ಒಟ್ಟು 5214 ಕಡೆಗಳಲ್ಲಿ , 126 ದಾಸರು , 3313 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬು ನಮ್ಮ ಹರಿಯ ನಂಬಿದ- ರಿಂಬುದೋರುವ ದೊರೆಯಾ ವಿಶ್ವ ಕು- ಟುಂಬಿ ವಾಯು ಪೂಜ್ಯಾಂಬುಜ ಪಾವನ ಪ. ಕಾಮಧೇನು ಕಲ್ಪತರು ಚಿಂತಾಮಣಿಯಿಂದಪ್ಪ ಕಾಮಿತಾರ್ಥವೆಲ್ಲ ನಿರವಧಿ ಪ್ರೇಮಿಸಿ ಕೊಡಬಲ್ಲ ನಿತ್ಯ ಕಥಾಮೃತ ಸೇವಿಸಲು ಪಾಮರ ಜನಕೆ ಸ್ವಧಾಮವನೀವನ 1 ದುರಿತರಾಶಿಗಳನು ನಿಮಿಷದಿ ತರಿವನು ಮಾಧವನು ಸ್ಮರಿಸುವ ದಾಸರನು ಮರೆಯದೆ ಕರುಣಿಸಿ ಸಲಹುವನು ಚರಣಾಂಬುಜ ಕಿಂಕರಾಗಿರುವರು ಕರೆದಲ್ಲಿಗೆ ಬಂದಿರುವ ಮಹಾತ್ಮನ 2 ಶ್ರೀ ಭೂಮಿಸಹಿತ ಕೈವಶನಾಗುವ ಗುಣಭರಿತಾ ಯೋಗಿ ಮನೋನುಗತ ಶ್ರೀಮದ್ಭಾಗವತಾಂತಗತಾ ನೀಗಿ ನಿಖಿಳಭವ ರೋಗವ ಶರಣ ಮ- ನೋಗತ ಸಲಿಸುವ ಭೋಗ ಗಿರೀಶನ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಂಬುಗೆ ಪಡಿಯಿರೋ ದೇವರ ದೇವನಾ ಪ ಧಾಮ ಸಾರ್ವಭೌಮ ತಾಮರಸ ಸಖ ಆ ಮಹಾಕುಲೋದ್ದಾಮ ಆಹವ ಭೀಮ| ಸ್ವಾಮಿ ಸಕಲರ ಕಾಮಿತಾರ್ಥವ ನೇನಿ ಮುನಿಜನ ಪ್ರೇಮಿ| ಚರಿತ ನಿಸ್ಸೀಮಿಯಾ1 ಧಾಟಿಯಲಿ ನರನಾಟಕ ವಿಡಿದ ಆಟವಾಡಲು ನೀಟಾ| ಕೋಟಿ ಕೋಟಿ ನಿಶಾಟ ದರ್ಪೋಚ್ಚಾಟ ಮಾಡಿದ ಸ್ಪೋಟಾ| ನೀಟ ಶರಣ ಮುಕುಟಿಗಿತ್ತನು ಪೀಠಾ| ಧೀಟ ಶ್ರೀ ಜಟೆ ಜೂಟ ವಂದಿತ ಪಾಟರಹಿತ ಸ್ಪರಾಟನಾ 2 ಅಂದು ಇಂದೇ-ನೆಂದಿಗಾದರ ವಂದೇ ದಯದಿಂದ| ಛಂದ ಛಂದದ-ಲಿಂದ ಭೋಕ್ತರ ಬಂಧು ಭಕ್ತರ ವೃಂದ| ಸುಂದರಾನನ ಕುಂದರದನ ಸುಮಂದ ಹಾಸಾನಂದ| ಇಂದಿರೈರಸ ತಂದೆ ಮಹಿಪತಿ ಕಂದ ಪ್ರೀಯ ಮುಕುಂದನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಭಕೀಶ - ನಭಕೀಶ ಪ ಇಭಮೊಗ ನಿನ್ನಡಿ | ಗಭಿ ವಂದಿಸುವೆನುಇಭವರದನ ಮನ | ನಭದಲಿ ತೋರೋ ಅ.ಪ. ಮೂಷಕ ವಾಹಾಹಿ | ಭೂಷನೆ ತ್ರೈಜಗತೋಷ ಗಣಾಧಿಪ | ಪಾಶಾಂಕುಶಧರ 1 ಶುಭ ಗುಣ ಭಜನೆಯಸುಭಗನೆ ಪಾಲಿಸಿ | ಕುಭವನೆ ಹರಿಸೋ 2 ಅಂಬುಜಾಂಡದಿ ತವ | ಶುಭಗುಣ ಪ್ರಸರಣಸುಭುಜಾಹ್ವಯ ಗೈ | ದ ಭಯವ ನಿತ್ತನು 3 ಅಬುಧಿಗೆ ಸೇತುವೆ | ವಿಭವದಿ ಗೈವಾಗಬುಜಾಂಡೋದರ | ಭಜಿಸಿದ ನಿನ್ನಾ 4 ಕ್ರತು ರಾಜಸೂಯ 5 ರಕ್ತವಾಸ ಅನು | ರಕ್ತ ಹರಿಯಲಿಭಕ್ತಿಯ ಪಾಲಿಸೋ | ಭಕ್ತಾಶ್ರಯನೇ 6 ಅಸಮಾಧಿಕ ಪ್ರಿಯ | ಶಶಿಭೂಷಣ ಸುತಶಶಿ ದ್ವಿಟ್ ಮರ್ಭವ | ಪಾಶವ ಕಳೆಯೋ 7 ಎಕಮೇವ ನಲಿ - ವಿ | ವೇಕವ ಕೊಡುವುದುಏಕದಂತ ಚಾ | ಮೀಕರ ಕೃತ ಭೂಷಾ 8 ಮೋದಕೇಕವಿಂಶ | ಸಾದರ ಸ್ವೀಕೃತಮೋದ ತೀರ್ಥ ಮತ | ಭೋದಿಸು ಗುರುವೇ 9 ಚಾರುದ್ವೇಷ್ಣಾಭಿಧ | ಚಾರ್ವಾಂಗನೆ ಹರಿಚಾರು ಚರಿತೆ ಸತ್ | ಸ್ಫೋರಣ ಕೊಡುವುದು 10 ಭಾವಜಪಿತ ಗುರು | ಗೋವಿಂದ ವಿಠಲನಭಾವದಿ ತೋರಿಸೊ | ಭಾವಜ ಭ್ರಾತಾ11
--------------
ಗುರುಗೋವಿಂದವಿಠಲರು
ನಮಸ್ತೆ ವಿಮಲೆ ಕೋಮಲೆ ರಮಾದೇವಿನಮಸ್ತೆ ನಮಸ್ತೆ ಪ. ತರುಣಿ ಶಿರೋಮಣಿ ನಿನ್ನ ಶೀಲ ಸೌಂದರ್ಯವನುಧರೆಯೊಳು ವರ್ಣಿಸುವ ಕವಿಯು ದಾವಸ್ವರಮಣನೆನಿಪ ರಮಣನುರದೊಳೆಂದೆಂದು ನೀ-ನರಮನೆಯ ಮಾಡಿ ಭಾಪುರೆ ಮೆರೆದೆಲೆಲೆ1 ತನ್ನ ಮೈಯಿಂದ ಮಕ್ಕಳ ಸೃಜಿಸಿ ಯುಗಯುಗದಿನಿನ್ನ ತಾರುಣ್ಯ ಲಾವಣ್ಯಗಳನುಮನ್ನಿಸಿ ಪೊರೆವ ಹರಿಯ ಪಟ್ಟದ ರಮಣಿ ಜಗ-ನ್ಮಾನ್ಯೆ ಚೈತನ್ಯೆ ಲಾವಣ್ಯೆ ಗುಣಗಣಸದನೆ2 ಕರ ವಕ್ತ್ರನೇತ್ರಗಳು ಪೂರ್ಣ ಹಯವದನ ಕೈಕೊಂಡ ನಿನ್ನ ಗಂಡಸ್ವರ್ಣಸಮವರ್ಣೆ ಕರ್ಣಾಯತಾಕ್ಷಿ 3
--------------
ವಾದಿರಾಜ
ನಮಿಪೆ ನದಿ ದೇವತೆಗಳೇ | ನಿಮಗೆ ಪ. ನಮಿಪೆ ನದಿ ದೇವತೆಗಳೇ ನಿಮ್ಮ ಚರಣಕ್ಕೆ ಕಮನೀಯ ಗಾತ್ರೆಯರೆ ಕಂಜದಳ ನೇತ್ರೆಯರೆ ಸುಮನರ ವಂದಿತರೆ ಸುಗುಣ ಸಂಪನ್ನೆಯರೆ ಅಘ ಹರೆಯರೇ ಕಮಲನಾಭನ ಅಂಗೋಪಾಂಗ ಸಂಜಾತೆಯರೇ ಅಮರ ಭೂ ಪಾತಾಳ ಲೋಕ ಸಂಚರೆಯರೆ ನಮಿಸಿ ಸ್ನಾನವಗೈವ ನರರ ಪಾವನಗೊಳಿಪ ಅಮಿತ ಪಾವಿತ್ರತರರೇ 1 ಗಂಗೆ ಗೋದಾವರಿ ಯಮುನೆ ಸರಸ್ವತಿ ಸಿಂಧು ಮಂಗಳಾಂಗೆ ಕೃಷ್ಣ ಭೀಮರಥಿ ಪಲ್ಗುಣಿ ಸಂಗಮ ತ್ರೀವೇಣಿ ಸರಯು ಗಂಡಿಕಿ ಸೀತ ತುಂಗಭದ್ರಾ ನಾಮರೇ ಅಂಗ ಮಾಲಾಪಾರಿ ಕಾವೇರಿ ಕಪಿಲೆ ನರ ರಂಗ ಪಾವನ ಗೈವ ಪುಷ್ಕರಗಳಭಿಮಾನಿ ಅಂಗನೆಯರೆÀಲ್ಲರಿಗೆ ಅಭಿವಂದಿಸುವೆ ಅಘವ ಹಿಂಗಿಸುವುದೆಂದು ಮುದದೀ 2 ಬಂದು ಸ್ವಪ್ನದಿ ಮಾಘ ಶುದ್ಧ ನವಮೀ ಭರಣಿ ಸಂಯೋಗದ ಪರ್ವವೆಂದು ಭದ್ರೆಲಿ ಸ್ವಾನ ವಿಂದು ಗೈದೆವು ಎಂದು ಮುಂದೆ ಕುಳ್ಳಿರೆ ನಾನಾ ನಂದದಿಂ ಕಂಡು ನಿಮ್ಮಾ ಸುಂದರಿಯರೇ ನಿಮ್ಮ ಸಂದರ್ಶನದಿ ಫಲವು ಬಂದುದೆನಗೆಂದು ನಾನಂದ ವಚನಕೆ ನಲಿದು ಒಂದು ಅರಿಯದ ಎನಗೆ ತಂದು ಕೊಟ್ಟಿರಿ ಸ್ನಾನ ದಿಂದ ಬಹು ಪುಣ್ಯ ಫಲವಾ 3 ಹರದಿಯರೆ ಕಂಡೆ ನಿಮ್ಮರವಿಂದ ಮುಖ ಶುಭ್ರ ಸರಿತು ದೇವತೇಗಳೇ ಗುರು ಕೃಪೆಯ ಬಲದಿಂದ ಸಿರಿ ನದಿಗಳೇ ಜಗದಿ ಭರದಿಂದ ಪರಿದು ಸಾಗರವ ಕೂಡುವ ತ್ವರದಿ ಪರಿಪರಿಯ ಜಲ ಜಂತು ಸಂಸಾರಿ ಸಂಗೆಯರೆ ನರರು ಬಣ್ಣಿಸಲಳವೆ ಕರುಣಿ ನಿಮ್ಮಯ ಮಹಿಮೆ ಸಿರಿಕಾಂತ ಪ್ರಿಯಸುತೆಯರೇ 4 ಶ್ರೇಷ್ಟನದಿ ಅಭಿಮಾನಿ ಸತಿಯರೇ ಎನ್ನ ಅಘ ಸುಟ್ಟು ನಿರ್ಮಲ ಭಾವ ಕೊಟ್ಟು ಹೃತ್ಪದದಲಿ ವಿಷ್ಣು ಮೂರ್ತಿಯ ಕಾಂಬ ಶ್ರೇಷ್ಟ ಜ್ಞಾನದ ಮಾರ್ಗ ಕೊಟ್ಟು ಸದ್ಭಕ್ತಿ ಭರದೀ ಚಿಟ್ಟನೇ ಚೀರಿ ದಾಸ್ಯದ ಭಾವದಲಿ ಕುಣಿದು ಶ್ರೇಷ್ಟ ಶ್ರೀ ಗೋಪಾಲಕೃಷ್ಣವಿಠ್ಠಲನ ಪದ ಮುಟ್ಟುವೊ ವಿಜ್ಞಾನ ಪ್ರವಹ ರೂಪದಿ ವಲಿದುದಿಟ್ಟಿಯರ ಸಂತೈಸಿರಿ 5
--------------
ಅಂಬಾಬಾಯಿ
ನಮಿಪೆನು ಗುರುರಾಯನೆ | (ನಾ ನಿನ್ನನು)| ನಮಿಪೆನು ಗುರುರಾಯನೆ ಪ ಕುಮತಿಯಾಗಿರ್ದೆನ್ನ ಮಮತೆಯೊಳ್ ಪೊರೆಯೆಂದು ಅ.ಪ ಪಾದ ಕಂದನ ಸಲಹೆಂದು 1 ಇನ್ನು ನೀ ವೇದಾಂತವನ್ನು ಬೋಧಿಸೆಂದೆನುತ 2 ದೆನ್ನಯ ನಿಜದರಿವ ಚೆನ್ನಾಗಿ (ಪೇಳೆಂದು) 3 ಸಾಗರದೊಳಗೈಕ್ಯವಾಗುವಂತೆಸಗಯ್ಯ 4 ಗುರು ಪಾರ್ವತೀಶ ಸದ್ಗುರುವೆ ತ್ರೈಜಗದೀಶ 5 ಇಂದೆನ್ನ ಹೃದಯದೊಳ್ ನಿಂದು ಮೈದೋರೆಂದು 6 ನಾದ ಸ್ವರೂಪನೆಯಾದ ಸದಾನಂದ 7
--------------
ಸದಾನಂದರು
ನಮಿಪೇ ನಮಿಪೇ ನಮಿಪೇ ಶ್ರೀ ಗುರುದೇವಾ ಜ್ಞಾನಬೋಧಾ ನೀಡಿ ಮನದಾ ದೀನತನ ಬಿಡಿಸಿ ನೀನೆ ಆ ಪರಮಾತ್ಮನೆನುವಾ ಸ್ವಾನುಭವ ಹಿಡಿಸಿ ಹೀನವಿಷಯಾಸಕ್ತಿಯಾ ನೀಗಿಸಿ ಎನಗಾಗಿ ಜಗದಸುಖದ ಮರುಳು ಬಿಡಿಸಿ ಸೊಗಸ ತೋರಿಸಿದಿ ಅಘವನಳಿದು ಸೊಗಸಿನೊಳಗೆ ಖಗೆಯ ನಿಲಸಿದಿ ನೀ ಬಗೆಯ ರೋಗವೆಲ್ಲವ ನೀಗಿಸಿ ಎನಗಾಗಿ
--------------
ಶಂಕರಭಟ್ಟ ಅಗ್ನಿಹೋತ್ರಿ
ನಮಿಸಿರೊ ನಾರಾಯಣನಂಘ್ರಿಗೆ ಭವಕ್ರಮವಿನ್ನು ಸಾಕು ಮುಕ್ತಿಸುಖವೆ ಬೇಕೆಂಬುವರು ಪ. ಮೂರುಬಾರಿ ಪೊಡವಡಿರೊ ಮ-ತ್ತಾರು ಬಾರಿ ಪೊಡವಡಿ ಪುರುಷೋತ್ತಮಗೆಆರೆರಡಕೂಡಿ ಪೊಡವಡಿ ಪುರುಷೋತ್ತಮಗೆರ ಇಪ್ಪತ್ತಮೂರಕ್ಕೊಂದ ಕೂಡಿ ಪೊಡವಡಿರೊ 1 ಶಕ್ತಿಯಿದ್ದರೆ ನಾಲ್ವತ್ತೆಂಟು ಸಾರಿ ಹರಿ-ಗರ್ತಿಯಿಂದಲಿ ಪೊಡವಡಿರೊಆರ್ತಬಂಧು ಸಿರಿರಮಣಗೆ ಅಷ್ಟಾಂಗಯುಕ್ತವಾಗಿ ದಂಡದಂತೆ ಭೂತಳದಲಿ 2 ತುಂಬಿ 3 ಸಂಧ್ಯಾಂ ದೃಷ್ಟ್ವಾಗುರುಂ ಸಾಧ್ಯಂ ಗುರು ಸ್ವಗುರು ಮೇವಚಾದ್ವಿಚತುರ್ವಿಂಶತ್ತದರ್ಧಂ ನಾತದರ್ಧಮಥವಾನಮೇ ನಮೋತದರ್ಥಯಥವಾತದರ್ಧಂ ಸರ್ವದಾ ಮಮೇ 4 ಆರೋಗಣೆಯ ಮಾಡಲಾಗ ವಂದಿಸಬೇಡಗುರು ಹಿರಿಯರ ಸಂಗದೊಳೆರಗಬೇಡಸಿರಿ ಹಯವದನನಗ್ರಪೃಷ್ಟಾತ (?)ಪುರ ವಾಮಭಾಗ ಮಜ್ಜನಕಾಲಂಗಳ ಬಿಟ್ಟು5
--------------
ವಾದಿರಾಜ
ನಮಿಸುವೆ ಕೇಶವ ರಂಗನ ನಮಿಸುವೆ ಪ್ರಣವ ಸ್ವರೂಪನ ಪ ಸನಕ ಸುಸೇವಿತ ಕೃಷ್ಣನ1 ಸರಸದಿ ದಾಸರಿಗೊಲಿಯುವ ಹರಿಯ ಪರಮ ಪಾವನ ಮೂರ್ತಿಯ 2 ಪನ್ನಗಶಯನನ ಹರಿ ಮಾಧವನ ಚನ್ನಿಗ ಕೇಶವ ದೇವನ 3 ದೂರ್ವಾಪುರ ಮಧ್ಯದಿ ನೆಲೆಸಿರುವ ಸರ್ವಜಗದೇಕಾತ್ಮನ 4
--------------
ಕರ್ಕಿ ಕೇಶವದಾಸ
ನಮಿಸುವೆ ಗುರುರಾಜ - ಸುತೇಜ ಪ ನಮಿಸುವೆ ಸುಜನರ ಕಲ್ಪಭೂಜ ಅ.ಪ ಶರಣ ಜನಾವನ ಕರುಣಾಭರಣ ಹರಿಚರಣಾರಾಧನ ಧುರೀಣ 1 ಮೂರಾವತಾರವನೆತ್ತಿದ ಧೀರ ಸಾರಿದವರ ಸಂತಾಪ ವಿದೂರ 2 ದ್ವಿಜಕುಲದೀಪ ಭವ್ಯ ಸ್ವರೂಪ ಅಜರಾಮರ ಸತ್ಕೀರ್ತಿ ಪ್ರತಾಪ 3 ಜ್ಞಾನವಿರಕ್ತಿ ನಿರ್ಮಲಭಕ್ತಿ ಮಾಣದೆ ಕೊಡುವುದು ಮನಸಿಗೆ ಶಾಂತಿ 4 ವರ ಮಂತ್ರಾಲಯ ಸುರುಚಿರ ನಿಲಯ ಕರಿಗಿರೀಶ ಶ್ರೀ ನರಹರಿಪ್ರಿಯ 5
--------------
ವರಾವಾಣಿರಾಮರಾಯದಾಸರು
ನಮಿಸುವೆ ನಿನ್ನ ಶ್ರೀಗುರುವೆ ಅಮಿತಾನಂದಾತ್ಮಸ್ವರೂಪನೇ ಶಮನ ಮಾತು ಈ ಭವಭಾಧೆಯ ನೀ ಚಿನುಮಯ ಮೂರುತಿಯೇ ಪ ಬೆಂದೆನು ಸುಖದುಃಖಗಳಲಿ ನಾ ಬಹು ನೊಂದೆನು ಜನಿಮೃತಿ ಹೊಂದುತಾ ಎಂದಿಗೆ ಪರಮಾನಂದವ ಪಡೆವೇ ಬಂದೆನು ಶರಣಾಗಿ 1 ಭೋಗದಿ ಸುಖಿಸುವೆನೆಂಬುವಾ ಅನು ರಾಗದಿ ವಿಷಯಗಳಲಿ ಸಿಲುಕಿ ಭೋಗಿಸಿದಂತೆಯೆ ವಾಸನಾ ಬಲ ವಾಗಂತ ಬಂದಿತು ಮನದಲ್ಲಿ 2 ಭವ ರೋಗದಿ ಬಳಲುವೆನೀಗಲೇ ತ್ಯಾಗದಿ ನಿಜಸುಖ ದೊರಕುವ ರೀತಿಯ ತಿಳುಹಿಸು ಗುರುವರನೆ 3 ವಿಶ್ವದ ತೊಡಕನು ಹಾಕಿಕೊಂತು ಈಶ್ವರನನ್ನೇ ಮರೆತಿರುವೆ ನಶ್ವರವಾಗಿಹ ಈ ಜಗವನು ಶಾಶ್ವತವೆಂದೇ ತಿಳಿದಿರುವೇ 4
--------------
ಶಂಕರಭಟ್ಟ ಅಗ್ನಿಹೋತ್ರಿ
ನಮಿಸುವೆನು ನಮಿಸುವೆನು ವಿಶ್ವಪ್ರಿಯಾರ್ಯ |ಅಮದು ನಿಮ್ಮಯ ಮಹಿಮೆ ಪಾಮರನಿಗಳವೇ ಪ ಪಾದ ಭಜಕ 1 ಸ್ವಪ್ನದ್ರಷ್ಟ್ರುಗಳೆನಿಸಿ ಅಪ್ಪಹಯ ಮುಖದಯದಿಅಪ್ಪುತಲಿ ಜಾತಿಸ್ಮøತಿ ಗೊಪ್ಪವೆಂದೆನಿಪ |ಸ್ವಪ್ನದಾಖ್ಯಾನವನು ಪ್ರಕರಣಗಳಂದೆನಿಸಿಕೃಪ್ಪೆಯಲಿ ವ್ಯಕ್ತಿಗಳ ಪರಿಚಯವ ಗೈದೇ 2 ನಿರಶಾನದಿ ವ್ರತವು ಮರಳಿ ಶಿಬಿಕಾರೋಹಪುರಟ ಸಂಪುಟಗತವು ಮಧ್ಯವಾಟಸ್ಥ |ಹರಿಪ್ರತಿಮೆ ಕೃಷ್ಣ ಬಳಿ ಅರ್ಚಿಸುತ ಭಾವೀಂದ್ರಮೆರೆದೆ ಗುರುಗೋವಿಂದ ವಿಠಲ ಭಕ್ತೇಶ3
--------------
ಗುರುಗೋವಿಂದವಿಠಲರು
ನಮೋ ನಮೋ ಕಮಲಾಲಯೆ ಸರ್ವೋ ತ್ತುಮ ನಾರಾಯಣನಂಕದ್ವಯ ಸಮುಪಸ್ಥಿತೆ ಸುಂದರ ಮದಗಜ ಗಮನೆ ಗುಣಪೂರ್ಣೆ ಶೋಭಾನೆ ಪ ಕಂಗಳ ಕುಡಿನೋಟದಿ ಕಂಜಜ ಗಂಗಾಧರ ಸುರಮುಖ ಸುಜನರ ಇಂಗಿತ ಫಲ ಪೂರೈಸಿಕೊಡುವ ಮಂಗಳ ಸುಚರಿತ್ರೆ ಭೃಂಗಾಳಿಗಳಂದದಿ ಸೊಗಯಿಪ ಮುಂಗುರುಳಿಂದೊಪ್ಪುವ ನಿಜಪತಿ ಸಂಗಡ ಬಾ ಹಸಿಯ ಜಗಲೀಗೆ 1 ಜಲಜಾಕ್ಷನ ವಿಮಲಾಂಗದಿ ಪ್ರತಿ ಫಲಿಸಿದ ರೂಪಗಳನೆ ನೋಡುತ ಪುಳಕೋತ್ಸವದಿಂದಲಿ ಪಾಡುತ ಹೊಲಬು ಗಾಣದಲೆ ತಲೆದೂಗುತ ಮಿಗೆ ಸಂತೋಷದಿ ಗಳರವದಿಂ ಪಾಡುತ ಶ್ರೀ ಭೂಲಲನೆ ಬಾ ಹಸಿಯ ಜಗಲೀಗೆ 2 ಪ್ರತಿಫಲಿಸಿಹ ರೂಪಗಳೆನ್ನವು ಕತಿಪಯರೂಪಗಳೆನಗಿಂದಲಿ ಅತಿಶಯವೆ ತೋರುತಲಿಪ್ಪವು ಪ್ರತಿ ಪ್ರತಿಕ್ಷಣದಿ ಶ್ರುತಿ ಪ್ರತೀಕನು ದಯದಿಂದೆನ ಗ್ಹಿತದಿಂದಲಿ ತೋರಿದನೆನುತಲಿ ನತಿಸುತ ನಗುತಿಪ್ಪ ಲಕ್ಷ್ಮೀ ಹಸಿಗೇಳು 3 ಆ ಬ್ರಹ್ಮಾಂಡಗಳೊಳ ಹೊರ ಗುಪಮರು ನಿನಗಿಲ್ಲವಾಗಲು ಅಪರಾಜಿತನಮಲ ಸುರೂಪ ಗಳಪರೋಕ್ಷಣದಿ ಕಾಂಬ ಚಪಲಾಂಬಕ ಕೃಪಣರ ಸಲಹಲು ಸ್ವಪತಿಯ ಶಿಪಿವರನಂಸಗೆ ಸುಫಲದೆ ಬಾಹಸಿಯ ಜಗುಲೀಗೆ 4 ವೀತಭಯನ ವಕ್ಷಸ್ಥಳವೆ ಪು ರಾತನ ಮನೆಯೆನಿಪುದು ಅವಿನಾ ಭುತರು ನೀವಿರ್ವರು ಅಮೃತಾ ಜಾತರು ಎಂದೆಂದೂ ಭೌತಿಕ ಮಂದಿರದೊಳು ನೆಲೆಸಿ ಪು ನೀತರ ಮಾಳ್ಪುದೆಮ್ಮ ಜಗ ನ್ನಾಥ ವಿಠಲನರ್ಧಾಂಗಿ ಜಗ ನ್ಮಾತೆ ವಿಖ್ಯಾತೆ ಬಾಹಸಿಯ ಜಗುಲೀಗೆ 5
--------------
ಜಗನ್ನಾಥದಾಸರು
ನಮೋ ನಮೋ ಕಾಲಭೈರವ ಹರಿಯ ಚರಣ- ಸಮೀಪದೊಳಗಿದ್ದು ಮೆರೆವ ಪ. ಸಮೀಚೀನಜ್ಞಾನಭಕ್ತ- ಸಮೂಹವ ಕಾವ ಲಕ್ಷ್ಮೀ- ರಮಣನ ಕಾರ್ಯಮಂತ್ರಿ- ಯು ಮಾಧವನ ಸಮಾನಬಲ ಅ.ಪ. ಬೆಟ್ಟದೊಡೆಯ ಶ್ರೀನಿವಾಸನ ಪಾದಕಮಲ- ಮುಟ್ಟಿ ಭಜಿಪ ವೈರಿಮರ್ದನ ಸೃಷ್ಟಿ ಮೂರರಲ್ಲಿ ಕೀರ್ತಿ- ಪಟ್ಟ ದಿಟ್ಟ ಧೀರ ಪರಮ ನಿಷ್ಠ ಪುಷ್ಪ ತುಷ್ಟಿಪ್ರದ ಬ- ಲಿಷ್ಠ ಶ್ರೇಷ್ಠ ಭೂತಪತಿಯೆ 1 ಶ್ರೀನಿವಾಸನಾಜ್ಞೆ ಮೀರದೆ ನಡೆಸುವದೆ ಪ್ರ- ಧಾನ ಕಾರ್ಯ ನಿನ್ನದೆಂಬುದೆ ತಾನು ಕಿಂಚಿದರಿತು ಸನ್ನಿ- ಧಾನವನ್ನೋಲೈಸಿ ಬಂದೆ ದೀನಬಂಧು ಸುಗುಣಸಿಂಧು ಮಾನತ್ರಾಣವಿತ್ತು ಸಲಹೊ 2 ಅಂತರಂಗದಲ್ಲಿ ಪ್ರಾರ್ಥನೆ-ಮಾಡಿದರೆ ಸ್ವಂತ ಬಂದು ಮಾಡು ರಕ್ಷಣೆ ಅಂತ್ಯಕಾಲದಲ್ಲಿ ಹರಿಯ ಚಿಂತನೆಗೆ ವಿಘ್ನ ಬಾರ- ದಂತೆ ಕಾವ ಮಹಾ ತೇಜೋ- ಸೂರಿ 3 ಕಾಲಕಾಲದಲ್ಲಿ ಭಕ್ತರ ಮನೋಭೀಷ್ಟ ಪಾಲಿಸುವ ಚಂದ್ರಶೇಖರ ಖೂಳ ಜನರ ಗರ್ವಮುರಿವ ಶೂಲಪಾಣಿ ಸುಗುಣಶ್ರೇಣಿ ಮೂಲಪತಿಯ ಪಾದಪದ್ಮ ಮೂಲದೊಳಗೆ ನಲಿವ ಚೆಲುವ 4 ಭೂರಿ ಮಹಿಮೆಯ ಭಕ್ತರಿಂಗಾ- ಧಾರವಾಗಿ ರಾಜಿಸಿರುವೆಯ ಧೀರ ಲಕ್ಷ್ಮೀನಾರಾಯಣನ ಸೇರಿದಾನತರ್ಗೆ ಮಂ- ದಾರ ಮಹೋದಾರ ಗಂ- ಭೀರ ಧೀರ ಚಾರುಚರಿತ 5
--------------
ತುಪಾಕಿ ವೆಂಕಟರಮಣಾಚಾರ್ಯ
ನಮೋ ನಮೋ ಗುರು ಸುಶೀಲೇಂದ್ರ | ಶ್ರೀ ಸಂ ಯಮಿ ಕುಲೋತ್ತಮ ಮಧ್ವಮತ ಸುಮತಾಬ್ಧಿ ಚಂದ್ರ ಪ ಶ್ರೀ ಸುವೃತೀಂದ್ರ ಕುಮಾರ | ಜಿತ ಪೂತರ ಭಾಸುರ ಚರಿತ ಉದಾರ ಭೂಸುರ ಸೇವಿತಧೀರ | ಮೂಲ ದಾಶರಥಿಯ ಪಾದಾಂಭೋಜಭಾರ 1 ಶ್ರೀರಾಘವೇಂದ್ರ ಪ್ರಿಯ ಗುರುವರದ ತೀರ ಶೋಭಿಪರಿತ್ತಿ ಸುಕ್ಷೇತ್ರ ನಿಲಯ ಭವ | ದೂರ ದಯಾಂಬುಧಿ ದ್ವಿಜಕುಲ ಪರಿಯ 2 ಶಮಸುಂದರ ದಾಸಾಗ್ರಣಿಯೆ | ಬುಧ ಸ್ತೋಮವಂದಿತ ಪದನತ ಸುರಮಣಿಯೆ ಈ ಮಹಿಯೊಳು ನಿನಗೆಣೆಯೆ | ಮಮ ಸ್ವಾಮಿ ಕುಮತ ಕುಲತಮಗೆ ದ್ಯುಮಣಿಯೆ 3
--------------
ಶಾಮಸುಂದರ ವಿಠಲ