ಒಟ್ಟು 1859 ಕಡೆಗಳಲ್ಲಿ , 108 ದಾಸರು , 1428 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿತ್ತಶುದ್ಧಿಯಿಲ್ಲದವನವ ಜ್ಞಾನಿಯೆ - ಪುಣ್ಯಪಾತಕಗಳನರಿಯದವ ಮನುಜನೆ ಕೃಷ್ಣ ಪ.ಮಾರಿ ಮನೆಯೊಳಗಿರಲು ಸಹಕಾರಿಯೆನಬಹುದೆ ?ಊರೊಳಗಿನಾ ಕಳ್ಳ ಅವ ಸುಜನನೆ ?ಜಾರತನವೆಸಗುವಳು ಕುಲವನಿತೆಯಹುದೆ - ಸಂಸಾರದೆಚ್ಚವಿಲ್ಲದವ ಸುಗಣನೆ ? 1ಶ್ವಾನ ಬೂದಿಯಲಿರಲು ಶಿವಭಕ್ತನನೆಬಹುದೆ ?ಕಾನನದೊಳಿಹ ಕಾಗೆ ವನವಾಸಿಯೇ ?ಗಾಣ ತಿರುಗುವ ಎತ್ತಿಗದು ಪ್ರದಕ್ಷಣೆಯೆ ಬಕಧ್ಯಾನವನು ಮಾಡಲದು ಮೌನವೇ ಕೃಷ್ಣಾ ? 2ತೋಳ ಅಡವಿಯಲಿರಲು ಅದು ದಿಗಂಬರನಹುದೆ ?ಗಾಳಿಯಂಬುವ ಉರುಗ ಉಪವಾಸಿಯೇ ?ಆಲವದು ಜಡೆಬಿಡಲುಪರಮ ಋಷಿಯಹುದೆ - ಬಲುಕಾಲಉಳಿದ ಹದ್ದು ತಾ ಹಿರಿಯದೆ ?3ಬಂಧನದೊಳಿಹ ವ್ಯಾಘ್ರವನು ತಪಸಿಯೆನಬಹುದೆ ?ಸಿಂಧುಜವು ಎನೆ ವಿಷಯ ಶೀತಕರನೆ ?ಅಂಧಕನು ಕಣ್ಮಚ್ಚಲದು ಧ್ಯಾನವೇ, ಗಜವುಮಂದಗತಿಯಾದರದು ಸ್ಮರಣೆಯೆ ಕೃಷ್ಣಾ ? 4ಮರಣಕ ಗಂಟಲನು ಮಾಡಲದು ಮಂತ್ರವೆ ?ಗಂಡು ನೀರಲಿ ಮುಳುಗಲದು ಸ್ನಾನವೇ ?ಪುಂಡರೀಕಾಕ್ಷ ಶ್ರೀ ಪುರಂದರವಿಠಲನತೊಂಡನಾಗದ ನರನ ಬಾಳು ಬಾಳುವೆಯೆ ? 5
--------------
ಪುರಂದರದಾಸರು
ಜಗದುದ್ಧಾರಕ ತನ್ನ ಮಗನೆಂದು ಬಗೆದು |ನಿಗಮಗೋಚರನ ಆಡಿಸಿದಳು ಯಶೋದೆ ಪವಟದೆಲೆಯ ಮೇಲು ಸಂಪುಟದ ಮೇಲೊರಗಿ ಉಂ-ಗುಟವ ಪೀರುವನ-ಆಡಿಸಿದಳು 1ವಿಶ್ವತಶ್ಚಕ್ಷುವ ವಿಶ್ವತೋಮುಖನ |ವಿಶ್ವವ್ಯಾಪಕನ-ಆಡಿಸಿದಳು 2ಅಣೋರಣಿಯನ ಮಹತೋಮಹೀಯನ |ಗಣನೆಯಿಲ್ಲದವನ-ಆಡಿಸಿದಳು 3ನಿಗಮಕೆ ಸಿಲುಕದಅಗಣಿತಮಹಿಮನ |ಮಗುಗಳ ಮಾಣಿಕ್ಯನ-ಆಡಿಸಿದಳು 4ಎಲ್ಲರೊಳು ಭರಿತನಾಗಿ ಇಪ್ಪ ಲಕುಮಿಯ |ವಲ್ಲಭಪುರಂದರವಿಠಲನ-ಆಡಿಸಿದಳು5
--------------
ಪುರಂದರದಾಸರು
ಜನನೀ ತ್ರಿಜಗತಿ ಜನಾರ್ದನೀ ಜನನೀಜಯತು ಶ್ರೀಪದ್ಮಾವತೀ ಪ.ಗುಣಗಣಾರ್ಣವೆ ವಿಶ್ವಪೂಜಿತಜನನಮರಣವಿದೂರೆ ಪದ್ಮಾಸನೆಸನಾಥೆ ಸದಾ ಸುಮಂಗಲೆಘನಗಗನಭೂಪಾಲನಂದಿನಿ ಅ.ಪ.ಶ್ರೀನಿವಾಸನ ರಾಣಿ ಸರ್ವಾರ್ಥ ನಿ-ದಾನಾಂಬುಜಪಾಣಿಭಾನುಕೋಟಿಸಮಾನ ತೇಜೆ ಸ-ದಾನುರಾಗಪ್ರದಾನೆ ವಿಬುಧ-ಶ್ರೇಣಿನುತೆ ಮಹದಾದಿಮಾಯಾ-ಮಾನಿ ಮಾಧವಮನವಿಲಾಸಿನಿ 1ಸುಂದರಿ ಸುಮನೋಹರಿ ಸುಜ್ಞಾನಾ-ನಂದೆ ಸಿಂಧುಕುವರಿಚಂದ್ರವದನೆ ಚರಾಚರಾತ್ಮಕಿವಂದನೀಯೆ ಪರೇಶಪರಮಾ-ನಂದರೂಪೆ ಸನತ್ಸುಜಾತ ಸ-ನಂದನಾದಿಮುನೀಂದ್ರವಂದಿತೆ 2ಅಂಬೆ ಶ್ರೀಹರಿಪ್ರೀತೆಶಂಭುಸಂಭಾವಿತೆ ತ್ರಿಲೋಕಾ-ರಂಭಸೂತ್ರೆ ಪವಿತ್ರೆ ವಿಶ್ವಕು-ಟುಂಬೆ ಕಮಲಯನೇತ್ರೆ ಸಾಧ್ವೀಕ-ದಂಬಮಸ್ತಕಮಣಿಪ್ರಭಾಶಿನಿ 3ಪದ್ಮ ಸರೋವಾಸಿನೀ ಪಾವನಹೃತ್ಪದ್ಮನಿತ್ಯಭಾಸಿನಿಪದ್ಮನವಕ್ರೀಡಾವಿಲಾಸಿನಿ ಮ-ಹನ್ಮನೋಧ್ಯಾನಾಧಿರೂಢೆ ಸು-ಪದ್ಮಹಸ್ತೆ ನಮಸ್ತೆ ಪಾವನೆಪದ್ಮನಾಭನರಮಣಿ ಕರುಣಿ 4ವರಲಕ್ಷ್ಮೀವಾರಾಯಣಿ ಕಲ್ಯಾಣಿ ಶ್ರೀ-ಕರೆ ಕಾಳಾಹಿವೇಣಿಧರೆಯೊಳುತ್ತಮ ಕಾರ್ಕಳದಿ ಸು-ಸ್ಥಿರನಿವಸವ ಗೈದೆ ಕರುಣಾ-ಶರಧಿಭಕ್ತರ ಪ್ರಾರ್ಥನೆಯ ಸ್ವೀ-ಕರಿಸಿ ಪೊರೆವಿಷ್ಟಾರ್ಥದಾಯಿನಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜಯ ಜಯಜಗತ್ಪ್ರಾಣತ್ರಾಣ ಜನನ ಮರಣಕ್ಲೇಶಹರಣಜಯ ಪಾವನ ದಿವ್ಯಚರಣ ಪ.ಸರ್ವದೇವತಾಗ್ರಗಣ್ಯ ಸರ್ವಜೀವೋತ್ತಮ ಶರಣ್ಯಪೂರ್ವಾಮರಪುರದಹನ ಪೂರ್ಣಗುಣಗಣ 1ವೈಷ್ಣವ ಜನ ಶಿರೋರತುನ ವಿಶ್ವಾಂತರ್ಗತಭಾವನತೀಕ್ಷ್ಣಮನೋದುಷ್ಟದಮನ ಶಿಷ್ಟಜೀವನ 2ಭಕುತಿಜ್ಞಾನನಿಧಿ ಕಲ್ಯಾಣ ಭಜಕಜನಭವಾಬ್ಧಿತರಣಲಕುಮಿನಾರಾಯಣಶರಣ ಬಕವಿದಾರಣ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜಯ ಪಾಂಡುರಂಗ ಹೋ ಜಲದ ನಿಭಾಂಗ ಹೋ|ಜಗದಂತರಂಗ ಹೋ ಜಯ ಪಾಂಡುರಂಗ ಹೋ ಪನೀಲಭೂಧರವಾಸಕೌಸ್ತುಭಭೂಷ ರಮೆಯಾಧೀಶಸುಮನಸ|ಪಾಲ ಗುಣಗಂಭೀರ ನವನೀತಚೋರ ಕುಜನಕುಠಾರ| ನರಹರಿ ||ಫಾಲಲೋಚನಬಂಧು ದೈತ್ಯನ ಕೊಂದು ವೇದವ ತಂದು ದ್ರುಹಿಣಗೆ |ಮೇಲು ಶರುಣುದಲಿತ್ತೆ,ಮಂದರಪೊತ್ತೆ ಸುಂದರ ಮೂರ್ತಿ 1ನಿಗಮವಂದಿತ ರಾಮಹರಿಪೂರ್ಣ ಕಾಮ ಸದ್ಗುಣಧಾಮ, ವಾಮನ |ಮಗನ ಮೂಗಿಲಿ ಪುಟ್ಟಿ, ಹೇಮನ ಕುಟ್ಟಿ,ಅವನಿತಂದಿಟ್ಟಿ, ಈರೇಳು ||ಜಗದಿ ಪೂಜಿತನಾದಿ ಕೈಟಭ ಭೇದಿ ಇಭಪನ ಕಾಯ್ದಿ, ಪ್ರಣತರ |ಅಘವನೋಡಿಸುತಿಪ್ಪ ಹಲಾಯುಧತಲ್ಪಮನ್ಮಥನಪ್ಪ 2ವೇದ ವಿಸ್ತರ ಮಾಡ್ಡೀ, ದಾನವ ಬೇಡ್ಡೀ, ದನುಜನಿಗ್ಯೋಡ್ಡೀ, ಕುರುಕುಲ |ಸೂದನ, ಕಿರೀಟ ಸೂತ, ಪವಮಾನ ತಾತ, ದುರ್ಬಲನಾಥ ಎನ್ನನು ||ಆದರದಿ ಕೈಪಿಡಿಯೋ, ದುರಿತವ ತಡೆಯೊ, ದುರ್ಮತಿ ಕಡಿಯೊ,ಅಗಣಿತ|ಮೋದಪ್ರಾಣೇಶ ವಿಠಲ, ನರಮೃಗ, ನಿಟಿಲನೇತ್ರ, ಅಕುಟಲ3
--------------
ಪ್ರಾಣೇಶದಾಸರು
ಜಯಜಯ ಶ್ರೀ ರಾಮ ನಮೋ |ಜಯ ಜಯ ಶ್ರೀ ಕೃಷ್ಣ ನಮೋ ಪ.ಸಿರಿಯರಸನು ಶೃಂಗಾರವ ಮಾಡಿ |ಸಿರಿಗಂಧವನೆ ಹಣೆಗಿಟ್ಟು ||ತರುಣ ತುಳಸಿ ವನಮಾಲೆಯ ಧರಿಸಿ |ಹರಿತುರುಕಾಯಲು ಹೊರಗೆ ಹೊರಟನು1ಹೊತ್ತು ಹೋಯಿತುತುರು ಬಿಡಿಯೆನ್ನುತ |ಸಾತ್ತ್ವತ ನುಡಿದನು ಗೋಪಿಯೊಡನೆ ||ತುತ್ತುರು ತುತ್ತುರು ತುರುತುರುಯೆನ್ನುತ |ಒತ್ತಿ ಸ್ವರಗಳನು ಪೊಂಗೊಳಲೂದುತ 2ವನಿತೆ ಸಟ್ಟುಗದೊಳು ಅಕ್ಕಿಯ ತೊಳಸಿ |ಒನಕೆಯಿಂದಓಗರ ಹದನೋಡಿ ||ಮಿನುಗುವ ಸೀರೆಯ ತಲೆಗೆ ಸುತ್ತಿಕೊಂಡು |ವನಕೆ ಹೋಗಲೆಂದು ಹೊರಗೆ ಹೊರಟಳು 3ಹರಿಸ್ವರವೆನ್ನುತ ಒಬ್ಬಳುಕೇಳಿನೆರೆಮನೆಗೆ ಹೋಗಿ ಕಡ ಕೇಳಿದಳು ||ಒರಳು ಕೊಡುವಿರಾ ಅರಸಿನ ಅರೆದು |ಮರಳಿ ಬೇಗ ತಂದೀವೆನೆನುತಲಿ 4ಹಸುವಿಗೆ ಇಟ್ಟಲು ಹಾಲುಓಗರ |ಬಿಸಿಮಡ್ಡಿಯ ಗಂಡಗೆ ಚಾಚಿ ||ಸೊಸೆಯನು ಅಟ್ಟಿಸಿ ತೊತ್ತನು ಪಾಲಿಸಿಮೊಸರ ಕಾಸಿ ಹೆಪ್ಪ ಹಾಕಿದೊಳೊಬ್ಬಳು 5ಗಿಳಿಗೆ ಹಾಸಿದಳು ಹಾಸು ಮಂಚವನು |ಅಳಿಯನ ಪಂಜರದೊಳಗಿರಿಸಿ ||ತಳಿಗೆಯಲ್ಲಿ ತಮ್ಮನ ಮಲಗಿಸಿ ತೊಟ್ಟಿ - |ಲೊಳಗೆ ಎಡೆಯನು ಮಾಡಿದಳೊಬ್ಬಳು 6ಅಟ್ಟವೆಂದು ಹತ್ತಿ ಅಗಳಿಯ ಮೇಲೇಇಟ್ಟಳು ಸಾದೆಂದು ಸಗಣಿಯನು ||ಕಟ್ಟಬಾಯಿಗೆ ಕಾಡಿಗೆಹಚ್ಚಿ |ಕೃಷ್ಣನ ಸ್ಮರಿಸುತ ಹೊರಗೆ ಹೊರಟಳು 7ಅಂಗನೆ ಚೌರಿಯು ಕಾಲಿಗೆ ತಗುಲಿಸಿ |ಮುಂಗೈಯಲಿ ತಾಳಿಯ ಬಿಗಿದು ||ಸಿಂಗರ ಸರವನು ನಡುವಿಗೆಕಟ್ಟಿ |ರಂಗನ ಸ್ಮರಿಸುತ ಹೊರಟಳೊಬ್ಬಳು 8ಕಟ್ಟಿ ಮುತ್ತಿನೋಲೆ ಮೊಣಕಾಲ್ಗಳಿಗೆ |ಗಟ್ಟಿ ಕಂಕಣವ ಕಿವಿಗಿಟ್ಟು ||ತೊಟ್ಟಿಲೊಳಗೆ ಶಿಶು ಅಳುವುದ ಕಂಡು |ಕಟ್ಟಿದ ನೆಲುವನು ತೂಗಿದಳೊಬ್ಬಳು 9ತರುಣಿಯೊಬ್ಬ ಸಂನ್ಯಾಸಿಯ ಕಂಡು |ನೆರೆಮನೆ ಕೂಸೆಂದೆತ್ತ ಬರಲು ||ಅರಿದಾವ ಗಾಳಿ ಸೋಕಿತೆನುತಲಿ |ಪುರಂದರವಿಠಲನು ನಗುತಿದ್ದನು ಸಖಿ 10
--------------
ಪುರಂದರದಾಸರು
ಜಯಪತ್ರವ ತಾರೆ ಜಾಣೆಮುಂದಕೆ ಬಾರೆವೈಭವದಿ ಆಣಿಯಿಟ್ಟುಓಡಿದ್ಯಾತಕೆ ನೀರೆ ಪಬಿಂಕಬಿಡಿಸಿಕೊಂಡೆವೆಂದುದ್ರೌಪತಿ ಶಂಕಿಸಿಕೊಂಡೆ ನೀರೆಪಂಕಜಾಕ್ಷಿ ರುಕ್ಮಿಣಿ ಮುಂದೆಕಿಂಕರಳೆನ್ನು ಬಾರೆ ನೀರೆ 1ಸೋಗೆಗಣ್ಣಿನ ಭದ್ರೆ ನೀನುಆಣಿಇಟ್ಟ ಬಗೆಯೆ ನಮಗೆನಾಗವೇಣಿ ರುಕ್ಮಿಣಿ ಮುಂದೆಮೂಗಿನ ಗೆರೆಯ ತೆಗಿಯೆ 2ಇಟ್ಟ ಆಣೆತಪ್ಪಿಗೆಕೈಯ ಕಟ್ಟಿಕೊಂಡು ಬಾರೆಕೊಟ್ಟು ಬಿರುದು ಸೋತೆವೆಂದುಅಟ್ಟಾಸದಲಿ ಸಾರೆ 3ಪಂಥ ಕಳೆದುಕೊಂಡಿರೆಂದುಎಂಥ ನಗುತಾರಲ್ಲಇಂಥಮಾನಭಂಗವಾಗಿ ನಿಂತಿರ್ಯಾತಕೆ ಇಲ್ಲೆನೀವು ಕುಳಿತಿರ್ಯಾತಕೆ ಇಲ್ಲೆ 4ಸೋತೆವಮ್ಮ ನಿಮಗೆರಮಿನಾಥನರಸಿಗೆ ಎಂದುರುಕ್ಮಿಣಿಗೆ ನೀತಿಲೆಜಯಪತ್ರಕೊಟ್ಟು ದ್ರೌಪತಿ ಎರಗಿದಳು 5
--------------
ಗಲಗಲಿಅವ್ವನವರು
ಜಯಭೋ ಜಯಭೋ ಜಯ ವೆಂಕಟೇಶ ಪ್ರಭೊಜಯಕರ್ತಾ ಭಯಹರ್ತಾಭಯದಾಯಕ ಮೂರ್ತೆ ಪ.ಫಣಿಗಿರಿವರ ಫಣಮಂದಿರ ಪ್ರಣತಮನೋಹರಘನಸದ್ಗುಣಗಣಪೂರ್ಣಘನಶಾಮಲವರ್ಣಮನ್ಮಾನಸ ಮುನಿತಾಪಸ ಮನೋಮಾನಸ ಹಂಸದನುಸುತಹರ ಧನುಸಂಹರ ದಿನಮಣೀಶ ರುಚಿರ 1ವನಜಾಕ್ಷಾವನಿಜಾಂತಕ ವನಜಾಸನ ಜನಕಕನಕಾಕ್ಷಹ ಕನಕಾಲಯ ಕನಕಸ್ತ್ರೀಪ್ರಿಯವನಭ್ರಮಣಾವನಿರಮಣ ವಿನತಾತ್ಮಜಗಮನಅನಿಮಿತ್ತಜ ಅನಸೂಯಜ ಅನಿಮಿಷೇಂದ್ರಾನುಜ 2ಅರಿಧರಧರ ಅರಿಪರಿಹರ ಅರುಣಾಂಬರಧರಚಿರಮಣಿ ರುಚಿರಾಭರಣಾನುಚರಸುರತರುವೀರಸುರಪರಮಾಪ್ತನೆ ಸಾಸಿರ ಕ್ರೀಡಾಶ್ಚರ್ಯಗಾರಕಲಿಕಲುಷಹರ ಕರುಣಾಕರ ಪ್ರಸನ್ವೆಂಕಟೇಶ್ವರ 3
--------------
ಪ್ರಸನ್ನವೆಂಕಟದಾಸರು
ಜಲದನೀಲಗಾತ್ರ ಏತರ ಚೆಲುವ ರುಕ್ಮಿಣಿ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬಿಳಿಯ ಜಡೆಯ ಮೈಯ ಜೋಗಿಗೊಲೆದ ಪಾರ್ವತಿ ಪ.ಉದಕದೊಳಗೆ ವಾಸವೇಕೆ ಸದನವಿಲ್ಲವೆ |ಸುದತಿಸುಡುವ ಕಾಡಿಗಿಂತ ಲೇಸು ಅಲ್ಲವೆ1ಶೃಂಗಿಯ ಬೆನ್ನಿಲೆತ್ತಿದವನ ಸೊಗಸು ನೋಡಿದೆ |ಗಂಗೆಯ ಶಿರದಿ ಪೊತ್ತವನ ಗುರುವ ಕೇಳಿದೆ 2ವಸುಧೆ ನೆಗಹಿ ಬೇರೆ ಮೆಲುವ ಅಶನವಿಲ್ಲವೆ |ಹಸಿದು ವಿಷವ ಕುಡಿದ ಎಂತು ಸ್ವಾದವಲ್ಲವೆ 3ಕರುಳ ಕೊರಳ ಸರವು ಏಕೆ ಸರವು ದೊರಕದೆ |ಕೊರಳ ರುಂಡಮಾಲೆ ಏಕೆ ಕಾಂಚನವಿಲ್ಲದೆ 4ಧರಣಿ ಮೂರಡಿ ಬೇಡಲಿಕ್ಕೆ ದೊರೆಯು ಅಲ್ಲವೆನರಕಪಾಲ ಪಿಡಿವ ಜಗದ ಕರ್ತೃವಲ್ಲವೆ 5ಮಾತೆಶಿರವ ಅಳಿದವನ ಮಾಲೆ ಕೇಳಿದೆಯಾ !ತಾತನಾಚಿ ಸುತನ ಕೊಂದು ನೀತಿ ನೋಡಿದೆಯಾ 6ಕೋತಿಗಳನು ಕೂಡಲಿಕ್ಕೆ ಜಾತಿ ತನ್ನದೆ |ಭೂತಗಣಗಳಾಳುವುದಕೆ ಭೀತಿ ಇಲ್ಲವೆ 7ಹತ್ತಿರಿದ್ದ ವಾಜಿಬಿಟ್ಟು ಹದ್ದನೇರ್ವರೆ |ಎತ್ತಿನ ಬೆನ್ನ ನೇರಿದವರು ಉತ್ತಮರಾಹರೆ 8ಸುತ್ತಲಿದ್ದಬಾಲೆಯರೊಳು ಬತ್ತಲಿರುವರೆ |............... ಶಾಪ ಹತ್ತಲಿಲ್ಲವೆ 9ಹರಿಹರರೊಳು ಭೇದವೇನು ಹೇಳೆ ರುಕ್ಮಿಣಿಪುರಂದರವಿಠಲ ತಾನೆ ಬಲ್ಲ ಕೇಳೆ ಪಾರ್ವತಿ 10
--------------
ಪುರಂದರದಾಸರು
ಜೋ ಜೋ ಯಶೋದೆಯ ನಂದ ಮುಕುಂದನೆಜೋ ಜೋ ಕಂಸಕುಠಾರಿ ಪ.ಜೋ ಜೋ ಮುನಿಗಳ ಹೃದಯಾನಂದನೆಜೋ ಜೋ ಲಕುಮಿಯ ರಮಣ ಅಪಹೊಕ್ಕುಳ ಹೂವಿನ ತಾವರೆಗಣ್ಣಿನಇಕ್ಕಿದಮಕರ ಕುಂಡಲದಜಕ್ಕುಳಿಸುವ ಕದಪಿನ ಸುಳಿಗುರುಳಿನಚಿಕ್ಕ ಬಾಯ ಮುದ್ದು ಮೊಗದ ||ಸೊಕ್ಕಿದ ಮದಕರಿಯಂದದಿ ನೊಸಲೊಳಗಿಕ್ಕಿದ ಕಸ್ತೂರಿ ತಿಲಕ |ರಕ್ಕಸರೆದೆದಲ್ಲಣ ಮುರವೈರಿಯೆಮಕ್ಕಳ ಮಾಣಿಕ್ಯ ಜೋ ಜೋ 1ಕಣ್ಣ ಬೆಳಗು ಪಸರಿಸುತಿರೆಗೋಪಿಅರೆಗಣ್ಣ ಮುಚ್ಚಿ ನೋಡಿ ನಗುತ |ಸಣ್ಣ ಬೆರಳುಗಳ ಬಾಯೊಳಗಳವಡಿಸಿಪನ್ನಗಶಯನ ತೊಟ್ಟಿಲಲಿ ||ನಿನ್ನ ಮಗನ ಮುದ್ದನೋಡು ಎಂದೆನುತಲಿತನ್ನ ಪತಿಗೆ ತೋರಿದಳು |ಹೊನ್ನ ಬಣ್ಣದ ಸೊಬಗಿನ ಖಣಿಯೆ ಹೊಸರನ್ನದ ಬೊಂಬೆಯೆ ಜೋ ಜೋ 2ನಿಡು ತೋಳ್ಗಳ ಪಸರಿಸುತಿರೆ ಗೋಪಿಯತೊಡೆಯ ಮೇಲ್ಮಲಗಿ ಬಾಯ್ದೆರೆಯೆ |ಒಡಲೊಳಗೀರೇಳು ಭುವನವಿರಲು ಕಂಡುನಡುಗಿ ಕಂಗಳನು ಮುಚ್ಚಿದಳು ||ಸಡಗರಿಸುತ ತಾನರಿಯದಂತೆಯೆಹೊಡೆ ಮರುಳಿ ಮೊಗವ ನೋಡುತಲಿಕಡಲಶಯನ ಮೊಗವ ನೋಡುತಲಿಕಡಲಶಯನ ಶ್ರೀ ಪುರಂದರವಿಠಲನುಬಿಡದೆ ನಮ್ಮೆಲ್ಲರ ರಕ್ಷಿಸುವ 3
--------------
ಪುರಂದರದಾಸರು
ತಲ್ಲಣಗೊಳ್ಳಬೇಡಾ ಶ್ರೀಹರಿ ಎಲ್ಲಿಹನೆನಬೇಡಾ ಪಕಲ್ಲ ಕಂಬದಿ ಮೈದೋರಲು ನರಹರಿಪ್ರಹ್ಲಾದನು ತಾಪತ್ರಯ ಬರೆದನೇ ಅ.ಪತರಳಧ್ರುವನು ವನದೀ ಸ್ವಾಮಿಗೆಚರರನು ಕಳುಹಿದನೇಕರಿರಾಜನು ತಾನ್ ಕರೆಯಲು ಪೋದನೆಹರಿಗೆ ರುಕ್ಮಾಂಗದ ವೀಳ್ಯವಿತ್ತಿಹನೇ 1ಅಂಬರೀಷನು ಹರಿಗೆ ದ್ರವ್ಯವತುಂಬಿಕಳುಹಿಸಿದನೇಅಂಬುಜನಾಭನು ಅಹಲ್ಯೆಗೆ ತಾತನೆಅಂಬರದಿಂ ಶೀರೆ ಇಳಿವುದೇ ದ್ರುಪದೆಗೆ 2ಅಣು ಮಹತ್ತೆನಿಸಿರುವಾ ಶ್ರೀಹರಿಬಣಗುಜನರ ಮುರಿವಾಗಣನೆಯಿಲ್ಲದೆ ಪ್ರಾಣಿಗಳನು ಸಲಹುವತ್ರಿನಯನ ಸಖನುತಾ ಮಣಿವರ ಮರೆವನೆ 3ಅನ್ಯ ಚಿಂತೆಗಳನ್ನು ಬಿಟ್ಟುಪನ್ನಗಶಯನನೂಘನ್ನ ಭಕ್ತಿಯೊಳುರೆ ಇನ್ನಾದರೂ ನೆನೆಮನ್ನಿಸದಿರೆ ಗೋವಿಂದನು ದಾಸರ 4
--------------
ಗೋವಿಂದದಾಸ
ತೋಳು ತೋಳು ತೋಳು ಕೃಷ್ಣ-ತೋಳನ್ನಾಡೈ |ನೀಲಮೇಘಶ್ಯಾಮ ಕೃಷ್ಣ ತೋಳನ್ನಾಡೈಪಗಲಿಕೆಂಬಂದುಗೆ ಉಲಿಯುವ ಗೆಜ್ಜೆಯ ತೋ-|ಅಲುಗುವ ಅರಳೆಲೆ ಮಾಗಾಯ್ಮಿನುಗಲು ತೋ-|ನೆಲುವು ನಿಲುಕದೆಂದೊರಳ ತಂದಿಡುವನೆ ತೋ-|ಚೆಲುವ ಮಕ್ಕಳ ಮಾಣಿಕ್ಯವೆ ನೀ ತೋ- 1ದಟ್ಟಡಿಯಿಡುತಲಿ ಬೆಣ್ಣೆಯ ಮೆಲುವನೆ ತೋ-|ಕಟ್ಟದ ಕರಡೆಯ ಕರುವೆಂದೆಳೆವನೆ ತೋ-||ಬೊಟ್ಟಿನಲ್ಲಿ ತಾಯ್ಗಣಕಿಸಿ ನಗುವನೆ ತೋ-|ಬಟ್ಟಲ ಹಾಲನು ಕುಡಿದು ಕುಣಿವನೆ ತೋ- 2ಅಂಬೆಗಾಲಿಲೊಂದೊರಳನ್ನೆಳೆವನೆ ತೋ-|ತುಂಬಿದ ಬಂಡಿಯ ಮುರಿಯಲೊದ್ದವನೆ ತೋ-|ಕಂಬದಿಂದಲವತರಿಸಿದವನೆ ನೀ ತೋ-|ನಂಬಿದವರನುಹೊರೆವಕೃಷ್ಣ ತೋ3ಕಾಲಕೂಟದ ವಿಷವ ಕಲಕಿದ ತೋ-|ಕಾಳಿಂಗನ ಹೆಡೆಯನು ತುಳಿದ ತೋ-||ಕಾಳೆಗದಲಿ ದಶಕಂಠನ ಮಡುಹಿದ ತೋ-|ಶಾಲಕ ವೈರಿಯೆ ಕರುಣಿಗಳರಸನೆ ತೋ 4
--------------
ಪುರಂದರದಾಸರು
ದಡ ಸೇರಿಸು ಭವದ ಕಡಲಿನದಡ ಸೇರಿಸು ಹರಿಯೆಕಡೆ ಮೊದಲಿಲ್ಲದ ಕ್ಲೇಶದ ವಾರಿಯಕಡು ಕಾಂಕ್ಷದ ಬಲುತೆರೆಯ ಪ.ಸಾಧು ಸಮಾಗಮ ಸಚ್ಛಾಸ್ತ್ರ ಶ್ರವಣಾದಿಗಳಿಲ್ಲದೆ ಕೆಡುವೆಮೇದಿನಿಯೊಳು ಮೂಢಾತ್ಮನು ನಾ ಶ್ರೀಪಾದವ ಹೊಂದಿಸು ಹರಿಯೆ 1ಸಾಸಿರ ನಾಮದಿ ತುಲಸೀ ಕುಸುಮವಶ್ರೀಶನಿಗರ್ಪಿಸಲಿಲ್ಲಹೇಸದೆ ಬಾರದುದನ್ನೆ ಬಯಸುತವಾಸುದೇವಕೆಟ್ಟೆನಲ್ಲ2ಮನ ವಶವಾಗದು ತನು ಮಡಿಯಾಗದುಕನಸಲಿ ಧರ್ಮವನರಿಯೆಒಣಮಾತಲಿ ದಿನ ಹೋದವು ಪರಗತಿಗನುಕೂಲಲ್ಲದು ದೊರೆಯೆ 3ದುವ್ರ್ಯಸನಕೆ ಬೇಸರೆನೆಂದಿಗೆಘನಗರ್ವಿಲಿ ವರ್ತಿಪೆನಲ್ಲಪರ್ವತ ನೆಗಹುವ ನುಡಿಯನ್ನಾಡುವೆನಿರ್ವಾಹಕಡ್ಡಿಯೊಳಿಲ್ಲ4ನನ್ನ ಗುಣದ ನಂಬಿಕೆ ನನಗಿಲ್ಲನಿನ್ನಯ ನಾಮವೆ ಗತಿಯುಇನ್ನಾದರು ಕಡೆಗಣ್ಣಲೆನೋಡುಪ್ರಸನ್ವೆಂಕಟ ಸಿರಿಪತಿಯೆ 5
--------------
ಪ್ರಸನ್ನವೆಂಕಟದಾಸರು
ದಯಮಾಡಿ ನಡೆಸೆ ಶಾರದೆ ದಯಮಾಡಿ ನಡೆಸೆ ಪ.ಹೃಯಾಂಗಣದಿ ಸದನವ ಮಾಡುತವಿಧವಿಧ ನವರಸದುದಯದ ತನಕ 1ಭೃಂಗಕುಂತಳೆ ಕೃಪಾಪಾಂಗೆಬ್ರಹ್ಮಾಣಿಕು-ರಂಗನಯನೆ ಶ್ರೀರಂಗಭಕ್ತಳೆ 2ಭೂರಿಶಾಸ್ತ್ರವಿಚಾರವ ಪಾಲಿಸೆಧೀರ ಲಕ್ಷ್ಮೀನಾರಾಯಣನ ಸೊಸೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ದಾರೊ ನೀ ಚಿನ್ನ ದಾರೊಕಾರು ರಾತ್ರಿಯೊಳೆಮ್ಮಾಗಾರಕೆ ಬಂದೆ ಪ.ಇಕ್ಕಿದ ಕದಗಳಿಕ್ಕ್ಯಾವೊ ನಿದ್ರೆಉಕ್ಕೇರಿ ಕಣ್ಣು ಮುಚ್ಚ್ಯಾವೊ ನಮ್ಮತಕ್ಕೈಸಿ ಕೊಂಬುವೆ ನೀ ಕಳ್ಳ ಚಿಕ್ಕಮಕ್ಕಳಾಟವಿದಲ್ಲೊ ಚೆಲುವ 1ಆಗ ಗೋಪಾಲನಂತಿದ್ದೆ ನೀಬೇಗಚಟುಲರೂಪನಾದೆ ಮತ್ತೀಗೆಮ್ಮ ನಲ್ಲರಂತೈದೆ ಕೋಟಿಪೂಗಣೇರ ಹೋಲುತೈದೆ ನೀ ಹೌದೆ 2ಸಪ್ಪಳಿಲ್ಲದೆ ಕೂಡು ಕಾಣೊಕೇಳಿಬಪ್ಪರಿನ್ನಾರಾರು ಕಾಣೊ ಪ್ರಾಣಕಪ್ಪವ ನಿನಗಿತ್ತೆ ಇನ್ನು ಕಾಯೊಶ್ರೀಪ್ರಸನ್ವೆಂಕಟ ಜಾಣ ಪ್ರವೀಣ 3
--------------
ಪ್ರಸನ್ನವೆಂಕಟದಾಸರು