ಒಟ್ಟು 4540 ಕಡೆಗಳಲ್ಲಿ , 127 ದಾಸರು , 2949 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮ ಮಂಗಳ ಮೂರುತಿ ದಿವ್ಯಕೀರುತಿ | ಧರೆಯೊಳಗಿದೆ ವಾರುಕಿ ಪ ಕರವ ಪಿಡಿದು ಎನ್ನ | ಕರವ ಮಸ್ತಕ ಬಾಗಿಪೆ 1 ಪಾದ ಲಾಘವ ಮರೆಯಲ್ಲಿ | ಶ್ಲಾಘನ ಮಾಡಿದ ಮಾಘಧರನ ಪ್ರಿಯ 2 ನಿರುತ ಮಂತ್ರಾಲಯ ಪುರವಾಸಾ ಅಘನಾಶಾ| ಸಿರಿ ವಿಜಯವಿಠ್ಠಲನ ಚರಣ ಭಜಿಪ ಗುರುವೆ 3
--------------
ವಿಜಯದಾಸ
ಪರಮಪದವಿಯನೀವ ಗುರುಮುಖ್ಯ ಪ್ರಾಣನಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೊ ಪ ಅಂದು ತ್ರೇತಾಯುಗದಿ ಹನುಮನಾಗವತರಿಸಿಬಂದು ದಾಶರಥಿಯ ಪಾದಕೆರಗಿಸಿಂಧುವನು ದಾಂಟಿ ಮುದ್ರಿಕೆಯಿತ್ತು ದಾನವರವೃಂದಪುರ ದಹಿಸಿ ಚೂಡಾಮಣಿಯ ತಂದವನ1 ದ್ವಾಪರಯುಗದಲಿ ಭೀಮಸೇನನೆನಿಸಿಶ್ರೀಪತಿಯಪಾದ ಕಡು ಭಜಕನಾಗಿಕೋಪಾವೇಶದಲಿ ದುಶ್ಶಾಸನನನು ಸೀಳಿಭೂಪನ ಜಲದೊಳಗೆ ಕರೆಕರೆದು ಜರೆದವನ 2 ಕಲಿಯುಗದಲಿ ತುರೀಯಾಶ್ರಮವನೆ ಧರಿಸಿಕಲುಷದ ಮಾಯಿಗಳನೆ ಸೋಲಿಸಿಖಿಲವಾದ ಮಧ್ವಮತವನು ಬಲಿದೆನಿಸಿ ಕಾಗಿನೆಲೆಯಾದಿಕೇಶವನೆ ಪರದೈವನೆಂದವನ 3
--------------
ಕನಕದಾಸ
ಪರಮಪುರುಷ ನಿನಗೆ ಪ ಅನಾದ್ಯನಂತ ಕಾರಣ ಸರ್ವತ್ರ ತುಂಬಿರುವಗೆ ಅ.ಪ ಬಲಿಯ ದಾನವ ಬೇಡುವ ಕಾಲದಿ ನೆಲನಯೀರಡಿಯ ಗೈದು ತಳತಳಿಸುವ ದಿವ್ಯ ಪದದಿ ಚೆಲುವ ಗಂಗೆಯ ಪಡೆದವನಿಗೆ 1 ಅನೇಕ ಪಾದಗಳೆಂದು ನಿನ್ನ ಅನುತಿಹವು ಶ್ರುತಿ ತತಿಗಳು ಅವಧಿಕಾರಿಯಾದ ಮೂಢ ನಾನು ಅಲ್ಪಮತಿಯು ಸ್ವಾಮಿಯೇ 2 ಮೌನಿ ಸತಿಯಳ ಶಾಪ ಬಿಡಿಸಿದ ಪಾದಕ್ಕೆ ವನಜದಳವ ಪೋಲ್ವ ಚೆಲುವ ಪಾದಕ್ಕೆ ದನುಜರಿಪು ಗುರುರಾಮ ವಿಠಲ ಪಾದಕ್ಕೆ 3
--------------
ಗುರುರಾಮವಿಠಲ
ಪರಮಪುರುಷ ಯದುಕುಲೇಶ ಶರಧಿ ಮಂದಿರವಾಸ ಶ್ರೀಶ ಪ ಪರಮ ಹರುಷದಿಂದಲೀಗ ಉರುಟನೆಯ ಮಾಡುವೆನು ಅ.ಪ. ನೀಲಮೇಘ ವರ್ಣ ನಿನ್ನ ಬಾಲಶಶಿಯ ಪೋಲುವಂಥ ಫಾಲವನ್ನು ತೋರುಬೇಗ ಕುಂಕುಮವ ಹಚ್ಚುವೆನು 1 ವಾರಿಜಾಕ್ಷ ಮಾರಜನಕ ವಾರಿನಿಧಿ ಗಂಭೀರ ಸುಗುಣ ತೋರು ನಿನ್ನ ಚರಣಗಳನು ಅರಿಸಿನವ ಹಚ್ಚುವೆನು 2 ಸುಂದರಾಂಗ ಮಂದಹಾಸ ಕುಂದರನೆ ಸಿಂಧುಶಯನ ಕಂಧರವ ತೋರು ಬೇಗ ಗಂಧವನು ಹಚ್ಚುವೆನು 3 ಕುಸುಮ ನೇತ್ರ ಕುಸುಮಪೀಠ ಸ್ತೋತ್ರ ಪಾದ ಕುಸುಮ ಮಾಲೆ ಹಾಕುವೆನು 4 ಚಾರು ಚರಿತ ಕರಿಗಿರೀಶ ಆರತಿಯ ಬೆಳಗುವೆನು ತೋರು ತವ ಮುಖಾರವಿಂದ 5
--------------
ವರಾವಾಣಿರಾಮರಾಯದಾಸರು
ಪರಮಪ್ರೀಯಾ ದಾಸರಾಯಾ | ಸತ್ಕವಿಜನಗೇಯಾ ಪ ಸುರತರು | ಕರಿಗಿರಿ ನಿಲಯನೆಉರುಗಾಯನ ಸಂದರುಶನ ಕೊಡಿಸಯ್ಯ ಅ.ಪ. ಆರ್ಮೂರೇಳು ನಾಲ್ಕೆಂಟು ಗ್ರಂಥ | ಅವುಗಳ ಸಾರಾರ್ಥಸಾರುತ್ತ ಭಕುತರಿಗೆ ಪುರುಷಾರ್ಥ | ಮಾರ್ಗವ ತೋರುತ್ತ ||ಚಾರು ಚರಿತ ಶ್ರೀರಮಾರಮಣನಗುಣವಾರಿಧಿಯೊಳು ಬಹು ಈಸಿದ ನಿಪುಣ 1 ಪಥ ಪುನರುದ್ಧರಿಸಿದ 2 ಪರತತ್ವ ಸಾರಾಂಬುಧಿ ಬೆಳಗುವನ ಪರಿಪರಿಕಲೆಯವನಶರಣರ ಹೃತ್ತಾಪವ ಹರಿಸುವನ | ನಿರತೈಕರೂಪನನಪರಮಾರ್ಥೇಂದು ವರೋದಯ ಕರುಣಿಸಿಧರಣಿಯ ಸುರರನು ಪೊರದೆಯೊ ಗುರುವೆ 3 ಅಂಕೀತವಿಲ್ಲದ ದೇಹಗಳೊಂದು | ನಿಷಿದ್ಧವೆಂದೂಪಂಕಜಾಕ್ಷನ ನಾಮಗಳೊಂದೊಂದು | ಬಳಸುತ ನೀನಂದೂ ಅಂಕನ ಗೈಧರಿ ಲೆಂಕತನವನಿತ್ತುಬಿಂಕದಿ ಜನ ಹೃತ್ಸಂಕಟ ಕಳೆದೀ 4 ಬಿಂಬೋಪದೇಶವೆ ತಾರಕವೆಂದೂ | ನಿಸ್ಸಂಶಯವೆಂದೂಹಂಬಾಲ ಹಚ್ಚುತ ಶರಣರಿಗೆಂದೆಂದೂ | ಕರುಣಾ ಸಿಂಧೂಬಿಂಬನು ಗುರುಗೋವಿಂದ ವಿಠಲ ಪಾದಾಂಬುಜದಲ್ಯನ ಹಂಬಲವಿರಿಸಿದೆ 5
--------------
ಗುರುಗೋವಿಂದವಿಠಲರು
ಪರಮೇಶ್ವರ ಪೂರ್ಣ ತುಂಬ್ಯಾನ ಪರಾಮರಿಸಿ ನಿಮ್ಮೊಳಗೆ ಪರದೆ ಇಲ್ಲದೆ ಪರವಸ್ತುದೋರುವ ಕರುಣಿಸಿ ನಿಮಿಷದೊಳಗೆ ಸದ್ಗುರು ಜಗದೊಳಗೆ ಎರಡಿಲ್ಲದೆ ಗುರುಚರಣಕ ಮನಬೆರೆದನುಭವಿಸುವದಾವಾಗೆ ತ್ರಾಹಿ ತ್ರಾಹಿ 1 ನಿಜಮಾಡುವದೆಲ್ಲ ಡಾಂಭಿಕ ಮಾಡದು ತಾ ನಿಜಸುಖ ಕೂಡಲು ಪುಣ್ಯೊದಗ್ಯಾಗಲು ಗುರುಕೃಪೆ ನೋಡುದು ಕೌತುಕ ಗೂಡಿನೊಳನೇದಾ ತ್ರಾಹಿ ತ್ರಾಹಿ 2 ರಾಜಿಸುತಿಹ್ಯ ಶ್ರೀಪಾದ ಅನುದಿನ ತಾ ಸೇವಿಸಬೇಕು ಸುಬೋಧ ಮಾಜದೆ ಗುರುಚರಣಕ್ಕೆ ತನುಮನಧನ ಭಜಿಸಬೇಕು ಸರ್ವದಾ ರಾಜಯೋಗಪ್ರಸಾದ ತ್ರಾಹಿ ತ್ರಾಹಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪರಾಕು ||ಕಂದ|| 1ಗುಂಜಾಭರಣದ ಚೆಲುವನೆಮಂಜೀರಾಭರಣದ ಪಾದಪದ್ಮನೆ ನಮ್ಮಯಸಂಜೀವನ ನೋಡು ನಮ್ಮನುಕಂಜಾಕ್ಷನೆ ಬಾಲಕೃಷ್ಣರಾಯ ಪರಾಕೈ 2ಉದಯಲಿ ಗೋವು ಗೋವಳರೊದಗಲು ವನಕೈದಿಯಾಡಿ ಬಂದೈಯೆನ್ನುತಪದಕೆರಗುವರೆಡ ಬಲದೊಳುಸುದತಿಯರೆಲೆ ಮುದ್ದು ಮೋಹನ ಕೃಷ್ಣ ಪರಾಕು 3ಓಂ ಬಾಣಾಸುರ ಕರಾಂತಕಾಯ ನಮಃ
--------------
ತಿಮ್ಮಪ್ಪದಾಸರು
ಪರಾಕು ಜೀಯ ವೆಂಕಟರಾಯ ಪರಾಕು ಸರ್ವೋದ್ವøಕ್ತ ನೀನೊಬ್ಬ ಸಾಕು ಉಕ್ತಿಯ ಕೇಳಬೇಕು ಪಾಲಿಸು ಸಾಕು ಪ. ಇಂದಿರಾವರ ದೀನ ಬಂಧು ನಿನ್ನ ಪಾದಾರ- ವಿಂದವೆ ಶರಣವೆಂದು ಹೊಂದಿದೆನಿಂದು ಮಂದ ಭಾವನೆಯ ಕುಂದು ಕ್ಷಮಿಸು ಯೆಂದು 1 ಕಾಲ ಶುಭ ಲೀಲೆಯರಸವೆಂಬ ಪಾಲ ಕುಡಿಸುತೆನ್ನನು ಪಾಲಿಸು ಪದ್ಮ ಲೋಲ ನಿನ್ನಣುಗನನ್ನು ಕೈಪಿಡಿದಿನ್ನು 2 ತಡೆಯದೆ ಸಕಲಾರ್ಥ ಕೊಡುವೆ ಶ್ರೀ ವೆಂಕಟಾದ್ರಿ ಒಡೆಯ ನೀನೊಲಿದಿರಲು ವೈರಿಗಳನ್ನು ಕೆಡವುತ ಸುಖ ಲಾಭವು ಸಿದ್ಧವಾಗಿಹವು 3
--------------
ತುಪಾಕಿ ವೆಂಕಟರಮಣಾಚಾರ್ಯ
ಪರಿ ನಿರ್ದಯಗೈದಿರಿ ತಂದೆ ಶ್ರೀ ಗುರುವೆ ಪೇಳಿ ಪ. ನೊಂದೆನು ಈ ದಿನ ನಿಮ್ಮ ವಾರ್ತೆ ತಿಳಿಯದೆ ಕುಂದೇನು ತೊರಿತೋ ಎನ್ನಿಂದ ಕ್ಷಮಿಸಿರಿ ಅ.ಪ. ಪ್ರತಿದಿನದಲಿ ನಿಮ್ಮ ಹಿತವಾರ್ತೆ ಕೇಳುತ ಅತಿಶಯಾನಂದವ ಪಡುತಲಿದ್ದೆ ಇಂದು ಅತಿಶಯದ ನಿಮ್ಮ ಹಿತವಾರ್ತೆ ತಿಳಿಯದೆ ಮತಿ ಹೀನಳಾಗಿಹೆ 1 ಉಲ್ಲಾಸಗೊಳಿಸುವ ಪುಲ್ಲನಾಭವ ಮಹಿಮೆ ಸೊಲ್ಲು ಸೊಲ್ಲಿಗೆ ನುಡಿಸಿ ಭವದಾಟಿಸಿ ಒಲ್ಲೆನು ನಾನೊಂದು ಇಹಪರ ಸೌಖ್ಯವು ನಿಲ್ಲಲಿ ಎನ್ನಮನ ನಿಮ್ಮ ಪಾದದಿ ನಿರುತ 2 ತನುಮನ ಒಪ್ಪಿಸಿ ಮನದಿ ಧ್ಯಾನಿಸುವುದು ಘನಮನಕಿನ್ನೀಗ ಬರಲಿಲ್ಲವೆ ವನಜಜಾಡಂಡದೊಳಿನ್ನು ಎನ್ನ ರಕ್ಷಿಸುವರ ಮನದಿ ನಾ ಕಾಣೆನು ವನಜಾಕ್ಷ ಬಲ್ಲನು 3 ಮೊರೆಯ ಕೇಳುತಲೀಗ ತ್ವರಿತದಿಂ ಬನ್ನಿರಿ ಸರಸಿಜಾಕ್ಷನ ತೋರಿ ಹರುಷವಿತ್ತು ದುರಿತವ ತೊಲಗಿಸಿ ಕರಕರಗೊಳಿಸದೆ ಪರಮಪ್ರಿಯರು ಎಂಬೊ ಬಿರುದುಳ್ಳ ಶ್ರೀ ಗುರುವೆ 4 ತಡಮಾಡದೆ ಭವಕಡಲ ದಾಟಿಸಿ ಈಗ ಮೃಡಸಖನನು ತೋರಿ ದೃಢ ಮನದಿ ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲ ಜಗಕೆ ಬಿಡದೆ ಪೊರೆಯುವನೆಂಬೊ ದೃಢವೆನಗೆ ಕರುಣಿಸಿ 5
--------------
ಅಂಬಾಬಾಯಿ
ಪರಿ ಪೋಷ ಪ ಇಂದಿರೆಯರಸನ ದ್ವಂದ್ವ ಪಾದದಲಿಅಂದ ಭಕುತಿಯಿತ್ತು ಛಂದದಿ ಸಲಹೋ ಅ.ಪ. ಆರೂ ಕಾಯುವರಿಲ್ಲವೊ ದೊರೆಯೇ | ನಾ ನಿಗೊಂದ್ಹೊರೆಯೇಮೂರು ಜಗಂಗಳ ಪೊತ್ತಿಹೆ ಧೊರೆಯೇ | ನಿನಗಾರೆಣೆಯೇ ||ಅಪಾರ ಗುಣಗಳಿಂದ | ಸಾರಿ ಭಜಿಸುವಂತೆ 1 ತಂದೇ ಮುದ್ದು ಮೋಹನರಿಂದ | ಆರಾಧನೆ ಛಂದದಿಂದ ಕೈಗೊಳ್ಳುತ ಆನಂದ | ತೀರ್ಥರೆ ನಲವಿಂದ ||ಬಂದ ಸುಭಕುತರ | ವೃಂದಕೆ ಪರಮಾನಂದವ ಕೊಡುತಲಿ | ಛಂದದಿ ಮೆರೆವ 2 ತುರು ವ್ರಜ ಜಂಗುಳಿ ಕಳೆದ | ಸರ್ವೋತ್ತಮನಾದ ||ಗುರು ಗೋವಿಂದ ವಿಠಲನ | ಚರಣ ಸರೋಜದಿಉರುತರ ಭಕುತಿಯ | ಕರುಣಿಸಿ ಕಾಯೋ 3
--------------
ಗುರುಗೋವಿಂದವಿಠಲರು
ಪರಿ ನಡಿಯುತ ಪುಣ್ಯವಂತರಾದ ಪ ಹರುಷಾದಿ ಆಚರಿಸುತಾ ಪಾದ ಬಿಡದೆ ನಿಜಭಕ್ತಿಯಲಿರುವಂಥ 1 ಪರಿಪರಿ ಶೋಧಿಸಿ ಮಹಿಮೆ ಸ್ಥಿರವಾಗಿ ಮನದಲ್ಲಿ ತಿಳಿದು ಸಿದ್ಧಿಸಿದಂಥಾ 2 ಇಷ್ಟದಿಂದ ಅತಿಯೋಗ್ಯರ ಕೂಡಿ ಶ್ರೇಷ್ಠ ಜ್ಞಾನಾಧಿಕ ನಿಷ್ಠಾರು ಎನಿಸಿದ ಶಿಷ್ಟ ಮಾನವ ಸಾಧು ಸಜ್ಜನರಾದಂಥ 3 ಮಾನವನಾಗುವದೇ ಘನಸಾರವನೆ ಗ್ರಹಿಸಿ ಮಾನಿತರೆನಿಸೀದ ಮಹಿಮರಾದಂಥಾ 4 ಭೂಮಿಪಾಲಕನಾದ `ಹೆನ್ನೆವಿಠ್ಠಲನ’ ಪ್ರೇಮದಿ ಹೇದಯಾದಿ ಪ್ರಣಿತಾರ್ಥವು ಹಿಡದು ಸ್ವಾಮಿ ನೀನೇಗತಿ ಸಕಲಾವು ನೀನೆಯೆಂಬೊ5
--------------
ಹೆನ್ನೆರಂಗದಾಸರು
ಪರಿಪರಿ ಕೊಂಡಾಡೋ ಹರಿಯನ್ನು ಮರೆದು ನೀ ಕೆಡಬೇಡೋ ಮನವೆ ಪ ಮರವೆ ಮಾಯ ನೀಗಿ ಧರೆಭೋಗ ಮೆಚ್ಚದೆ ನಿರುತ ಭಜಿಪರ ಬಿಟ್ಟು ಅರಲವಗಲ ಹರಿ ಅ.ಪ ಕರುಣಸಾಗರನು ನರಹರಿ ಚರಣದಾಸರನ್ನು ತನ್ನಯ ಹರಣಸಮಾನ ಮಾಡಿ ಕರುಣದಿಂದವರ ಇರವ ಪೂರೈಸುತ ಪೊರೆವ ಪ್ರೇಮದಿಂದ 1 ಚಿಂತೆ ಭ್ರಾಂತಿಗಳನು ಬಿಡಿಸಿ ಸಂತಸ ಕರುಣಿಸಿ ಅವರ ಅಂತರಂಗದಿರ್ದು ಅಂತರ ತಿಳಿಯಿತು ಚಿಂತಿಸಿದ್ದನ್ನಿತ್ತು ಸಂತಸದಿಂ ಕಾಯ್ವ 2 ಸಾರಿಸಾರಿಗೆ ತನ್ನ ಚರಣಸೇರಿ ಭಜಿಪರನ್ನು ಬಿಡದೆ ಆರಭಾರ ಪೊತ್ತು ಸೇರಿ ಅವರ ಬಳಿಯ ಪಾರಸಂಭ್ರಮದಿಂ ಧೀರ ನಲೀತಿಹ್ಯ 3 ಅಮಲರೂಪ ತನ್ನ ನಿರುತ ವಿಮಲಚರಣವನ್ನು ನಂಬಿದ ಸುಮನಸರಹೃದಯಕಮಲದಿ ವಾಸಿಸಿ ನಿಮಿಷಬಿಟ್ಟಗಲದೆ ಕ್ರಮದಿ ಪಾಲಿಸುವ4 ಗೂಢದಿಂದ ಸ್ಮರಿಪ ಭಕುತರ ಗಾಢಮಹಿಮೆ ಕೃಪಾದೃಷ್ಟಿಯಿಂ ಬೇಡಿದ ವರಗಳ ಕಾಡದೆ ನೀಡುತ ರೂಢಿಯೋಳ್ ಬಿಡದೆ ಕಾಪಾಡುವ ಶ್ರೀರಾಮ 5
--------------
ರಾಮದಾಸರು
ಪರಿಪಾಲಯ ಕಂಸಾರೆ ಪ ಕರಕಮಲದ್ವಯ ಕಟಿಯ ಮ್ಯಾಲೆಯಿಟ್ಟ | ಪರಮ ಪುರುಷ ಶೌರೇ ಮುರಾರೇ ಅ.ಪ. ಪಾದ ಜಲಜನಾಭನಾದ ಸುಲಲಿತ ಮಹಿಮ ಹರೇ ಮುರಾರೆ 1 ಪುಂಡಲೀಕ ವರದಾತ ಮುಕುಂದ ಕುಂಡಲಿಶಯನ ಹರೇ | ಕುಂಡಲಧರ ಹರೇ ಮುರಾರೇ 2 ದಿಟ್ಟತನದಿ ಹರಿಭಕ್ತ ಕೊಟ್ಟ ಇಟ್ಟಿಗಿ ಮೇಲೆ ನಿಂದ ದೇವ ದುಷ್ಟಕುಲಾಂತಕನೇ ಶ್ರೀ ಕೃಷ್ಣ 3
--------------
ವಿಜಯದಾಸ
ಪರಿಪಾಲಿಸು ದಯದಿ ನಿರುತ ದಾಸಪುರಂದರ ಗುರುವೆ ಧರ್ಮಪಥವನು ತೋರಿ ಉದಾರಿ ಪ ಸುರಮೌನಿಯೆ ಮುದದಿ ಹರಿನಾಮವಾ ಘನ ಬೀರುತಾ ನಿರಯಾ ಪಾತ್ರರ ಸಲಹಿದಿನೀ 1 ಬಾಣಾಲಕ್ಷಕೆ ಪಾದನ್ಯೂನ ಕವನ ನೀ ವಿರಚಿಸುತಾ ವನಜನಾಭನ ಸ್ತಪಿಸಿದ ನೀ 2 ಶಿರಿಶಾಮಸುಂದರನಾ ಚರಣಾಬ್ಜಕಾರಡಿಯಂದದಿ ಚರಿಪ ಜ್ಞಾನಿಯೆ ನಮಿಸುವೆನು 3
--------------
ಶಾಮಸುಂದರ ವಿಠಲ
ಪರಿಪಾಲಿಸುವುದು ಎಮ್ಮನು ಪರಮಾತ್ಮನ ರಾಣಿ ಕರುಣಾಕರನ ಪಾದಸ್ಮರಣೆಯನೆ ಕೊಟ್ಟು ಪ ಅಮರೇಶ ವಂದ್ಯಳೆ ಕಮಲಾಲಯೆ ನೀಬಂದು ಶ್ರಮವಿಲ್ಲದೆಯನ್ನೆಯ ಮಮತೆಯನು ಬಿಡಿಸು 1 ವಸುದೇವಸುತನ ರಾಣಿ ಅಸುರ ಸಂಹಾರಳೇ ನಿನ್ನ ವಶವಾದ ಮೇಲೆ ಅಂಭ್ರಣಿಯೆ ನಸುನಗುತ ಈಗ 2 ಮಂದರೋದ್ಧಾರಎನ್ನ ಸಂದುಸಂದಲಿ ಕಾರ್ಯವ ನಿಂದುಮಾಡಿಸುವಂಥದನ್ನು ಚಂದದೀಬೋಧವಕೊಟ್ಟು 3 ಮಂಗಳಾಂಗಿಯೆ ನಿನ್ನ ಮುಂಗಾಣದೆಸೊರಗಿದೆ ಅಂಗಜಪಿತನ ಜಾಯೇ ಭಂಗಪಡಿಸದೆಬೇಗಾ 4 ಪದ್ಮಸಂಭವನಮಾತೆ ಮುದ್ದುಮೋಹನವಿಠಲ ಪದ ಪದ್ಮಗಳನೀನೊಲಿದು ಹೃತ್ಪದ್ಮದಲಿ ಕಾಣಿಸುತ 5
--------------
ಮುದ್ದುಮೋಹನವಿಠಲದಾಸರು