ನಾನೀಯದಿದ್ದರೆ ನೀನೇನನೀವೆ ಪ
ನಾನು ಎಂಬುದು ಮಾತ್ರ ನಾ ನಿನಗಿತ್ತರೆ
ಏನನೀಯುವೆ ರಂಗ ದೀನದಯಾಳು ಅ.ಪ
ಅವಲಕ್ಕಿಯನು ತಂದವಗೆ ಭಾಗ್ಯವನಿತ್ತೆ
ನವಫಲವನಿತ್ತವಳಿಗೆ ಒಲಿದೆ
ನವನೀತವಿತ್ತರ್ಗೆ ಸುವಿಲಾಸಗಳನಿತ್ತೆ
ಭುವಿಯೆಲ್ಲವಿತ್ತಂಥವನ ಬಾಗಿಲಕಾಯ್ದೆ 1
ಗಜರಾಜನಂದು ಪಂಕಜವೊಂದನಿತ್ತಂದು
ಅಜಗರನನು ಕೊಂದು ಸೌಜನ್ಯವನಿತ್ತೆ
ಭುಜದ ಮೇಲೆ ನಿನ್ನನಂಗಜ ಪೊತ್ತು ತಿರುಗಲು
ರಜತಪದವಿಯನಿತ್ತು ವಿಜಯ ನೀ ಗೈದೆ 2
ಮಡದಿಮಣಿಯು ತಾನುಟ್ಟ ಪೀತಾಂಬರ
ದೆಡ್ಡೆಯ ಹರಿದು ನಿನ್ನ ಅಡಿಗೆ ಕಟ್ಟಲ್ಕೆ
ಮಡದಿಗೆ ಅಕ್ಷಯದುಡುಗೆಯ ನೀನಿತ್ತೆ
ಮೃಡನು ತಾನೇನು ಕೊಡಲೋ ಗೋವಿಂದಾ 3
ಜಗಜಟ್ಟಿ ಹನುಮನು ಬಗೆದು ನಿನ್ನಯ
ದುಗುಡವ ಬಿಡಿಸಿದ ಬಗೆಯ ನೀನÀರಿತೂ
ಜಗದೊಳು ಸರಿಯಾದುಡುಗರೆಯಿಲ್ಲದೆ
ನಗುತ ನಿನ್ನನು ನೀನೆ ಸೊUಸಿನಿಂದಿತ್ತೆ 4
ನಾನೆಂಬುದಲ್ಲದೆ ಏನುಂಟು ಎನ್ನೊಳು
ನೀನೀವೆನಿದ ಮಾತ್ರ ಶ್ರೀನಾಯಕೇಶ
ಏನನಾದರೂ ಸರಿ ನೀನೀಯೋ ಮುರವೈರಿ
ನಾನು ನನ್ನದು ನಿನ್ನಧೀನ ಮಾಂಗಿರಿರಂಗ5