ಪಾಲಿಸೋ ಸದಾ ಪರಿಪಾಲಿಸೋ
ಪಾಲಿಸೋ ಪಾರ್ವತಿ ರಮಣ | ತ್ರಿದ
ನಾಲಿಗೆಯಿಂದಲಿ | ಶ್ರೀಲಕುಮೀಶನ
ಕಾಲ ಕಾಲಕ್ಕೆ ಕೊಟ್ಟು ಅ.ಪ
ಭೇಷಪಾವಕ ಪತಂಗ | ನಯನ
ಭಾಸುರ ಸ್ಪಟಿಕ ನಿಭಾಂಗ | ಹರಿ
ದಾಸ ಜನರ ಸುಸಂಗವಿತ್ತು
ದೋಷ ಕಳೆಯೊ ರಾಮಲಿಂಗ ಆಹಾ 1
ಕೇರ ಕುಮಾರ ಕುಮಾರ | ಪಿತ
ಕೀರನಾಮಕನವತಾರ |ಕೀರಾ
ದೇವನ ಗರ್ವಪರಿಹಾರ | ತಾಟ
ಕಾರಿನಾಮ ಸವಿಗಾರ | ಆಹಾ
ಶರಧಿ ವೈಕಾರಿಕÀ | ತತ್ವಾಧಿ
ಕಾರಿ ವಿಕಾರಿ ಷಕಾರ ಪದಾರ್ಚಕ 2
ನಂದಿವಾಹನ ನಾಗಶರನೆ | ನೀಲ
ಸುರನದಿ ಧರನೆ | ಶಾಮ
ಸುಂದರ ವಿಠಲನ ಸಖನೆ ಮಹಿ
ಶ್ಯಂದನ ಶಿವಶಂಕರನೆ | ಆಹಾ
ಒಂದೂರಾರ್ಯರ ಕರದಿಂದ ಪೂಜಿತನಾಗಿ
ನಿಂದು ಭಜಿಪರಿಗಾನಂದವೀವ ದೇವ 3