ಇನ್ನೊಬ್ಬರಿಗೆ ಇದು ಏನು ತಿಳಿದೀತು ಧ್ರುವ
ವೇದಾಂತಕಿದು ಸನ್ಮತಗೂಡುವ ಮಾತು
ಸಾಧುಜನರಿಗೆ ಸಾಕ್ಷಿಯಾಗಿ ದೋರುವ ಮಾತು
ಸಾಧನಕೆ ಸಾಧಿಸುವ ಮಾತು
ಬೋಧಿಸಿದವಗೆ ಬಲವಾಗುವ ಮಾತು 1
ಕೋಟಿ ಜನ್ಮದಾ ಪುಣ್ಯವಂತಗಿದಿರಿಡುವ ಮಾತು
ನೋಟ ನಿಜವಾದವಗೆ ನೀಟವಾಗಿಹ ಮಾತು
ಸೂಟಿಗಿದೆ ಘನಕೂಟ ಮಾತು
ನಾಟಿಮನದೊಳು ಮಥಿüಸುವ ಮಾತು 2
ದ್ವೈತ ಅದ್ವೈತಕ ಆಧಾರವಾಗುವ ಮಾತು
ತ್ರಯಗುಣಕ ಮೀರಿ ಮಿಗಿಲಾಗಿ ದೋರುವ ಮಾತು
ಮಹಿಪತಿಯ ಗುರುಗೂಢ ಮಾತು
ತ್ರಯಲೋಕಕಿದೆ ತಾರಿಸುವ ಮಾತು 3