ಸಿಂಧುಶಯನನೆ ಸರ್ವಬಂಧುಬಳಗ ನೀನೆ
ತಂದೆ ನೀ ಬಿಟ್ಟರೆ ಬಂಧುಗಳ್ಯಾರಿಲ್ಲ ಪ
ಒಂದು ವೃಕ್ಷದಿ ಬಂದು ಪಕ್ಷಿಗ
ಳ್ವøಂದ ಗೂಡಗಲ್ಹೋಗುವಂದದಿ
ಒಂದಕೊಂದು ಸಂಬಂಧವಿಲ್ಲದ
ಬಂಧುವೆಂಬುವರೆಲ್ಲ ಪುಸಿಯು ಅ.ಪ
ಕೊಳದಿ ಮಕರಿಗೆ ಸಿಲ್ಕಿ ಬಳಲುತಿರುವ ಕÀರಿಯ
ಬಲವಾಗುಳಿಸಿದರಾರು ಬಳಗ ಹಿಂಡುಗಳಿರ್ದು
ನಳಿನಲೋಚನ ನೀನೆ ಗತಿಯೆನೆ
ಒಲದು ಆ ಕ್ಷಣ ಕರಿಯನುಳುಹಿದಿ
ತಿಳಿದು ಭಜಿಸುವ ದಾಸಜನಕತಿ
ಸುಲಭನೆಲೊ ನೀ ಜಲಜನಾಭ 1
ಕುರುಪತಿಸಭೆಯೊಳು ಇರುತಿರೈವರು ಪರಿ
ದುರುಳ ಕೊಳ್ಳುತಲಿರೆ
ನೆರೆದ ಪತಿಗಳು ಸುಮ್ಮನಿರುತಿರೆ
ಹರಿಯೆ ಗತಿಯೆಂದು ತರುಣಿ ಮೊರೆಯಿಡೆ
ಮಾನವ ಕಾಯ್ದಿ
ಚರಣಭಕ್ತರ ನಿರುತರಸುರಧೇನು 2
ದೃಢದಿ ಶ್ರೀಹರಿಯೆಂದು ನುಡಿಯುವ ಬಾಲಗೆ
ಹಿರಣ್ಯ ಕಡುವೈರಿಯಾಗಿ
ಗಡನೆ ತೋರ್ಹರಿ ಮೂಢ ಎಲ್ಲೆನೆ
ಒಡನೆ ಕಂಬದಿ ಮೂಡಿ ದುರುಳನ
ಒಡಲ ಬಗಿದು ಪಿಡಿದು ಭಕ್ತನ
ಬಿಡದೆ ಸಲಹಿದಿ ಕಡುದಯಾನಿಧೆ 3
ಇಳೆಪತಿ ಪಿತನಿದಿರೊಳ್ ಮಲತಾಯಿಕೃತಿಯಿಂದ
ಬಲುನೊಂದು ಧ್ರುವರಾಜ ಕಳವಳಗೊಂಡು
ಜಲಜನಾಭನ ಮೊರೆಯನಿಟ್ಟು
ಚಲಿಸದೆ ಮನಮುಟ್ಟಿ ತಪಿಸಲು
ಒಲಿದು ಧ್ರುವಪದವಿತ್ತಿ ಭಕ್ತರ
ಕಲ್ಪಿತವನೀವ ಕಲ್ಪತರು ನೀನು 4
ಪ್ರಾಣೇಶ ಶ್ರೀರಾಮ ಧ್ಯಾನಿಪರಿಗೆ ಸತ್ಯ
ನಾನಾದೈವದ ಬಲವು ನೀನೆಯಾಗಿರುವಿ
ಕಾನನದಿ ಕಲ್ಲನ್ನು ತುಳಿದು
ದಾನ ಕೊಟ್ಟೆಯ ಜೀವ ಸುದತಿಗೆ
ಜ್ಞಾನವಿಲ್ಲದಧಮ ಎನಗೇನು ಶಕ್ಯ
ನಿನ್ನ ಮಹಿಮೆ ಪೊಗಳಲು 5