ಒಟ್ಟು 8519 ಕಡೆಗಳಲ್ಲಿ , 133 ದಾಸರು , 4842 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಯನಂಥ ಕರುಣಾಳು ಕಾಣೆನು ಜಗದೊಳಗೆ ಪ ಏನೆಂದರಿಯದ ಪಾಮರ ನಾನು | ತಾನೊಲಿದೀಗೆನ್ನ ನುದ್ಧರಿಸಿದನು1 ತನ್ನನುಭವ ನಿಜ ಮಾತಿನ ಗುಟ್ಟು | ಎನ್ನೊಳುಸುರಿ ಘನ ತೋರಿಸಿ ಕೊಟ್ಟು | ಧನ್ಯನ ಮಾಡಿದಸೇವೆಯಲಿಟ್ಟು 2 ಮಾಡುವ ಘನ ತುಸು ತಪ್ಪನೆ ಹಿಡಿಯಾ | ಬೇಡಿಸಿಕೊಳ್ಳದೆ ನೀಡುತ ಪಡಿಯಾ | ರೂಢಿಗಾದನು ಇಹಪರದೊಡೆಯಾ3 ತನ್ನವನೆನಿಸಿದ ಮಾತಿಗೆ ಕೂಡಿ | ಮನ್ನಣೆಯಿತ್ತನು ಅಭಯವ ನೀಡಿ | ಇನ್ನೇನ ಹೇಳಲಿ ಸುಖ ನೋಡಿ4 ತಂದೆ ತಾಯಿ ಬಂಧು ಬಳಗೆನಗಾಗಿ | ನಿಂದೆ ಸದ್ಗುರು ಮಹೀಪತಿ ಮಹಾಯೋಗಿ | ಕಂದನ ಸಲಹುವ ಲೇಸಾಗಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುರಾಯನಾ ಮನಿಯಾ ನಾಯಿ ನಾನು ಪ ಗುರು ಗುರು ಎನುತಲಿ ಇರುವೆ ಬಾಗಿಲದೊಳು | ಗುರುವಿನೆಂಜಲ ನುಂಡು ಸುಖಿಸುವೆ ನಮ್ಮಯ್ಯನಾ 1 ಹರಿ ಶರಣರ ಕಂಡು ಗರುವಿಸಿ ಕೆಲಿಯೆನು | ದುರುಳರ ಬೆನ್ನಟ್ಟಿ ಹೋಗೆನಾ ನಮ್ಮಯ್ಯನಾ 2 ಒಡೆಯನ ಮುಂದೆ ಯನ್ನಾ ಒಡಲವ ತೋರುವೆ | ಬಿಡದೆ ಅಂಗಣದೊಳು ಹೊರಳುವೆ ನಮ್ಮಯ್ಯ ನಾ3 ಹರಿನಾಮದಿಂದ ಭೋಂಕರಿಸಿ ವದರುವೆ | ಬರಗುಡೆ ಹಮ್ಮ ಸ್ವಜಾತಿಯ ನಮ್ಮಯ್ಯ ನಾ 4 ತಂದೆ ಮಹಿಪತಿ ಸ್ವಾಮಿ ಬಂದು ಮೈಯ್ಯಾದಡವಿ | ನಿಂದು ತನ್ನ ಬಿರುದಕ ಹಾಕಿದ ನಮ್ಮಯ್ಯನ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುರಾಯಾ | ಶರಣಾಶ್ರಯಾ | ಪರಮಾ ನಂದೋದಯಾ | ಗರಿಯೋ ನಿಮ್ಮದಯಾ | ಚರಣಕ ನಂಬಿಹೆನಯ್ಯಾ | ತರಳನು ನಾನತಿ ಜೀಯಾ | ಅರಿಯೆನು ಅನ್ಯೋಪಾಯಾ | ಪಾವನ ಕಾಯಾ 1 ಅಘಹಾರಿ | ಭಕುತಿಯ ದೋರಿ | ಸುಗಮವ ತೋರಿ | ನಿಗಮಾರ್ಥ ಸಾರಿ | ಉಗಮದ ಬೋಧವ ಬೀರಿ | ಪರಿ | ಬಗೆವದು ದೀನೋದ್ಧಾರಿ | ಭಕುತರ ನಿಜ ಸಹಕಾರಿ2 ನಿನ್ನವನಾ | ಮುನ್ನಗಾಯ್ದನಾ | ಎನ್ನೊಳಿಹನ್ಯೂನಾ | ಇನ್ನಾರಿಸುದೇನಾ | ಬೆನ್ನವ ಬಿದ್ದಿಹದೀನಾ | ಬನ್ನ ಬಡಿಸದನುದಿನಾ | ಚನ್ನಾಗಿ ಕಾಣಿಸಿ ಖೂನಾ | ಮನ್ನಿಸು ಹಿಡಿದಭಿಮಾನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವಚನದಲಿ ನಂಬನು ನರಭಾವ ಅವರೊಳು ಕಾಂಬನು ಕರಣ ತ್ರಯದಲಿ ಶುಂಭನು ಗುರು ಭಕ್ತ ನೆನಿಸದರೇನು ಮಾ 1 ಸರ್ವರೊಳು ಹರಿ ನೋಡದೇ ಗರ್ವದ ಗುಣಗಳೀಸಾಡದೆ ನಿಜ | ದರ್ವಿನೊಳು ಮನ ಕೂಡದೇ | ಭಾಗವತರೆನಿಸಿದರೇನು ಮಾ 2 ವಾಸನಿಯ ಬಲ ಕಡಿಯಾ ದೇವೆ | ಆಸೆಯಲಿ ಮನ ಜಡಿಯದೆ ನಿಜ | ದ್ಯಾಸದಂಡವ ಪಿಡಿಯದೆ ಸ | ನ್ಯಾಸಿಯೆನಿಸಿದರೇನು ಮಾ 3 ನುಡಿಯ ಬೀರುತ ಸಂತರಾಜನ | ರೊಡನೆ ಹಾಕುತ ಸಿಂತರಾ ತಮ್ಮ | ನಡತಿ ನೋಡಲು ಭ್ರಾಂತರಾ ತಾ | ಸಂತ ನೆನಿಸಿದರೇನು ಮಾ 4 ತಂದೆ ಮಹಿಪತಿ ಪಾದವಾ ಬೆರೆ | ಭವ | ಬಂಧ ಮಾಡದೇ ವಾತಾ | ಬಂದ ಜನಮಕಿದೇನು ಮಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವಂತರ್ಗತ ವಿಜಯ ದಾಸಾ ಕಾಯೋಶರಣರ ಹೃತ್ಸನ್ನಿವಾಸಾ ಪ ಸುರಮುನಿ ಸುತನಾದ ವರ ಭೃಗ್ವಂಶಜನೆಂದುರೆ ಮೆರೆವನೀಯೊಳ್ ವರದ್ವಿಜನೆನಿಸೀದ ಅ.ಪ. ಪುರಂದರ ದಾಸ ರೂಪಿಯ | ಸ್ವಾಪದಲಿ ಕಾಣುತ್ತನಲಿದ 1 ಪಾದ | ದಾಸನ್ನ ಮಾತೆ ವಿಶ್ವಾಸದಲೀ ಪಡೆದೆ | ಭಾಸುರ ಉಪದೇಶ ||ಶ್ರೀಶನನುಗ್ರಹಿಸಿ ತನ್ನಯ | ದಾಸ ರೂಪವ ಮರೆಯಗೈಯ್ಯಲುಲೇಸು ಎಚ್ಚರಗೊಂಡು ಪುಳಕೀತ | ಭಾಸುರದ ಸುಸ್ತೋತ್ರಗೈದು 2 ಪಾವನ ವಾನಂದ ತೀರ್ಥ | ಭಾಷ್ಯಭಾವ ಕನ್ನಡದಿ ಪೇಳುತ್ತ |ಜೀವರುದ್ಧರ ಕಾರ್ಯ | ತೀವರ ನಡೆಸುತ್ತಕಾವಕೊಲ್ಲುವ ಗುರು | ಗೋವಿಂದ ವಿಠಲದೇವ ಸರ್ವೋತ್ತಮನು ಪವನನು | ಜೀವರುತ್ತಮನೆಂದು ಸ್ಥಾಪಿಸಿದೇವತತಿ ತರತಮದ ಭಾವವ | ಓವಿ ಪೇಳ್ದ ಮಹಾನುಭಾವ 3
--------------
ಗುರುಗೋವಿಂದವಿಠಲರು
ಗುರುವಶಕೆ ನಮೋ ಎಂಬೆ ನಮ್ಮ ಶ್ರೀ ಮದಾನಂದತೀರ್ಥ ಪದ್ಮನಾಭರಿಗೆ | ರಾಮದೇವರ ಕಂದ ನರಹರಿಗೆ || ಕಾಮಿತ ಫಲವೀವ ಮಾಧವಕ್ಷೋಭ್ಯರಿಗೆ | ಆ ಮಹಾಮಹಿಮ ಜಯತೀರ್ಥ ರಾಯರಿಗೆ 1 ವಿದ್ಯಾಧಿರಾಜರಿಗೆ ವಿಜಯ ಕವೀಂದ್ರ ಸು | ಸದ್ಗುಣ ವಾಗೀಶ ರಾಮಚಂದ್ರರಿಗೆ || ವಿದ್ಯಾನಿಧಿ ರಘುನಾಥ ರಘುವರ್ಯತೀರ್ಥರಿಗೆ | ಅದ್ವೈತಮತ ಖಂಡ ರಘೋತ್ತರಾಯರಿಗೆ 2 ವೇದವ್ಯಾಸ ವಿದ್ಯಾಧೀಶ ವೇದನಿಧಿ ಮುನಿಗೆ | ನಿತ್ಯ ವತ್ರರಿಗೆ || ಮೇದಿನಿಯಲಿ ಮೆರೆದ ಸತ್ಯನಿಧಿತೀರ್ಥರಿಗೆ | ವಾದಿಗಜಕೆ ಸಿಂಹ ಸತ್ಯನಾಥರಿಗೆ 3 ಯತಿಶ್ರೇಷ್ಠ ಸತ್ಯಾಭಿನವತೀರ್ಥರಿಗೆ | ಸತತ ಸಜ್ಜನಪಾಲ ಸತ್ಯಪೂರ್ಣರಿಗೆ || ಅತಿಶಯವಾನಂದ ಸತ್ಯ ವಿಜರಿಗೆ | ಮತ ಉದ್ಧಾರಕ ಶ್ರೀ ಸತ್ಯಪ್ರಿಯರಿಗೆ4 ಇಂತು ಗುರುಗಳ ಸಂತರೆ ಕೊಂಡಾಡಿ ಇಂತು ಸುತಾಪವನುರುಹಿ ಬಿಟ್ಟು || ಸಂತೋಷಿ ನಾನಾದೆ ವಿಜಯವಿಠ್ಠಲನ್ನ ಚಿಂತಿಯ ಮಾಡುವೆ ದಾಸರ ದಯದಿಂದ 5
--------------
ವಿಜಯದಾಸ
ಗುರುವಿನ ಕಾಣದೆ ಪರಗತಿ ದೊರೆಯದು ಪ ವೇದ ಶಾಸ್ತ್ರಗಳ ನೋದಿ ಭೇದಿಸದೆ | ವಾದದಿಂದ ಜನಗೆದ್ದನು | ಕೊಂಡ ಗಾದಿಯಂತೆ ನಿಜ | ಸಾಧುರ್ಹಾದಿಯನೆ ಮರೆತನು 1 ಕರ್ಮ ಧರ್ಮ ಸಾರಯಜ್ಞದಿ | ಭೂರಿಯಶವನೆ ಪಡೆದನು | ಏರಿ ಸ್ವರ್ಗದಿ ಜಾರಿ ಬಿದ್ದ ಸಂ | ಸಾರ ವಾರಿಧಿಯ ಸೇರಿದನು 2 ರಂಜನಿಂದ ವಣಭಂಜನ್ಯಾತರೆದು | ಕಂಜನಾಭನ ನೆರೆ ನಿಲುಕನು | ಅಂಜಲೆತ್ತಿದರ ಗುರು ಮಹಿಪತಿ | ಪ್ರಾಂಜಳಾಗಿ ಘನದೋರುವನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವಿನ ನೋಡಿರೋ ಕರುಣವ ಪಾಡಿರೋ ಪ ದೀನ ಜನರ ಅಭಿಮಾನಿ ನಿಜ ಸುಖದಾನಿ ಮಹಾಸುಜ್ಞಾನಿ | ಸ್ವಾನುಭವ ದಾಗರ ಗುಣಗಂಭೀರ ಪರಮ ಉದಾರ | ಮೂರ್ತಿ ವಿಮಲ ಸುಕೀರ್ತಿ | ಭರಿತನಾದಸುರ ಚರಿತನು 1 ವಿಡಿಯುತ ಕುರುಹು | ನಿರುತ ತತ್ವದ ಬೊಂಬೆಯೆನೆ ಸುಖದಿಂಬೆ ಅದು ಏನೆಂಬೆ | ನರ ಶರೀರದೆ ಬಂದ ಪರಗೃಹಲಿಂದಲ್ಯಾಡೊದ ಛಂದ | ವಿರಾಗದೋರಿದ ಯೋಗನು 2 ಬೆಳೆಯದೋರಿದ ಕಳೆಯ | ಮರೆದ ಮುನ್ನಿನ ಠಾವ ದೋರಿಸಿ ಜೀವನ್ಮುಕ್ತಿಯ ನೀವ | ನಮೋ ನಮೋ ಎಂದೆ | ಕರುಣವ ಮಾಡಿದ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವಿನ ಮರಿಲ್ಯ್ಹಾಂಗೆ |ಮರೆತು ನಾನಿರಲ್ಹ್ಯಾಂಗೆ ಪ ಮರೆತು ಹೋದ ಗಂಟಾ |ತೆರೆದಿಟ್ಟಾ ಕರೆದು ಕೈಯಲಿ ಕೊಟ್ಟಾ 1 ಬೋಧ ಗಜದ ಮೇಲೆ ಕೂಡಿಸಿದಾ |ಭೇದಾಭೇದ ಓಡಿಸಿದಾ 2 ಸ್ಥಿರಚರ ಜಗವೆಲ್ಲ ವ್ಯಾಪಿಸಿದಪರಶಿವ ತಾನೇ ಆದ 3
--------------
ಭೀಮಾಶಂಕರ
ಗುರುವಿನಾ ಬಲಗೊಂಬೆ | ಪರಗತಿ ಪಡಕೊಂಬೆ | ಸಿರಿಯಾ | ಧರಿಯಾ | ಧೊರಿಯಾ | ಚರಿಯಾ | ಸಾರಿ ಬೀರಿ ತಾರಿಸುವ ಪಾರಾವಾರ ಮಹಿಮನಾ ಪ ಶುಭ ಚರಣಕೆರಗಿ | ಕೆಡ ಗುಣಗಳ ನೀಗಿ | ಇಡುವಾ | ತುಡುವಾ | ಮುಡುವಾ | ಕುಡುವಾ | ನುಡಿ ನುಡಿಗಳಲ್ಲಿ ಬಿಡದೇ ಅಡಿಗಡಿಗೆ ನೆನೆವುತಾ 1 ಹರಿಯಲ್ಲರೊಳಗಿರಿಸೀ | ಹಮ್ಮಮತೆಯನೆ ಬಿಡಿಸಿ | ದೋರಿ ದೋರಿ ಅರಿವೈರಿ ಬೇರೆ ತೋರಿಸಿದನಾ 2 ಮೂರ್ತಿ | ಆರವಾ | ಮುರವಾ | ಘನದಿರುವ್ಹಾ ಪರವಲಿಟ್ಟನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವೆ ನಿಮ್ಮಯ ಕರುಣ ವೃಕ್ಷ ನೆಳಲೊಹೊರತಾದ ಕಾರಣದಿ ಹೀನನಾದೆ ಪ ಉದ್ಧವ ಖ್ಯಾತಿ ದ್ರೋಣನು ಕಲಿಯುಗದಿ ನಾನಾ ||ಭೌತಿಕಗಳ ಧರಿಸಿ ಪ್ರಾರ್ಥಿಸಿದ ಸಜ್ಜನರಆರ್ತಗಳ ಪರಿಹರಿಸಿ ಸರ್ವಾರ್ಥಗರೆವ1 ಶರಧಿ ಮುಣುಗಿದ ಮಹಾಪರಮ ಕರುಣಾನಿಧಿಯ ದೇವಮಣಿಯೆ2 ನಿರ್ಜನರು 3 ಆವಾವ ಕಾಲದಲಿ ನಿನ್ನ ದಯದಿಂದಲ್ಲಿದೇವಾರ್ತಿಗಳನೈದು (ದಿ) ಸೌಖ್ಯಬಡುವೆ ||ಕಾವ ಕರುಣೆಯೆ ಎನ್ನ ಅವಗುಣಗಳೆಣಿಸದಲೆಸಾವಧಾನದಲೆನ್ನ ಸಲಹಬೇಕು4 ಬಾಲಕನ ಅಪರಾಧ ಅನಂತವಿರಲಿನ್ನುಪಾಲಿಸಬೇಕಯ್ಯ ನೈಜಗುರುವೆ ||ಪಾಲಸಾಗರಶಾಯಿ ಗುರು ವಿಜಯ ವಿಠ್ಠಲರೇಯಕಾಲಕಾಲಕೆ ಅಗಲದಂತೆ ವರವೀಯೋ 5
--------------
ಗುರುವಿಜಯವಿಠ್ಠಲರು
ಗುರುವೆ ಪರಬ್ರಹ್ಮ ವಾಸುದೇವಾರ್ಯಗುರುವೆ ಪರಬ್ರಹ್ಮ ಪಅರಿವು ಮರವೆಗಳ ಪರಿಯ ನಿರೂಪಿಸಿಅರಿ'ನ ಘನವಾಹ ತೆರಗೈದು ಪಾಲಿಪ ಅ.ಪಸುಖಬುದ್ಧಿುಂಪಾಪಾಸಕ್ತ ಮಾನಸರನುಯುಕುತಿುಂದಲಿ ಹರಿಭಕುತಿಗಳವಡಿಪ 1ಭಾಗವತಾರ್ಥದಿ ರಾಗವ ಪುಟ್ಟಿಸಿಹಾಗೆ ಗೀತಾಮೃತ ಸಾಗರದೆಡೆಗೊಯ್ವ 2ನಾನಾಮತಗಳೊಳು ಮಾನಿಸಹೊಗದಂತೆಶ್ರೀನಿವಾಸನ ಪಾದಧ್ಯಾನವ ಬಲಿಸುವ 3ಕಾಮಾದಿ ಕಲುತ ತಾಮಸ ಜನರನುಪ್ರೇಮದಿಂದಲಿ ಸಪ್ತ ಭೂ'ುಕೆಗೇರಿಪ 4ಒಂದೊಂದರೊಳು ಮತಿನಿಂದು ತಿಳಿದೊಳಿಸೆಂದು ನಡೆದೂ ಪೂರ್ಣಾನಂದರಹುದಮಾಳ್ಪ 5ಹೊರಗೊಳಗುಗಾಣದೆ ಬರಿಯರಿವಳಮಲಪರಮನೆ ನಾನೆಂಬ ಪರಿಗೈದು ಪೊರೆವ 6ಕರುಣದಿಂ ಚಿಕನಾಗಪುರದಿ ಭಜಕರಿಗೆಕರದು ಜ್ಞಾನಾಮೃತವೆರೆವ ವಾಸುದೇವಾರ್ಯ 7
--------------
ವೆಂಕಟದಾಸರು
ಗುರುವೆಂದರವಗೆ ಪರಮಸುಖ ಭವಾರ್ಣವ ದುಃಖ ಧ್ರುವ ಗುರು ಎಂದ್ಹಾಂಗ ಬಾಯಿಲಿ ಅರಿಯಬೇಕು ಮನದಲಿ ದೋರುವದಾನಂದ ಲೀಲಿ ಗುರು ಕೃಪೆಯಲಿ 1 ಅರ್ತರೊಂದೆ ಸಾಕು ಪೂರ್ಣ ಕರ್ತು ಸದ್ಗುರು ಚರಣ ಮತ್ರ್ಯದೊಳಿದೆ ನಿಧಾನ ಸಾರ್ಥಕಗುಣ 2 ನರನೆಂದು ಮರೆದೀಗ ಗುರು ನಿಜಾಗುವ ಬ್ಯಾಗ ಸೆರಗು ಮಹಿಪತಿಗೆ ದೋರಿತು ಈಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುವೇ ಗುರುವೇ ಗುರು ಗುರುವೇ ಮಹಾಗುರು ಗುರುವೇ ಶ್ರೀ ಗುರುವೇ ಪ ನಿರಂಜನ ನಿಷ್ಕಲಂಕ ಗುರುವೇಪ್ರತ್ಯಾಗಾತ್ಮ ಪರಾತ್ಪರಾತ್ಪರ ಪ್ರತ್ಯಯರಹಿತ ಗುರುವೇ 1 ನಿರ್ವಿಕಲ್ಪ ನಿರಾಕಾರ ನಿರ್ಗುಣ ನಿರ್ಮಾಯನೇ ಗುರುವೇನಿರ್ವಿಕಾರ ನಿದ್ರ್ವಂದ್ವ ನಿಜಾಕಾರ ನಿರುಪಮಾತ್ಮ ಗುರುವೇ 2 ಪೂಜ್ಯಮಾನ ಸುರಾಸುರ ಸಿದ್ಧಾಯಿಂ ಪೂಜಾರ್ಪಿತ ಗುರುವೇಈ ಜಗದೇಕ ನಾಥನೆ ಚಿದಾನಂದ ತೇಜಃಪುಂಜ ಗುರುವೇ 3
--------------
ಚಿದಾನಂದ ಅವಧೂತರು
ಗುರುವೇ ಮಹಾಗುರುವೇ ಚಿದಾನಂದಗುರುವೇ ಕೊಡಿರಿ ಮತಿ ನಮಗೆ ಪ ಅದ್ದಿ ಪಾಪದೊಳು ಸಮೃದ್ಧಿ ನನ್ನದೆಂಬ ಹಮ್ಮುಹೊದ್ದಿ ತುಂಬಿಹುದು ನನಗೆ ದು-ರ್ಬುದ್ಧಿ ನಮಗೆ ಕೊಡಿರಿ ನೀವುಸದ್ಬುದ್ಧಿ ಮಹಾಗುರುವೇ 1 ಅಂತೇ ಸಂಸಾರವು ಸತ್ಯಂತೆ ಇದನು ನಂಬುವನುಕತ್ಯಂತೆ ಮಾಡುವುದೆಲ್ಲ ಭ್ರಾಂತಂತೆ ನಮಗೆ ಕೊಡಿರಿ ಗುರುಚಿಂತೆ ಮಹಾಗುರುವೆ2 ಮಾನ ಉಳಿವುದಿಲ್ಲ ನಿದಾನಾ ಸಂಸಾರವೆ ಬಲುಹೀನ ತೊಳಲಿದೆ ನಾನು ಜನ್ಮನಾನಾ ನಮಗೆ ಕೊಡಿರಿ ಸು-ಜ್ಞಾನ ಮಹಾಗುರುವೇ 3 ಶಕ್ತಿ ಆದರೆಯು ವಿರಕ್ತಿ ಬ್ರಹ್ಮದಲಿ ಆ-ಸಕ್ತಿ ಕೊಡುವುದದು ಬಲುಭಕ್ತಿ ನಮಗೆ ಕೊಡಿರಿ ನೀವುಮುಕ್ತಿ ಮಹಾಗುರುವೇ 4 ಹಾರಿ ಭವದಾರಣ್ಯ ಕುಠಾರಿ ತೋರಿಸುವ ನಿಜದಾರಿ ಸಚ್ಚಿದಾನಂದ ತೋರಿ ನಮಗೆ ಹಿಡಿದು ಕೊ-ಡಿರಿ ಮಹಾಗುರುವೆ5
--------------
ಚಿದಾನಂದ ಅವಧೂತರು