ಆನಮಿಸುವೆ ಗುರುವಾ ಮಂತ್ರಾಲಯ ಸ್ಥಾನ ಮಾಡಿದ ಯತಿಯಾ ಪ
ದಾನವರೊಳವತರಿಸಿ ದೈನ್ಯರ ಮಾ£ನಿಧಿಯು ತಾನು
ಜ್ಞಾನಿಗಳಿಗೆ ಕಾಮಧೇನುವೆನಿಸಿದೀ
ಮಾನಿಯತೀಂದ್ರ ವಿಜ್ಞಾನಪೊಯ್ಯವನು ಅ.ಪ
ಸದಯ ಸರ್ವದಾಯೆನಿಸಿ ಹೃದಯದಿ ಮುದವಾಂಕುರಿಸುವನು
ಪರಿ ಸದಮಲ ಕೀರ್ತಿಯ
ವಿದಿಶಮಾಗಿ ಭೂತಳದಿ ಉದಯಿಸಿದ 1
ದೋಷದೂರ ನೆನಿಸೀ ದಾಸರಿಗೀಶನಡಿಯ ತೋರ್ಪಾ
ವಾಸುದೇವನಿಗೆ ನಿಜ ದಾಸನೆನಿಸಿ ಭವ-
ವಾಸದೊಳಿಹ ಪರತೋವೀವನು 2
ಕರುಣಸಾಗರನೆನಿಸಿ ಶರಣಗೆ ವರಗಳ ತಾನೀವಾ
ಗುರುವೆಂದೆಂಬ ಯಥಾರ್ಥ ಪದವಿ ತಾ
ನರಸಿಂಹವಿಠಲನ ಕರುಣದೊಳಿಹನು 3