ಧೂಪವಿಡುವನ ಬಳಿಗೇ ದೀಪವಿಡುವ
ಆ ಪರಮ ಕರುಣಾಳು ಶ್ರೀಪತಿಯ ನೆನೆನೆನೆದು ಪ
ವಸುಮತಿಯನಿತ್ತವನ ಹೊಸಲಬಳಿಯಾಳಾದ
ಬಸಿವಲೆಯನಿತ್ತಳಿಗೆ ವಸನಗಳನಿತ್ತ
ಬಿಸಜವೊಂದಿತ್ತವನ ಹೊಸಖೇಚರನಗೈದು
ಬಿಸವುಂಡ ಬಾಲಕನ ಜಸವ ಚಿರಗೈದ 1
ಅವಲಕ್ಕಿ ಇತ್ತವಗೆ ನಿಧಿಯನೇ ಅರ್ಪಿಸಿದ
ಸವಿಗಂಧವಿತ್ತವಳ | ಸುಂದರಿಯ ಗೈದ
ನವನೀತವಿತ್ತವರನೆಲ್ಲ ತನ್ನೊಳೆ ಹುಗಿದ
ಭವವ ಪರಿಹರಿಸಲ್ಕೆ ಬೇಸರಿಹುದೇ ಹರಿಗೆ 2
ಅವನ ಜಾನಿಪ ಜನರ ಮರೆಯನಾ ನೀಲಾಂಗ
ಅವನ ಪೂಜಿಪ ನರರ ಮುನ್ನಿಲುವನಾಗಾಗ
ಅವನ ಕಥೆ ಕೇಳ್ವರ್ಗೆ ಉಂಟವನ ಸತ್ಸಂಗ
ಅವನೆ ಗತಿಯೆಂದವನಿಗೊಲಿವ ಮಾಂಗಿರಿರಂಗ 3