ಒಟ್ಟು 1859 ಕಡೆಗಳಲ್ಲಿ , 108 ದಾಸರು , 1428 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ತಂದೆ ಎನ್ನತಾಯಿ ಎನ್ನ ಬಂಧುವೆ ನೀಇನ್ನಾರೊಡೆಯರಿಲ್ಲ ಕಾಯೊ ಲಕ್ಷ್ಮೀನಲ್ಲ ಪ.ಕರುಣ ನೋಟದಿ ನೋಡಿ ಹೊರಡಿಸಿದ ತಂದೆ ಮಂದರಧರನೆ ಬಸುರೊಳಿಟ್ಟ ತಾಯಿ ನೀನುಧÀರೆಗೆ ಪರಗತಿಗೆ ನೆಲೆಗೊಡುವ ಬಾಂಧವ ನೀನುದುರಿತಕರಿಗಣಕೆ ಸಿಂಹಾಸ್ಯ ನೀನು1ಷÀಟ್ಕರ್ಮ ಸಂಗ್ರಹವ ಮಾಡಿಸುವ ತಂದೆ ನೀದುಷ್ಕರ್ಮ ಖಂಡಿಸುವ ತಾಯಿ ನೀನುಷಟ್ಕೋಣ ಬಲದಿರುವ ತ್ರಿಕೂಟಾದ್ರಿವಾಸ ವಷಟ್ಕಾರಗೈದೆ ಕೌರವ ಕುಲಾರಿಯು ನೀನು 2ಶ್ರುತಿವಿರೋಧಿಗಳ ಮೋಹಿಪ ಸುರರ ತಂದೆ ನೀಅತುಳಧರ್ಮಾತ್ಮಕರ ತಾಯಿ ನೀನುಕ್ಷಿತಿಗೆ ವೈಕುಂಠವೆನಿಪ ಪ್ರಸನ್ವೆಂಕಟ ಬಂಧುಗತಿಗೆ ಗತಿಯಾದಾದಿಪುರುಷ ನಮೋ 3
--------------
ಪ್ರಸನ್ನವೆಂಕಟದಾಸರು
ಎನ್ನ ಮನದ ಡೊಂಕ ತಿದ್ದಿ-ಚರಣದಲ್ಲಿ ಸೇರಿಸೋ |ನಿನ್ನ ಸೇವಕನಾದ ಮೇಲೆಇನ್ನು ಸಂಶಯವೇಕೆ ಕೃಷ್ಣ ಪಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ |ಹದಿನಾಲ್ಕು ಲೋಕಂಗಳನಾಳಬೇಕೆಂಬ ಚಿಂತೆ ||ಇದು ಪುಣ್ಯ ಪಾಪವೆಂದು ಹೃದಯದಲಿ ಭಯವಿಲ್ಲದಲೆ |ಮದ ಮೋಹಿತನಾದೆ ನಿನ್ನ ಪದವ ನಂಬದೆ-ದಯಾಳೊ 1ನೆರೆಮನೆಗಳ ಭಾಗ್ಯವ ನೋಡಿ-ತರಹರಿಸುತ ಅಸೊಯೆಯಿಂದ |ಹರಿಯ ಸ್ಮರಣೆಗೆ ವಿಮುಖನಾದೆ - ನರರಸ್ತುತಿಯ ನಾ ಮಾಡಿದೆ ||ಪರರ ಸತಿಗೆ ಪರರನ್ನಕೆ ತಿರುಗಿ ತಿರುಗಿ ಚಪಲನು ಆದೆ |ಗುರುಹಿರಿಯರ ದೂಷಿಸುತಲಿ ಮರುಳನಾದೆ ದೀನಶರಣ್ಯ 2ಅಗಣಿತಸುಖ ಬಂದರೆ ನಾನು -ಅಗಣಿತದುಃಖಕೆ ಹರಿಯೆನ್ನುವೆನು |ಜಗದೊಳಾವ ಲಾಭವು ಬಂದರು ಧನಿಯು ನಾನೆ ಎಂಬೆ ||ಮಿಗೆ ಹಾನಿಗೆ ಹರಿಯನು ದೂಷಿಸಿನೆಗೆದು ಪತಂಗವು ಕಿಚ್ಚಲಿ ಬೀಳುವ |ಬಗೆ ನಾನಾದೆನುಪುರಂದರವಿಠಲನಖಗರಾಜಸುವಾಹನ ಶ್ರೀ ಕೃಷ್ಣ 3
--------------
ಪುರಂದರದಾಸರು
ಎಲೆ ಗುರುವೆ ಜನುಮ ಜನುಮ ಜನುಮದೊಳು ಗುರುವೆಯಲಗುರದ ಹನುಮಂತ ಗೆಲಿಸು ಭವಪಂಥ ಪ.ಮೂಜಗದೊಳಾರು ನಿನಗೆಣೆಯೆ ಋಜುಗಣಪತಿ ಸರೋಜಭವಪದ ಗಮ್ಯ ರಮ್ಯಭೂಜಾತೆಯಳಶೋಕಬಿಡಿಸಿದ ಬಲಾಧಿಕ ಬಿಡೌಜಾರಿಪಿತ ಹೃದಯನೊದೆದೆ 1ಲಾಕ್ಷಾಗೃಹದಿ ಧರ್ಮಜರ ಹೊರೆದು ಕಿಮ್ರ್ಮೀರರಾಕ್ಷಸ ಹಿಡಿಂಬರನು ತರಿದೆಭಕ್ಷಿಸಿದೆ ವಿವಿಧನ್ನ ಶಿಕ್ಷಿಸಿದೆ ಬಕನ ತಾಮ್ರಾಕ್ಷ ಭಾಗವತಜನಪಕ್ಷ 2ಉನ್ಮತ್ತಮತಂಗಳನು ಅಳಿದೆ ಯತಿರೂಪದಿ ಜಗನ್ಮಯನ ಭಕುತಿರಸ ಜಗದಿನಿನ್ನ ಬಂಟರಿಗೆರೆದೆನಿರಯತಪ್ಪಿಸಿದೆ ಪ್ರಸನ್ನವೆಂಕಟನಾಥ ಪ್ರೀತ 3
--------------
ಪ್ರಸನ್ನವೆಂಕಟದಾಸರು
ಎಲೆಮಾನವಹರಿಯ ಸ್ಮರಿಸುಸಲೆ ಕಾವನು ಖರಿಯ ಪ.ಶಂಖಾರಿ ಸಂಧೃತನ ಮತ್ತಾಶಂಖಜನ ಬಲಹೃತನಶಂಕರ ವಿಧಿನÀುತ ಚರಣನುದಾರಾಶಂಕಾವಾರಣ ವಾರಣೋದ್ಧರನ 1ಕಮನೀಯತರ ಗಾತ್ರನಅರುಣಕಮಲಾಯತ ನೇತ್ರನಕಮಲಾವ್ಯಯಪೂತಮುಖ ಚಾರುವಿಲಸಿತಕುಮುದಾಸಿತ ಶರಣ ಕರುಣಾಕರನ 2ಅಗಣಿತಗುಣಗಣ್ಯನಾನಂತಆಗಮನಿಗಮಾದಿ ಪೂರ್ಣನಅಗಧರ ಮಹಿವರ ಪ್ರಸನ್ವೆಂಕಟವರಅಗನಂದನಿಲಯ ಕಲಿಯಕೋಲಾಹಲನ 3
--------------
ಪ್ರಸನ್ನವೆಂಕಟದಾಸರು
ಏಕೆ ಕಡೆಗಣ್ಣಿಂದ ನೋಡುವೆ - ಕೃಷ್ಣ |ನೀ ಕರುಣಾಕರನಲ್ಲವೆ ? ಪಭಕ್ತ ವತ್ಸಲ ನೀನಲ್ಲವೆ -ಕೃಷ್ಣ |ಚಿತ್ಸುಖದಾತ ನೀನಲ್ಲವೆ ? ||ಅತ್ಯಂತ ಅಪರಾಧಿ ನಾನಾದಡೇನಯ್ಯ|ಇತ್ತಿತ್ತ ಬಾ ಎನ್ನಬಾರದೆ ರಂಗ 1ಇಂದಿರೆಯರಸ ನೀನಲ್ಲವೆ - ಬಹುಸೌಂದರ್ಯನಿಧಿ ನೀನಲ್ಲವೆ ? ||ಮಂದಮತಿ ನಾನಾದಡೇನು ಕೃಪಾ-ಸಿಂಧುನೀ ರಕ್ಷಿಸಬಾರದೆ ರಂಗ2ದೋಷಿಯು ನಾನಾದಡೇನಯ್ಯ - ಸರ್ವ -ದೋಷರಹಿತ ನೀನಲ್ಲವೆ ? ||ಗಾಸಿಯೇತಕೆ ನಿನ್ನ ನಂಬಿದೆ ಸಲಹಯ್ಯ |ಶೇಷಶಾಯಿ ಶ್ರೀಪುರಂದರವಿಠಲ3
--------------
ಪುರಂದರದಾಸರು
ಏಕೆನ್ನೊಳಿಂತು ಕೃಪೆಯಿಲ್ಲ ಹರಿಯೆಕಾಕಮಾಡದೆ ಕಾಯೊ ಸಂಗದೊಳು ಬಳಲಿದೆನು ಪಕಂದರ್ಪಬಾಧೆಯಿಂ ಮಾನಿನಿಯ ವಶನಾಗಿಮಂದಮತಿಯಿಂದ ನಾ ಮರುಳಾದೆನೋ ||ಸಂದಿತೈ ಯೌವನವು ಬುದ್ದಿ ಬಂದಿತು ಈಗಸಂದೇಹಪಡದೆ ನೀ ಕರುಣಿಸೈ ಎನ್ನ 1ಹೆಂಡತಿಯು ಕಡೆಗಣ್ಣಿನಿಂದ ನೋಡುವಳೀಗಹಿಂಡುಮಕ್ಕಳು ಎನ್ನ ತಿನ್ನುತಿಹರು ||ಮುಂಡಮೋಚಿದೆ ನಾನು ಇನ್ನಾರು ಗತಿಯೆನಗೆಪುಂಡರೀಕಾಕ್ಷನೀ ಪಾಲಿಸೈ ಎನ್ನ2ಅಟ್ಟಮೇಲೊಲೆಯುರಿಯುವಂತೆಹರಿಎನಗೀಗಕೆಟ್ಟ ಮೇಲರಿವು ತಾ ಬಂದಿತಯ್ಯ ||ನೆಟ್ಟನೇಪುರಂದರವಿಠಲನೆ ಕೈ ಬಿಡದೆದಿಟ್ಟಿಯಲಿ ನೋಡಿ ಪರಿಪಾಲಿಸೈ ಎನ್ನ 3
--------------
ಪುರಂದರದಾಸರು
ಏನಯ್ಯ ನಿನ್ನ ಸಂಗದಪರಿ - |ಮಾನಿನಿಯ ಮರುಳು ಮಾಡಿ ನೋಡಿದವಗೆ ಪಶಿರವ ತೂಗುವಳು, ಚಿತ್ರದ ಪ್ರತಿಮೆಯಂತಿಹಳು |ಕರವ ಗಲ್ಲದೊಳಿಟ್ಟು ಕಡುಸುಯ್ವಳು ||ಇರು ಇರುತಲೊಮ್ಮೊಮ್ಮೆ ಎದುರೆದ್ದು ನೋಡುವಳು |ಬರವ ಕಾಣದೆ ಕಂದಿ ಕುಂದಿ ಬಡವಾದಳೈ 1ಕಂಬನಿಯ ತುಂಬುವಳು ಕರೆವಳು ಪೆಸಗೊರ್ಂಡು |ಹಂಬಲಿಸುವಳು ಕಂಡ ಕಾಂತೆಯರೊಳು ||ಬೆಂಬಿಡದೆ ಜಡೆ ಮುಡಿಯೆ ತೊಡಿಗೆ ಬೀಸಾಡುವಳು |ಬಿಂಬವರಿತು ಪೊಗುಳುವಳು ನಿನ್ನ ಗುಣಗಣವ 2ಇನಿತರೊಳೇನಹುದೊ, ನಿನ್ನ ಮೇಲಣ ಸ್ನೇಹ |ಘನತಾಪದಿಂದ ಗೋಚರವಾಗಿದೆ ||`ಅನುತಾಪದಿಂದ ಸಲೆ ಬಳಲಿದ ಮಾನಿನಿಯ |ವನಜಾಕ್ಷಪುರಂದರ ವಿಠಲ ಬಂದು ಸಂತಯಿಸೊ3
--------------
ಪುರಂದರದಾಸರು
ಏನು ಧನ್ಯಳೊ ಗಿರಿಜೆ ಎಂಥ ಮಾನ್ಯಳೋ ಪಸ್ಥಾಣುವಮೂರ್ತಿಪಾದಸೇವೆತಾನೆನಿರತಮಾಡುತಿಹಳೊ ಅ.ಪಭೂತಗಣದ ಯೂಥವಿರಲುಸೂತಗಣನಾಥಾದ್ಯರಿರಲುಭೂತಪತಿಯಚರಣತೊಳೆದುತೀರ್ಥಕೊಡುತ ಬರುವಳ್ ಸಭೆಗೆ 1ನಾರದರು ದಿಕ್ಪಾಲರಿರಲುವಾರಿಜಾಸನ ವಿಷ್ಣುವಿರಲುಮಾರಹರನಿಗಾರತಿ ಎತ್ತಿತಾನೆ ಸಭೆಗೆ ತೋರಿಸುವಳು 2ವಸುಗಳ್ ಸಪ್ತ ಋಷಿಗಳಿರಲುಅಸುರ ಶಿಕ್ಷರು ನುತಿಸುತಿರಲುಪಶುಪತಿಯ ಲೇಪಿಸಿದ ಭಸ್ಮಗೋವಿಂದಾದ್ಯರಿಗೆ ಪ್ರಸಾದ ಕೊಡುವಳ್ 3
--------------
ಗೋವಿಂದದಾಸ
ಏನೆಂತೊಲಿದೆ ಇಂತವರಂತೆ ಕೆಡುಬುದ್ಧಿ - ಎನ್ನೊಳಿಲ್ಲಗುಣ |ಹೀನರಲ್ಲದ ದೀನ ಜನರ ಪಾಲಿಪ ಬುದ್ಧಿ ನಿನ್ನೊಳಿಲ್ಲ ಪತರಳ ಪ್ರಹ್ಲಾದನಂದದಿ ನಿನ್ನಯರೂಪ ಕೆಡಿಸಲಿಲ್ಲನರನಂತೆ ತನ್ನ ಬಂಡಿಯ ಬೋವನ ಮಾಡಿ ಹೊಡಿಸಲಿಲ್ಲ ||ಸುರನದೀಸುತನಂತೆ ಪಣೆಯೊಳು ಬಾಣವ ಸಿಡಿಸಲಿಲ್ಲದೊರೆ ಅಂಬರೀಷನಂದದಿ ಈರೈದು ಜನ್ಮವ ಪಡಿಸಲಿಲ್ಲ 1ನಾರದನಂತೆ ಕಂಡವರ ಕೊಂಡೆಯವ ನಾ ಪೇಳಲಿಲ್ಲ |ಪರಾಶರನಂತೆ ನದಿಯೊಳಂಬಿಗ ಹೆಣ್ಣ ಕೊಡಲಿಲ್ಲ ||ಆ ರುಕುಮಾಂಗದನಂತೆ ಸುತನ ಕೊಲ್ಲಲು ಧೃಢಮಾಡಲಿಲ್ಲಮಾರುತನಂತೆ ನೀನುಣುತಿದ್ದ ಎಡೆಯ ಕೊಂಡೋಡಲಿಲ್ಲ 2ವಿದುರನಂತೆ ನನ್ನ ಸದನವ ಮುರಿದು ನಾ ಕುಣಿಯಲಿಲ್ಲಮದಕರಿಯಂತೆ ಮಕರಿಯ ಬಾಯೊಳು ಸಿಕ್ಕಿ ಒದರಲಿಲ್ಲ ||ಹೆದರದೆ ಬಲಿಯಂತೆ ಭೂಮಿಯ ಧಾರೆಯನೆರೆಯಲಿಲ್ಲಸದರ ಮಾತುಗಳಾಡಿ ಶಿಶುಪಾಲನಂತೆ ನಾ ಜರೆಯಲಿಲ್ಲ3ಸನಕಾದಿ ಮುನಿಯಂತೆಅನುದಿನ ಮನದೊಳು ಸ್ಮರಿಸಲಿಲ್ಲಇನಸುತ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲ ||ಬಿನುಗು ಬೇಡತಿಯಂತೆ ಸವಿದುಂಡ ಹಣ್ಣ ನಾ ತಿನಿಸಲಿಲ್ಲಘನ ಅಜಾಮಿಳನಂತೆ ಸುತನ ನಾರಗನೆಂದು ಕರೆಯಲಿಲ್ಲ4ವರ ಶೌನಕನಂತೆನಿತ್ಯ ಸೂತನ ಕಥೆ ಕೇಳಲಿಲ್ಲಪಿರಿದು ತುಂಬುರುನಂತೆ ನಾಟ್ಯ - ಸಂಗೀತವ ಪೇಳಲಿಲ್ಲ ||ಉರಗಾಧಿಪತಿಯಂತೆ ಉದರದೊಳಿಟ್ಟು ನಾ ತೂಗಲಿಲ್ಲಪಿರಿದು ಕುಚೇಲನ ತೆರನಂತೆ ಅವಲಕ್ಕಿ ಈಯಲಿಲ್ಲ 5ಭೃಗುಮುನಿಯಂತೆ ಗರ್ವದಿ ನಿನ್ನ ಎದೆಯನು ಒದೆಯಲಿಲ್ಲಅಗಣಿತ ಮಹಿಮ ನೀನಹುದೆಂದು ಧ್ರುವನಂತೆ ಪೊಗಳಲಿಲ್ಲ ||ಖಗರಾಜನಂತೆ ನಿನ್ನನು ಪೊತ್ತು ಗಗನದಿ ತಿರುಗಲಿಲ್ಲಅಗಜೆಯರಸನಂತೆ ಮಸಣದಿ ರಾಮನ ಸ್ಮರಿಸಲಿಲ್ಲ 6ಅವಹಿತದಲಿ ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲಯುವತಿ ದ್ರೌಪದಿಯಂತೆ ಪತ್ರಶಾಕವನುಣಬಡಿಸಲಿಲ್ಲ ||ತವೆ ಪುಂಡಲೀಕನಂದದಿ ಇಟ್ಟಿಗೆಯ ಮೇಲೆ ನಿಲಿಸಲಿಲ್ಲ ದೇವಇವರಂತೆಪುರಂದರ ವಿಠಲ ನಿನ್ನಯ ಕೃಪೆಯೆನ್ನೊಳಿಲ್ಲ7ಅಂಕಿತದಲ್ಲೂ ಇವೆ.)
--------------
ಪುರಂದರದಾಸರು
ಏಳು ಆರೋಗಣೆಗೆ ಏಕೆ ತಡವೊಆಲಸ್ಯಮಾಡದಲೆ ಮೂಲರಾಮಚಂದ್ರಕುಡಿಬಾಳಿದೆಲೆ ಹಾಕಿ ಸಡಗರದಿಂದ ಎಡೆಮಾಡಿಪುಡಿ ಉಪ್ಪು ಚೆಟ್ನಿ ಕೋಸಂಬರಿ ಉಪ್ಪಿನಕಾಯಿಎಣ್ಣೂರಿಗತಿರಸವು ಸಣ್ಣ ಶ್ಯಾವಿಗೆ ಫೇಣಿಗಂಧ ಕಸ್ತೂರಿಪುನಗುಕರ್ಪೂರದ ವೀಳ್ಯನಿತ್ಯತೃಪ್ತನೆ ನಿನ್ನ ಉದರದೊಳಿಹ
--------------
ಗೋಪಾಲದಾಸರು
ಔಪಾಸನವಮಾಡುದಾಸ ನಾನೆಂದುಶ್ರೀಪತಿದಾನ ಧರ್ಮವೆ ಮೋಕ್ಷವೆಂತೆಂದೂ ಪ.ವನಿತೆ ಲಕುಮಿಯು ದಾಸಿ ಮುಕ್ತಾಮುಕ್ತಗಣವೆಲ್ಲ ಹರಿದಾಸರುಹನುಮತ್ ಸ್ವಾಮಿಯು ರಾಮದಾಸತ್ವದ ಭಾಗ್ಯವನು ಹೊಂದಿವಿರಿಂಚಿಪದವಿಯ ಪಡೆದನು1ಅನಾದ್ಯನಂತಕಾಲಸಂಸೃತಿಯಲ್ಲಿಆನಂದವು ಮುಕ್ತಿಲಿನೀನೆಂದಿಗು ಸ್ವಾಮಿ ನಾನು ಭೃತ್ಯರಭೃತ್ಯಅನಿಮಿಷರೆಲ್ಲ ನಿನ್ನೂಳಿಗದವರೆಂದು 2ದಾರಾಪತ್ಯಾದಿ ಬಳಗ ದಾಸಿ ದಾಸರುನಾರಾಯಣ ದೇವನವರವರ ಯೋಗ್ಯತೆಸಾರಸಂಬಳ ಸೇವೆಮೀರದೀವ ದೀನೋದ್ಧಾರ ಕೃಷ್ಣನೆಂದು 3ಕರಣತ್ರಯಗಳಿಂದ ನಿರಂತರಮರೆಯೂಳಿಗವ ಮಾಡಿಸಿರಿದಾರಿದ್ರ್ರ್ಯತೆಗಳಿಗ್ಹಿಗ್ಗಿ ಕುಗ್ಗದೆಪರಮಭಕುತಿ ಭಾಗ್ಯ ದೊರಕಿದುಲ್ಲಾಸದಿ4ದುರಿತಕೋಟಿಗಂಜದೆ ಸಾಧುನಿಕರಹರಿಯ ಸೇವೆಯ ಬಿಡದೆವರವಿರತಿ ಜ್ಞಾನ ಭಕ್ತಿಲಿ ಪ್ರಸನ್ವೆಂಕಟಹರಿಕೊಟ್ಟಷ್ಟೆ ಪರಮಸಂಬಳ ಸಾಕೆಂದು5
--------------
ಪ್ರಸನ್ನವೆಂಕಟದಾಸರು
ಕಂಡೆ ಕರುಣನಿಧಿಯ | ಗಂಗೆಯ |ಮಂಡೆಯೊಳಿಟ್ಟ ದೊರೆಯ |ರುಂಡಮಾಲೆ ಸಿರಿಯ | ನೊಸಲೊಳು |ಕೆಂಡಗಣ್ಣಿನ ಬಗೆಯ | ಹರನ ಪಗಜಚರ್ಮಾಂಬರನ | ಗೌರೀ |ವರಜಗದೀಶ್ವರನ |ತ್ರಿಜಗನ್ಮೋಹಕನ | ತ್ರಿಲೋಚನ |ಭುಜಗಕುಂಡಲಧರನ | ಹರನ 1ಭಸಿತ ಭೂಷಿತ ಶಿವನ | ಭಕ್ತರ | ವಶದೊಳಗಿರುತಿಹನ |ಪಶುಪತಿಯೆನಿಸುವನ | ಧರೆಯೊಳು |ಶಶಿಶೇಖರ ಶಿವನ | ಹರನ 2ಕಪ್ಪುಗೊರಳ ಹರನ | ಕಂ | ದರ್ಪಪಿತನ ಸಖನ |ಮುಪ್ಪುರಗೆಲಿದವನ | ಮುನಿನುತ |ಸರ್ಪಭೂಷಣ ಶಿವನ | ಹರನ 3ಕಾಮಿತ ಫಲವೀವನ | ಭಕುತರ | ಪ್ರೇಮದಿಂ ಸಲಹುವನ |ರಾಮನಾಮಸ್ಮರನ ರತಿಪತಿ| ಕಾಮನ ಗೆಲಿದವನ | ಶಿವನ4ಧರೆಗೆ ದಕ್ಷಿಣ ಕಾಶೀ | ಎಂದೆನಿಸುವ |ವರಪಂಪಾವಾಸಿತಾರಕಉಪದೇಶಿ |ಪುರಂದರವಿಠಲ ಭಕ್ತರ ಪೋಷೀ | ಹರನ5
--------------
ಪುರಂದರದಾಸರು
ಕಂಡೆ ಗುಣಗಣ ಸಾಂದ್ರಳಕೈಕೊಂಡೆ ಮುಕ್ತಿ ಫಲಗಳ ಪ.ಶೃತಿ ತತಿಗಳಿಂದ ಯುಕ್ತಳಲಕ್ಷ್ಮೀಪತಿಯ ದಯಕೆ ಪೂರ್ಣ ಪಾತ್ರಳಅತಿ ಭಕ್ತಿಯಿಂದ ಯುಕ್ತಳಮಧ್ವಮತಕ ಹಿತದಿಂದ ವ್ಯಾಪ್ತಳ 1ವ್ಯಾಳಾಶಯನನ ಭಕ್ತಳಗುಣಹೇಳಿದೆಮ್ಮ ಸುಶಕ್ತಳೆಏಳು ಲೋಕದಿ ವ್ಯಾಪ್ತಳಕರುಣಾಳು ಎನಿಸುತಿಪ್ಪಳ 2ರಮಿಯ ರೂಪಳೆ ರುಕ್ಮಿಣಿಯದಿವ್ಯ ಪ್ರಮೇಯ ತಿಳಿಸಿದೆ ಭಾಮಿನಿಅಮಿತ ಮಹಿಮಳೆಕಾಮಿನಿನಮಗೆ ಸುಮತಿದಾತಳೆ ಸುಗುಣಿ ನೀ 3
--------------
ಗಲಗಲಿಅವ್ವನವರು
ಕಣ್ಣಿನೊಳಗೆ ನೋಡೊ ಹರಿಯ - ಒಳ -ಗಣ್ಣಿನಿಂದಲಿ ನೋಡೊ ಮೂಜಗದೊಡೆಯ ಪ.ಆಧಾರ ಮೊದಲಾದ ಆರು - ಚಕ್ರಶೋಧಿಸಿ ಸುಡಬೇಕು ಈ ಕ್ಷಣ ಮೂರು ||ಸಾಧಿಸಿ ಸುಷಮ್ನ ಏರು ಅಲ್ಲಿಭೇದಿಸಿ ನೀ ಪರಬ್ರಹ್ಮನ ಸೇರು 1ಎವೆಹಾಕದೆ ಮೇಲೆನೋಡು - ಮುಂದೆತವಕದಿಂದಲಿ ವಾಯು ಬಂಧನಮಾಡು ||ಸವಿದು ನಾದವ ಪಾನಮಾಡು - ಅಲ್ಲಿನವವಿಧ ಭಕ್ತಿಯಲಿ ನಲಿನಲಿದಾಡು 2ಅಂಡದೊಳಗೆ ಆಡುತಾನೆ -ಭಾನು -ಮಂಡಲ ನಾರಾಯಣನೆಂಬುವನೆ ||ಕುಂಡಲಿತುದಿಯೊಳಿದ್ದಾನೆ - ಶ್ರೀ ಪು -ರಂದರ ವಿಠಲನು ಪಾಲಿಸುತಾನೆ 3
--------------
ಪುರಂದರದಾಸರು
ಕರತಾರೆ ಕರತಾರೆ ಶ್ರೀನಿವಾಸನಸುರರರಸ ಸ್ವಾಮಿ ಶ್ರೀ ವೆಂಕಟೇಶನ ಪ.ಬರಹೇಳೆ ಬರಹೇಳೆ ಬೇಗ ಕರಿಗಮನೆ ರಂಗಗೆಸಿರಿರಾಣಿರಮಣ ಘನಾಂಗಗೆಅರಘಳಿಗೆ ಸರಸವಲ್ಲ ಅರಸನಿಲ್ಲದವಳೆ ಸಲ್ಲಸ್ಮರನೆಂಬೊ ಸಿರಿಕಳ್ಳ ಕರುಣ್ಯಿಲ್ಲ 1ಸುಂದರ ಸುಂದರ ಶುಭಮಂದಿರನ್ನ ದಯಾರಸಸುಂದರನ್ನ ವರಕಂಬುಕಂದರನ್ನಚೆಂದಾವರೆಗಣ್ಣವನಸಿಂಧೂರವರದನ್ನ ದೇವೇಂದ್ರಜಿತ ಪಾರಿಜಾತ ತಂದನ್ನ 2ಹೋಯಿತೆ ಹೋಯಿತೆ ಹೊನ್ನಪ್ರಾಯ ಯದುರಾಯ ಬಾರದಾಯಿತೀ ಅವಸ್ಥೆ ಹುಟ್ಟು ಹೊಂದಿಕಾಯಬೇಕೆಂದೊಮ್ಮಿಗೆ ಉದಯವಾದ ಪ್ರಸನ್ವೆಂಕಟರಾಯ ಬಂದ ಫಲಿಸಿತಾನಂದ 3
--------------
ಪ್ರಸನ್ನವೆಂಕಟದಾಸರು