ನಾ ನಿನಗೇನು ಬೇಡುವುದಿಲ್ಲ-ಎನ್ನಹೃದಯಕಮಲದೊಳು ನೆಲೆಸಿರು ಹರಿಯೆ ಪ
ಶಿರ ನಿನ್ನ ಚರಣಕ್ಕೆರಗಲಿ-ಚಕ್ಷುಎರಕದಿಂದಲಿ ನಿನ್ನ ನೋಡಲಿ ಹರಿಯೆ
ಕರಣ ಗೀತಂಗಳ ಕೇಳಲಿ-ನಾಸಿಕನಿರುಮಾಲ್ಯಾನುದಿನ ಘ್ರಾಣಿಸಲಿ ಹರಿಯೆ 1
ನಾಲಿಗೆ ನಿನ್ನ ಕೊಂಡಾಡಲಿ-ಎನ್ನ ತೋಳು ಕರಂಗಳ ಮುಗಿಯಲಿ ಹರಿಯೆ
ಕಾಲು ತೀರ್ಥಯಾತ್ರೆಗೆ ಪೋಗಲಿ-ಮನಬಲ್ಪಿನಿಂದಲಿ ನಿನ್ನ ಸ್ಮರಿಸಲಿ ಹರಿಯೆ 2
ಚಿತ್ತ ನಿನ್ನೊಳು ಮುಳುಗಾಡಲಿ ನಿನ್ನಭಕ್ತ ಜನರ ಸಂಗ ದೊರಕಲಿ ಹರಿಯೆ
ವೃತ್ತಿ ತತ್ವಯೋಗಾಭ್ಯಾಸಕ್ಕಾಗಲಿ-ರಂಗ
ವಿಠಲ ನಿನ್ನ ದಯವಾಗಲಿ ಹರಿಯೆ 3