ಜನನ ಮರಣ ಎರಡು ಇಲ್ಲವೊ ತಾ ತಿಳಿದ ಮೇಲೆ ಪ
ಮನದೊಳಿರುವ ಮಮತೆ ಅಳಿದು ಘನವಿವೇಕವಾಗಿ ಕಾಣುವ
ಇನಕುಲೇಶನನ್ನು ಬಿಡದೆಅನುರಾಗದೊಳು ಭಜಿಸಿದವಗೆ ಅ.ಪ
ಆರುಮೂರು ಮೀರಿ ನೋಡೆಲೈ ಅಲ್ಲಿರುವ
ತಾರಕದಾರಿ ಪ್ರಣವ ಸಾರುತಿದೆ ನೋಡೈ
ಘೋರ ಕತ್ತಲೆಯನರಿದು ಮಾರಜನಕನನ್ನು ನೆನೆದು
ಏರಿ ಶಿಖರದೊಳಗೆಯಿರುವ ತೇರು ಕಂಡುಬಂದಬಳಿಕ 1
ದಾನವಾರಿಯನ್ನು ಕಾಣೆಲೊ ಶ್ರೀಪರಮ ಚರಿತ
ಗಾನಲೋಲನನ್ನು ಕಾಣೆಲೈ
ಭಾನುಕೋಟಿರೂಪನಹುದು ಗುರುವು ತುಲಸಿರಾಮದಾಸ
ದೀನರಕ್ಷಕನೆಂದು ಭಜನೆ ಮಾಡಿಕೊಂಡು ಬಂದಬಳಿಕ 2