ಸನ್ನುತ ವಿಠಲ | ಇವನ ಪೊರೆಯೋ ಪ
ಅವಿಕಾರಿ ಆದ್ಯ ನಿರ | ವದ್ಯ ಎಲೊ ಹರಿಯೆ ಅ.ಪ.
ತೈಜಸನೆ ನೀನಾಗಿ | ಮಾಜದಲ್ಯುಪದೇಶಯೋಜಿಸುವೆನೆಂದೆನುತ | ಪೇಳ್ದುದಕ್ಕಾಗೀಆರ್ಜವದ ಮನದಲ್ಲಿ | ಪ್ರಾರ್ಥಿಸಲು ಸ್ವಪ್ನದಲಿಯೋಚಿಸಿಹೆ ಅಂಕಿತವ | ಹೇ ನೈಜಮೂರ್ತೇ 1
ಚಿಣ್ಣನಿರುವನು ಇವನು | ಕಣ್ಣೆಗೆವೆಯಂದದಲಿಇನ್ನೀವನ ಕಾಯುವುದು | ಬನ್ನಬಡಿಸದಲೇಅನ್ನ ಆರೋಗ್ಯಕ್ಕೆ | ನಿನ್ನನೆ ಮೊರೆಯಿಡಲಿಅನ್ಯ ಹಂಬಲ ನೀಗೊ | ಪನ್ನಂಗ ಶಯನಾ 2
ತೊಡರು ಬರಲಿ | ಬಿಡದೆ ನಿನ್ನಂಘ್ರಿಯನುಧೃಡಭಕ್ತಿಯಿಂ ಸ್ಮರಿಪ | ಮುದ ಮನವ ನೀಯೋ |ಎಡಬಲದಿ ನೀನಾಗಿ | ಬಿಡದೆ ಬೆಂಬಲ ವಿರಲುಕಡು ಭವಾರ್ಣವವೆಲ್ಲ | ಅಡಿಯ ಪರಿಮಿತಿಯೋ 3
ಸಿರಿ ವಾಯು ಮೊದಲಾದಸುರರೆಲ್ಲ ಹರಿಯ ಕಿಂಕರರೆಂಬ ಮತಿಯಿತ್ತುಪೊರೆವುದಿವನನ ಎಂದು | ಹರಿಯೆ ಭಿನ್ನವಿಪೆ 4
ನಾಮ ಸ್ಮರಣೆ ಯೆಂಬ | ವಜ್ರಕವಚವ ತೊಡಿಸಿಈ ಮಹಾ ಕಲಿಯುಗದಿ | ಸಾಧನವ ಗೈಸೋಶ್ರೀ ಮನೋಹರ ಗುರು | ಗೋವಿಂದ ವಿಠಲಯ್ಯಈ ಮಹತ್ತುಪಕಾರ | ನಾ ಮರೆಯನಯ್ಯ 5