯಾನದೊಳಿರಿಸೊ 1 ಪಾಪನಾಶನ ಪಾಲಿಸೊ ಎನ್ನಸಪರ್Àಭೂಷಣ ತಾತನೆಂದೆನಿಸಿ ತವ-ನಾಮಸ್ಮರಣೆಯ ಪಾರ್ವತೀಪತಿ ಯತಿ ಧ್ಯಾನದೊಳಿರಿಸೊ 2 ಆದಿಮೂರುತಿ ವಿಶ್ವೇಶ ವಿಷ್ಣು-ಪಾದವೆ ಗತಿ ವೀರನೆಂದೆನಿಸುವಸೋದೆಯ ಪುರವಾಸ ವಾದಿರಾಜವರದವಂದೇ ಹಯವದನ 3
--------------
ವಾದಿರಾಜ