ಒಟ್ಟು 313 ಕಡೆಗಳಲ್ಲಿ , 18 ದಾಸರು , 306 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾ ಬಾ ಬಾ ಹರಿಯೇ ಮೂರ್ಲೋಕದ ದೊರೆಯೇ ಪ. ಸರ್ವೋತ್ತಮ ಸರ್ವಾಂತರ್ಯಾಮಕ ಸರ್ವಾಧಾರ ಪ್ರವೀರ ಶೂರವರ 1 ನಿತ್ಯಮುಕ್ತ ಪರಿಪೂರ್ಣಗುಣಾರ್ಣವ ಸತ್ಯನಿಯಾಮಕ ಸತ್ಯವಾದರೆ ತ್ವರೆ 2 ರೂಪತ್ರಯ ಭವತಾಪಶಮನ ಸ- ದ್ವ್ಯಾಪಕ ಸ್ಥಾಪಕ ಶ್ರೀ ಪುರುಷೋತ್ತಮ 3 ಭಜಕರ ಭಾಗ್ಯನಿಧಿಯು ನೀನೆಂಬುದು ನಿಜವಾಗಿರೆ ಶ್ರೀ ರುಜುಗಣೇಶಪತಿ 4 ಶ್ರೀಲಕ್ಷ್ಮೀನಾರಾಯಣ ನಿರ್ಗುಣ ಮೂಲೇಶ ಮುಕುಂದ ಮುನೀಂದ್ರವಂದಿತ 5
--------------
ತುಪಾಕಿ ವೆಂಕಟರಮಣಾಚಾರ್ಯ
ಬಾರಮ್ಮ ಸರಸ್ವತಿ ಬಾ ದ್ರುಹಿಣಯುವತಿ ಬಾ ನಿರ್ಮಲಮತಿ ತೋರಿ ಭಾರತಿ ಪ. ಭುಜಗ ಸದೃಶ ವೇಣಿ ಭಜಕರ ಚಿಂತಾಮಣಿ ಕೀರವಾಣಿ 1 ವೇದಾಂತರಂಗಿಣಿ ನಾದಸ್ವರೂಪಿಣಿ ಪ್ರಾದುರ್ಭವಳಾಗು ಸಾಧ್ವೀಕಲ್ಯಾಣಿ 2 ಅಕ್ಷಯ ಸುಖಭಾಷೆ ಆಶ್ರಿತಕಜನಪೋಷೆ ಲಕ್ಷ್ಮೀನಾರಾಯಣನ ಸೊಸೆ ಸುವಿಲಾಸೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬಾರೋ ಬಾರೋ ಮನುಕುಲಗುರುಗುಹಾ ಸೇರಿದಾನತರ್ಗೆ ಚಾರುಸುರಭೂರುಹಪ. ಮಾನಾಭಿಮಾನ ನಮ್ಮದು ನಿನ್ನಾಧೀನ ದೀನಜನರ ಸುರಧೇನು ಮಹಾಸೇನ1 ಶಕ್ತಿ ಕುಕ್ಕುಟವಜ್ರಾಭಯ ಚತುರ್ಭುಜನೆ ಭಕ್ತಿಜ್ಞಾನವನೀಯೋ ಶಂಕರಾತ್ಮಜನೆ 2 ಲಕ್ಷ್ಮೀನಾರಾಯಣನ ಧ್ಯಾನಾಭರಣ ಸುಕ್ಷೇತ್ರಪಾವಂಜಾಧ್ಯಕ್ಷ ರವಿಕಿರಣ3
--------------
ತುಪಾಕಿ ವೆಂಕಟರಮಣಾಚಾರ್ಯ
ಬಿನ್ನಪ ಲಾಲಿಸಯ್ಯ ಭಕ್ತಪರಾಧ- ವನ್ನು ಕ್ಷಮಿಸಬೇಕಯ್ಯ ಪ. ಅನ್ಯಾಯ ಕಲಿಕಾಲಕ್ಕಿನ್ನೇನು ಗತಿ ಸುಪ್ರ- ಸನ್ನ ನೀನಾಗು ಸುಬ್ರಹ್ಮಣ್ಯ ಪಾವನಚರಿತಅ.ಪ. ಮಕ್ಕಳ ಮಾತೆಯಂದದಿ ಕಾಯುವ ಮಹ- ದಕ್ಕರದಿಂದ ಮುದದಿ ಸೊಕ್ಕಿನಿಂ ನಡೆವರ್ಗೆ ತಕ್ಕ ಶಿಕ್ಷೆಯನಿತ್ತು ರಕ್ಕಸಾರಿಯೆ ಹಿಂದಿಕ್ಕಬ್ಯಾಡೆಮ್ಮನು ದಿಕ್ಕಿಲ್ಲದವರ ಧಿಕ್ಕಾರ ಗೈದರೆ ಮಿಕ್ಕವರೆಮ್ಮನು ಲೆಕ್ಕಿಪರಿಲ್ಲ ದೇ- ವರ್ಕಳಮಣಿ ನಿನಗಕ್ಕಜವಲ್ಲವು ಕುಕ್ಕುಟಧರವರ ಮುಕ್ಕಣ್ಣತನಯ1 ಜಾತಿ ನೀತಿಯನು ಬಿಟ್ಟು ಡಾಂಭಿಕತನದ ರೀತಿಗೆ ಪ್ರೀತಿಪಟ್ಟು ಸೋತು ಹಣವ ಕೊಟ್ಟು ಖ್ಯಾತರೆಂಬುವ ಗುಟ್ಟು ಮಾತು ಮಾತಿಗೆ ತೋರಿ ಘಾತವ ಗೈವರ್ಮೀರಿ ಯಾತುಧಾನರ ಗುಣ ಯಾತಕ್ಕರಿಯದು ಭೂತೇಶ್ವರಸಂಜಾತ ಸುರನರ- ವ್ರಾತಾರ್ಚಿತ ಪುರಹೂತಸಹಾಯಕ ನೂತನಸಗುಣವರೂಥ ಪುನೀತ2 ಯಾವ ಕರ್ಮದ ಫಲವೋ ಇದಕಿ- ನ್ಯಾವ ಪ್ರಾಯಶ್ಚಿತ್ತವೋ ಯಾವ ವಿಧವೊ ಎಂಬ ಭಾವವರಿತ ಪುರುಷ ಈ ವಸುಧೆಯೊಳಿಲ್ಲ ಶ್ರೀವಾಸುದೇವ ಬಲ್ಲ ದೇವ ಲಕ್ಷ್ಮೀನಾರಾಯಣನ ಪಾದ ಸೇವಕನೀ ಮಹಾದೇವನ ಸುತ ಕರು- ಣಾವಲಂಬಿಗಳ ಕಾವ ನಮ್ಮಯ ಕುಲ- ದೇವ ವಲ್ಲೀಪತಿ ಪಾವಂಜಾಧಿಪ3
--------------
ತುಪಾಕಿ ವೆಂಕಟರಮಣಾಚಾರ್ಯ
ಭಕುತಸಂಸಾರಿ ಹರಿ ಶಕಟಸಂಹಾರಿ ಸಕಲಾಂತರ್ಯಾತ್ಮಕ ಗಿರಿಧಾರಿ ಪ. ಅಂತರ್ಬಹಿವ್ರ್ಯಾಪ್ತಾನಂತಾವತಾರಿ ಸಂತಜನರ ಮನೋಭ್ರಾಂತಿನಿವಾರಿ 1 ನಿಖಿಲ ಬ್ರಹ್ಮಾದಿ ಸುರನಿಕರಕೈವಾರಿ ಕಂಸಾರಿ 2 ಘನಕೃಪಾಸಾಗರ ಪ್ರಣತಾರ್ತಿಹಾರಿ ಅನಘ ಲಕ್ಷ್ಮೀನಾರಾಯಣ ನಿರ್ವಿಕಾರಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರತಿ ಭರತನ ರಮಣಿ ಶಿರಬಾಗುವೆ ತ್ರಿಜಗಜ್ಜನನಿ ಪ. ಭಾರತ ಭಾಗವತಾರ್ಥ ಬೋಧಿನಿ ಶಾರದೇಂದುನಿಭವದನಿ ಅ.ಪ. ಹರಿಗುರುಗಳಲಿ ಸದ್ಭಕ್ತಿ ದೃಢ ಕರುಣಿಸು ಸರಸಿಜನೇತ್ರಿ ಗಿರೀಶಾದಿ ಸರ್ವಸುರೌಘಪ್ರಣೇತ್ರಿ ಶರಣು ಶರಣು ಸುಪವಿತ್ರಿ 1 ಕಾಳಿ ದ್ರೌಪದಿ ಸುನಾಮೆ ನಮ್ಮ ಪಾಲಿಸು ಭೀಮಪ್ರೇಮ ಶ್ರೀ ಲಕ್ಷ್ಮೀನಾರಾಯಣನ ಭೃತ್ಯೆ ಕಾಲತ್ರಯ ಕೃತಕೃತ್ಯೆ 2
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರತಿ ಭಾಗ್ಯವತಿ ಜಯತಿ ಪ. ಸೂರಿಜನೋದ್ಧರೆ ಸುಗುಣಾಲಂಕಾರ ಸಾರಸದಳನೇತ್ರಿ ಜಯತಿ 1 ಚಿತ್ರಚರಿತ್ರೆ ಚಿತ್ಸುಖಗಾತ್ರೆ ಸತಿ ಜಯತಿ 2 ಅನಘ ಲಕ್ಷ್ಮೀನಾರಾಯಣನ ಶ್ರೀಚರಣಾ- ವನತರ್ಗೆ ನೀನೆ ಗತಿ ಜಯತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಲಂ ಜಯ ಶುಭಮಂಗಲಂ ಪ. ಶ್ರೀಗೌರೀಸುಕುಮಾರನಿಗೆ ಯೋಗಿವರೇಣ್ಯ ಶುಭಾಕರಗೆ ರಾಗ ಲೋಭ ರಹಿತಗೆ ರಜತೇಶಗೆ ಭಾಗೀರಥಿಸುತ ಭವಹರಗೆ 1 ಪಾಶಾಂಕುಶ ವಿವಿಧಾಯುಧಗೆ ಪಾಶದರಾರ್ಚಿತ ಪಾವನಗೆ ವಾಸರಮಣಿಶತಭಾಸಗೆ ಈಶಗೆ ಭಾಸುರ ತನಕ ವಿಭೂಷಣನಿಗೆ2 ಶೀಲ ಸುಗುಣಗಣ ವಾರಿಧಿಗೆ ನೀಲೇಂದೀವರಲೋಚನೆಗೆ ಲೋಲ ಲಕ್ಷ್ಮೀನಾರಾಯಣ ರೂಪಗೆ ಶಾಲಿ ಪುರೇಶ ಷಡಾನನಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಲಂ ಮಂಗಲಂ ಭವತು ತೇ ಮಂಗಲಂ ಮಂಗಲಂ ಪ. ಅಂಗಜ ರೂಪಗೆ ಅಖಿಲ ಲೋಕೇಶಗೆ ಶೃಂಗಾರಮೂರ್ತಿಗೆ ಶ್ರೀಕಾಂತಗೆ ಸಂಗೀತ ಲೋಲಗೆ ಸಾಮಜವರದಗೆ ಬಂಗಾರಗಿರಿವಾಸ ಭವಭವ ಹರಗೆ 1 ಕೃತ್ರಿಮ ರಕ್ಕಸ ಮೊತ್ತ ಸಂಹರಗೆ ಭಕ್ತರ ಹೃದಯದಿ ಬೆಳಗುವಗೆ ಸತ್ಯಾತ್ಮಕನಿಗೆ ಸತ್ಯನೇತ್ರನಿಗೆ ಚಿತ್ತಜಪಿತ ಚಿನುಮಯ ಮೂರ್ತಿಗೆ 2 ಉತ್ತಮ ಗೌಡಸಾರಸ್ವತ ವಿಪ್ರರಿಂ ನಿತ್ಯ ಪೂಜೆಯಗೊಂಬ ನೀಲಾಂಗಗೆ ಛತ್ರಾಖ್ಯಪಟ್ಟಣ ಮಸ್ತಕ ಮಕುಟಗೆ ಕರ್ತ ಲಕ್ಷ್ಮೀನಾರಾಯಣ ಗುಣಾಂಬುಧಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಲಂ ಮಂಗಲಂ ಭವತು ತೇ ಮಂಗಲಂ ಪ. ವಿಜ್ಞಾನಶಕ್ತಿ ಪ್ರಕಾಶಗೆ ಈಶಗೆ ಸಜ್ಜನನಿವಹಾರಾದಿತಗೆ ಅಜ್ಞಾನತಿಮಿರಮಾರ್ತಾಂಡ ಪ್ರಚಂಡಗೆ ಮೂಜದೊಡೆಯ ಮನೋಜ್ಞ ಮೂರುತಿಗೆ 1 ಚಂದ್ರಶೇಖರಸುಕುಮಾರಗೆ ಮಾರನ ಸುಂದರರೂಪ ಪ್ರತಾಪನಿಗೆ ನಿಂದಿತ ಖಲಜನವೃಂದವಿದಾರಗೆ ಸ್ಕಂದರಾಜ ಕೃಪಾಸಿಂಧು ಪಾವನಗೆ 2 ತಾರಕದೈತ್ಯಸಂಹಾರಗೆ ಧೀರಗೆ ಶೂರಪದ್ಮಾಸುರನ ಗೆಲಿದವಗೆ ಸೇರಿದ ಭಕ್ತರ ಸುರಮಂದಾರಗೆ ನಾರದಾದಿ ಮುನಿವಾರವಂದಿತಗೆ 3 ವಲ್ಲೀವಲ್ಲಭನಿಗೆ ಒಲಿದರ್ಗೆ ವರದಗೆ ಎಲ್ಲ ಭೂತಾಶ್ರಯ ಬಲ್ಲವಗೆ ಖುಲ್ಲದಾನವರಣಮಲ್ಲ ಮಹೇಶಗೆ ಬಿಲ್ಲುವಿದ್ಯಾಧೀಶ ಭೀಮವಿಕ್ರಮಗೆ 4 ಕಂಜಾಕ್ಷ ಲಕ್ಷ್ಮೀನಾರಾಯಣ ತೇಜಗೆ ಮಂಜುಳಕಾಂತಿ ವಿರಾಜನಿಗೆ ನಂಜುಂಡನ ಕರಪಂಜರಕೀರ ಪಾ- ವಂಜೆ ಕ್ಷೇತ್ರಾದಿವಾಸ ಸುರೇಶನಿಗೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಲಂ ಮಹಾಲಿಂಗ ದೇವನಿಗೆ ಗಂಗೋತ್ತಮಾಂಗಗೆ ಪ. ತುಂಗಬಲ ಭದ್ರಾಂಗ ಸದಯಾ- ಪಾಂಗ ಭಕ್ತಜನಾಂಗರಕ್ಷಗೆ ಅಂಗಜಾರಿ ಕುರಂಗಹಸ್ತಗೆ ಸಂಗೀತ ಪ್ರೇಮಾಂತರಂಗ ನಿಸ್ಸಂಗಗೆ 1 ವಾಮದೇವಗೆ ವಾಸವಾದಿ ಸು- ಧಾಮ ವಿಬುಧಸ್ತೋಮ ವಿನುತಗೆ ವ್ಯೋಮಕೇಶಗೆ ಸೋಮಚೂಡಗೆ ಭೀಮವಿಕ್ರಮಗೆ ಹೈಮವತಿಪತಿಗೆ 2 ಪ್ರಾಣಪತಿ ಲಕ್ಷ್ಮೀನಾರಾಯಣ- ಧ್ಯಾನಪರಗೆ ಪಾವಂಜೆಗ್ರಾಮ ಪ್ರ- ಧಾನಪುರುಷಗೆ ದೀನಜನಸಂ- ತಾನಗೀಶಾನಗೆ ಜ್ಞಾನಿ ಜಗದ್ಗುರುವಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳ ಪದಗಳು ಜಯದೇವ ಜಯದೇವ ಜಯ ಸುಬ್ರಹ್ಮಣ್ಯ ವರೇಣ್ಯ ಪ. ಅರಳಿದ ಕಮಲಸನ್ನಿಭಶುಭಚರಣ- ವರ ಪಂಚಾನನ ಪೋಲ್ವ ಕಟಿಕಾಂಚ್ಯಾಭರಣ ಉರುಶಕ್ತಿಕುಕ್ಕುಟಾಭಯವಜ್ರಹಸ್ತ ಶರಣಾಗತಜನದ ರಿತವಿಧ್ವಸ್ತ1 ಬಲಮುರಿಶಂಖದಂತಿಹ ಚೆಲ್ವಗ್ರೀವ ಸುಲಲಿತಮಾಣಿಕ್ಯಹಾರದಿಂ ಪೊಳೆವ ನಲಿವ ಕರ್ಣಕುಂಡಲಗಳ ಶೋಭ ಜ್ವಲಿತಕಿರೀಟಮಸ್ತಕ ಸೂರ್ಯಾಭ2 ಈ ಕ್ಷಿತಿಯೊಳಗೆ ಪಾವಂಜೇತಿ ನಾಮ ಸುಕ್ಷೇತ್ರವಾಸ ಸುಜನಜನಪ್ರೇಮ ಲಕ್ಷ್ಮೀನಾರಾಯಣನ ಪ್ರೀತಿಯ ಪಾತ್ರ ರಾಕ್ಷಸಾರಣ್ಯದಹನವೀತಿಹೋತ್ರ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳಾಂಗ ಶ್ರೀಕೃಷ್ಣಗೆ ಸುದತಿಯರು ಮಂಗಳಾರತಿ ಎತ್ತಿರೆಪ ಭವ ಭಯ ಭಂಗ ಶುಭಗುಣಸಾಂದ್ರನಿಗೆ ಜಯ ಅ.ಪ ಕೂರ್ಮ ಕ್ರೋಡ ನೃಹರಿಗೆ ದಾನವ ಬೇಡಿದಗೆ ಮಾನದಿ ಭೃಗು ಶ್ರೀರಾಮ ಶ್ರೀಕೃಷ್ಣಗೆ ಬುದ್ಧ ಕಲ್ಕ್ಯನಿಗೆ ಜಯ 1 ಅನಿರುದ್ಧ ಮೂರುತಿಗೆ ಪಕ್ಷಿವಾಹನ ಹರಿಗೆ ಕುಕ್ಷಿಯೊಳೀರೇಳು ಜಗವನಿಂಬಿಟ್ಟಗೆ ಲಕ್ಷ್ಮೀನಾರಾಯಣ ಶ್ರೀ ಶ್ರೀಶನಿಗೆ ಜಯ 2 ಗೋಕುಲದೊಳು ಗೋಪಾಲಕರೊಡಗೂಡಿ ಗೋವ್ಗಳ ಕಾಯ್ದವಗೆ ಗೋವರ್ಧನಗಿರಿ ಎತ್ತಿದ ಧೀರಗೆ ಗೋಪಿದೇವಿಗೆ ಬಾಲಲೀಲೆಯ ತೋರ್ದಗೆ 3 ವೃಂದಾವನದಿ ಮೃತ್ತಿಕೆ ಮೆಲ್ಲುವೆನೆಂದು ವೃಂದಾರಕರು ನುಡಿಯೆ ನಂದ ಯಶೋದೆಯರು ಬಂದು ತೋರೆನಲು ಛಂದದಿಂದ ವಿಶ್ವರೂಪವ ತೋರ್ದಗೆ 4 ಕಾಳಾಹಿವೇಣಿಯರೊಡಗೂಡಿ ನಲಿವಗೆ ಕಾಳಿಂದಿ ರಮಣನಿಗೆ ಕಾಲಕರ್ಮಕೆ ಈಶನಾದ ಸ್ವಾಮಿಗೆ ಕಾಳಿಮರ್ದನ ಕಮಲನಾಭವಿಠ್ಠಲನಿಗೆ 5
--------------
ನಿಡಗುರುಕಿ ಜೀವೂಬಾಯಿ
ಮಗಳೆ ಜಾನಕಿ ನಿನ್ನ ಸುಗುಣಸನ್ಮೋಹನ್ನ ಖಗಕುಲರನ್ನ ಮನೋರಮಣ ಮನೋರಮಣ ಕಾಂತ ಶ್ರೀರಾಮನ ಅಗಲದಿರು ಕಾಣೆ ಮರಿಯಾನೆ ಶೋಭಾನೆ 1 ಪತಿಯೇಳ್ವ ಮೊದಲು ಜಾಗ್ರತೆಯಾಗಿ ಯೆದ್ದು ಗೃಹ- ಕೃತ್ಯಕೆಲ್ಲಕ್ಕನುಸರಿಸಿ ಅನುಸರಿಸಿ ನಡೆ ನೀ ಮಗಳೆ ಹಿತವಾಗಿ ಬಾಳು ಪತಿಯೊಳು ಶೋಭಾನೆ 2 ಗಂಡನ ಮಾತಿಗೆ ದುರ್ಚಂಡಿಸದಿರು ಮಗಳೆ ಗಂಡನುಣ್ಣದ ಮೊದಲು ನೀ ಮೊದಲು ನೀನುಣ್ಣದಿರು ಪುಂಡರೀಕಾಕ್ಷಿ ಪುಣ್ಯರಾಶಿ ಶೋಭಾನೆ 3 ಮುಗುಳು ನಗೆಯ ಬೀರು ಜಗಳವ ಮಾಡದಿರು ಜಗದೊಳು ಕೀರ್ತಿಯುತಳಾಗು ಯುತಳಾಗು ಬಂಧುಗಳಲಿ ನೀ ಹಗೆಯ ಮಾಡದಿರು ಕೃಪೆದೋರು ಶೋಭಾನೆ 4 ಪಾದ ಹೊದ್ದಿ ಸೇವೆಯ ಮಾಡು ಸುದ್ಧ ಭಾವದೊಳು ನಡೆ ಮಗಳೆ ನಡೆ ಮಗಳೆ ನಿತ್ಯಸುಮಂಗಲೆ ಮುದ್ದಾಗು ಬಂಧು ಬಳಗಕ್ಕೆ ಶೋಭಾನೆ 5 ಅತ್ತೆಯ ಮಾತಿಗೆ ಪ್ರತ್ಯುತ್ತರ ಕೊಡದಿರು ಪ್ರತ್ಯೊಬ್ಬಳೆ ಸ್ಥಳದಿ ನಿಲದಿರು ನಿಲದಿರು ನೀರಜಗಂಧಿ ಸತ್ಯ ವಚನವನೆ ಸವಿಮಾಡು ಶೋಭಾನೆ 6 ಮೈದುನರನ್ನು ತನ್ನ ಮಕ್ಕಳೆಂಬಂತೆ ನೋಡು ಸಾಧುಭಾವದದಲಿ ನಡೆ ಮಗಳೆ ನಡೆ ಮಗಳೆ ಪಂಕ್ತಿಯಲಿ ಭೇದ ಮಾಡದಿರು ಕೃಪೆದೋರು ಶೋಭಾನೆ 7 ಕಂಡರೆ ಶಿಷ್ಟರ ದಂಡ ನಮಸ್ಕರಿಸು ಹಿಂಡು ದಾಸಿಯರ ದಣಿಸದಿರು ದಣಿಸದಿರು ಉತ್ತಮಳೆಂದು ಭೂ- ಮಂಡಲದಿ ಕೀರ್ತಿಪಡು ಪೂರ್ತಿ ಶೋಭಾನೆ8 ಚಂಡಿತನವ ನಿನ್ನ ಗಂಡನೊಳ್ಮಾಡದಿರು ಗಂಡಸರ ಮುಂದೆ ಸುಳಿಯದಿರು ಸುಳಿಯದಿರು ಸಂತತ ಸೌಖ್ಯ- ಗೊಂಡು ಬಾಳಮ್ಮ ಸೀತಾಭಾಮಾ ಶೋಭಾನೆ 9 ಕ್ಷಮೆಯಲ್ಲಿ ಧಾತ್ರಿಯುಂಬ ಕ್ರಮದಲ್ಲಿ ಮಾತೆ ಸುರತ ಸಮಯದಿ ವೇಶ್ಯಾ ತರುಣಿಯಳ ತರುಣಿಯಳ ತೆರದಿ ರಾಮನ ಸತಿಯಂ- ತೆ ಮಾಡವ್ವ ಸುಖಂ ಜೀವಾ ಶೋಭಾನೆ 10 ಲಕ್ಷ್ಮೀನಾರಾಯಣರಂತೆ ಸೀತಾರಾಮರು ನೀವು ಕುಕ್ಷಿ ಈರೇಳು ಜಗವನ್ನು ಜಗವನ್ನು ನಮ್ಮನ್ನು ಸರ್ವರ ರಕ್ಷಣ್ಯ ಮಾಡಿ ಸುಖಿಯಾಗಿ ಶೋಭಾನೆ 11
--------------
ತುಪಾಕಿ ವೆಂಕಟರಮಣಾಚಾರ್ಯ
ಮನ್ನಿಸೆನ್ನ ಮಹಾಲಿಂಗ ದೇವೋತ್ತುಂಗ ಪುಣ್ಯಶ್ಲೋಕ ನಿನ್ನ ವರ್ಣಿಪೆ ಮುಕ್ಕಣ್ಣ ಪ. ಭಕ್ತಪಾರಿಜಾತ ಶಕ್ತಿದೇವಿಪ್ರೀತ ಸತ್ಯಧರ್ಮಯೂಥ ಸ್ವಾಮಿಲೋಕನಾಥ 1 ವಂದನೀಯ ಕೃಪಾಸಿಂಧು ದಿವ್ಯರೂಪ ಚಂದ್ರಚೂಡ ಸಾಂದ್ರಾನಂದ ವೈಷ್ಣವೇಂದ್ರ 2 ಮಾರವೈರಿ ಲಕ್ಷ್ಮೀನಾರಾಯಣಪ್ರೇಮಿ ಸಾರತತ್ತ್ವಬೋಧ ಸಾಧುಸುಪ್ರಸೀದ 3
--------------
ತುಪಾಕಿ ವೆಂಕಟರಮಣಾಚಾರ್ಯ