ಒಟ್ಟು 317 ಕಡೆಗಳಲ್ಲಿ , 66 ದಾಸರು , 268 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾನ್ದಳದ ಬುಡವೆನಗೆ ಅತಿದೂರ ಬೆಳಕೇ ಮನ್ದಿರವು ಶುದ್ಧವಿದೆ ಬಾ ಇದರತಳಕೆ ಪ ಸುಂದರದ ಕಾಂತಿಯನು ಚೆಲ್ಲು ಈ ಮನೆಗೆ ಇಂದು ಬಾ ನಾಳೆಯೆನಬೇಡ ನನ್ನೆಡೆಗೆ ಅ.ಪ ಜನುಮದಂಚಿನ ಬೆಳಕು ನಿನ್ನದೇ ಗೊತ್ತು ನಲಿದು ಬಂದಿಹೆನೊಳಗೆ ನಾ ನಿನ್ನ ಸೊತ್ತು ನಿಲುಕದೆಡೆ ನಿಲಬೇಡ ಬಾ ನನ್ನ ಮುಪ್ಪೆ ಬಲಯುತನ ಮಾಡೆನ್ನ ಸುಜ್ಞಾನಚಿತ್ತೆ 1 ನೀ ಮಾತ್ರವಿತ್ತಲಿರೆ ನನ್ನೈದು ಗೆಳೆಯರು ನೇಮಯುತರಾಗುವರು ಸೊಗಬಾಳ್ವರು ನಾ ಮಾಳ್ಪುದೆಲ್ಲವೂ ನಿನ್ನದೇ ಆಗುವುದು ರಾಮಕೃಷ್ಣರ ನೆನಪು ನನಗೆ ದೊರಕುವುದು 2 ನೀನಿರದ ನನ್ನ ಮನೆ ಕಡುಕತ್ತಲೆಯ ಕೋಣೆ ನೀನಿರದೆ ನಾನಿರಲು ಫಲವೇನು ಕಾಣೆ ಕಾನನದ ಹೂವಿನಂತಿದ್ದೇನು ಫಲವಿಲ್ಲ ಜ್ಞಾನ ಹೊಂಬೆಳಕೆ ಮಾಂಗಿರಿರಂಗ ನೋಡೆ ಭಯವಿಲ್ಲ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಾರಯ್ಯ ಗುರುದೇವರಾಯ ಶ್ರೀ ಹರಿಯೆ ನಮ್ಮಯ್ಯ ಗುರು ಭಕ್ತಜನ ಪ್ರಿಯ ಧ್ರುವ ನೀರೊಳು ಪೂಕ್ಕು ನಿಗಮನ ತಂದಿ ಬಾರಯ್ಯ ಧರಿಯ ಬೆನ್ನಿಲಿ ಪೊತ್ತು ನಿಂದಿ ನೀ ಬಾರಯ್ಯ ಧಾರುಣಿಯ ಗೆದ್ದು ಹಿರಣ್ಯಕನ ಕೊಂದಿ ಬಾರಯ್ಯ ಎಂದೆನಯ್ಯ ಗುರುತಂದೆಬಾರಯ್ಯ 1 ಮೂರು ಪಾದವನಳಿದುಕೊಂಡಿ ನೀ ಬಾರಯ್ಯ ಶಿರಗಳನೆ ಚೆಂಡಾಡಿ ಸಿರಿ ತಂದಿ ಬಾರಯ್ಯ ಗಿರಿಯೆನೆತ್ತಿ ನಿಂದಿ ಬಾರಯ್ಯ ಶ್ರೀ ಹರಿ ಮುಕುಂದಯ್ಯ ಗೋವಿಂದ ಬಾರಯ್ಯ 2 ಬರಿಯ ಬೆತ್ತಲೆ ಆಗಿ ವ್ರತವಳಿದಿ ಬಾರಯ್ಯ ಏರಿ ಕುದುರಿಯನೆ ರಾವುತನಾದಿ ಬಾರಯ್ಯ ಪರಮಭಕ್ತರನು ಹೊರಿಯಲಿ ಬಂದಿ ಬಾರಯ್ಯ ಪರಿಪರಿ ರೂಪವಾದಯ್ಯ ತರಳ ಮಹಿಪತಿ ಪ್ರಾಣದೊಡೆಯ ಬಾರಯ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರೈ ನಿನ್ನ ಮುದ್ದು ಮೊಗವನು ತೋರೈ ಯದುಕುತಿಲಕ ಎಂ-ದೋರಂತೆ ಮುದ್ದಿಸಿ ಯಶೋದೆÉ ಕುಮಾರನ ಬಾಯೆಂದಳೈ ಪ. ಥೈ ಥೈ ಥೈ ಥೈ ಥೈಯಿಥೈಯಿ ಥೈಯಿ ಥೈಯಿ ಥೈಯಿಥೈ ಥೈ ಥೈಯೆಂದು ಕೃಷ್ಣನ ಪಾಡಿದಳೆ1 ಕೃಷ್ಣ ನಿನ್ನ ಮಕ್ಕಳಾಟಿಕೆ ಕಷ್ಟರಿಗೆ ಕಾಲಕೂಟವಾಯಿತುದುಷ್ಟದೈತ್ಯ ಮತ್ತ ಮಾತಂಗಗಳಟ್ಟುವ ಸಿಂಹದ ಮರಿಯೆ 2 ದೀಪ್ತೋಷ್ಣ ಕಿರಣನು ಬರೆ ಕತ್ತಲೆಯತ್ತಲೆ ಪೋಪುದುಮತ್ತಿತ್ತ ಸುತ್ತಮುತ್ತಸುಳಿವುದೆ ಚಿತ್ತಜನ ಪೆತ್ತ ಹರಿಯೆ 3 ಚೆಂದದ ನಿನ್ನ ಚೆಲ್ವ ಸಿರಿಮೊಗದಂದವನು ತನಗಿಲ್ಲವೆಂದುಕಂದಿಕುಂದಿದಳಿಂದಿರೆ ಮರುಳಾಗಿ ಕಂದ ನಿನ್ನ ಹೊಂದಿ ನಿಂದಳೊ 4 ಇಂಥ ಸಿರಿಹಯವದನ ನಿನ್ನಂಥದೇವನು ದಾವನುಪಂಥವೇ ನಿನ್ನಗೂಡೆ ಗುಣಮಣಿತಿಂತಿಣಿಯಂತೆ ನೀನು 5
--------------
ವಾದಿರಾಜ
ಬಾರೊ ಗೋಪಿನಾಥ ನಿನ್ನಗಲಿರಲಾರೆನೊ ಪ ಶೌರಿ ಅ.ಪ ವಾರಿಚರ ಕೂರ್ಮನೆ ಧಾರುಣಿ ತಂದನೆ ತೋರ ಕೊರಳ ಹಾರ ವರಮೃಗರೂಪನೆ 1 ಮೇದಿನಿ ಪಾಲಕರ ಕೊಂದು ವೈರಿ 2 ಬೆತ್ತಲೆ ನಿಂತು ದುಷ್ಕøತ್ಯ ಮಾಳ್ಪರ ಕೊಂದು ಉತ್ತಮ ತುರಗವೇರಿದ ಭೃತ್ಯವತ್ಸಲ ದೇವ 3 ವಿಜಯ ರಾಮಚಂದ್ರವಿಠಲರಾಯನೆ ಸುಜನ ವಂದಿತ ನಿನ್ನ ಭಜನೆಯ ಪಾಲಿಸೊ 4
--------------
ವಿಜಯ ರಾಮಚಂದ್ರವಿಠಲ
ಬಾಲಕನೆಂದೆತ್ತಿಕೊಂಡೆನೆ - ಗೋಪಾಲಕೃಷ್ಣನಬಾಲಕನೆಂದೆತ್ತಿಕೊಂಡೆನೆ ಪ ಬಾಲಕನೆಂದೆತ್ತಿಕೊಂಡರೆ - ವಾರೆ ಮಾಡಿ ಮೋರೆ ನೋಡಿಶ್ರೀಲತಾಂಗಿಯರ ಲೋಲ - ಮಾರನಾಟವಾಡಿ ಪೋದನೆ ಅ ಹೊತ್ತರೆದ್ದು ಮನೆಗೆ ಬಂದನೆ - ಯಶೋದೆ ಕೇಳೆ ಎತ್ತಿಕೊಂಡು ಮುತ್ತುಕೊಟ್ಟೆನೆಎತ್ತಿಕೊಂಡು ಮುತ್ತು ಕೊಟ್ಟರೆಮುತ್ತಿನ್ಹಾರ ಕೊರಳಿಗ್ಹಾಕಿಚಿತ್ತಜಾತ ಕೇಳಿಯಲ್ಲಿಬತ್ತಲೆ ನಿಂದೆತ್ತು ಎಂದನೆ1 ಗಂಡನಂತೆ ಮನೆಗೆ ಬಂದನೆ - ಯಶೋದೆ ಕೇಳೆಮಿಂಡನಂತೆ ಕಣ್ಣು ಹೊಡೆದನೆಪುಂಡಪೋಕರನ್ನು ಮೀರಿದುಂಡು ಕುಚಗಳನ್ನು ಪಿಡಿದುದಿಂಡುರುಳಿಸಿ ಒಂದುಸರಲಿಬಂಡನುಂಡು ಹಾರಿ ಪೋದನೆ 2 ಏಸು ಮೋಸ ಕಲಿತ ಜಾಣನೆ - ಯಶೋದೆ ಕೇಳೆವಾಸುದೇವ ಮಾಯಕಾರನೆಹಾಸುಮಂಚದ ಹಾಸುಗೆಯಲಿತೋಷದಿಂದ ಬಾಚಿ ಸೆಳೆದುಶೇಷನನ್ನು ಪೂಜಿಸೆಂದಶ್ರೀಶ ಬಾಡದಾದಿ ಕೇಶವ 3
--------------
ಕನಕದಾಸ
ಬಾಲಗೋಪಾಲನ ತೋರೆಲೆ ಲಲನೆ ಲೀಲೆಗಳಲ್ಲಿ ಮುದದಿಂದ ಪ ಕಾಲ ಕಳೆಯುತಿರೆ ಬಾಲೆಯರು ಕೇಳೆ ಪೇಳದೆ ಅಗಲಿದನೆಮ್ಮ ಬಲು ಲೋಲನಾಗಿಹನಿವನಮ್ಮ ಎಮ್ಮ ಮೇಲೆ ಅತಿ ಕಠಿಣನಮ್ಮ ಮೋರೆ ಕೀಳು ಮಾಡುವನಿವನಮ್ಮ ಕೋಪ ಜ್ವಾಲೆಯಿಂದುರಿಯುವನಮ್ಮ ಬಲು ಬಾಲನಾಗಿಹನಿವನಮ್ಮ ಗುಣ ಶಾಲಿ ಮಾತೆಯ ಕೊಂದನಮ್ಮ ಕಪಿ ಜಾಲದೊಳತಿ ಪ್ರಿಯನಮ್ಮ ಪರ ಬಾಲೆಯೊಳತಿ ಮೋಹವಮ್ಮ ಮಾಯಾ ಜಾಲವ ಬೀಸುವನಮ್ಮ ಬಲು ಕೀಳನು ಮೇಲು ಮಾಡುವನು ಇಂಥಾ 1 ಸಾರಸಾಕ್ಷನ ವಿರಹವನು ಸೈರಿಸಲಾರೆವೆ ಕರುಣದಲಿ ತೋರೆ ಕೋರುವೆವು ವಿನಯದಲಿ ಅವ ನೀರೊಳಗಡಗಿದನೇನೆ ದೊಡ್ಡ ಮೇರು ಬುಡದಲಿಹನೇನೆ ಅವ ಚಾರು ಸೂಕರನಾಗಿಹನೇನೆ ಅವ ಬಾರಿ ಕಂಭದಲಿಹನೇನೆ ವೇಷ ಧಾರಿ ಬ್ರಹ್ಮಚಾರಿಯೇನೆ ಕ್ಷಿತಿ ಪಾರಿಯೆನಿಸಿ ತಿರುಗುವನೆ ಅವ ಸೇರಿಹನೆ ಹನುಮನನು ಅಯ್ಯೋ ಜಾರ ಚೋರನಿವನಮ್ಮ ಮಾನ ಮೀರಿ ಬತ್ತಲೆ ನಿಂತಿಹನೇ ವಾಜಿ ಏರುತ ಓಡುತಲಿಹನೇ ಇಂಥಾ 2 ವೇಣು ವಿನೋದದಿ ಕುಣಿಯುತಲಿ ಕಾಣುವುದೆಂತು ಪ್ರಸನ್ನ ಮಾಧವನ ಮೀನ ರೂಪವ ತಾಳಿದನ ಬಲು ಪೀನ ಶರೀರ ಕಂಠನ ಧರೆ ಯಾನನದಲ್ಲಿ ಪೊತ್ತಿಹನ ದುಷ್ಟ ದಾನವನನು ಸೀಳಿದವನ ಭೂಮಿ ದಾನವ ಯಾಚಿಸಿದವನ ಭೃಗು ಮುನಿಯೊಳವತರಿಸಿದನ ಕಡು ಕಾನನದೊಳು ತಿರುಗಿದನ ಸವಿ ವೇಣು ಗಾನವ ಮಾಡಿದನ ಬಹು ಮಾನಿನಿ ವ್ರತಗಳನಳಿದವನ ಪ್ರಸ ನ್ನಾನನ ತುರಗವಾಹನನ 3
--------------
ವಿದ್ಯಾಪ್ರಸನ್ನತೀರ್ಥರು
ಬೃಂದಾವನಾನಂದ ಬಾ | ಬೃಂದಾರಕಾನಂದ ಬಾ ಪ ಮಂದಾಕಿನೀಪಾದ ಗೋಪೀಜನಾನಂದ ನಂದಾತ್ಮ ಗೋವಿಂದ ಬಾ ಅ.ಪ ನಂದನ ವನದಲ್ಲಿ ಬೆಳೆದ ಮಂದಾರಾ ಸುಂದರಿಯ ತಲೆಯ ಜಡೆಯ ಬಂಗಾರ ಮಂದಮಾರುತನಿಂದ ನಲಿವು ಶೃಂಗಾರ ಸಾರ 1 ಕತ್ತಲೆಯಲಿ ಹೊಳೆವ ರನ್ನದ ದೀಪ ಮತ್ತಗಾಮಿನಿಯರ ಸರಸ ಸಲ್ಲಾಪ ಎತ್ತೆತ್ತ ಸಡಗರ ಸೊಗದ ಪ್ರತಾಪ ತಾಪ 2 ಗೋಪಾಲ ಘನಲೀಲ ಬಾ ಮುರಹರ ತಾಪತ್ರಯಕಾಲ ಬಾ ಪರಂಧಾಮ ದಿತಿಸುತಭೀಮಾ ಆಪತ್ಸಖಾ ಭಕ್ತಪಾಲಾ ಮಾಂಗಿರಿನಾಥ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೆಳಗಾಗಲೆದ್ದೆ ನಾನೀಗ ಜಾಗ್ರದಲಿಮಲಗಿದ್ದು ನಿದ್ರೆ ತಿಳಿವನಕ ರಾತ್ರೆಯಲಿ ಪಬ್ರಹ್ಮ ತಾನೆಂದೆಂಬ ಭಾನು ಬಳಿಕಸ್ತ'ುಸೆಹಮ್ಮೆಂಬ ಸಂಜೆಗತ್ತಲೆಯಡರಲುಉಮ್ಮಳಿಪ 'ಷಯ ರೂಪದ ಮಾಯೆ ನಡು'ರುಳುಜುಮ್ಮೆನುತ ಮೈಮರೆದ 'ದ್ಯೆಯಲಿ ಮುಳುಗಿ 1ಕೃಷ್ಣಪಕ್ಷದ ಕಡೆಯ ದಿವಸ ನಡುರಾತ್ರಿಯಲಿದಟ್ಟ'ಪ ಮೇಘಮಂಡಲದ ತೆರದಿಇಟ್ಟೆಡೆಯ ಕಾಮದಲಿ ಮನಮುಳುಗಿ ಮತ್ತಲ್ಲಿಮುಟ್ಟಿ ಕರ್ಮವ ಮಾಡಲದು ಕಣ್ಣುಮುಚ್ಚಿರಲು2ಸತ್ಯ ಜಗವೆಂದೆಂಬ ವರುಷ ಋತು ದಾಟಿದುದುನಿತ್ಯವಲ್ಲದ ಮಾಯೆ ನಿಶಿ ತೆಗೆದುದುಪ್ರತ್ಯಗಾತ್ಮಜ್ಯೋತಿ ಸೂರ್ಯತಾನುದಿಸಿದನುಮುತ್ತೆರದಹಂಕಾರ ನಿದ್ರೆ ಲಯವಾಯ್ತು 3ಗುರು'ನಂಘ್ರಿಗೆ ನ'ುಸಿದರುಣ ತಾನುದಿಸುತಿರೆಗುರುತರದ ಮೋಹಾಂಧಕಾರ ಬಳಿಕಹರಿದು ಬೆಳಕಾವರಿಸಿ ಗುರು'ನುಪದೇಶರ'ಸ್ಫುರಿಸಿ ಸರ್ವತ್ರ ತಾ ನಿಬಿಡವಾಗಿರಲು 4ತಿರುಪತಿಯ ವೆಂಕಟನ ಚರಣಕಮಲವನೊಮ್ಮೆಕರಣದೊಳಗಪ್ಪಿ ಕನಸಿನ ಕಡೆಯಲಿಹರಿದುಹೋುತು ಕನಸು ಸ್ಥಿರತೆನಿಂತಿತು ನಿಜವುಮರಳಿ ಕನಸನು ಕಾಣದಂತಾುತೀಗ 5
--------------
ತಿಮ್ಮಪ್ಪದಾಸರು
ಬೆಳಗಾಗಲೆದ್ದೆ ನಾನೀಗ ಜಾಗ್ರದಲಿಮಲಗಿದ್ದು ನಿದ್ರೆ ತಿಳಿವನಕ ರಾತ್ರೆಯಲಿಪಬ್ರಹ್ಮ ತಾನೆಂದೆಂಬ ಭಾನು ಬಳಿಕಸ್ತ'ುಸೆಹಮ್ಮೆಂಬ ಸಂಜೆಗತ್ತಲೆಯಡರಲುಉಮ್ಮಳಿಪ 'ಷಯ ರೂಪದ ಮಾಯೆ ನಡು'ರುಳುಜುಮ್ಮೆನುತ ಮೈಮರೆದ 'ದ್ಯೆಯಲಿ ಮುಳುಗಿ1ಕೃಷ್ಣಪಕ್ಷದ ಕಡೆಯ ದಿವಸ ನಡುರಾತ್ರಿಯಲಿದಟ್ಟ'ಪ ಮೇಘಮಂಡಲದ ತೆರದಿಇಟ್ಟೆಡೆಯ ಕಾಮದಲಿ ಮನಮುಳುಗಿ ಮತ್ತಲ್ಲಿಮುಟ್ಟಿ ಕರ್ಮವ ಮಾಡಲದು ಕಣ್ಣುಮುಚ್ಚಿರಲು2ಸತ್ಯ ಜಗವೆಂದೆಂಬ ವರುಷ ಋತು ದಾಟಿದುದುನಿತ್ಯವಲ್ಲದ ಮಾಯೆ ನಿಶಿ ತೆಗೆದುದುಪ್ರತ್ಯಗಾತ್ಮಜ್ಯೋತಿ ಸೂರ್ಯತಾನುದಿಸಿದನುಮುತ್ತೆರದಹಂಕಾರ ನಿದ್ರೆ ಲಯವಾಯ್ತು3ಗುರು'ನಂಘ್ರಿಗೆ ನ'ುಸಿದರುಣ ತಾನುದಿಸುತಿರೆಗುರುತರದ ಮೋಹಾಂಧಕಾರ ಬಳಿಕಹರಿದು ಬೆಳಕಾವರಿಸಿ ಗುರು'ನುಪದೇಶರ'ಸ್ಫುರಿಸಿ ಸರ್ವತ್ರ ತಾ ನಿಬಿಡವಾಗಿರಲು4ತಿರುಪತಿಯ ವೆಂಕಟನ ಚರಣಕಮಲವನೊಮ್ಮೆಕರಣದೊಳಗಪ್ಪಿ ಕನಸಿನ ಕಡೆಯಲಿಹರಿದುಹೋುತು ಕನಸು ಸ್ಥಿರತೆನಿಂತಿತು ನಿಜವುಮರಳಿ ಕನಸನು ಕಾಣದಂತಾುತೀಗ5
--------------
ತಿಮ್ಮಪ್ಪದಾಸರು
ಬೆಳುದಿಂಗಳ ಪ್ರಭೆ ಬಲು ಕಾಂತಿಯಿರಲುಬಲವನು ದುರ್ಗುಣಕೆ ಹತ್ತಬಹುದೇಬೆಳಗುತ್ತ ಜ್ಞಾನದ ಚಂದ್ರನು ಹೊಳೆದಿರೆಬಳಿಕ ಜನನ ಮರಣ ಮುತ್ತಬಹುದೆ ಪ ಬಹು ಬೆಳಕು ಬೆಳಗಲು ಮನದ ಮರ್ಕಟವದುಮರವ ನೇರದೆ ಕೆಳಗೆ ನಿಲ ಬಲ್ಲುದೆಬಹು ಕಾಮವೆಂಬ ಕಾಗೆ ಕಣ್ಣುಡುಗಲುಗೂಡಿನಿಂದಾ ಹೊರಗೆ ಬರಬಲ್ಲದೆ1 ಚೆಲ್ಲಿರೆ ಕಾಂತಿಯು ಕಳ್ಳರಾರ್ವರ ತಲೆಚೆಂಡಾಡದೆ ತಾನು ಸುಮ್ಮನಿಹುದೆಫುಲ್ಲ ತಿಂಗಳ ಬೆಳಕು ಎಲ್ಲೆಡಗೆ ಹರಡಿರೆಪಂಚ ವಂಚಕರು ಓಡದಿಹರೆ2 ಒಲಿದರೆ ತೇಜವು ಅವಿದ್ಯದ ಕತ್ತಲೆಯುತಾನೋಡದೆ ಅಲ್ಲಿ ನಿಲಬಲ್ಲುದೆಬಲು ಕಳೆ ಚಿದಾನಂದಗುರು ತಾನು ಬೆಳಗುತಿರೆಬಹಳ ಜನ್ಮದ ಪಾಪ ಹರಿಯದಿಹುದೇ3
--------------
ಚಿದಾನಂದ ಅವಧೂತರು
ಬ್ಯಾಡ ಬ್ಯಾಡಿರೆಂದ ಅವರೊಳು ಪಂಥಬ್ಯಾಡ ಬ್ಯಾಡಿರೆಂದು ಬ್ಯಾಡ ಬ್ಯಾಡ ಪಂಥ ನೋಡಿಕೊ ರುಕ್ಮಿಣಿಮಾಡೋರು ಮುಖಭಂಗಬೇಡಿಕೊಂಡೆನು ಭಾವೆ ಪ. ಹರದೆಯರಾಡಿದ ಮಾತು ಹರಿಯು ಕೇಳುತಬೇಗ ಕರೆಯ ಹೋಗೆಂದ ಮಡದಿಯರ ಕರಿಯ ಹೋಗೆಂದ ಮಡದಿಯರ ದ್ರೌಪತಿಯೆಸರಿಯಲ್ಲ ಪಂಥ ಬಿಡಿರೆಂದ1 ಹಾದಿ ಬೀದಿಯ ಮಾತು ಸಾಧಿಸುವರೆ ನೀವುವೇದಾಂತ ಮಳೆಯ ಗರೆದಾರುವೇದಾಂತ ಮಳೆಯ ಗರೆದಾರು ನಿಮ್ಮ ಮುಖಆದೀತು ಸಣ್ಣ ಸಭೆಯೊಳು 2 ಅತ್ತಲಿತ್ತಲೆ ಮಾತು ಜತ್ತು ಮಾಡೋರೆನೀವುಶ್ರುತ್ಯರ್ಥವೆಲ್ಲ ಸುರಿಸೋರುಶ್ರುತ್ಯರ್ಥವೆಲ್ಲ ಸುರಿಸೋರು ನಿಮ್ಮಮುಖ ಬತ್ತೀತು ಒಂದು ಕ್ಷಣದಾಗೆ 3 ಮಂದರಧರ ತನ್ನ ತಂಗಿಯರ ಕರೆಯೆಂದು ಮಂದಹಾಸದಲಿ ನುಡಿದನುಮಂದಹಾಸದಲಿ ನುಡಿದನು ಭಾವೆರುಕ್ಮಿಣಿ ಬಂದರು ಭಾಳೆ ವಿನಯದಿ4 ಆರು ಮಂದಿ ಹರಿಯ ನಾರಿಯರುಹದಿನಾರು ಸಾವಿರ ಮಂದಿ ಸಹಿತಾಗಿಹದಿನಾರು ಸಾವಿರ ಮಂದಿ ಸಹಿತಾಗಿ ಬಂದರು ನಾರಿ ದ್ರೌಪದಿಯ ಕರೆಯಲು5 ನೂರುಮಂದಿ ಹರಿಯನಾರಿಯರುತಂತಮ್ಮ ಹಾರಭಾರಗಳ ಅಲವೂತಹಾರಭಾರಗಳು ಅಲವೂತ ಬಂದರು ನೀರೆ ಸುಭದ್ರೆಯು ಕರೆಯಲು 6 ಪನ್ನಂಗ ವೇಣಿಯರು ಮನ್ನಿಸಿ ಹರಿಯಾಜ್ಞೆಚನ್ನ ರಾಮೇಶನ ಮಡದಿಯರು ಚನ್ನ ರಾಮೇಶನ ಮಡದಿಯರು ಬಂದರುಕನಿ ದ್ರೌಪತಿಯ ಕರೆಯಲು 7
--------------
ಗಲಗಲಿಅವ್ವನವರು
ಭಕುತರ ರಿಣಕಂಜಿ ಅಡಗಿದರೇ | ಅಖಿಳದಿ ಬಿಡುವರೇ ಪ್ರಕಟಿಸಿ ಬಾ ರಂಗಯ್ಯಾ ಪ ಕತ್ತಲೆಯೊಳು ಹೆಜ್ಜೆ ದೋರದೇ ತಿರುಗುತಾ | ಮತ್ತೆ ದೊಡ್ಡ ಬೆಟ್ಟದಾ ಮರಿಲ್ಯಾಡುತಾ | ಅತ್ತಿತ್ತ ನೋಡದೆವೆ ಝುಡಪಿನೊಳಗ ಹೊಕ್ಕು | ಉತ್ತಮ ನರಮೃಗದಂತಡವಿಯ ಸೇರಿ1 ಬಡತನ ದೋರಲೆಂದು ಯಾಚಕನಾದರೇನು | ಕಡಲ ಬೊರಿಯಾ ಮನೆ ಮಾಡಿರಲೇನು | ಜಡೆಗಟ್ಟ ನಾರ ಸೀರೆನುಟ್ಟು ಉಪವಾಸ ಮಾಡಿ | ಗಿಡವೇರಿ ಮಡುಹೊಕ್ಕು ಕಳವಿಲಿ ತಿರುಗುತಾ 2 ಮುನಿಯಂತೆ ದಿಗಂಬರ ರೂಪವ ತಾಳಲೇನು | ಜನದ ಕಲಿಕೀ ಮಾತು ಕಡೆಗಾಣುದೇ | ಘನಗುರು ಮಹಿಪತಿ ಸುತ ಪ್ರಭು ನಿನ್ನೊಳಿದ್ದಾ | ಸಂತೈಸಿ ಶರಣರ ರಕ್ಷಿಸಯ್ಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಕುತಿಯಲಿ ಭಜಿಸಿ ಹರಿಯ ಸುಖಿಸಬಾರದೇ ಪ ಪ್ರಕಟದಿ ಸಜ್ಜನ ನಿಕಟದಿ ತಾಮಸ| ಶಕಟ ಮುರಿದ ಸುರ ಮುಕುಟ ಮಣಿಯಾ ಅ.ಪ ತರಣೀಯಾ ಕೋಟಿ ಪ್ರಕಾಶದಿ ಧರಣಿಯಾ ರಮಣನ ನಾಮ| ಕರಿ ಕಿರಿಯನೆ ಶಿರಿ| ಗರುಡಗರಿಯದೇ ಭರದಿ ತಾ ಬರುತದೆ ಶರಣರಾ ಹೊರೆದ 1 ಮರುವಿನ ಕತ್ತಲೆ ನೂಕುವ ಚರಣವ ಅರವಿನ ದೀಪವ ಹಚ್ಚಿ| ಕುರುವಿನಾ ಚಿನ್ಮಯ ನೊಡಲು ಗುರುವಿನಾ| ಚರಣವ ಪೂಜಿಸಿ ಕರುಣವ ಸಾಧಿಸಿ ತರುಣೋಪಾಯದ ಚರಣವ ಬಲಿಯೋ 2 ಮನವಧಾನದಿ ನಿಲಿಸಿ ತನುವನಾ ಸೇವೆಗರ್ಪಿಸಿ| ಘನವನು ಮಾಡುತಾ ಸುಜನರಾ ಅನುವನು ಕನಸಿಲೇ| ಘನ ಗುರು ಮಹಿಪತಿ-ಜನ ಪ್ರಭುವಿನ ಅನುದಿನದಲಿ ಪಾಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಕ್ತಜನ ಸಂರಕ್ಷಣ ಪ ಭಕ್ತಜನ ಸಂರಕ್ಷ ಭವದುರಿತ ಸಂಹಾರಿ ಭಕ್ತರಾ ಸುರಧೇನು - ತರುವೆ ಚಿಂತಾಮಣಿಯೆ ಪೊತ್ತ ತಿಮ್ಮಪ್ಪ ಏಳೊಅ.ಪ. ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು ಇಂಬಿನಲಿ ತಲೆದೋರೆ ಕಿರಣಗಳು ಹರಹಿದುವು ತಾರಾ ನಿಕರವಂಬರದಿ ರೂಹುಮಾಸೆ ಕುಂಭಿಣಿಯ ಮುಸುಕಿರ್ದ ಕತ್ತಲೆ ಪರಿದು ಪೋಗೆ ಅಂಬುಜದಳಕ್ಕೆ ಮರಿದುಂಬಿಗಳು ಎರಗಿದವು ಸರಸಿಜಾಂಬುಕ ಮಂಚದಿಂದೇಳೊ 1 ಉದಯ ಪರ್ವತಕೆ ರಥನೂಕಿದನು ಮಾರ್ತಾಂಡ ಉರಗ ಪೆಡೆಯೆತ್ತಿದನು ಭಯದಿಂದ ಅಡಗಿದರು ದಶದಿಕ್ಕಿನೊಳಗೆ ತ್ರಿದಶರಬ್ಬರಿಸಿ ಆನಕ ದುಂದುಭೀ ಶಂಖ ಧಂ ಧಂ ಧಣಾ ಸರಿಗಮಪದನೀ ಯೆಂದೆನುತ ತುರೆಸಿದರು ಸದಮಲಾನಂದ ತಿಮ್ಮಾ 2 ನಾರಿಯರು ಬಂದು ಅಂಗಳ ಬಳಿದು ಗಂಧದಾ ಸಾರಣಿಯದೆಳೆದು ಮುತ್ತಿನ ರಂಗವಾಲೆ ವಿ- ಮಕರ ಕನ್ನಡಿ ದ್ವಾರದಲಿ ಬಿಗಿದರ್ಥಿಯಲಿ ಗೊಲ್ಲ ಕಟ್ಟಿಗೇ- ಕಾರ ಪರಿವಾರದವರೆಲ್ಲ ವೊಪ್ಪುತಿದಾರೆ ಕಂಸಾರಿ ಕೋನೇರಿವಾಸ 3 ನೃತ್ಯಗಾರರು ಬಂದು ತತ್ಥಿಗಿಣಿ ತಕ್ಥೈಯ ತಿತ್ತಿರಿ ಮೃದಂಗ ಜೊತೆ ತಪ್ಪದಂದದಿ ತಾಳ ಬತ್ತೀಸರಾಗದಲಿ ಎತ್ತಿ ಧ್ವನಿತೋರುತ್ತ ನೃತ್ಯ ಪಾಡುತ್ತ ಕುಣಿಯೆ ಮುತ್ತೈದೆಯರು ಬಂದು ಮುತ್ತಿನಾರತಿ ಪಿಡಿದು ಮಿತ್ರಭಾವದಿ ನಿಮ್ಮ ಅಡಿಗಳಿಗೆ ಹರಿವಾಣ ನೋಡುತ್ತಿದಾರೆ ಸರ್ವೇಶ4 ಕಾದೋದಂ ವಿಮಲ ಕಮ್ಮೆಣ್ಣಿ ಕಸ್ತೂರಿ ಸ್ವಾದು ಜವ್ವಾಜಿ ಚಂದನ ಗಂಧ ದ್ರವ್ಯಗಳ ಹೇಮ ಪಾದುಕಾ ಪಟ್ಟುವಸನ ಈ ಧರೆಯ ಮೇಲಿರ್ದ ಉಡಿಗೆ ತೊಡಿಗೆಯು ಕರ್ಪು ರಾದಿ ತಾಂಬೂಲ ನಿರ್ಮಲ ದಾದಿಯರು ಪಿಡಿದು ಮುಂದೆ ಆದಿಹರಿ ಪರಮಪುರುಷ 5 ದಂಡಿಗೆ ಶಂಖತಾಳ ತಂಬೂರಿ ಜಾಂಗಟೆಯ ಗೊಂಡು ನಿನ್ನಯ ಪರಮ ಪ್ರೀತ್ಯರ್ಥ ದಾಸರು ಬೊಮ್ಮಾಂಡ ಕಟಹÀ ಬಿಚ್ಚುವಂತೆ ತಂಡ ತಂಡದಿ ಗೆಜ್ಜೆಕಟ್ಟಿ ಅಭಿನಯ ತಿರುಹಿ ಕೊಂಡಾಡೆ ಶಬ್ದ ಪ್ರತಿ ಶಬ್ದವಾಗುತಿದೆ ಭೂ- ಬಲ್ಲವರಾರು ಕುಂಡಲಗಿರಿವಾಸ ತಿಮ್ಮಾ 6 ಗೋತ್ರಾರಿ ಹರಿಧರ್ಮ ಪುಣ್ಯಜನಪನು ವರುಣ ವೀತಿಹೋತ್ರನ ಸಖನು ಯಕ್ಷೇಶ ಕೈಲಾಸ- ಸೂರ್ಯ ಚಿತ್ತದಲಿ ಮುಖ್ಯರಾದ ವಿಶ್ವ - ಮಿತ್ರ ಸನಕಾದಿಗಳು ನಾರದರೆ ಮೊದಲಾಗಿ ಸ್ತೋತ್ರವನು ಮಾಡುತಲಿದ್ದಾರೆ ಲಕ್ಷ್ಮೀಕಳತ್ರ ಜಗದ್ಭರ್ತ ತಿಮ್ಮಾ 7 ನಿಚ್ಚ ಏಳುವ ಸಮಯ ಮೀರಿತೋ ಇಂದೀಗ ಎಚ್ಚರಿಕೆ ಪುಟ್ಟದೇ ಎಲೋ ದೇವ ಶ್ರೀದೇವಿ ಮೆಚ್ಚಿಸಿದ ಮಹಸರಸವೆ ಮುಚ್ಚಟೆಯಿದೇಂ ತಿಳಿಯಲಾಗದೆ ಸ್ವಾಮಿ ಸೊಲ್ಲು ಕರ್ಣಕೆ ಬೀಳದಾಯಿತೆ ಕಾಣೆ ಸಚ್ಚಿದಾನಂದಾತ್ಮಕ 8 ನಿದ್ರೆಗೆವೆ ಹಾಕದಿರೊ ನೀರೊಳಗೆ ನೀನಿರೊ ಉ- ಪದ್ರ ಭೂಮಿಗೆ ಕಳೆಯೊ ಕಶ್ಯಪನ ಸುತನಳಿಯೊ ಸ- ಮುದ್ರ ರಾಣಿಯ ಪಡೆಯೊ ರಾಯರಾಯರ ತÀಡೆಯೊ ಮುದ್ರೆ ಭೂಮಿಜೆಗೆ ಕಳುಹೊ ಅದ್ರಿಯುದ್ಧರಿಸೊ ಮುಪ್ಪುರವ ಸಂಹರಿಸೊ ಕಲಿ- ಕ್ಷುದ್ರ ಕಳೆ ನಿದ್ರೆ ಸಾಕೆಂದು ಶುಕ್ತಿ ಸಾರುತಿದೆ ವೆಂಕಟಕಾದ್ರವೇಯ ಹಾಸಿಗೆಯಿಂದೇಳು 9
--------------
ವಿಜಯದಾಸ
ಭಗವಂತನ ಸಂಕೀರ್ತನೆ ಇಂಥಾವಗ್ಹ್ಯಾಂಗೆ ಮನಸೋತೆ ಬಲು ಪಂಥವಾಡಿದ ಜಗನ್ಮಾತೆ ಪ. ಆವಾಗ ನಾರುವ ಮೈಯ್ಯ ಬಿಚ್ಚಿ ತೋರಿ ನಲಿಯುವ ಕಾಲು ಕೈಯ್ಯ ಕೋರೆಯ ಮಸೆಯುತ ಕೊಸರಿಕೊಂಡಸುರನ ಕರುಳನು ಬಗೆದಂಥ ಅದ್ಭುತ ಮಹಿಮಗೆ 1 ಬಡಬ್ರಾಹ್ಮಣನಾಗಿ ತಿರಿದ ತನ್ನ ಹಡೆದ ತಾಯಿಯ ಶಿರವರಿದ ಮಡದಿಗಾಗಿ ದೊಡ್ಡಡವಿಯೊಳ್ಮನೆ ಕಟ್ಟಿ ಬಿಡದೆ ಸ್ತ್ರೀಯರ ಗೋಕುಲದಲ್ಲಿ ಮೆರೆದ 2 ಬತ್ತಲೆ ನಿಂತಿದ್ದನೀಗ ತೇಜಿ ಹತ್ತಿ ಮೆರೆವದೊಂದು ಯೋಗ ಉತ್ತಮ ಹೆಳವನಕಟ್ಟೆ ಶ್ರೀರಂಗ ಭಕ್ತವತ್ಸಲ ಸ್ವಾಮಿ ದೇವಕೃಪಾಂಗ 3
--------------
ಹೆಳವನಕಟ್ಟೆ ಗಿರಿಯಮ್ಮ