ಏನು ಪುಣ್ಯವ ಮಾಡಿದೆನೋ ಮುನ್ನೆ |
ಧನ್ಯಗೈಸಿದ ಗುರು ಮಹೀಪತಿ ತಾನು ಪ
ವಿಜಯಗ್ಹೇಳಿದ ಹರಿ ಗೀತೆಯಲಿ |
ಸುಜನ ಸಂತರೊಳು ದುರ್ಲಭನೆನಲಿ 1
ಎನ್ನಯ ಸಿರದಲಿ ಅಭಯಕರವಿಟ್ಟು |
ಚೆನ್ನಾಗಿ ಹೇಳಿದ ಸುಜ್ಞಾನ ಗುಟ್ಟು 2
ಕಣ್ಣುದೆರೆಸಿ ಭಕ್ತಿ ಮಾರ್ಗದಲಿ |
ಸಣ್ಣವನೆಂದು ಚಿದ್ಭನದೋರಿಸಲಿ 3
ಇನ್ನೊಬ್ಬರಾಶೆ ಏತಕೆ ಎನಗಿನ್ನು |
ಎನ್ನ ಹಂಬಲಿಸಿದಾಶೆಯ ಕಾಮಧೇನು 4
ತಂದೆ ತಾಯಿ ಗುರು ಬಂಧು ಬಳಗಾಗಿ |
ಕಂದಗೊಲಿದ ನಿಂದು ತನ್ನಯ ಹೊಣೆಯಾಗಿ 5