ಒಟ್ಟು 1764 ಕಡೆಗಳಲ್ಲಿ , 105 ದಾಸರು , 1296 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಕ್ಕೊ ಇಲ್ಲೆ ನೋಡಿ ಸಿಕ್ಕುತ್ತದೆ ನಿಜಗೂಡಿ ಧ್ರುವ ತಿಳಿಯಲು ತನ್ನ ಅಳುವುದು ಭಿನ್ನ ಒಳಹೊರಗದೆ ಪ್ರಸನ್ನ ಬೆಳಗು ಅಭಿನ್ನ ಹೊಳೆವದು ಸುಳಹು ಸದ್ಗುರು ಪಾವನ್ನ 1 ತನ್ನೊಳು ತಿಳಿದವನೆ ತಾನುಳಿದ ಉನ್ಮನಿವಸ್ತಿಯೊಳಳಿದಾ ಮುನ್ನಿನ ಕರ್ಮವ ನಿಲ್ಲದೆದೊಳದಾ ಚನ್ನಾಗವೆ ಭವಗಳೆದಾ 2 ಇದು ನಿಜ ಖೂನ ಸಾಧಿಸು ಙÁ್ಞನ ಬುಧ ಜನರ ಸುಪ್ರಾಣ ಭೇದಿಸು ಮಹಿಪತಿ ನಿನ್ನೊಳು ಪೂರ್ಣ ಇದೇ ಸದ್ಗುರು ಕರುಣ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಕ್ಕೊ ಇಲ್ಲೆ ಸಿಕ್ಕಿದ ಶ್ರೀಗುರು ಪರಬ್ರಹ್ಮ ತೆಕ್ಕಿಸಿಕೊಂಬುವ ಬನ್ನಿ ಅಖರದಿ ನಮ್ಮ ಧ್ರುವ ಎಂದಿಗೆ ಬಿಡಬಾರದಿನ್ನು ತಂದೆ ನಮ್ಮಪ್ಪನ ಹೊಂದಿ ಸುಖಿಯಾಗಬೇಕು ಭಕ್ತಪಾಲಿಪನ ವಂದಿಸಬೇಕಿಂದು ಸಹಸ್ರಳದಲಿಪ್ಪನ ಸಂದೇಹವಿಲ್ಲದೆ ನೋಡಿ ಸ್ವರ್ಗಕೆ ಸೋಪಾನ 1 ಹರುಷವಾಯಿತು ಎನಗೆ ಧರೆಯೊಳಿಂದು ನೋಡಿ ಕರುಣಾಳು ಗುರುಮೂರ್ತಿಯ ಸ್ತುತಿಸ್ತವನ ಪಾಡಿ ಎರಡಿಲ್ಲದೆ ಶ್ರೀಚರಣ ವರಕೃಪೆಯ ಬೇಡಿ ಶಿರಸಾ ನಮಿಸಿದೆ ಗರ್ವಾಂಹಕಾರ ಈಡ್ಯಾಡಿ2 ಲೇಸುಲೇಸಾಯಿತು ನಮ್ಮ ವಾಸುದೇವನ ಕಂಡು ಭಾಸ್ಕರಕೋಟಿ ತೇಜನ ಸ್ಮರಣಿಯ ಸವಿಯುಂಡು ವಾಸನೆ ತೃಪ್ತ್ಯಾಯಿತು ಶ್ರೀಯೀಶನಾ ಮನಗಂಡು ದಾಸಮಹಿಪತಿಗಾನಂದವಾಯಿತು ಸದ್ಗತಿ ಸೂರೆಗೊಂಡು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಕ್ಕೊ ಇಲ್ಲೆ ಹಾನೆ ಅಖಂಡವಾಗಿ ಸದ್ಗುರು ನಮ್ಮ ಅಕ್ಕಿಸಿಕೋಬೇಕು ಗುಕ್ಕಿ ತನ್ನೊಳು ತಾ ಗುಹ್ಯವರ್ಮ ಧ್ರುವ ಹೇಳಬಾರದು ಇನ್ನೊಬ್ಬರಗೀ ಮಾತು ಬಹಳ ಗೂಢ ತಿಳಿದ ಮಹಿಪನೀವಾ ಲಕ್ಷಕೋಟಿಗೆ ಒಬ್ಬ ಪ್ರೌಢ ಒಳಗುಟ್ಟಿನ ಕೀಲು ತಿಳಿಯಲಿಕ್ಕೆ ಮಾಡಿ ಮನದೃಢ ಸುಳಹು ಕಂಡಮ್ಯಾಲೆ ಪ್ರಾಣಹೋದರೆ ಒಬ್ಬನು ಬಿಡಾ 1 ದೂರಿಲ್ಲ ದೂರಿಲ್ಲ ತಿಳಿಕೊಳ್ಳಿ ಪೂರ್ಣ ಅರಿತು ಬ್ಯಾಗ ತಿರುಗಿನೋಡಲು ತನ್ನೊಳು ದೋರುತಿದೆ ಬ್ರಹ್ಮಯೋಗ ಸಾರವೇ ಸುಖಗರವುತದೆ ನೋಡಿರೋ ರಾಜಯೋಗ ಪರದೆ ಇಲ್ಲದೆ ಗುರುತದೋರುವಾ ನೋಡಿ ಕಣ್ಣಾರೆ ಈಗ 2 ಗುರುಕೃಪೆಯಿಂದ ಗುರುತಕ ದೂರಿಲ್ಲ ಕೊಳ್ಳಿ ಖೂನ ಒಳಹೊರಗೆ ತುಂಬಿತುಳುಕುತದೆ ತಾನೆ ನಿಧಾನ ತರಳ ಮಹಿಪತಿ ಸ್ವಾಮಿ ನೋಡಲಿಕ್ಕೆದ ಒಂದೆ ಸಾಧನ ಸ್ವರೂಪರಿಯಲಿಕ್ಕೆ ಆಗುತ್ತದೆ ಬಲುಬ್ಯಾಗಲುನ್ಮನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂಥಾದೆಲ್ಲದೆ ತಾಂ ನೋಡಿ ಸತ್ಸಂಗದಸುಖಾ ಇಂಥಾ ಅಂಥಿಂಥವರಿಗಿಂಥಾದೈಲ್ಲದೆ ನೋಡಿ ಧ್ರುವ ಒಂದೊಂದುಪರಿ ಕೇಳಿಸುವ ಹ ನ್ನೊಂದರ ಮ್ಯಾಲಿನ್ನೊಂದರ ಘೋಷ ಧೀಂ ಧೀಂ ಧೀಂ ಧೀಂ ಧೀಂ ಧೀಂ ಧೀಂ ಧೀಂ ಮಿಡುಗತಿಹ್ಯ ಆನಂದಸುಖ 1 ಉದಯಾಸ್ತಿಲ್ಲದೆ ಬೆಳಗಿನ ಪ್ರಭೆಯು ತುದಿಮೊದಲಿಲ್ಲದೆ ತುಂಬಿತು ಪೂರ್ಣ ಬುಧಜನರನುದಿನ ಸೇವಿಸುತಿಹ್ಯ ಸದಮಲವಾದ ಸದಾ ಸವಿಸುಖ2 ವಿಹಿತ ವಿವೇಕದ ಅನುಭವಗೂಡಿ ಬಾಹ್ಯಾಂತ್ರದ ಘನದೋರುತಲಿಹ್ಯ ಸ್ವಹಿತಸುಖದ ಸುಧಾರಸಗರೆವ ಮಹಿಪತಿಗುರು ಕರಣದ ಕೌತುಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದನಾ ಬೇಡಿದವನಲ್ಲಾ ಬುಧರಂತರ್ಯಾಮಿ ಲಕುಮಿನಲ್ಲ ಪ ಪಾಪ ಕಾರ್ಯದ ಪಾಪ ವ್ಯಾಪಿಸಿ ದೇಹದಿ ಲೋಪಗೈಸೋದು ಸತ್ಕರ್ಮ ದೀಪ ನೀನಾಗಿರೆ ಉಪದೇಶಿಸೀ ಭವ ಕೂಪದಿಂದೆತ್ತೆಂದು ಬೇಡಿದೆನಲ್ಲದೆ 1 ವಿಷಯದೊಳ್ ಸಂಚರಿಪ ದೋಷಕಾರಿ ಮನ ಆಶೆಯೊಳು ಪೊಕ್ಕು ನಾಶಗೈಪೋದೆನ್ನ ವಿಶೇಷ ಸಾಧನಗಳ ನೀ ಪೋಷಿಸು ಎಂದು ಬೇಡಿದೆನಲ್ಲದೇ 2 ಸುಧೆ ತಂದ ವಿಜಯ ರಾಮಚಂದ್ರವಿಠಲ ನಿನ ಗೆದುರ್ಯಾರೊ ಪೇಳುವರು ಮುದದಿಂದ ಕೃಷ್ಣಾರ್ಯರೊಳು ಬೇಡಿದೆನಲ್ಲದೇ 3
--------------
ವಿಜಯ ರಾಮಚಂದ್ರವಿಠಲ
ಇದನಾದರು ಕೊಡದಿದ್ದರೆ ನಿನ್ನ ಪದಕಮಲವ ನಂಬಿ ಭಜಿಸುವದೆಂತೊ ಪ ಗ್ರಾಸವಾಸಗಳಿಗೆ ಇಲ್ಲವೆಂದು ನಿನ್ನಬೇಸರಿಸಿ ಬೇಡ ಬಂದುದಿಲ್ಲವಾಸುದೇವನೆ ನಿನ್ನ ದಾಸರ ದಾಸರದಾಸರ ದಾಸ್ಯವ ಕೊಡು ಸಾಕೆಂದರೆ 1 ಸತಿಸುತರುಗಳ ಸಹಿತನಾಗಿ ನಾಹಿತದಿಂದ ಇರಬೇಕೆಂಬೊದಿಲ್ಲಇತರ ವಿಷಯಂಗಳಿಗೆರಗಿಸದೆ ಮನಕೆ ನಿನ್ನಕಥಾಮೃತವನೆ ಕೊಡು ಸಾಕೆಂದರೆ 2 ಸಾಲವಾಯಿತೆಂದು ಸಂಬಳ ಎನಗೆಸಾಲದೆಂದು ಬೇಡ ಬಂದುದಿಲ್ಲನಾಲಗೆಯಲಿ ನಿನ್ನ ನಾಮದುಚ್ಚರಣೆಯಪಾಲಿಸಬೇಕೆಂದು ಬೇಡಿದೆನಲ್ಲದೆ3 ಒಡವೆಗಳಿಲ್ಲ ಒಡ್ಯಾಣಗಳಿಲ್ಲೆಂದುಬಡವನೆಂದು ಬೇಡ ಬಂದುದಿಲ್ಲಒಡೆಯ ನಿನ್ನಡಿಗಳಿಗೆರಗುವುದಕೆ ಮನಬಿಡದಿಹದೊಂದನು ಕೊಡು ಸಾಕೆಂದರೆ4 ಆಗಬೇಕು ರಾಜ್ಯಭೋಗಗಳೆನಗೆಂದುಈಗ ನಾನು ಬೇಡ ಬಂದುದಿಲ್ಲನಾಗಶಯನ ರಂಗವಿಠಲ ನಾ ನಿನ್ನ ಬಾಗಿಲ ಕಾಯುವ ಭಾಗ್ಯ ಸಾಕೆಂದರೆ5
--------------
ಶ್ರೀಪಾದರಾಜರು
ಇದನೆ ಪಾಲಿಸು ಜನ್ಮ ಜನ್ಮಗಳಲಿ ಪ ಮಧುಸೂದನನೆ ನಿನ್ನ ಸ್ಮರಣೆ ದಾಸರ ಸಂಗ ಅ ಪುಣ್ಯಪಾಪ ಜಯಾಪಜಯ ಕೀರ್ತಿ ಅಪಕೀರ್ತಿ ಮನ್ಯುಮೋಹಾಸಕ್ತಿ ಕಾಮಲೋಭಾ ನಿನ್ನಾಧೀನವು ಎನ್ನದಲ್ಲವೆಂದಿಗು ಪ್ರಕೃತಿ ಜನ್ಮ ಗುಣಕಾರ್ಯವೆಂಬುವ ಜ್ಞಾನವೇ ಸತತ 1 ಗುಣಕರ್ಮ ಕಾಲಗಳ ಮನಮಾಡಿ ಜೀವರಿಗೆ ಉಣಿಸುತಿಹೆ ಸುಖದುಃಖ ಘನ ಮಹಿಮನೆ ಗುಣಗಳಭಿಮಾನಿ ಶ್ರೀವನಿತಾರಮಣ ಪ್ರಯೋ ಜನವಿಲ್ಲದಲೆ ಮಾಡಿ ಜನರ ಮೋಹಿಪಿಯೆಂಬೋ 2 ಈಶ ನೀನಾದ ಕಾರಣದಿಂದ ಸುಖದುಃಖ ಲೇಶವಿಲ್ಲವು ಸರ್ವಕಾಲಗಳಲಿ ಕೇಶವ ಜಗನ್ನಾಥ ವಿಠ್ಠಲನೆ ಭಕ್ತರ ಪ್ರ ಯಾಸವಿಲ್ಲದೆ ಕಾಯ್ವಿಯೆಂಬ ಸ್ಮರಣೆ ನಿರುತ 3
--------------
ಜಗನ್ನಾಥದಾಸರು
ಇಂದಿರೆಯರಸ ಇರಿಸು ಕರುಣಾರಸ ಇಂದಿರೆಯರಸ ವಶನಾಗು ಸರಸ ಪ. ನಿರ್ವಾಹವಿಲ್ಲದೆ ಸರ್ವಾಸೆ ತೊರದೆ ನಿರ್ವಾಣ ವಂದ್ಯ ನೀನೆ ಗತಿಯೆಂದು ನಂಬಿದೆ 1 ಕ್ಷೀಣನಾದೆನು ಗುಣ ಕಾಣದೆ ದಿನ ದಿನ ಪ್ರಾಣದಾಯಕ ನಿನ್ನಾಣೆಯಿಟ್ಟುಸುರುವೆ 2 ನುಡಿದರೆ ಶ್ರಮದಿಂದ ನಡುಗುತಲಿದೆ ದೇಹ ಕಡಲಶಯನ ಇನ್ನು ತಡವ ಮಾಡುವಿಯಾಕೆ 3 ರಕ್ತವಾರುತ ಬಂತು ಶಕ್ತಿ ಇರುವುದೆಂತು ಯುಕ್ತವಾದರೆ ಕಂತುಪಿತ ನಿನ್ನ ಸೇವೆ ಸಂತು 4 ತಾಳಲಾರದೆ ಪೇಳ್ದ ಬಾಲಭಾಷಿತವನ್ನು ಲಾಲಿಸಿ ಕ್ಷಮಿಸು ಲೋಲ ವೆಂಕಟರಾಜ 5
--------------
ತುಪಾಕಿ ವೆಂಕಟರಮಣಾಚಾರ್ಯ
ಇಂದಿರೇಶ ದಯದಿಂದಲಿ ತ್ವರಿತದಿ ಬಂದು ಒದಗಿ ಸಲಹೊ ಸುಧೆಯಾನಂದ ಉಣಿಸಿದ ಪ. ಇನ್ನು ನಿರೀಕ್ಷಿಸಲೆನಗೆ ಸಾಧ್ಯವಿಲ್ಲ ಅನ್ಯ ಸಾಧನವಿಲ್ಲ ಮುನ್ನಿನ ಮಾರ್ಗದ ರೀತಿಯ ನೋಡಲು ಮನ್ನಿಪ ಜನರಿಲ್ಲ ಧನ್ಯ ವಿಬುಧ ಗಣ ಮಾನ್ಯ ಮುಕುಂದನೆ ಮಾಧವ 1 ದಾರು ನೀನಲ್ಲದೆ ಮಾರಮಣನೆ ನಿನ್ನ ಸೇರಿದ ಬಳಿಕೀ ಧಾರುಣಿ ಒಳಗೆ ನಿವಾರಣೆಯದೇನೊ ಮೂರು ದೊರೆಗಳಲಿ ವಾರಿಜನಾಭ ನೀ ಪ್ರೇರಕನಾಗಿರೆ ಘೋರವಾವರಿಸುವುದೆ 2 ತಪ್ಪುಗಳೆಲ್ಲವ ಒಪ್ಪಿಕೊಳ್ಳೊಯೆನ್ನಪ್ಪ ನೀ ಕರುಣದಲಿ ಒಪ್ಪಿಸಿ ಪಡದನು ತಪ್ಪದೆ ಮನದೊಳಗಿಪ್ಪ ವ್ಯಸನ ಬಿಡಿಸೊ ಸರ್ಪ ಗಿರೀಂದ್ರನೊಳೊಪ್ಪುವ ಸತ್ಯ ಸಂ- ಕಲ್ಪ ಭಜಕ ನಿಜ ಕಲ್ಪತರುವೆನಿಪ 3
--------------
ತುಪಾಕಿ ವೆಂಕಟರಮಣಾಚಾರ್ಯ
ಇಂದು ನಿನ್ನಪಾದ ಸನ್ನಿಧಿಯ ಘನ್ನ ದರುಶನದಿಂದಲಿಪ ಮುನ್ನ ದುರಿತಗಳೆಲ್ಲವು ಛಿನ್ನಛಿನ್ನವುಮಾಡಿ ಬನ್ನಬಡಿಸದೆ ಎಮ್ಮ ಸಲಹುವಸ್ವಾಮಿ ಅ.ಪ ಸುಮನಸರೊಡೆಯ ಕಾಲನಾಮಕನಾಗಿಪ್ಪ ಮೋದ ನಾಮ ವತ್ಸರದಿ ವಿಮ¯ ಚೈತ್ರಕೃಷ್ಣಪಕ್ಷದಶಮಿ ಸೌಮ್ಯವಾಸರದಿ ದ್ಯುಮಣಿ ಉದಯಕಾಲದಲಿ ಮಮಕುಲಸ್ವಾಮಿಯೆ ಎನ್ನ ವಂಶಜಾಪ್ತರ ಅಮಿತಶ್ರಮ ಪರಿಹರಿಸಿ ಈಗ ಶ್ರೀಮನೋಹರ ನಿನ್ನ ವಿಶ್ವರೂಪವ ತೋರ್ದೆ ಪ್ರೇಮ ಇಂದಿಗೆ ಆಯಿತೆ ಅಮಿತಜನ ಬಂಧು 1 ನಿನ್ನ ದರುಶನವೆಂದಿಗಂದಿಗಾಗಲಿ ಎಂದು ನಿನ್ನ ಧ್ಯಾನವನೆ ಮಾಡಲು ಸನ್ನುತಾಂಗನೆ ನೀನೆ ಘನ್ನ ಕರುಣವು ಮಾಡಿ ಎನ್ನ ಯತ್ನವು ಇಲ್ಲದೆ ನಿನ್ನ ದರುಶನಕ್ಕಾಗಿ ಅನ್ಯರಿಂದ ಪ್ರೇರಿಸಿ ಎನ್ನಲ್ಲಿ ಮನವು ಪುಟ್ಟಿಸಿದೆ ಪನ್ನಗಾಚಲನಿಲಯ ನಿನ್ನ ಮಹಿಮೆ ಎಂತುಂಟೋ ಎನ್ನನಿಲ್ಲಿಗೆ ತಂದು ಘನ್ನ ದರುಶನವಿತ್ತೆ 2 ಪಂಕಜೋದ್ಭವನಯ್ಯ ಮಂಕುಕವಿಸಿದೆ ಪಯಣ ಶಂಕೆಯ ಪರಿಹರಿಸಿ ಸಂಕಟಹರಿಸಿ ನಿನ್ನ ಕಿಂಕರರೊಳು ಸೇರಿಸಿ ಬಿಂಕದಲಿ ಗಿರಿಯನೇರಿಸಿ ಪಂಕಜನಾಭ ಮುಕುಂದ ಗೋವಿಂದ ಶಂಕರನುತಪೂಜಿತ ಶಂಖತೂರ್ಯಾದಿ ವಾದ್ಯಗಳಿಂದಲಿ ಶ್ರೀ ವೇಂಕಟೇಶ ನಿನ್ನ ನೋಡಿದೆ ಬಿಡದೇ 3
--------------
ಉರಗಾದ್ರಿವಾಸವಿಠಲದಾಸರು
ಇಂದು ಇಂದು ಇಲ್ಲಿ ಚಂದ್ರವದನೆ ಇಂದಿರಾದೇ'ಗಂಡುಗಲಿಯ ವೇಶತಾಳಿ ಗೆಂಡಾಸುರನ ಕೊಂದು ನಗುತಅ.ಪಜಗದೀಶನ ಮಡದಿಯಂತೆ ಮಗಗೆ ನಾಲ್ಕು ಮುಖಗಳಂತೆಮಗನ ಮಗ ಬೈರಾಗಿಯಂತೆ ಅಗಜೆ ಅವಗೆ ಒಲಿದಳಂತೆ 1ಹರಿಯ ಹೃದಯದಲ್ಲಿ ಸದಾ ಅಗಲದೆ ತಾ ಇರುಳಂತೆಆದಿಮಾಯಾ ಶಕ್ತಿಯಾಗಿ ಜಗದ ವ್ಯಾಪಾರ ಮಾಡುವಳಂತೆ 2ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರಸೇವೆಸಾಟಿಇಲ್ಲದೆ ಮೂಡಿ ಪೂರ್ಣ ನೋಟದಿಂದ ಸುಖಿಪಳಂತೆ 3ಛಕ್ರಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿನಿಂತುಚಿತ್ತಚರಿತನಾದ ಹರಿಯ ನಿತ್ಯ ಸೇವೆ ಮಾಡುವಳಂತೆ4ಗಂಡ ಹೆಂಡಿರ ಜಗಳವಂತೆ ಕೊಲ್ಹಾಪುರದಿ ಇರುವಳಂತೆಗಂಡ ವೈಕುಂಠ ಮಂದಿರಬಿಟ್ಟು ವೆಂಕಟಗಿರಿಯಲಿ ಇರುವನಂತೆ5'ೀರಪುರುಷ ವೇಷವಂತೆ ಕ್ರೂರ ದೈತ್ಯನ ಸೀಳಿದಳಂತೆಯಾರಿಗು ಗೊತ್ತಾಗದಂತೆ ರಾತ್ರಿ ಊರೊಳಗೆ ಬರುವಳಂತೆ 6ಭಾರತಹುಣ್ಣಿಮೆ ಜಾತ್ರಿಯಂತೆ ಭಾರಿಜನರು ಕೂಡುವರಂತೆಭಾರಿ ಡೊಳ್ಳು ಹೊಡಿವರಂತೆ ಭೂಪತಿ'ಠ್ಠಲ ನಗುವನಂತೆ 7ಹನುಮಂತದೇವರು
--------------
ಭೂಪತಿ ವಿಠಲರು
ಇದು ಏನೆ ಯಶೋದೆ ಇದು ಏನೆ ಯಶೋದೆ ದಧಿಯ ದಾಮೋದರ ಹೆದರಿಕಿಲ್ಲದೆ ಕುಡಿದೋಡಿ ತಾ ಪೋದ ಪ ಕೊಳಲನೂದುತಲೆ ಆಕಳನೆ ಕಾಯುತಲ್ಹೋಗಿ ಕಳಲ ಗಡಿಗೆಸುತ್ತ ಕುಣಿದಾಡುವುದು 1 ವತ್ಸಕಾಯುತ ವನದೊಳಗೆ ಆಡೆಂದರೆ ಕಿಚ್ಚುನುಂಗಿ ಸರ್ಪವ ತುಳಿಯುವುದು 2 ಚೆಂಡನಾಡುತ ತುರುವ್ಹಿಂಡು ಕಾಯೆಂದರೆ ಗಂಡನುಳ್ಳವರ್ಹಿಂದ್ಹಿಂದೆ ತಿರುಗುವುದು 3 ವಛ(ತ್ಸ?) ನಂದದಲಿ ಬಾಯ್ ಹಚ್ಚ ಗೋವಿನ ಕ್ಷೀರ ಅಷ್ಟು ಕುಡಿದನಾಶ್ಚರ್ಯ ನೋಡಮ್ಮ 4 ಇಂದೆನ್ನ ಮನೆಯಲ್ಲೊಂದಿಷ್ಟು ಕ್ಷೀರಗಳಿಲ್ಲ ಗಂಡ(ಅ?) ತಿ ದುಷ್ಟೆನ್ನ ಕೊಲ್ಲುವನಮ್ಮ 5 ಮೌನಗೌರಿಯ ನೋತು ನೀರೊಳಗಿದ್ದೆವೆ ಮಾನಹೀನರ ಮಾಡಿ ಮರವನೇರುವುದು 6 ಬಟ್ಟೆ ನೀಡೆಂದಾಲ್ಪರಿಯಲು ಜೋಡಿಸಿ ನಿಮ್ಹಸ್ತ ಮುಗಿ(ಯಿ) ರೆಂದಾಡುವುದು7 ಬುದ್ಧಿಹೇಳೆಂದರೆ ಮುದ್ದು ಮಾಡುವರೇನೊ ಕದ್ದು ಬಂದರೆ ಕಾಲು ಕಟ್ಟಿ ಹಾಕಮ್ಮ 8 ದಧಿ ಬೆಣ್ಣೆ ಚಂದ್ರನಂತ್ಹೊಕ್ಕು ತಾ ತಿಂದ ನೋಡಮ್ಮ 9 ಕೇರಿ ಮಕ್ಕಳ ನೋಡೊ ಮಹರಾಯ ಬಲರಾಮ ದೊಡ್ಡಮಗನು ಎಲ್ಲೆ ದೊರಕಿದನಮ್ಮ 10 ಮೀಸಲ್ಹಾಕಿದ ಬೆಣ್ಣೆ ನೀ ಸವಿದೀಯೆಂದು ಲೇಸಾಗಿ ಹೇಳೆ ಭೀಮೇಶಕೃಷ್ಣನಿಗೆ11
--------------
ಹರಪನಹಳ್ಳಿಭೀಮವ್ವ
ಇಂದು ನೋಡಿದೆ ಗೋವಿಂದನಾ ಸರ್ವ ಸುಂದರಸಾರ ವೆಂಕಟ ರಮಣನಾ ಪ ಭಾಗೀರಥಿಯ ಪೆತ್ತವನಾ ಭವ ರೋಗವ ಕಳೆವ ರಾಜೀವನೇತ್ರನಾ ಸಾಗರದೊಳಗೆ ಒಪ್ಪುವನಾ ಭಕ್ತ ಕೂಗಲು ನಿಲ್ಲದೆ ಒದಗಿ ಬರುವನಾ1 ನಿಲ್ಲದೆಳಿಪಿಗೆ ಪೊಳೆದನಾ ಗೋ ಪಾಲಕರಿಗೆ ವೈಕುಂಠ ತೋರಿದನಾ ನೀಲಾದೇವಿಗೆ ಬಲಿದವನಾ ಭೂ ಪಾಲಗೆ ಮೆಚ್ಚಿ ಸತ್ವರವನಿತ್ತವನಾ2 ವಿಶ್ವ ಮಂಗಳದಾಯಕನಾ ಅಹಿ ವಿಷ್ಟಕಸೇನರಿಂದ ಪೂಜೆಗೊಂಬುವನಾ ವಿಶ್ವರೂಪ ವಿಲಕ್ಷಣನಾ ಸರ್ವ ವಿಶ್ವ ಪರಿಪಾಲ ಪ್ರಣತಾರ್ತಿ ಹÀರನ3 ಸುರ ಶಿರೋಮಣಿ ಸದ್ಗುಣನಾ ಸು ದರಶನ ಶಂಖ ಭಜಕರಿಗೆ ಕೊಟ್ಟವನಾ ನಿರುತ ಆನಂದ ಭರಿತನಾ ದಿವ್ಯ ಮಿರುಗುವಾಭರಣದಿಂದಲಿ ನಿಂದಿಹನಾ 4 ಶಾಮವರ್ಣ ಚತುರ್ಭುಜನಾ ನಿಜ ಕಾಮಿನಿ ಸಂಗಡ ನಲಿದಾಡುವನಾ ಹೇಮ ಗಿರಿಯಲಿದ್ದವನಾ ದೇವ ಸ್ವಾಮಿ ತೀರ್ಥವಾಸ ವಿಜಯವಿಠ್ಠಲನಾ5
--------------
ವಿಜಯದಾಸ
ಇದು ಪರಬ್ರಹ್ಮದ ನೆಲೆಯು ಇಹಪರವೆಂಡನು ಗೆಲು ವದು ಗುರು ಕರುಣಾನಂದದ ಬೆಳಗಹುದÀಹುದು ಧ್ರುವ ಮಾತಿಗೆ ದೊರೆಯದಿದು ಅನುದಿನ ಭೇದಿಸದಲ್ಲದೆ ಕಾಣಿಸದು ಮುನ್ನಬಾರನು ಕಾಣಿಕಿಗೆಂದು ಅಳವಹುದೆ 1 ಸದ್ಗತಿಮೋಕ್ಷವು ಮಾರಗವು ಸಾಭ್ಯಸ್ತವಾಗದೆ ಸಾಕ್ಷಾತ್ಕಾರದಿ ಪ್ರತ್ಯಕ್ಷ ಪ್ರಮಾಣವಿವು ಇದು ಎಂದಿಗೆ ತಿಳಿಯದು ಭೇದಕನಲ್ಲದೆ ಸೋಹ್ಯ ಸೊನ್ನೆಯ ಮತಿಹೀನರಿಗಿದು ಅಳವಹುದೆ 2 ಲೋಲ್ಯಾಡುವ ನಿಜ ಮಂದಿರವು ಭೂಮಂಡಲದೊಡೆಯನ ಚರಣಕಮಲವಿದು ಒಡಿಯನ ಕೃಪಾದೃಷ್ಟಿಯಿದು ಕರವ ಮನದೊಳು ತ್ರಾಹಿ ತ್ರಾಹಿ ಎನುತಲಿನ್ನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದು ಬಲು ಸುಖದಾಟ ಸಾಧಿಸಿ ನೋಡಿರೋ ನೀಟ ಧ್ರುವ ಕರ್ಮಕಮಂಧವಿಲ್ಲ ವರ್ಮ ತಿಳಿದವ ಬಲ್ಲ ಧರ್ಮ ಗುರುವಿನ ಸರಿ ಇಲ್ಲ ನಿರ್ಮಲ ನಿಜವೆಲ್ಲ 1 ಅನುಭವಕನುಭವದ ಅನಂದೋ ಬ್ರಹ್ಮದ ಬೋಧ ಏನೇಂದ್ಹೇಳಲಿ ಸುಸ್ವಾದ ತಾನೆ ತಾನಾದ 2 ಸಾಧಿಸಿದಲ್ಲದೆ ಖೂನ ಇದರಿಟ್ಟು ಮಹಿಪತಿ ಪೂರ್ಣ ಒದಗಿ ಕೈಗೂಡದು ಧನ ಸದ್ಗುರು ಚರಣ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು