ಒಟ್ಟು 770 ಕಡೆಗಳಲ್ಲಿ , 82 ದಾಸರು , 598 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗದಾಭಿರಾಮನಿಗೆ ಮಿಗಿಲಾರು ಲೋಕದೊಳಗೆ ಪ ವರ ವಾಲ್ಮೀಕಿ ಮುನಿಯು ಮುರನೆಂದು ಸ್ಮರಿಸಿದದಕೆ ಕರುಣಾಳು ನೀನಾವದಕೆ ತ್ವರ ಕೃಪೆಯ ಮಾಡಿದದಕೆ 1 ಪರಮಾಂಜನೆಯ ಸುತಗೆ ಸ್ಥಿರ ಪದವಿಯ ನಿತ್ತದದಕೆ ಧರಣೀಶ ತವ ಚರಣಕೆ ಶಿರಬಾಗಿ ಬೀಳ್ವದದಕೆ 2 ಪಾದ ಸೋಕಿಂದದಕೆ ಘನ ಶಿಲೆ ವನಿತೆಯಾದದಕೆ ಹನುಮೇಶವಿಠಲನೆಂಬೋದಕೆ ಅನುಮಾನಬಾರದದಕೆ 3
--------------
ಹನುಮೇಶವಿಠಲ
ಜನನಿ ಬ್ರಹ್ಮಾಣಿಯೆ | ವರ ವೀಣಾಪಾಣಿಯೆ || ಜನನಿ ಬ್ರಹ್ಮಾಣಿಯೆ ಪ. ಕರುಣಿಯೆ | ಫಣಿವೇಣಿಯೆ || ಬಾ ಬಾ ಶುಕವಾಣೀ | ಜನನೀ ಬ್ರಹ್ಮಾಣಿಯೆ 1 ದೋರುತೆ ವರಗಳೀಯುತೆ | ಬಾ ಬಾ ಗೀರ್ವಾಣೀ ಜನನಿ ಬ್ರಹ್ಮಾಣಿಯೆ 2 ವಿಮಲಚರಿತೆಯೆ || ಬಾ ಬಾ ವಾಗ್ವಾಣೀ | ಜನನಿ ಬ್ರಹ್ಮಾಣಿಯೆ 3
--------------
ವೆಂಕಟ್‍ರಾವ್
ಜಯ ಜಯ ದಯಾಮಯ ಚಿನ್ಮಯ ಜಯ ಜಯ ನಿರಾಮಯ ಶ್ರೀಜಯ ಪ ಶ್ರೀರಮಣೀ ಮನಮೋಹನ ಪಾವನ ಸಾರಸಲೋಚನ ಪಾಪವಿಮೋಚನ ಸರ್ವ ಭುವನಪಾಲಾ ಭಕ್ತಬೃಂದಾನುಕೂಲಾ 1 ದುರಿತ ತಿಮಿರಕಾಲಾ ಶುದ್ಧಸತ್ವಾದಿ ಮೂಲಾ ಉರುತರ ಶುಭಲೀಲಾ ನಿತ್ಯಕಾರುಣ್ಯ ಶೀಲಾ 2 ಮಂಗಳದಾಯಕ ಮಾಂಗಿರಿನಾಯಕ ತುಂಗಕೃಪಾಂಬಕ ದುರುಳಕುಲಾಂತಕ ರಂಗ [ಶರಣ್ಯಕ ಭಕ್ತಜನ ಪಾಲಕ] 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯ ಜಯ ಪಾರ್ವತಿ ಬಾಲ ನಮೋ ನಮೋ ಜಯ ಜಯ ಸಜ್ಜನ ಪಾಲ ಪ ಸಿಂಧು ಜಯ ಜಯ ಶ್ರೀಧರ ಪ್ರಿಯ ಸಖ ಷಟ್ ಶಿರ ಜಯ ಅ.ಪ ಪೂಜಿತ ಬಲಶಾಲಿ ಕುಮಾರ 1 ಕರ್ಣದ್ವಯದಿ ಮೆರೆವಾ | ವÀರ್ಣನಾ ತೀರ ಸುವರ್ಣಕುಂಡಲ ವಿಹ | ಚೂರ್ಣೀಕೃತ ದೈತ್ಯಾರ್ಣವ ಷಟ್ ಶಿರ ||ಜಯ|| 2 ನಿತ್ಯ ನಿರ್ಮಲ ದೇವ ಪ್ರತಿನಿತ್ಯ ದಾಸರ ಕಾವ ಚಿತ್ತಜರೂಪ ಪ್ರಶಸ್ತ ಲಲಾಟ ಮುನಿ ಸ್ತುತ್ಯ ಪಾವಂಜೆಯ ಕರ್ತನೆನಿಪ ಗುಹ ||ಜಯ|| 3
--------------
ಬೆಳ್ಳೆ ದಾಸಪ್ಪಯ್ಯ
ಜಯ ಜಯ ರಾಮಕೃಷ್ಣಾರ್ಯ ಭವಭಯ 'ವರ್ಜಿತ ಮಾಮವ ಗುರುವರ್ಯ ಪಶ್ರೀಮದುತ್ತಮ ನಿಜಚರ್ಯ ಗುಣಸ್ತೋಮರಾಜಿತ ಸರ್ವ ಪಂಡಿತಾಚಾರ್ಯ ರಾಮಣೀಯಕ ಗಾಂಭೀರ್ಯ ಯುತಮಾಮಕ ಮಾನಸ ಜಲರುಹಸೂರ್ಯ 1ಕೀರ್ತಿನಿಂದಿತ ಪೂರ್ಣ ಸೋಮ 'ಷ್ಪೂರ್ತಿ ಮಾಯಾ ನಘ ನಂದಾಭಿರಾಮಆರ್ತಿಹರಣ ಪೂರ್ಣಕಾಮ ಪುಣ್ಯಮೂರ್ತೆ 'ನಿಗೃ'ೀತೇಂದ್ರಿಯ ಗ್ರಾಮ 2ಶ್ರೀಮಂಗಳಗಿರಿ ನಿಲಯ ರೂಪಕಾ'ುತ ಫಲದಾನ ನಿಪುಣಾ ಪ್ರಮೇಯಕಾಮರ'ತ ಜಿತಮಾಯಾ ಬಾಲರಾಮಕೃಷ್ಣಾರ್ಯಗುರೋ ಪಾ' ದಯಯಾ3
--------------
ತಿಮ್ಮಪ್ಪದಾಸರು
ಜಯ ಜಯ ಶ್ರೀ ಮಹಾಲಿಂಗ ಗೋಪತುರಂಗ ಜಯ ಜಯ ಶ್ರೀ ಮಹಾಲಿಂಗ ಪ. ಜಯರಹಿತಾಚ್ಯುತಪ್ರಿಯ ಬುಧಾರ್ಚಿತ ದಯಾಸಾಗರ ಭಸಿತಾಂಗ ನಯನತ್ರಯ ನಮಿತಾಮರಸಂಘಾ- ಮಯಹರ ಗಂಗೋತ್ತುಮಾಂಗ 1 ಭೂತೇಶ ಭೂರಿಭೂತಹೃದಿಸ್ಥಿತ ಭೂಷಣೀಕೃತಭುಜಂಗ ಪೂತಾತ್ಮ ಪರಮಜ್ಞಾನತರಂಗ ಪಾತಕತಿಮಿರಪತಂಗ2 ಲಂಬೋದರಗುಹಪ್ರಮುಖಪ್ರಮಥನಿಕು- ರುಂಬಾಶ್ರಿತ ಜಿತಸಂಗ ಗಂಭೀರಗುಮಕದಂಬೋತ್ತುಂಗ- ಸಂಭೃತ ಹಸ್ತಕುರಂಗ 3 ಸೋಮಶೇಖರ ಮಹಾಮಹಿಮ ವಿಜಿತ- ಕಾಮ ಕಲಿಕಲುಷಭಂಗ ರಾಮನಾಮ ಸ್ಮರಣಾಂತರಂಗ ವಾಮಾಂಕಾಸ್ಥಿತ ಪಿಂಗ 4 ದೇವ ಲಕ್ಷ್ಮೀನಾರಾಯಣ ಪದರಾ- ಜೀವನಿರತ ವನಭೃಂಗ ಪಾವಂಜಾಖ್ಯ ಗಿರೀಶ ಶುಭಾಂಗ ಕೇವಲ ಸದಯಾಪಾಂಗ5
--------------
ತುಪಾಕಿ ವೆಂಕಟರಮಣಾಚಾರ್ಯ
ಜಯ ಜಯ ಶ್ರೀ ಹಯವದನ ಜಯ ಜಯ ಶ್ರೀ ಖಳದಮನ ಜಯತು ಸಜ್ಜನಸದನ ಸಕಲ ಆಭರಣ ಪ. ರಾಘವಾನ್ವಯಸೋಮ ಖರನಿಶಾಚರ ಭೀಮ ಧಾಮ ಸೀತಾಭಿರಾಮ ಕಾಮಿನೀಜನಕಾಮ ಶರಣಪಾಲಕ ಧಾಮ ಸ್ವಬಲ ಪಾಲಿತ ರಾಮ ಪಟ್ಟಾಭಿರಾಮ 1 ಯಾದವಾನ್ವಯಜಾತ ವರಸತ್ಯಭಾಮೇತ ವ್ಯಾಸರಾಯಸನ್ನುತ ಸಕಲವಾಗ್ವಿದಿತ ಕಂಜಾಸನಾದಿಸುತ ಕಮಲಮಾರ್ಗಣಪಿತ ಸರಸರುಕ್ಷ್ಮಿಣೀಸಕಲೇಷ್ಟದಾತ2 ವಾಸಿಷ್ಠಕುಲವಾರ್ಧಿ ಸತ್ಕಳಾಧರರೂಪ ಮಧ್ವಾರ್ಯ ಸದ್ರೂಪ ದಳಿತÀಬಹುತಾಪ ಮಾಯಿಜನ [ಧೃ] ತಕೋಪ ಕೃತಸದ್ವೀಕ್ಷೋ[ದ್ದೀ]ಪ ಸೃತಾನಿ ಸತ್ಸುಖರೂಪ ಹಯವದನ ರೂಪ 3
--------------
ವಾದಿರಾಜ
ಜಯ ಜಯ ಸಕಲಾಧಾರಾ | ಕೃಷ್ಣ ಜಯ ಜಯ ಭಕ್ತೋದ್ಧಾರಾ ಜಯಸಕಲಾಲಂಕಾರಾ | ಕೃಷ್ಣಾ ಯಮುನಾ ವೇಗ ಸಂಹಾರಾ ಜಯ ಜಯ ನಂದಕುಮಾರಾ ಕೃಷ್ಣ ಜಯ ಜೀಮೂತ ಶರೀರಾ ಪ ದೇವಕೀಕುಮಾರಾ ನಿಗಮಗೋಚರಾ ಶಂಖಚಕ್ರಧರ ವಸುದೇವಾನಂದಕರ ಸುರುಚಿರ ಪೀತಾಂಬರಧರ 1 ನಯನ ಮನೋಹರ ಗೋಪೀ ಮಂದಿರ ಸರಸಿಜ ದುರುಳ ಭಯಂಕರ ಶಕಟ ಬಕಾಂತಕ ಶೂರಾ ಕೃಷ್ಣ ಪೂತನಿ ಸಂಹಾರಾ ಅಜ ಸುರ ಮುನಿ ಪರಿವಾರ2 ಧೇನುಕ ದೈತ್ಯವಿದಾರಾ | ಕೃಷ್ಣ ಮರಕತ ಮಣಿಮಯ ಹಾರಾ ತರುಣೀ ಮಣಿಗಣನಿಕರಾ | ಕೃಷ್ಣ ಸರಸಿಜಲಸದಾಕಾರಾ ನವನೀತಕರಾ ಘನ ಮುರಳೀಧರ | ಕುಂಜವಿಹಾರಾ ವಿಷಧರ ಭಯಹರ ಗೋವರ್ಧನಧರ | ಮುಷ್ಟಿಕ ಮಧುರಾ 3 ವಿಹಾರಾ | ಕೃಷ್ಣ ನಾದಾನಂದ ಪ್ರಚಾರಾ ಅಕ್ರೂರಾನತ ಚರಣಾ | ಕೃಷ್ಣ ಮುನಿಜನ ಹೃದಯಾಭರಣ ಕುಬ್ಜಾವಂದಿತ ಚರಣ | ಕೃಷ್ಣ ಘನಮಹಿಮಾ ವಿಸ್ತರಣ ಗೋಪೀಜನಗಣ ಮೌಢ್ಯನಿವಾರಣ 4 ದುರುಳ ವಿದಾರಣ | ಭವಜನಕರುಣ ಹಲಧರ ಭುಜಬಲ ಪ್ರಾಣಾ ಕೃಷ್ಣ ಬೃಂದಾರಕಗಣ ಪ್ರಾಣ 5 ಶಿಶುಪಾಲೋತ್ಸವ ಬಾಣಾ | ಕೃಷ್ಣ ರುಕ್ಮ ಲೋಭ ಮದ ಯಾಣಾ ಅರಿಕುಲ ಸೈನ್ಯ ಕೃಪಾಣಾ | ಕೃಷ್ಣ ಚತುರೋಪಾಯ ಪ್ರವೀಣಾ ರುಕ್ಮಿಣೀರಮಣ ಶುಭಕರಕಂಕಣ ಪಾಂಡವಪೋಷಣ ಹರಣ ಚಕ್ರವಿಭೂಷಣ6 ದ್ರುಪದಸುತಾನತಚರಣಾ | ಕೃಷ್ಣ ಪರಮಾನಂದಾವರಣ ವಿದುರಾನತ ನೀಲಾಂಗ | ಕೃಷ್ಣ ಕರಧೃತವ್ಯರಥಾಂಗ ಕುರುಕುಲ ವನ ಸಾರಾಂಗಾ | ಕೃಷ್ಣ ಗೀತಾವನಜತರಂಗಾ ಕಮಲಾ ಅಂಗ | ಸತ್ವ ತುರಂಗಾ | ಧರ್ಮವಿಹಂಗಾ 7 ಮಾಂಗಿರಿ ರಂಗ ಸುಧಾಂಗಾ ಶುಭಾಂಗ | ಜಯ ಜಯ ಮಾಂಗಿರಿ ರಂಗಾ | ಕೃಷ್ಣ ಜಯ ಜಯ ಗರುಡ ತುರಂಗಾ 8
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯ ರುಕ್ಮಿಣೀ ಕಾಂತ ಜಯ ಪಯೋನಿಧಿ ಶಾಂತ ಪ ಜಯತು ಜಯ ಭಗವಂತ ಜಯತು ಧೀಮಂತ ಅ.ಪ ಜಯ ಭಕ್ತಮಂದಾರ ಜಯ ಮೌನಿಪರಿವಾರ ಜಯತು ಜಯ ಧುರಧೀರ ಜಯತು ಸಾಕಾರಾ 1 ವಿಜಯ ಮೌಕ್ತಿಕಾಭರಣ ಜಯತು ವಿಧಿನುತಚರಣ ಜಯತು ಜಯ ಭವತರಣ ಜಯ ಶರಣಕರುಣಾ 2 ಜಯನಾದ ಸುವಿಲಾಸ ಜಯತು ಭಾಸ್ಕರ ಭಾಸ ಜಯ ಮಾಂಗಿರೀವಾಸ ಜಯ ಶ್ರೀನಿವಾಸ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯಕೃಷ್ಣ ಜಗದೀಶ ಜಯ ಶಶಿಕುಲಾಧೀಶ ಜಯವಿನುತ ವಾಣೀಶ ಜಯ ರುಕ್ಮಿಣೀಶ |ಜಯಜಯ ಪ ಕಮಲಭವನುತಿಪಾತ್ರ ಕಮಲಸಖನಿಭಗಾತ್ರ ಕಮಲರಿಪು ಸಮವಸ್ತ್ರ ಕಮಲದಳ ನೇತ್ರ ಕಮಲ ಕರಧೃತಗೋತ್ರ ಕಮನೀಯ ಸುಚರಿತ್ರ ಕಮಲಾರಿ ಧರ ಮಿತ್ರ ಕಮಲಾಕಳತ್ರ 1 ನವನೀತ ದಧಿ ಚೋರ ಸುಂದರೀ ಕುಲಜಾರ ಸ್ಮರಸಮರ ಶೂರ ಕಂದರ್ಪಸಹಕಾರ ಕಾಮಿನೀ ಪರಿವಾರ ಬೃಂದಾವನ ವಿಹಾರ ಭಕ್ತ ಮಂದಾರ 2 ಧರಣೀ ಧರಾಸ್ಫಾಲ ದಮನಕರ ನಿಜಲೀಲ ನರಪೌತ್ರ ಪರಿಪಾಲ ನವ್ಯ ವನಮಾಲಾ ಮುರನರಕ ಶಿಶುಪಾಲ ಮುಖದನುಜ ಕುಲ ಕಾಲ ವರವ್ಯಾಘ್ರಗಿರಿಲೋಲ ವರದಾರ್ಯವಿಠಲಾ 3
--------------
ಸರಗೂರು ವೆಂಕಟವರದಾರ್ಯರು
ಜಯದೇವ ಜಯದೇವ ಜಯದೀನದಯಾಳಾ ಜಯಜಯ ಶ್ರೀಗುರು ಮಹಿಪತಿ ಭವತಾರಕ ಲೀಲಾ ಪ ಮರವಿನ ಕತ್ತಲಿಯೊಳಗೆ ಮುಂದುಗಾಣದಲಿರಲಿ ಅರವಿನದೀಪವ ಹೆಚ್ಚಿ ದೋರುತಲೀ ಸ್ಥಿರವನು ಗೊಳ್ಳದ ಚಿತ್ತವ ಭಜನಿಗೆಲಿಸುತಲಿ ಹರಿಸಿದ ವಿದ್ಯದಗೃಂಥಿಯ ಸಂಶಯ ಬಿಡಿಸುತಲಿ 1 ಪರಿಪರಿಯಿಂದಲಿಗರದು ಬೋಧನಾಮೃತನುಡಿಯಾ ಅರಹಿಸಿಯೋಗದ ಮಾರ್ಗವ ಸಾಂಖ್ಯದನಿಲ್ಲ ಕಡಿಯಾ ಕರಣೀಂದ್ರಿಯಗಳ ವಡದಾಸ್ವಾನಂದದಯಡಿಯಾ ಕರುಣಿಸಿ ವಿಶ್ವಂಭರಿತದ ತೋರಿದೆ ಇತ್ಥಡಿಯಾ 2 ನಿನಗುತ್ತೀರ್ಣವಕಾಣದೇ ತನುವಾರತಿ ಮಾಡೀ ಮನವೇದೀಪವು ಸದ್ಭಾವನೆ ಆಜ್ಯನೀಡಿ ಅನುದಿನ ಬೆಳಗುವ ನಂದನುಮಹಿಮೆಯ ಕೊಂಡಾಡಿ ಚಿನುಮಯಸುಖದೊಳು ಬೆರೆದಾಹಂಭ್ರಮ ಈಡಾಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯರಘುರಾಮಾ | ಸದ್ಗುಣ ಧಾಮಾ | ದಯದಾಗರ ಘನಶಾಮಾ ಪ ಜಯರಘರುರಾಮಾ | ಸದ್ಗುಣ ಧಾಮಾ ದಯದಾಗರ ಘನ ಶಾಮಾ | ಭಯಹರನೇಮಾ ರಣನಿಸ್ಸೀಮಾ | ತ್ರಯಂಬಕ ವಿಶ್ರಾಮಾ | ಪ್ರಿಯಕರ ನಾಮಾ ಪೂರಿತ ಕಾಮಾ | ಶ್ರಯಸುದಾಯಕ ಮಹಿಮಾ 1 ಸುರಸಹಕಾರ ಇನಕುಲೋದ್ದಾರಾ | ಧರಣೀಸುತೆ ಮನೋಹಾರಾ | ಶರಯುತೀರಾಯೋಧ್ಯ ವಿಹಾರಾ | ಚರಿತಪಾರಾ ವಾರಾ | ಪರಮೋದಾರಾ ಸರ್ವಾಧಾರಾ | ದುರತಾವಳಿವಿದಾರಾ 2 ವನರುಹಾಸನ ವಂದಿತಚರಣಾ | ಜನನಿ ಕೌಶಲ್ಯಾ ನಿಧಾನಾ | ಅಣುರೇಣು ಜೀವನಾ ವ್ಯಾಪಕಪೂರ್ಣ | ಕನಕಾಂಬರ ಭೂಷಣ | ಮುನಿಜನ ರಂಜನಾ ದೈತ್ಯವಿಭಂಜನಾ | ಮಹಿಪತಿ ನಂದನ ಪ್ರಾಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯರಾಘವ ಜಯರಾಘವ ಜಯರಾಘವ ರಾಮಾ| ಶ್ರಯಕಾರಣಸುಖಪೂರಣ ಭವತಾರಣ ನಾಮಾ ಪ ಜಗಪೋಷಣ ಮೃದುಭಾಷಣ ಸುರತೋಷಣಕಾರಿ| ಅಘಶೋಷಣ ಕುಲಭೂಷಣ ಖರದೂಷಣ ಹಾರಿ 1 ಅತಿಸುಂದರ ಗುಣ ಮಂದಿರ ದಶಕಂದರ ಹರಣಾ| ಧೃತಮಂದಿರ ಗಜೇಂದರ ಪ್ರಯಾ ಸಾಂದರ ಕರುಣಾ 2 ಪತಿ ವಾಣೀಪತಿ ದಿವಸಾಪತಿ ಧೇಯ| ಗುರುಮಹೀಪತಿ ಸುತಸಾರಥಿ ಸೀತಾಪತಿರೇಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಾಣೆ ನಂಬಿದೆ ಇಸ್ಟೇಟರಾಣೀ ನೀನೊಲಿದೆನ್ನ ಪಾಣಿಯೊಳಗೆ ಬಂದು ಕಾಣಿಸಮ್ಮ ಪ ವಾಣಿ ಶ್ರೀಲಕುಮಿಶ ರುದ್ರಾಯಣಿಯರಿಗಿಂತ ಕ್ಷೋಣಿಯೊಳಗೆ ಬಹುಮಾನಿತೆ | ನೀನಮ್ಮ ಅ.ಪ ಜನಕನು ಗಳಿಸಿದ ಧನವೆಲ್ಲಾ ಕಳಕೊಂಡೆ ದನಕರ ಹೊಲಮನೆಯನು ಮಾರಿದೆ ಜನರೊಳಗಪಹಾಸ್ಯಗೊಳಗಾದೆ ಕೇಳಮ್ಮ ವನಿತೆ ಮಕ್ಕಳ ಕೈಲಿ ಕೊನೆಗೆ ಪರಟೆ ಕೊಟ್ಟೆ 1 ಉಣಲು ಅನ್ನವು ಕಾಣೆ | ಉಡಲು ವಸ್ತ್ರವು ಕಾಣೆ ಕಡುಕಷ್ಟ ಕಡಲೋಳು ಮುಳುಗಿದೆ ನೋಡಮ್ಮ ಪೊಡವಿಯೋಳ್ ನಿನ್ಹೊರತು ಕಡೆ ಹಾಯಿಸುವಂಥ ಕಾಣಿ ಕೈಪಿಡಿದು ರಕ್ಷಿಸೊ ರಕ್ಷಿಸೋ ನೀನಮ್ಮ 2 ಎಲ್ಲಾ ಹಾಳಾಯಿತು | ಸಾಲ ಬಹಳಾಯಿತು ಜೋಳಿಗೆ ಬಂದಿತು ಕೂಳಿಗೆ ಮನೆ ಮನೆ ಚಾಲುವರಿದೆನಮ್ಮಾ 3 ಹಾರಿ ಹೋಗುವದಮ್ಮಾ ಪಕ್ಕಾರಂಗು ಧಾರುಣೀಶರ ಮಧ್ಯ ತೋರೀದ ಸಮಯದಿ ಆ ರಾಣಿ ವರ್ಗವ ಥರ ಥರ ನಡುಗಿಸುವಿ 4 ಅಕ್ಕರದಲಿ ಎರಡೆಕ್ಕದೊಳು ಬಂದು ಪಕ್ಕನೆ ನೀ ಎನ್ನ ಕೈಯೊಳು ಬಾರೆ ಮುಕ್ಕಣ ಸಖ ತನ್ನ ಬೊಕ್ಕಸದೊಳಗಿನ ರೊಕ್ಕ ಹಾಕಲು ಅವನ ಲೆಕ್ಕಸೆ ನಮ್ಮ 5 ಕಾಮಿತ ದಾಯಿನಿ ಕಾಮಿನಿ ಶಿರೋಮಣಿ ಶಾಮಸುಂದರ ಸಾರ್ವಭೌಮನ ರಾಣಿ ಶ್ರೀಮಂತ ಜೋಕರನ ಪ್ರೇಮದ ಭಗಿನಿಯೆ ನಾ ಮೊರೆ ಹೊಕ್ಕೆನು ನೀ ದಯಮಾಡು ತಾಯೆ 6
--------------
ಶಾಮಸುಂದರ ವಿಠಲ
ಜಾನಕೀವರತೇ ಜಯ ಮಂಗಳಂ ಪ ಮಾನವಾಧಿಪತೇ ಮಂಗಳಂ ಅ.ಪ ರಾವಣಾನುಜಮಿತ್ರ ರಮಣೀಯ ಸುಚರಿತ್ರ ದೇವಾಧಿದೇವ | ತೇ ಮಂಗಳಂ 1 ಅಪವರ್ಗಪ್ರದ ತೇ ಮಂಗಳಂ 2 ಖರದೂಷಣನಿಹಂತ ಕರಧೃತಶರಚಾಪÀ ಗುರುರಾಮವಿಠಲತೇ ಮಂಗಳಂ 3
--------------
ಗುರುರಾಮವಿಠಲ