ಒಟ್ಟು 4540 ಕಡೆಗಳಲ್ಲಿ , 127 ದಾಸರು , 2949 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದಕ್ಕೆರಗುವೆ ಗುಹಾ ಪ ಮೋದರನ ಸಖ ಶಿವನ ಸುತ ತವ ಅ.ಪ ದುಷ್ಟ ಪದ್ಮನ ಬಾಧೆಯಾ ಸಹಿಸಲಿಕೆ ಕೂಡದೆ ಇಷ್ಟವನು ಪಾಲಿಸಿದ ಗುಹತವ 1 ಜನ್ಮವನು ಧರಿಸುತ್ತಲಧಿಕ ದು- ನಿರ್ಮೂಲನ ಮಾಡಿರುವ ಗುಹ ತವ ಪಾದಕ್ಕೆ|| 2 ರಿಂದ ಬಂದಾ ಶಾಪದಲಿ ತಾನೂ ಬಂದ ಶರಜಗೆ ದಾಸನನುದಿನ 3
--------------
ಬೆಳ್ಳೆ ದಾಸಪ್ಪಯ್ಯ
ಪಾದಂಗಳ ತೋರಿಸೋ ನಾರಾಯಣ ಪಾದಂಗಳ ತೋರಿಸೊ ಪ ಸಾದರ ಭಕುತಿಯ ನಿನ್ನಲಿ ಇರಿಸೋಮೋದದಿ ಭಜಿಪಂತೆ ನನ್ನದು ಪ್ರೇರಿಸೊ ಅ.ಪ. ನಾಗಾದಿ ಕಪ್ಪತ್ತ ಗಿರಿಯನ್ನೆ ಚಿನ್ನವನ್ನಾಗಿಸಿ ಬಿಡಲೆಂದು ಯತ್ನಿಸುತ್ತಿದ್ದನಾಗಾರ್ಜುನನ ನೀಗಲು ಭುವಿಯೊಳುಬೇಗದಿ ಬಂದಿ ವೀರನಾರಾಯಣ 1 ಮೈಯೊಳು ಕವಚವ ಶಿರದಿ ಕಿರೀಟವಕೈಯೊಳು ಚಕ್ರ ಗದಾ ಶಂಖ ಧರಿಸಿರಯ್ಯನೆ ಗದುಗಿನೊಳಿಳಿದು ಆ ದೈತ್ಯನಹೊಯ್ಯಲು ಬಂದ ಶ್ರೀ ವೀರನಾರಾಯಣ 2 ತೋರ ಕನ್ನಡದಲ್ಲಿ ವರ ಕವಿಯಾದ ಕುಮಾರ ವ್ಯಾಸನಿಂದ ಭಾರತ ರಚಿಸಿದಿಧೀರ ಶ್ರೀ ಪುರಂದರದಾಸರು ಕರೆದಿಹಭಾರತಮಲ್ಲ ಶ್ರೀ ವೀರನಾರಾಯಣ 3
--------------
ವೀರನಾರಾಯಣ
ಪಾದಂಗಳ ನಂಬಿದೆ ಕೊನೆಗೆ ಪ ಜ್ಞಾನಿಯ ಜೊತೆ ಸೆರಲಿಲ್ಲ 1 ಭಕ್ತಿಪಥದಿಮನ ವರ್ತಿಸಲಿಲ್ಲ ಯುಕ್ತಿಯಿಂ ವಿಷಯವಿರಕ್ತನಾನಲ್ಲ 2 ಭಾಗವತರ ಪರಿಚರ್ಯವಿಲ್ಲ 3 ತಂತ್ರದೊಳಗೆ ಜಾಣ್ಮೆಯನಗಿನಿತಿಲ್ಲ 4 ಸಂಗತಿ ವರ್ಜಿಸಲಿಲ್ಲ 5 ದುರುಳ ಕಾಮುಕಸಂಗ ಕಿರಿದಾಗಿಲ್ಲ 6 ಶ್ರೀಪುಲಿಗಿರಿ ವರದ ವಿಠಲನೆ 7
--------------
ಸರಗೂರು ವೆಂಕಟವರದಾರ್ಯರು
ಪಾದಗಳಂ ನಂಬಿದೆನಾಂ ಶ್ರೀಧರಾಚ್ಯುತಗೋವಿಂದ ಪ ಮಧ್ಯೆದೊಳಾದರದಿ ಕುಣಿಯುತಿರುವಅ.ಪ ಅಳೆದು ಮೂರಡಿಯಿಂದ ಜಗವ ಬಲಿಯ ಪಾತಾಳಕ್ಕೆ ತುಳಿದು ಲಲನೆಗಂಗೆಯ ಪೆತ್ತು ಮಂಗಳಗಳನು ಭಕ್ತರಿಗೀವ ಶುಭದಾ 1 ಧನುವ ಮೆಟ್ಟಿಮುರಿದು ಮೊಳಲಸದಾನಂದದೊಳಿರುವ 2 ಗರಡುದೇವ ನಿತ್ಯಪೊತ್ತ ಸಿರಿಯು ಸದಾ ಒತ್ತುತಿರುವ ಪರಮಪಾವನ ಹೆಜಾ ಜಿಯ ವರದನೆನುತ ನಾರದನೆನೆವ 3
--------------
ಶಾಮಶರ್ಮರು
ಪಾದತೋರೋ ಪದ್ಮಾಕ್ಷ ಬಾರೋ ಪ. ಪಾದಪದ್ಮವ ತೋರೋ ಪದ್ಮಾಕ್ಷ ಬಾರೋ ಆದಿಮಧ್ಯಾಂತ ಸ್ವರೂಪ ಮೈದೋರೋ ಅ.ಪ. ಬಲಿಯನ್ನು ತುಳಿದಂಥ, ಭೂಮಿಯನಳೆದಂಥ ಶಿಲೆಯಾಗಿದ್ದವಳ ಕಲುಷವ ಕಳೆದಂಥ 1 ಶಿಶುರೂಪದಿಂದಲೆ ಶಕಟನ ಒದ್ದಂಥ ಶಶಿಮುಖಿಯಶೋದೆಗೆ ಶಿಶುವೆನಿಸಿ ಮೆರೆದಂಥ 2 ಗೊಲ್ಲರ ಮನೆಮನೆಗೆ ಕಳ್ಳನಂದದಿಪೊಕ್ಕು ನಲ್ಲೆಯರ ಕೈಪಿಡಿಗೆ ನಿಲ್ಲದೋಡುವ ಮುದ್ದು 3 ಕಾಳಿಂಗನ ಫಣೆಯೊಳ್ ಕೋಲಾಹಲದಿ ಕುಣಿದ ಕಾಳಿಂಗನರಸಿಯರಿಗೆ ತಾಲೀ ಭಾಗ್ಯವನಿತ್ತ4 ಕರುತುರುಗಳ ಮರೆಸಿ ದೊರೆ ನಿನ್ನರಸಿದ ಪರಮೇಷ್ಠಿಯೆ ತನ್ನ ಕರದಿಂ ಪೂಜಿಸಿದಂಥ 5 ಮಾವ ಕಂಸನ ಕೊಂದು ತಾಯಿ ದೇವಕಿ ವಸುದೇವಸುತ ವಾಸುದೇವನೆಂದೆನಿಸಿದ 6 ಸಿರಿದೇವಿಯೇ ನಿಜಕರಗಳಿಂದೊತ್ತುವ ಪರಮಪಾವನ ಪದಸರಸೀರುಹ 7 ವರಶೇಷಗಿರಿದೊರೆ ಶರಣರ ಮರೆವರೆ ಶಿರಬಾಗಿ ಬೇಡುವೆ ಭರಿಸೆನ್ನನೆನುವೆ 8
--------------
ನಂಜನಗೂಡು ತಿರುಮಲಾಂಬಾ
ಪಾದದರ್ಶನವೀಯೈ ಜಾನಕೀನಾಥ ಪ ವೇದ ವೇದಾಂತಗಳ ಓದಿದವ ನಾನಲ್ಲ ವಾದ ವಾಕ್ಯಾರ್ಥಗಳ ಭೇದ ಎನಗಿಲ್ಲ ಅ.ಪ ಪಾತಕಂಗಳ ಗೈದು ಭೀತನಾಗಿಹೆನಯ್ಯ ನೀತಿನಿಯಮಗಳಿಂದ ದೂರ ನಾನು ಈತಿ ಬಾಧೆಗಳಿಂದ ನಾ ತಪಿಸುತಿಹೆನಯ್ಯ ಮಾತುಮಾತಿಗೆ ನಿನ್ನ ನಾಮ ಜಪವೀಯೆಂದು 1 ಕೆಸರೊಳಗೆ ಹಾಕುವೆಯೊ ಹೊಸ ಜನುಮವೀಯುವೆಯೊ ಬಿಸಜಾಕ್ಷ ನಿನ್ನ ಮನಬಂದಂತೆ ಮಾಡೊ ಉಸಿರಾಡುವನ್ನೆಗಂ ನಿನ್ನ ಭಜನೆಯ ಗೈಸಿ ರಸ ಕಸಗಳೊಂದೆನಿಸೊ ಮಾಂಗಿರಿಯರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾದಪದ್ಮದೀಕ್ಷಣದ ಸುಖಕಂ||ಅಗಲಲು ಬಾರದೆ ಮನ ದೃಗ್ಯುಗಳವು ಹರಿಪಾದಪದ್ಮದಿ ನೆಲಸೆ ಭಕ್ತರ್‍ತೆಗೆಯದೆ ತಿರುಪತಿ ವೆಂಕಟನಗನಾಥನ ಬೇಡಿಕೊಳ್ಳುತಿಹರೀ ಪರಿುಂಈ ಪಾದಪದ್ಮದೀಕ್ಷಣದ ಸುಖವೇ ಸಾಕುಗೋಪಾಂಗನೆಯರ ಮನಕಮೃತರೂಪಾಗಿರುವ ಪಪದ್ಮವರಳಿದ ಪರಿಯ ಮೃದುವಾಗಿ ತೋರಿಸುವಪದ್ಮಜೆಗೆ ನಿತ್ಯವಾಶ್ರಯವೆನಿಸುವಪದ್ಮಭವ ನೆರೆತೊಳೆದು ಪೂಜಿಸಿದುದೀ ಲೋಕಪದ್ಮಕಾಶ್ರಯವಾಗಿ ತದ್ರೂಪವಾಗಿರುವ 1ಲೋಕಪಾವನ ಗಂಗೆಯನು ಪಡೆದುದೀ ಪಾದಜೋಕೆಯೊಳಗಹಿ ಶಿರದಿ ನೆರೆ ನರ್ತಿಸಿದುದುಬೇಕೆಂದು ಯೋಗಿಗಳ ಹೃದಯಕಮಲದಿ ನೆಲಸಿನೂಕಿ ಭಕ್ತರ ಭವವ ರವಿಯಂತೆ ಹೊಳೆಯುತಿಹ 2ಗೋಪಾಲ ಗೋವುಗಳ ಬಳಿವಿಡಿದು ಸಂಚರಿಸಿಗೋಪಿಯರ ಮನೆಯ ಪಾಲ್ಬೆಣ್ಣೆ ಬಯಸಿಗೋಪ್ಯದಲಿ ನಡೆದವರ ಮನಕಗೋಚರವೆನಿಸಿಗೋಪರೊಡೆಯನ ಮನೆಗೆ ಬಂದು ನೆಲಸುತಲಿರುವ 3ಬಲಿಯ ದಾನವ ಬೇಡಿ ಶಿಲೆಯ ಸತಿಯನು ಮಾಡಿನೆಲನೊತ್ತಿ ಕೌರವನ ಮಕುಟ ಸೋಕಿಥಳಥಳನೆ ಬೆಳಗಿ ತತ್ಸಭೆಯ, ವಿದುರನ ಮನೆಗೆನಲವಿಂದ ನಡೆದವನ ಸಲಹಿದತಿ ಕೋಮಲದ 4ಸುರರು ವಂದಿಸಲವರ ಶಿರದ ಪುಷ್ಪದ ರಾಶಿಸುರಿದು ತಾರಾ ಮಧ್ಯ ಚಂದ್ರನಂತೆನೆರೆಮೆರೆವ ಗುರು ವಾಸುದೇವ ಪಾದ 5ಓಂ ಜಗನ್ನಾಥಾಯ ನಮಃ
--------------
ತಿಮ್ಮಪ್ಪದಾಸರು
ಪಾದವ ತೊಳೆದು ಪಾವನರಾಗಿಹರುಷದಿ ತಲೆದೂಗಿಪಾದವ ತೊಳೆದು ಪಾವನರಾಗಿಭಾವೆ ವಿನೋದದಿ ಕೃಷ್ಣನಗುತಲಿ ಪ. ಗುಜ್ಜೆಯರ ಕಾಲಿಗೆ ತಕ್ಕ ವಜ್ರಕಲ್ಲನೆಪಿಡಿದುಅರ್ಜುನನÀ ಮಡದಿ ಸುಭದ್ರಾಅರ್ಜುನನÀ ಮಡದಿ ಸುಭದ್ರಾ ಹರುಷದಿಕಂಜನೇತ್ರಿಯರ ಉಪಚರಿಸಿ 1 ಪಾದ ಕಾಲ ತೊಳೆದಳು2 ಮಂದಗಮನೆಯರಿಗೆಲ್ಲ ಗಂಧ ಕಸ್ತೂರಿಯಿಟ್ಟುಅಂದವಾಗಿದ್ದ ಅರಿಷಿಣಅಂದವಾಗಿದ್ದ ಅರಿಷಿಣ ಕುಂಕುಮದಿಂದ ಇಂದುವದನೆಯರ ಉಪಚರಿಸಿ3 ಶ್ರೀದೇವಿಯರಿಗೆ ದಿವ್ಯ ಕ್ಯಾದಿಗೆ ಮಲ್ಲಿಗೆ ಮುಡಿಸಿ ಸುಗಂಧಿ ಕೇಶರ ವೀಳ್ಯವ ಸುಗಂಧಿಕೇಶರ ವೀಳ್ಯ ಅಡಿಕೆ ಕೊಟ್ಟುಮಾಧವನ ಮಡದಿಯರ ಉಪಚರಿಸಿ4 ಪಾದ ತೊಳೆದು ಪಾವನರಾಗಿ5
--------------
ಗಲಗಲಿಅವ್ವನವರು
ಪಾದವ ನುತಿಸುವೆ| ದೇವಿ ಜಯ ಜಯ ಪ ದಾತೆ ಜಯ ಜಯ ಅ.ಪ ರವಿಶಶಿಶೋಭಿತೆ| ಪಾವನಚರಿತೆ || ಕುವಲಯದಳ ಸು| ಶ್ಯಾಮಲೆ ಕೋಮಲೆ 1 ಗಾನವಿಲೋಲೆ| ಘನಗುಣಶೀಲೆ|| ದೀನಜನಾವಳಿ| ಪಾಲಯೆ ಸದಯೆ2 ಭಕ್ತವಶಂಕರೆ| ಭಜಕಸುಖಂಕರೆ|| ಮುಕ್ತಿದಾತೆ ಶಿವ| ಶಕ್ತಿಸ್ವರೂಪೆ 3
--------------
ವೆಂಕಟ್‍ರಾವ್
ಪಾದವನು ನಂಬಿದೆನೊ ಪರಮಪುರುಷಾ ಪಾವನನ ಮಾಡೆನ್ನ ಶ್ರೀರಂಗನಾಥ ಪ ಪಾದ ಪಾದ ಬಲಿಯ ಪಾದ ಪಾದ 1 ಪಾದ ಪಾದ ಪಾದ ಪಾದ 2 ಪಾದ ಪಾದ ಪಾದ 3 ಪಾದ ಪಾದ ಪಾದ ಪಾದ 4 ದುರುಳ ಕಂಸಾಸುರನ ಎದೆಯ ತುಳಿದ ಪಾದ ಮುಚುಕುಂದಗೆ ಮುಕ್ತಿಯನಿತ್ತ ಪಾದ ಕಿಚ್ಚು ಬಳಸಲು ಪರ್ವತವನೆತ್ತಿದ ಪಾದ5 ಶಿಲೆಯಾದ ಆಹಲ್ಯೆಯನು ಕಾಯ್ದ ಪಾದ ಪಾದ ಹರನ ಧನುವನು ಮುರಿದು ಜಾನಕಿಯ ತಂದ ಪಾದ ಪಾದ 6 ಪಾದ ಪಾದ ಸೇತುಬಂಧನ ಮಾಡಿ ಸೀತೆಯನು ತಂದ ಪಾದ ಪಾದ 7 ಪಾದ ಪಾದ ಪಾದ 8 ರಾಜಸೂಯಾಗದಲಿ ಪೂಜೆಗೊಂಡ ಪಾದ ಪಾದ ದಂತವಕ್ರಾದಿಗಳನು ಸೆಳೆದುಕೊಂಡ ಪಾದ ಪಾದ 9 ಕÀುರುಪಾಂಡವರಿಗೆ ಸಂಧಿಗೈತಂದ ಪಾದ ವಿದುರನಾ ಮನೆಯಲ್ಲಿ ಭೋಜನಗೈದ ಪಾದ ಪಾದ ದುರುಳ ದುರ್ಯೋಧನನ ಉರುಳಿಸಿದ ಶ್ರೀಪಾದ 10 ರಣದೊಳಗೆ ಅರ್ಜುನಗೆ ಸಾರಥಿಯಾದ ಪಾದ ದೊರೆ ಧರ್ಮಾದಿಗಳ [ನು] ಒಲಿದ ಪಾದ ಪಾದ ಪಾದ 11 ಪಾದ ಇಕ್ಷ್ವಾಕು ಶ್ರೀರಾಮರಾರಾಧಿಸಿದ ಪಾದ ಧರ್ಮವರ್ಮಾದಿ ಚೋಳೇಂದ್ರ ಪೂಜಿತ ಪಾದ ಪಾದ 12 ತೊಂಡಮಾನ್ ಚಕ್ರವರ್ತಿಗೊಲಿದು ಬಂದ ಪಾದ ಶೇಷಾದ್ರಿಗಿರಿಯಲ್ಲಿ ನೆಲೆಸಿರ್ಪ ಪಾದ ಪಾದ ಪಾದ 13 ಅಜನ ಯಜ್ಞಕುಂಡದೊಳಗುದಿಸಿ ಬಂದ ಪಾದ ಪಾದ ವ್ಯಾಧರೂಪಿನಲ್ಲಿ ನಡೆತಂದ ಶ್ರೀಪಾದ ಪಾದ 14 ಪಾದ ಯಾದವಾಗಿರಿಯಲ್ಲಿ ನೆಲೆಸಿರ್ಪ ಪಾದ ವರಸಂಧಿಗೃಹದಲ್ಲಿ ವಾಸವಾಗಿಹ ಪಾದ ಪಾದ 15 ಕರುಣದಿಂದರ್ಜುನಿಗೆ ಸಾರಥಿಯಾದ ಪಾದ ಕೈರವಿಣೀ ತೀರದಲಿ ನೆಲೆಸಿರ್ಪ ಪಾದಾ ರುಕ್ಮಿಣೀ ಬಲಭದ್ರರೊಡನೆ ಒಪ್ಪಿದ ಪಾದ ಕರುಣ ವೆಂಕಟಕೃಷ್ಣನೆಂಬೊ ಬಿರುದರಳ್ಳ ಪಾದಾ 16
--------------
ಯದುಗಿರಿಯಮ್ಮ
ಪಾದಸೇವೆಯ ಪಾಲಿಸೋ ಪಂಕಜನಾಭ ಪ ಭೂಧರ ವಿಹರಣ ಶ್ರೀಧರ ಹರಿ ನಿನ್ನಪಾದ ಅ.ಪ. ತನು ಶೋಷಿಸಿ ತಪನವಿಶೇಷವಾಚರಿಸೆ ಶೇಷಪರ್ವತಶಿರೋ ಭೂಷಣವೆನಿಸಿದ ಪಾದಸೇವೆಯ 1 ಬಲು ಬಳಲಿಸಿ ರಾಜ್ಯವ ಛಲದಿಂದಾ ಕ್ರಮಿಸೆ ಪಾದ 2 ಕುಲಸತಿಗೊಲಿದು ನಿರ್ಮಲತಪೋವನಕೆ ಸುಳಿದು ಆ ಲಲನೆಯ ಕಲುಷವಖಂಡಿಸಿ ಲಲನಾರೂಪವನಿತ್ತು ಸಲಹಿದ ಪಾವನ ||ಪಾದಸೇವೆಯ|| 3 ಗರಳ ನರನುತ್ತಮಾಂಗಕ್ಕೆ ಗುರಿಯಾಗಿ ಬರಲು ಚರಣ ದುಂಗುಟದಿಂದ ಧರಣೀತಳವನೂರಿ ನರನ ಶಿರವಕಾಯ್ದ ನರನಾರಾಯಣ ನಿನ್ನ ||ಪಾದ|| 4 ಪಿಡಿದು ಬಾಧೆಗೊಳಿಸೆ ವೇಗದಲಿ ಪುಲಿಗೆ ಮೋಕ್ಷವನಿತ್ತು ಪುಲಿಗಿರಿಯಲಿ ಮುನಿ ಕುಲಜ ಮಾಂಡವ್ಯಗೆ ಒಲಿದ ವರದ ವಿಠಲ ||ನಾರಾಯಣ||5
--------------
ಸರಗೂರು ವೆಂಕಟವರದಾರ್ಯರು
ಪಾದಸೇವೆಯ ಪಾಲಿಸೋ ಪಂಕಜನಾಭ ಪ ಪಾದಸೇವೆಯ ತೋರೋ ವೇದಗೋಚರ ವ್ಯಾಘ್ರ ಭೂಧರ ವಿಹರಣ ಶ್ರೀಧರ ಹರಿ ನಿನ್ನ ಅ.ಪ ಶೇಷವಾಯುಗಳತಿದೋಷವರ್ಜಿಸಿ ತನು ಶೋಷಿಸಿ ತಪನ ವಿಶೇಷವಾಚರಿಸೆ ದೋಷರಹಿತ ಗುಣಭೂಷಾ ಶೇಷನಿಗೊಲಿದು ಶೇಷಪರ್ವತ ಶಿರೋಭೂಷಣನೆನಿಸಿದ 1 ಬಲಿಚಕ್ರವರ್ತಿಯು ಬಲವೈರಿಯನು ಬಲು ಬಳಲಿಸಿ ರಾಜ್ಯವ ಛಲದಿಂದಾಕ್ರಮಿಸೆ ನಲಿದು ವಾಮನನಾಗಿ ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ ಬಲಿಯ ಮೆಟ್ಟಿದ ಧೀರ2 ಪಲಕಾಲ ಶಾಪದಿ ಶಿಲೆಯಾಗಿದ್ದ ಗೌತಮ ಕುಲಸತಿಗೊಲಿದು ನಿರ್ಮಲ ತಪೋವನಕೆ ಸುಳಿದು ಆ ಲಲನೆಯ ಕಲುಷವ ಖಂಡಿಸಿ ಲಲನಾರೂಪವನಿತ್ತು ಸಲಹಿದ ಪಾವನ 3 ತರಣಿತನಯನೆಚ್ಚ ಗರಳಶರವು ಬೇಗ ನರನುತ್ತಮಾಂಗಕೆ ಗುರಿಯಾಗಿ ಬರಲು ಚರಣದುಂಗುಟದಿಂದ ಧರಣೀತಳವನೂರಿ ನರನ ಶಿರವ ಕಾಯ್ದ ನರನಾರಾಯಣ ನಿನ್ನ 4 ಪುಲಿನಾಮದಸುರನು ಛಲದಿ ಮಾಂಡವ್ಯನ ಗಳವಪಿಡಿದು ಬಾಧೆಗೊಳಿಸೆ ವೇಗದಲಿ ಪುಲಿಗೆ ಮೋಕ್ಷವನಿತ್ತು ಪುಲಿಗಿರಿಯಲಿ ಮುನಿ ಕುಲಜ ಮಾಂಡವ್ಯಗೆ ಒಲಿದ ವರದವಿಠಲ ನಾರಾಯಣ5
--------------
ವೆಂಕಟವರದಾರ್ಯರು
ಪಾದಾ ಭಕ್ತರನ ಪೊರೆವ ಪಾದಾ ಪಾದಾ ಸಿರಿದೇವಿ ಉರದಲ್ಲಿ ಒಪ್ಪುವ ಪಾದಾ ಪ ಧರಣಿಪತಿ ಬಲಿಯನ್ನು ನೆಲಕೆ ಒತ್ತಿದ ಪಾದಾ ಸುರನದಿಯ ಹರುಷದಲಿ ಪಡೆದ ಪಾದಾ ಧುರದೊಳಗೆ ಪಾರ್ಥನ ಶಿರವ ಕಾಯ್ದ ಪಾದಾ ಸುರರು ಸನಕಾದಿಗಳು ವಂದಿಸುವ ಪಾದಾ 1 ಕೋಪದಲಿ ಉರಗನ ಪೆಡೆಯ ತುಳಿದ ಪಾದಾ ತಾಪಸರ ಮನಕೆ ನಿಲಕದ ಪಾದಾ ಭೂಪ ಕೌರವನ ತಲೆಕೆಳಗೆ ಮಾಡಿದ ಪಾದಾ ಕಾಪಾಲಿ ಪೂಜಿಸುವ ಕಡು ದಿವ್ಯ ಪಾದಾ2 ಹಸುಳೆತನದಲಿ ಶಕಟಾಸುರನನೊದೆದ ಪಾದಾ ಋಷಿಪತ್ನಿ ಶಾಪ ವಿಶ್ಶಾಪ ಪಾದಾ ಕರ್ತು ರಿಪು ವಿನಾಶ ಕರದಿ ಮೆರೆವ ಪಾದಾ ವಸುಧಿಯೊಳು ವಿಜಯವಿಠ್ಠಲನ ಪಾದಾ3
--------------
ವಿಜಯದಾಸ
ಪಾದಾನಂಬು ಮನವೇ|ಶ್ರೀರಂಗಯ್ಯನ| ಪಾದಾನಂಬು ಮನವೇ ವೇದಕಗೋಚರವಾದಾ ಪ ಹೆಜ್ಜೆಯರಡರೊಳು ಮೂಜಗವಡಗಿಸಿ| ನಿರ್ಜರ ನದಿಯ ಪಡೆದಾ 1 ಬಿಸಜಾಸಖಾ-ತನುಜ ಎಸಿಯೇ ವಾಸು ಕೀಶರಾ| ವಾಸವ ಜನ ಕಾಯ್ದಾ2 ಪಲವು ಕಾಲದಿ ಮುನಿ ಮುಳಿದ ಕಾರಣದಿಂದ ನೆಲದೊಳು ಶಿಲೆಯಾದ ಲಲನೆಯ ನುದ್ದರಿಸಿದ 3 ಮದವೇರಿ ಕುರುರಾಯ ಮೊದಲೇ ತಾಏಳದಿರೆ| ಬುಧಜನ ನೋಡಲಾಗ ವದಗ ದುರುಳಿಸಿದಾ 4 ಇಂದು ಧರಜರಕೈಯ್ಯಾ ಮದನೆಯನು ಕೊಳುವಾ| ತಂದೆ ಮಹಿಪತಿ ಸ್ವಾಮಿ ನಂದನ ಜೀವನವಾದಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾದಾವ ಕಂಡೆ ಕೇಶವ ಪಾದಾವ ಕಂಡೆ ಪ ಇಷ್ಟು ದಿನ ಕಷ್ಟಬಟ್ಟು ಶಿಷ್ಟ ಹೆಂಡತಿಯ ನೀಗಿ ಭ್ರಷ್ಟ ಮನಕೆ ತುಷ್ಟಿ ಇಲ್ಲದೆ ಇಷ್ಟ ಪುತ್ರರ ಕೂಡಿ ಬಂದು ಪಾದಾವ ಕಂಡೆ 1 ಬಡಲಾರದ ಭವಣಿ ಬಿಟ್ಟು ಕಡುಪಾಪಿ ಎಂದೆನಿಸಿಕೊಂಡು ಬಡತನದಲ್ಲೆ ಬಾಳಿಕೊಂಡು ಅಡಿಗಡಿಗೆ ನಿನ್ನನ್ನೆ ನೆನೆಯುತ ಪಾದಾವ ಕಂಡೆ 2 ಸರಿಬಂದದ್ದು ನೀನೇ ಮಾಡಿದಿ ಮರೆಯೆ ಹರಿ ನಿನ್ನುಪಕಾರ ಭರದಿ ಎನ್ನ ಕೈಯ ಪಿಡಿದು ಪೊರೆಯಯ್ಯ ನರಸಿಂಹ ವಿಠಲ ಪಾದಾವ ಕಂಡೆ 3
--------------
ನರಸಿಂಹವಿಠಲರು