ಒಟ್ಟು 13948 ಕಡೆಗಳಲ್ಲಿ , 132 ದಾಸರು , 6945 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೊ ಶ್ರೀ ಗುರುರಾಜ ಬರದ್ಯಾಕೆ ಎನ್ನೊಳು ದಯ ಪ ದಯಮಾಡೊ ಶ್ರೀ ಗುರುರಾಜ ಹಯವದನನಿಗತಿ ಪ್ರಿಯ ಅ.ಪ ಒಲಿಸಾದೆ ವಿದ್ಯೆಗಳನ್ನು ಬಾಲತನದಿ ಬಹುಕಾಲ ಕಳೆದೆ ಕುಲೀಲೆಗಳಲ್ಲಿ ಛಲವ್ಯಾಕೆ ಎನ್ನೊಳು ಬಲ್ಲಿ 1 ಜ್ಞಾನರಹಿತ ಪ್ರಾಯದಿ ಮಾನಾಪೇಕ್ಷೆಯನೆ ಮಾಡಿ ಮೌನಿ ವೇಷವನೆ ಧರಿಸಿ ಹೀನಾಚರಣೆಯಲ್ಲಿರುವೆ 2 ಪತಿತಾಗ್ರಣಿಯು ನಾ ಬಲ್ಲಿ ಪತಿತಪಾವನ ನೀ ಬಲ್ಲೆ ಗತಿಪದ ಮತಿಯನಿತ್ತು ರತಿಪತಿಪಿತನ ತೋರಿ3 ಬಲ್ಲವರನು ರಕ್ಷಿಪುದು ಅಲ್ಲ ಬಿರುದು ಘನವಾದ್ದು ಅಲ್ಪನ ಪೊರೆಯಲು ನಿನಗೆ ಒಳ್ಳೆ ಕೀರುತಿ ಬರುವುದು 4 ಸರ್ವಜ್ಞ ನಿನಗೆ ನಾನೆಂತೋ ಉರ್ವೀಭಾರನು ನಾ ಪೇಳ್ವೆ ಪರ್ವ ಪಂಚಕಗಳ ಕಳೆ ಶ್ರೀ ನರಹರಿಯನೆ ಪೊಂದಿಸಿ 5
--------------
ಪ್ರದ್ಯುಮ್ನತೀರ್ಥರು
ಕರುಣಿಸೋ ಸ್ವಾಮಿ ನೀಪೂರ್ಣ ಸಾರಸದ್ಗತಿ ಭೂಷಣಾ ತಾರಿಸೋ ಯನ್ನ ನೀ ಪ್ರಾಣಾ ಶ್ರೀ ಹರಿ ಕಂಜಲೋಚನಾ 1 ಸ್ವಾಮಿ ನೀ ಸರ್ವ ಸಾಕ್ಷಾತಾ ಬ್ರಹ್ಮಾದಿದೇವ ವಂದಿತಾ ಮನೋಹರ ಪ್ರಖ್ಯಾತಾ ನೇಮ ನೀ ಕಾಮ ಪೂರಿತಾ 2 ಹಸ್ತಿಗೊಲಿದ ಸುದಾತಾ ವಸ್ತು ಶ್ರೀದೇವ ನಿಶ್ಚಿತಾ ನಿಸ್ತರಿಸುವಾ ಶ್ರೀನಾಥಾ ಕಸ್ತೂರಿರೇಖಾ ಶೋಭಿತಾ 3 ನೀನೆ ನಮಸ್ತ ಕಾಧಾರಾ ಶ್ರೀನಿಧಿ ಜ್ಞಾನ ಸಾಗರಾ ದೀನ ಜನರ ಮಂದಾರಾ ಪೂರ್ಣಾನಂದದಾಗರಾ 4 ಮಹಿಪತಿ ಸ್ವಾಮಿ ಶ್ರೀಪತಿ ಕಾಯೋ ನೀ ಲಕ್ಷ್ಮೀಪತಿ ಶ್ರೀ ಹರಿ ದಿವ್ಯಸುಮೂರ್ತಿ ದೋರೋ ನೀ ದಿವ್ಯಸಂಗತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣೆ ತೋರಿಸೊ ದೇವಾ ಕರಿವರದನೆ ಪ. ಕರುಣ ತೋರಿಸೊ ದೇವ ಗರುಡಗಮನ ನಿನ್ನ ಕಮಲ ಧ್ಯಾನ ನಿರುತ ನೆನೆವ ಹರಿಅ.ಪ. ವೇದಾಂತ ವೇದ್ಯ ನೀನೆ ಆದಿನಾರಾಯಣ ಸಾಧುವಂದಿತನು ನೀನೆ ದೇವೇಶನೆ ವೇದವ್ಯಾಸನು ನೀನೆ ಬಾದರಾಯಣ ನೀನೆ ಭವ ಭಯಹರ ನೀನೆ 1 ಚಿಂತೆ ಕೊಡುವ ನೀನೆ ಚಿಂತಿತಾರ್ಥನು ನೀನೆ ಅಂತಕ ದೂತರಿಂದೆಳೆಸುವ ನೀನೆ ಸರ್ವ ಅಂತರ್ಯಾಮಿ ಅಂತÀರಂಗದಿ ನಿಂತು ಪ್ರೇರಿಸಿ ನಿನ ಪಾದ ಪಂಥದಿ ಸ್ತುತಿಗೊಂಡು ಸಂತಸ ಪಡುವವ ನೀನೆ2 ಮಾನುನಿ ದ್ರೌಪದಿಯಾ ಮೊರೆಯ ಕೇಳಕ್ಷಯ ನೀನೆ ಪಾಲಿಸಲಿಲ್ಲವೆ ಶ್ರೀ ಕೃಷ್ಣ ನೀನಿತ್ತು ಸಲಹಿದ ಶ್ರೀ ಶ್ರೀನಿವಾಸ ದೊರೆ ಗಾನಲೋಲನೆ ಭಕ್ತರ ಸಲಹುವೆನೆಂಬುವ ಆಭಯ ಹಸ್ತವ ನೀನಿತ್ತು ಸಲಹೆನ್ನದೇವಾಧಿದೇವ 3
--------------
ಸರಸ್ವತಿ ಬಾಯಿ
ಕರೆಕರೆಯಿದು ಸಂಸಾರವತಿ ಘೋರ ಪ ಹರಿಯನು ನೆರೆನಂಬಿ ಪರಮಸುಖವ ಪೊಂದು ಅ.ಪ ದುರಿತವು ಪರಿಹರವಾಗುವದು ಅರಗಿಗೆ ಬೆಂಕಿಯಿಟ್ಟ ತೆರನಾಹುದು ಮುಂದೆ 1 ಎಷ್ಟು ಗಳಿಸಿದರೂ ಸಾಲದು ಎಂದು ಕಷ್ಟವ ಪಡುವೆಯೊ ಅನುದಿನದಿ ಕೃಷ್ಣಗೆ ಪ್ರೀತಿ ಮಾಡು ಶಿಷ್ಟರಂಘ್ರಿಯ ಬೇಡು 2 ಒಂದೇ ಭಕುತಿಯಿಂದ ಕೊಂಡಾಡೊ ಅಂಧ ಪರಂಪರ ನೋಡಿದರೆ ಅಪಾರ 3
--------------
ಗುರುರಾಮವಿಠಲ
ಕರೆತಾರೆ ಕರೆತಾರೆ ಕರೆತಾರೆ ಸಖಿಜರ ಜರತಾರಿ ನೀರೆ ಅವರ ಸುರತ ರಂಗಯ್ಯನ ಗುರುತದ ಮಡದಿಯರ ಕರೆ ತಾರೆ ಪ. ಸೃಷ್ಟಿಗಧಿಕವಾದ ಪಟ್ಟಾವಳಿಯ ಸೀರೆಘಟ್ಟಿ ಕಂಕಣವ ನಡುವಿಟ್ಟುಘಟ್ಟಿ ಕಂಕಣವ ನಡುವಿಟ್ಟು ತಂದೆವ ಧಿಟ್ಟ ದ್ರೌಪತಿಗೆ ಉಡುಗೊರೆ 1 ಖಡ್ಡಿ ಪೈಠಣ ಸೀರೆ ದೊಡ್ಡ ಮುತ್ತಿನ ದಂಡೆಕಡ್ಡಿ ಬಳೆ ದೋರೆ ನಡುವಿಟ್ಟುಕಡ್ಡಿ ಬಳೆ ದೋರೆ ನಡುವಿಟ್ಟು ತಂದೆವಗುಣಾಢ್ಯ ಸುಭದ್ರಾಗುಡುಗೊರೆ2 ಅತ್ತಿ ಹೂವಿನ ಸೀರೆ ಕುತನಿ ಕುಪ್ಪುಸ ಸುತ್ತು ಮುತ್ತಿನ ನೆನೆದಂಡೆ ಸುತ್ತು ಮುತ್ತಿನ ನೆನೆದಂಡೆ ತಂದೆವ ಮಿತ್ರಿ ವೃಂದಾಗೆ ಉಡುಗೊರೆ 3 ಮೋತಿ ಚೂರಿನ ಸೀರೆ ಜಾತಿ ಮುತ್ತಿನ ದಂಡೆ ನೂತನವಾದ ಚವರಿಯ ನೂತನವಾದ ಚವರಿ ರಾಗಟೆಗೊಂಡೆಯ ಕಂಠಿ ಕಾಳಿಂದಿಗೆ ಉಡುಗೊರೆ4 ಸಾರಸನ ಸೀರೆ ತೋರ ಮುತ್ತಿನ ದಂಡೆಹಾರ ಪದಕಗಳ ನಡುವಿಟ್ಟುಹಾರ ಪದಕಗಳ ನಡುವಿಟ್ಟು ತಂದೆವನಾರಿ ಲಕ್ಷಣಾಗೆ ಉಡುಗೊರೆ5 ಅಂಬುಜಾಕ್ಷಿಗೆ ತಕ್ಕ ಗೊಂಬಿ ಪೈಠಣಿಸೀರೆ ಜಂಬುದ್ವೀಪದ ನೆನಿದಂಡೆ ಜಂಬುದ್ವೀಪದ ನೆನಿದಂಡೆ ತಂದೆವಜಾಂಬವಂತಿಗೆ ಉಡುಗೊರೆ6 ಸಾವಿರಕಬೆಲಿಯಾದ ಸೇಲ್ಯಾವಲಿ ಜವಳಿವೀರ ರಾಮೇಶನ ಮನಮೆಚ್ಚಿವೀರ ರಾಮೇಶನ ಮನಮೆಚ್ಚಿ(ದ) ಹದಿನಾರು ಸಾವಿರ ನಾರಿಯರಿಗೆ ಉಡುಗೊರೆ7
--------------
ಗಲಗಲಿಅವ್ವನವರು
ಕರೆತಾರೆ ನೀ ಮನದಾ ಮೋಹನನಾ ಸುಜ್ಞಾನೇ ಪ ಸ್ಮರನ ಬಾಣಕ ಶಿಲ್ಕಿ ಬಲಿಯೊಳಗಾದೆ | ಹರಿಯಾ ನಗಲಿ ಅಸುವಿಡಿಯೇ ನಿನ್ನಾಣೆ 1 ಮರುಳು ಮಾನಿನಿಯಳ ಮಾನ್ಯಳ ಮಾಡೀ | ಕೊರತೆ ನೋಡುವದಿನ್ನು ಉಚಿತವೇ ಜಾಣೆ 2 ಗುರುವರ ಮಹಿಪತಿ ನಂದನ ಸ್ವಾಮಿ | ಕರುಣಾ ಸಾಗರನೆಂಬಾ ಬಿರುದ ಕಿದೇನೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕರೆದರೆ ಓ ಓ ಎನಬಾರದೆ ಮರೆತರು ಕೂಗಿನ ದನಿಕೇಳದೆ ರಂಗ ಪ ಶರಣಜನರು ಸಾಸಿರವಿದ್ದರೇನೋ ಮೊರೆಯಿಡುವವ ಕಂಡರರಿವಾಗದೇನೋ ಅ.ಪ ಲಕ್ಷಜೀವಿಗಳನ್ನು ರಕ್ಷಿಸುವವನೆಂದು ವಕ್ಷದೊಳಿರುವ ಶ್ರೀಲಕ್ಷ್ಮಿ ಹೇಳುವಳು ಪಕ್ಷಿರಾಜನ ಫಣಿಯಕ್ಷನಂಗನೆಯರು ಅಕ್ಷರ ಲೋಕಾಧ್ಯಕ್ಷನೆನುವರು 1 ಯೋಗವನರಿಯೆನು ಯಾಗವನರಿಯೆನು ತ್ಯಾಗ ಮಾಡುವ ಬುದ್ಧಿ ಎಳ್ಳನಿತಿಲ್ಲ ರಾಗ ರಚನೆಗಳ ಅರಿವೆನಗಿಲ್ಲ ನಾಗಶಯನ ಕಾಯೋ ಮಾಂಗಿರಿರಂಗ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕರೆದಳು ತನ್ನ ಮಗನ ಯಶೋದೆ ಕರೆದಳು ತನ್ನ ಮಗನ ಪ. ಪರಮಪುರುಷ ಹರಿ ಶರಣರ ಸುರತರು ತುರು ತುರುಯೆಂಬ ಕೊಳಲನೂದುತ ಬಾರೆಂದು ಅ.ಪ. ಅಂದುಗೆ ಕಿರುಗೆಜ್ಜೆ ಘಲುಘಲುಕೆನುತಲಿ ಚಂದದಿ ಕುಣಿವ ಮುಕುಂದನೆ ಬಾರೆಂದು 1 ಹೊನ್ನುಂಗುರುಡಿದಾರ ರನ್ನ ಕಾಂಚಿಯದಾಮ ಚೆನ್ನಾಗಿ ಹೊಳೆವ ಮೋಹನನೆ ಬಾರೆಂದು 2 ಸಾಮಗಾನವಿಲೋಲ ಜಾಲವ ಮಾಡದೆ ಸ್ವಾಮಿ ಹೆಳವನಕಟ್ಟೆ ರಂಗ ನೀ ಬಾರೆಂದು 3
--------------
ಹೆಳವನಕಟ್ಟೆ ಗಿರಿಯಮ್ಮ
ಕರೆದು ತನ್ನಿ ಭರದಿಬನ್ನಿ ಸಿರಿಯನಿದಿರ್ವಂದು ನೀವು ಸಿರಿಯನಿದಿರ್ವಂದು ಭರದಿ ಕರೆದುತನ್ನಿ ಮೋದದಿ ಪ. ಕೋಟಿಸೂರ್ಯಚಂದ್ರರೆನಿತುಂ ಸಾಟಿಯಲ್ಲವೆನಿಸುವ ನೋಟಮಾತ್ರದಿಂದ ಜಗವ ನಾಟ್ಯರಂಗ ವೆನಿಸುವ 1 ಕಡಲ ತನಯೆ ಎನಿಸೆ ಮತ್ತೆ ಕಡಲಮಧ್ಯದಲ್ಲಿ ನೆಲಸಿ ಕಡಲಶಯನನ ಮಡದಿಯಾಗಿ ಬಿಡದೆ ನಮ್ಮ ಪೊರೆವಳ 2 ಶೇಷಶೈಲವಾಸನುರದಿ ವಾಸವಾಗಿ ಶರಣರ ಆಸೆಯನ್ನು ನಲಿಸುತಿರುವ ಭಾಸುರಾನನೆ ಲಕ್ಷ್ಮಿಯ 3
--------------
ನಂಜನಗೂಡು ತಿರುಮಲಾಂಬಾ
ಕರೆದುತನ್ನಿರೊ ಕನ್ನಗಾರನ ಹರಿಯ ಗು[ಣ]ಗಳ ಕದ್ದ ಹಗಲುಗನ್ನಗಾರನ ಪ. ರೂಪವಿಲ್ಲ ಗುಣ [ವಿಲ್ಲಾತನೆ] ಪರಬ್ರಹ್ಮನೆಂಬ ಪಾಪಿಗನ್ನ ಕರೆದು ಮುಖಭಂಗಿತನ್ನ ಮಾಡಿರೊ 1 ಹರಿ ಇಲ್ಲ ಗುರುಇಲ್ಲ ಹರಿಹರರು ಒಂದು ಎಂಬೊ ಶಿರಕೆ ಪಿತ್ತ ಅಡರಿದಂ[ಥ]ಮರುಳು ಮಾತುಗಾರ[ನೆ] ವೇದಶಾಸ್ತ್ರ ಹುಸಿಯೆಂದು ಸಾಧುಜನರ ಕಾಡುತಿಹನು [ಕಾದಿ]ತಮಸಿನೊಳಗೆ ಬಿದ್ದು ಕಾಣ ಹಯವದನನ್ನ 3
--------------
ವಾದಿರಾಜ
ಕರೆದೂ ಕೈ ಪಿಡಿಯೊ ಎನ್ನಾ ಗುರುವರ ಮುನ್ನಾಕರೆದೂ ಕೈ ಪಿಡಿಯೊ ಎನ್ನಾ ಪ ಪರಿ ಪರಿಯಿಂದಲಿ ಅ.ಪ. ಪಸುಳೆ ತಪ್ಪನು ಮಾಡೆ | ಶಿಶುವ ಕರೆಯಳ ಜನನಿಕಸವಿಸಿ ಕಳೆದೆನಗೆ | ಕುಶಲವ ನೀಯೋ ||ಕಸರು ಕರ್ಮವ ಕಳೆದು | ಬಿಸಜನಾಭನ ಹೃನ್‍ಮುಸುಕಿಲಿ ತೋರಿಸಿ | ಪಸರಿಸು ಜ್ಞಾನವ 1 ಮಾನವ ನಾನು | ನಿನ್ನ ಮಹಿಮೆಯನ್ನಯೇನ ಬಣ್ಣಿಪೆನಯ್ಯ | ಘನದಯಾ ಪೂರ್ಣ 2 ಚಾರು ವಾರಿಧಿ ಗುರುವೇ |ಆರೂ ಕಾಯುವರಿಲ್ಲ | ಸಾರಿದೆ ತವ ಚರಣಭೋರಿಟ್ಟು ಮೊರೆಯಿಡುವೆ | ಧೀರ ಕಾಯಲಿ ಬೇಕೊ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕರೆದೆಡೆಗೆ ತಾ ಬರುವ ಕರೆದೆಡೆಗೆ ತಾ ಬರುವ ಪ ಬರುವೆ ತರುವ ಸುಖವ ಮುರುಳೀಧರನು ಅ.ಪ ತಿಳಿಯ ಭಕುತಿಯ ಪಡೆದ ಜನರಿಗೆ ಗೆಳೆಯನಿವ ಬಲು ಸುಲಭನು ಇಳೆಯಸುರರಾದರದಿ ಕರೆಯಲು ಹರುಷದಲಿ ನಲಿನಲಿಯುತಲಿ 1 ಸದನದಲಿ ಹದನಿಲ್ಲ ಈತನಿ ಗೊದಗಿಸುವುದತಿ ಸಾಹಸ ವಿಧಿಯ ಬರಹವು ಇಲ್ಲವೆನುತಲಿ ಹೆದರದಿರಿ ಮಧುಸೂಧನನು 2 ಇದು ನನದು ಇದು ನನದು ಎನುವ ಮದದ ವಚನಕೆ ನಗುತಲಿ ಇದು ನಿನದು ಎನ್ನಲು ಪ್ರಸನ್ನನು ವಿದುರನಾಲಯ ಪೊಕ್ಕಿಹ3
--------------
ವಿದ್ಯಾಪ್ರಸನ್ನತೀರ್ಥರು
ಕರೆವರು ಬಾ ಮನೆಗೆ ಶ್ರೀ ಕೃಷ್ಣ ಮೂರ್ಜಗಂಗಳಿಗೆ ರಾಜಾಧಿರಾಜ ಪ ರಾಜಿಸುವ ಸೋಜಿಗದ ಬಲು ಸೋಜಿಗದ ಮನೆಗೆ ಶ್ರೀ ಕೃಷ್ಣ ಅ.ಪ ಸಾರಸಲೋಚನೆ ಭೀಷ್ಮಕ ಕುವರಿ ನೂರು ವಿಧದ ಬಲು ಪರಿಮಳದ ಚಾರು ಕುಸುಮಗಳ ಹಾರವ ಪಿಡಿದು ಮಾರಜನಕ ನಿನ್ನ ಕೋರುವಳು 1 ಚಿತ್ತಜನಯ್ಯನ ಚಿತ್ತದ ರಾಣಿ ಯತ್ನದಿ ನಿನ್ನನು ಕರೆಸಿದಳು ಚಿತ್ರವಿಚಿತ್ರದ ಮುತ್ತುರತ್ನಗಳ ಉತ್ತಮ ಪೀಠಕೆ ದಯಮಾಡೊ 2 ಯದುಕುಲ ನಂದನ ನೀ ಬಾರೋ ಮಧುರಾನಾಥಾ ನೀ ಬಾರೋ ಮದಗಜಗಮನದಿ ಬಾರೊ ಪ್ರಸನ್ನ ವದನೆಯರಾರತಿ ಬೆಳಗುವರು3
--------------
ವಿದ್ಯಾಪ್ರಸನ್ನತೀರ್ಥರು
ಕರ್ಮ ಕಾಟಿಗಾಗಿ | ಮೇಲುಗಿರಿರಾಯ ನಿನ್ನ ||ಕಾಲಿಗೆನ್ನ ಶಿರವನಿಟ್ಟೆ | ಸಾಲ ಬೇಡುವವನಂತೆ ಪ ದಡವ ಸೇರಿಸೆನ್ನ ದೈನ್ಯ | ನುಡುಗಿ ತಡೆಯದೆ ||ಬಡವನೆಂದುದಾಸೀನವ | ಮಾಡಿ ನೋಡದೆ 1 ಹಲವು ದೇವಂಗಳಿಗೆ ನಾನು | ಹಲುಬಿ ಬಳಲಿದೆನಯ್ಯ ಸ್ವಾಮಿ || ಫಲವ ಗಾಣದೆನೊಂದು ಬೆಂದು | ತಿಳಿಯದಾದೆ ತಪ್ಪು ಎಂದು 2 ಪುಂಡಲೀಕ ವರದನಾಗಿ | ಪಾಂಡುರಂಗನೆನಿಸಿಕೊಂಡು ||ಗಂಡದೈವ ವೆಂಕಟೇಶ | ಭಂಡು ಮಾಡದೆ ರುಕ್ಮನಾ 3
--------------
ರುಕ್ಮಾಂಗದರು
ಕರ್ಮ ಮಾಳ್ಪ | ಜಾಣ ಬಾರೋ ಪ ಪಂಚ ರೂಪದಿ ಪ್ರಾ | ಪಂಚ ವ್ಯಾಪ್ತ ಬಾರೋ |ಹಂಚಿಕೇಲಿ ದೈತೇಯರ | ವಂಚಕನೆ ಬಾರೋ1 ಕರ್ಮ | ಗೈವಾಪಾನ ಬಾರೊ |ವಾಯುವ ನೀ ನಿರೋಧಿಸೆ | ಕಾಯ್ವರ್ಯಾರೋ 2 ಭಾರ ಹೊರೆವ || ವ್ಯಾನ ಬಾರೋ |ಪ್ರಾಣ ಪಂಚವ್ಯೂಹ ಮುಖ್ಯ | ವ್ಯಾನ ಬಾರೊ 3 ಉದಕ ಅನ್ನಕ್ಕವಕಾ | ಶುದಾನ ಬಾರೊ |ಮುದದಿ ಶ್ವಾಸಮಂತ್ರ ಜಪ | ಜಾಣ ಬಾರೋ 4 ವೈದಿಕ ಲೌಕಿಕ ಶಬ್ದ | ನುಡಿಸೆ ಬಾರೊ |ಊಧ್ರ್ವಗತಿ ದಾತನೆ | ಉದಾನ ಬಾರೋ 5 ಪಾನ ಅನ್ನಗಳ್ಹಂಚೆ ಸ | ಮಾನ ಬಾರೊ |ಧ್ಯಾನ ವಿಂತು ಈವ ಮುಖ್ಯ | ಪ್ರಾಣ ಬಾರೊ 6 ಕರುಣಸಾಗರ ದೇಹ ವೀಣೆ | ಚರಿಸೆ ಬಾರೊ |ಗುರು ಗೋವಿಂದ ವಿಠಲಾಧಿಷ್ಠಿತ | ಗುರುವೆ ಬಾರೋ 7
--------------
ಗುರುಗೋವಿಂದವಿಠಲರು