ಆನಂದವಾ ನೋಡು ನೀ ವಿಚಾರಿಸಿ
ಏನೊಂದುಮಿಲ್ಲಾಗಿ ತಾನೆ ತಾನಾಗಿಹ ಪ
ಅನಿಸಿಕೆ ತೋರಿಕೆ ಅಡಗುತಲಿರುತಿರೆ
ತನಿನಿದ್ರೆಯೆನಿಸದ ಘನಪದವಾಗಿಹ
ಮನಸಿನಿಂದಾಚೆಗೆ ನಿಜವಾಗಿ ನೆಲಗೊಂಡ 1
ಇದೇ ಬ್ರಹ್ಮಾನಂದವು ನೋಡೈ ಸದಾ
ನಿರ್ವಿಕಲ್ಪವಾಗಿರುವಾ ಆ ಸ್ಥಿತಿಯನೆ ಗುರುತಿಸಿ
ಅನುಭವಿಸುತದನಾ
ಮರಳಿ ಜಾಗರದಲಿ ನೆನೆಸಿ ಆ ಸ್ಥಿತಿಯನು
ಮರಣರಹಿತವದು ಅದೇ ಪರಮಾತ್ಮನುಗುರುಶಂಕರನು ಪೇಳ್ದ ಅದೇ ತಾನು ಎನ್ನುತ 2