ಒಟ್ಟು 331 ಕಡೆಗಳಲ್ಲಿ , 27 ದಾಸರು , 324 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮೋ ನಮೋ ಕಾಲಭೈರವ ಹರಿಯ ಚರಣ- ಸಮೀಪದೊಳಗಿದ್ದು ಮೆರೆವ ಪ. ಸಮೀಚೀನಜ್ಞಾನಭಕ್ತ- ಸಮೂಹವ ಕಾವ ಲಕ್ಷ್ಮೀ- ರಮಣನ ಕಾರ್ಯಮಂತ್ರಿ- ಯು ಮಾಧವನ ಸಮಾನಬಲ ಅ.ಪ. ಬೆಟ್ಟದೊಡೆಯ ಶ್ರೀನಿವಾಸನ ಪಾದಕಮಲ- ಮುಟ್ಟಿ ಭಜಿಪ ವೈರಿಮರ್ದನ ಸೃಷ್ಟಿ ಮೂರರಲ್ಲಿ ಕೀರ್ತಿ- ಪಟ್ಟ ದಿಟ್ಟ ಧೀರ ಪರಮ ನಿಷ್ಠ ಪುಷ್ಪ ತುಷ್ಟಿಪ್ರದ ಬ- ಲಿಷ್ಠ ಶ್ರೇಷ್ಠ ಭೂತಪತಿಯೆ 1 ಶ್ರೀನಿವಾಸನಾಜ್ಞೆ ಮೀರದೆ ನಡೆಸುವದೆ ಪ್ರ- ಧಾನ ಕಾರ್ಯ ನಿನ್ನದೆಂಬುದೆ ತಾನು ಕಿಂಚಿದರಿತು ಸನ್ನಿ- ಧಾನವನ್ನೋಲೈಸಿ ಬಂದೆ ದೀನಬಂಧು ಸುಗುಣಸಿಂಧು ಮಾನತ್ರಾಣವಿತ್ತು ಸಲಹೊ 2 ಅಂತರಂಗದಲ್ಲಿ ಪ್ರಾರ್ಥನೆ-ಮಾಡಿದರೆ ಸ್ವಂತ ಬಂದು ಮಾಡು ರಕ್ಷಣೆ ಅಂತ್ಯಕಾಲದಲ್ಲಿ ಹರಿಯ ಚಿಂತನೆಗೆ ವಿಘ್ನ ಬಾರ- ದಂತೆ ಕಾವ ಮಹಾ ತೇಜೋ- ಸೂರಿ 3 ಕಾಲಕಾಲದಲ್ಲಿ ಭಕ್ತರ ಮನೋಭೀಷ್ಟ ಪಾಲಿಸುವ ಚಂದ್ರಶೇಖರ ಖೂಳ ಜನರ ಗರ್ವಮುರಿವ ಶೂಲಪಾಣಿ ಸುಗುಣಶ್ರೇಣಿ ಮೂಲಪತಿಯ ಪಾದಪದ್ಮ ಮೂಲದೊಳಗೆ ನಲಿವ ಚೆಲುವ 4 ಭೂರಿ ಮಹಿಮೆಯ ಭಕ್ತರಿಂಗಾ- ಧಾರವಾಗಿ ರಾಜಿಸಿರುವೆಯ ಧೀರ ಲಕ್ಷ್ಮೀನಾರಾಯಣನ ಸೇರಿದಾನತರ್ಗೆ ಮಂ- ದಾರ ಮಹೋದಾರ ಗಂ- ಭೀರ ಧೀರ ಚಾರುಚರಿತ 5
--------------
ತುಪಾಕಿ ವೆಂಕಟರಮಣಾಚಾರ್ಯ
ನಲಿದಾಡಿದಳ್ ನಳಿನಾಂಬಕಿ ಒಲಿದೆಮ್ಮನು ಸಲಹಲೋಸುಗ ಪ. ಸುಲಲಿತ ವೀಣಾಪಾಣಿ ಮಣಿ ಸುಗುಣಿ ಅ.ಪ. ಕೃತೀಶಸುತೆ ಕೃಪಾನ್ವಿತೆ ಶ್ರುತಿಸಮ್ಮತಗೀತೆ ಪ್ರತಿರಹಿತೆ ಸತಿಪೂಜಿತೆ ರತಿಯಾಮಿತ ಶೋಭಿತಳೆ ಧೃತಿ ಸಂಭೃತೆ ಮತಿದಾಯಕಿ 1 ಇಭೇಂದ್ರಗಮೆ ವಿಧುಮಂಡಲ- ನಿಭಮುಖಿ ಶಿಖಿಯಾನೆ ಅಭಯಪ್ರದೆ ಅಖಿಳೇಶ್ವರಿ ಸುಭಜೆ ಶುಭದೆ ವಿಬುಧೆ ಅಭವೆ ಸದ್‍ವಿಭವಾಸ್ಪದೆ 2 ಪರಾಂಬರಿಸು ಪದಾಶ್ರಿತನ ಪ್ರಭಾಕರಶತಾಭೆ ಹರಿ ಲಕ್ಷ್ಮೀನಾರಾಯಣ- ಶರಣೆ ರತುನಾಭರಣೆ ಕರುಣಾರಸವರುಣಾಲಯೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಲಿನಲಿದು ಬಾ ತ್ರಿಜಗದಾಂಬೆ ಪ. ಮಾನಸದೊಳು ಸುಜ್ಞಾನಬೋಧಳಾಗಿ ಆತನದೇವಕದಂಬೆ ಅ.ಪ. ವಿದ್ಯಾ ಬುದ್ಧಿ ವಿನಯ ಮಂಗಳಗಳ ಸಾಧ್ವಿ ನಿನ್ನಲಿ ಬೇಡಿಕೊಂಬೆ 1 ನಲಿದೆನ್ನಯ ಜಿಹ್ವಾಗ್ರದಿ ನೆಲಸುತ ಸುಲಭದೋರೆಯೆ ಸುಲಲಿತವ ಶಿವೆ 2 ಧೀರ ಲಕ್ಷ್ಮೀನಾರಾಯಣಾಶ್ರಿತೆ- ಪರಮೇಷ್ಠಿಪರಿರಂಭೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಾನಾನಂತಪರಾಧಿ ಎನ- ಗೇನಿಲ್ಲವು ದೃಢಬುದ್ಧಿಪ. ನೀನೇ ಗತಿ ನಿನ್ಹೊರತು ಕಾವರನು ಕಾಣೆನು ಕರುಣಾಂಬೋಧಿಅ.ಪ. ಹಂದಿಯಂತೆ ತಿಂದು ಬೆಳದೆ ಎನ್ನ ಮುಂದಣ ಗತಿಯನು ಮರೆತೆ ಹಿಂದಿಲ್ಲವು ಮುಂದಿಲ್ಲವು ಲೋಕದಿ ನಿಂದ್ಯಾಪಾತ್ರ ತಾನಾದೆ1 ಮುತ್ತಿತು ಯೆನಗಜ್ಞಾನ ಎನ್ನ ಚಿತ್ತದಿ ಕೊಡು ನಿನ್ನ ಧ್ಯಾನ ನಿತ್ಯ ತವಚರಣ ಭಕ್ತಿಜ್ಞಾನವ ನಿತ್ತು ಕಾಯೊ ಸುತ್ರಾಣ2 ಗತಿಯಾರಿಲ್ಲನ್ಯತ್ರ ಶ್ರೀ- ಪತಿಯೆ ಕಾಯೊ ಸುಚರಿತ್ರ ಕ್ರತುಪಾಲ ಲಕ್ಷ್ಮೀನಾರಾಯಣ ಭಾ- ರತಿಪತಿನುತ ಸುರಮಿತ್ರ3
--------------
ತುಪಾಕಿ ವೆಂಕಟರಮಣಾಚಾರ್ಯ
ನಾರಾಯಣ ನರಸಿಂಹ ಲ- ಕ್ಷ್ಮೀರಮಣನೆ ಪರಬ್ರಹ್ಮ ಪ. ಸಾರಭೋಕ್ತನೆ ಸ್ವತಂತ್ರನೆ ದೋಷವಿ- ದೂರ ಪರಿಪೂರ್ಣಕಾಮ ಅ.ಪ. ಸತ್ವಾದಿಗುಣಾತೀತ ವಿತತ ಸ- ರ್ವೋತ್ತಮ ನಿರುಪಮ ಮಹಿಮ ಪ್ರತ್ಯಗಾತ್ಮ ನಿಗಮಾಗಮವೇದ್ಯ ಸು- ಹೃತ್ತಮ ಮಂಗಲಧಾಮ 1 ವಿಧಿಭವೇಂದ್ರಾದಿ ವಿಬುಧಾಶ್ರಿತಪದ- ಪದುಮ ನೀಲಾಂಬುದಶ್ಯಾಮ ಹೃದಯಾಬ್ಜಮಧ್ಯಸದನ ಸಾಮಜವ- ರದ ಯದುವಂಶಲಲಾಮ 2 ಮಾಯಾತೀತ ಮಹೋನ್ನತ ಸುರಜನ- ಪ್ರಿಯ ದ್ಯೆತ್ಯೇಯನಿರ್ನಾಮ ವಾಯುವಾಹನ ಜನಾರ್ದನ ಲಕ್ಷ್ಮೀನಾ- ರಾಯಣ ತೇ ನಮೋ ನಮಃ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಾರಾಯಣ ರಕ್ಷಿಸೊ ನಮ್ಮನು ಲಕ್ಷ್ಮೀನಾರಾಯಣ ರಕ್ಷಿಸೋ ಪ ಭವ ದೂರ ನಿತ್ಯೋದಾರ ಕರುಣದಿ ಅ.ಪ. ಶ್ರೀಶ ನಿನ್ನರ್ಚಿಸದೆ ಶ್ರೇಯಸ್ಸುಖದಾಶಯನೇ ತೊರೆದೆ ಕಳತ್ರ ನಿವೇಶ ತನುಜ ಮಾಯಾ ನಿಖಿಲಸುರೇಶ ಕಮಲ ಭವ ಭಯ ಪಾಶ ಹರಪರಮೇಶ ವಂದಿತ||ನಾರಾಯಣ|| 1 ದೇಹಾಭಿಮಾನದಲ್ಲಿ ತೀವಿದಭೂತ ದ್ರೊಹವನಾಚರಿಸುತಲಿ ಸಿಲುಕಿ ದಾಸೋಹಮೆನ್ನದೆ ದೈವ ವಿದೇಹ ಜಾವರಿಗೂಹನೋಚಿತದೇಹ ವಿಜಿತವಿದೇಹ ಖಗವರವಾಹ ಶುಭಪರಿವಾಹ ನಿಖಿಲ ನಿರೀಹ ಲೋಕವಿ ಮೋಹನಾಚ್ಯುತ ||ನಾರಾಯಣ|| 2 ಧರ್ಮಾಚರಣೆಯನೆರೆತೊರೆದು ದುರುಳರ ಸಂಗದಿ ಜರಿದು ಸಜ್ಜನರನು ಜರಿದು ದುರ್ಗತಿಗೆ ನಾ ಗುರಿಯಾದೆನು ಹರಿ ಪರಮ ಪುರುಷ ಪರಮ ಪಾವನ ಭವ ಸಂಹರಣ ವಿಶ್ವಂಭರಣ ಪುಲಿಗಿರಿ ವರದ ವಿಠಲ ||ನಾರಾಯಣ|| 3
--------------
ಸರಗೂರು ವೆಂಕಟವರದಾರ್ಯರು
ನಿತ್ಯ ಶುಭಮಂಗಳಂ ಪ ವೇದಾಂತ ವೇದ್ಯನಿಗೆ ಆದಿನಾರಾಯಣಗೆ ಸಾದು ಸಜ್ಜನರ ಸಂರಕ್ಷಣಗೆ ಯಾದವಾಧಿಪ ಕೃಷ್ಣ ದನುಜರೆದೆ ದಲ್ಲಣಗೆ ಮಾಧವ ಮುಕುಂದ ಮುರಮರ್ಧನನಿಗೆ ನಿತ್ಯ ಶುಭಮಂಗಳಂ 1 ಶ್ರೀ ವತ್ಸಲಾಂಛನಗೆ ಶ್ರೀ ಕೇಶವಾಚ್ಯುತಗೆ ಭವ ಭಂಜನನಿಗೆ ಗೋವರ್ಧನವ ನೆತ್ತಿ ಗೋವುಗಳ ಕಾಯ್ದವಗೆ ಮಾವ ಕಂಸನ ಕೊಂದ ಗೋವಿಂದಗೆ 2 ನೀಲ ಮೇಘಾಂಗನಿಗೆ ನಿಜಶರಣ ಸಂಗನಿಗೆ ಕಾಲ ಭಯ ಶಿಕ್ಷನಿಗೆ ಕಮಲಾಕ್ಷಗೆ ಬಾಲಾರ್ಕ ಚಂದ್ರ ರವಿಕೋಟಿ ತೇಜನಿಗೆ ಮೂಲೋಕ ದೊಡೆಯನಿಗೆ ಮುರವೈರಿಗೆ 3 ಕಾಮಪಿತ ಕೃಷ್ಣನಿಗೆ ಕಡುಚೆಲ್ವಮಾಧವಗೆ ಸಾಮಗಾನ ವಿಲೋಲ ಸರ್ವೇಶಗೆ ವಾಮ ದೇವನ ಮಿತ್ರ ವಸುದೇವ ಪುತ್ರನಿಗೆ ಶ್ರೀ ಮಹಾಗೋವಿಂದ ಗೋಪಾಲಗೆ 4 ದುರಿತ ಸಂಹಾರಗೆ ಪರಮ ಪಾವನನಿಗೆ ಪಾಪವಿನಾಶಗೆ ಘೋರ ದುರಿತಾರಣ್ಯ ದಹನ ದೈತ್ಯಾಂತಕಗೆ ಪಾರ ಮಹಿಮಾನಂದ ಸುರವಂದ್ಯಗೆ 5 ನಾಗೇಂದ್ರ ಶಯನನಿಗೆ ನಿಗಮಾಗಮ ಸ್ತುತಗೆ ನಾಗಭೂಷಣ ನಮಿತಗೆ ಭಾಗೀರಥೀಪಿತಗೆ ಭಾಗವತ ಹಿತಕರಗೆ ಭಾಮೆಯರರಸ ಶ್ರೀ ಗೋಪಾಲಕೃಷ್ಣಗೆ 6 ವರಮತ್ಸ್ಯರೂಪನಿಗೆ ಕೂರ್ಮಾವತಾರನಿಗೆ ವರಹದಾಕೃತಿಯವಗೆ ನರಸಿಂಹಗೆ ವರದ ವಾಮನನಿಗೆ ವರ ಪರಶುರಾಮನಿಗೆ ಬುದ್ಧ ಶ್ರೀ ಕಲ್ಕಿಗೆ 7 ಇಂದಿರಾರಮಣಗೆ ಚಂದ್ರಶೇಖರ ಪ್ರಿಯಗೆ ನಂದಗೋಕುಲದರಸ ಗೋಪಾಲ ಕೃಷ್ಣಗೆ ಮಂದಮಾರುತ ತನಯ ಕೋಣೆ ನಿಜವಾಸಗೆ ಆ ನಂದ ಮೂರುತಿ ಶ್ರೀ ಲಕ್ಷ್ಮೀನಾರಾಯಣಗೆ 8
--------------
ಕವಿ ಪರಮದೇವದಾಸರು
ನಿನ್ನ ದಾಸಾನುದಾಸನು ನಾ ಸುಪ್ರ- ಸನ್ನಾತ್ಮ ನಿಗಮಸನ್ನುತನೆ ಪ. ಎನ್ನನಂತಪರಾಧಗಳ ಕ್ಷಮಿಸು ಪೂರ್ಣೇಂದುವಕ್ತ್ರ ಪನ್ನಗಶಯನಅ.ಪ. ಸಂತಾಪಘ್ನಾನಂತಮಹಿಮ ಜಗ- ದಂತರ್ಯಾಮಿ ಪರಂತಪನೆ ಮಂತ್ರಾತ್ಮ ರಮಾಕಾಂತ ಕಲಿಮಲ- ಧ್ವಾಂತ ಧ್ವಂಸನಾಚಿಂತ್ಯ ಸ್ವತಂತ್ರನೆ 1 ಬಟ್ಟೆಯೊಳ್ ಕೆಂಡವ ಕಟ್ಟಿ ಸ್ವಗೃಹದಿ ಬ- ಚ್ಚಿಟ್ಟಂತೆ ಕಾರ್ಯ ದುಷ್ಟರದು ಪರಮೇಷ್ಠಿ ಜನಕ ನಿನ್ನ ಭ್ರಷ್ಟರಾಚರಣೆಗೆಷ್ಟೆಂಬುವದ್ಯೆ 2 ಏಳೆರಡು ಲೋಕಪಾಲಕರು ಸರ್ವ ರೂಳಿಗದ ಜನರು ಮೂಲೇಶ ಶ್ರೀಲಕ್ಷ್ಮೀನಾರಾಯಣ ನಿರ್ಗುಣ ಕಾಲನಿಯಾಮಕ ದೈತ್ಯಾಂತಕ ಜಯ3
--------------
ತುಪಾಕಿ ವೆಂಕಟರಮಣಾಚಾರ್ಯ
ನಿನ್ಹೊರತು ಪೊರೆವರಲಿಲ್ಲ ಹರಿ ಮುರಾರಿ ಪ. ಪೂರ್ಣಾತ್ಪೂರ್ಣ ಕ್ಷೀರಾರ್ಣವ ಶಯನ ವ- ರೇಣ್ಯ ಸ್ವತಂತ್ರವಿಹಾರಿ 1 ಜೀವನಿಚಯಕೃತ ಸೇವೆಯ ಕೈಗೊಂಡು ಪಾವನಗೈವೆ ಖರಾರಿ 2 ತಾಪತ್ರಯಹರ ಗೋಪಾಲ ವಿಠಲ ಆಪನ್ನಭಯನಿವಾರಿ 3 ಪ್ರಾಣನಾಥ ಸರ್ವ ಪ್ರಾಣನಿಯಾಮಕ ಪ್ರಾಣದಾನಂತಾವತಾರಿ 4 ಲಕ್ಷ್ಮೀನಾರಾಯಣ ಬ್ರಹ್ಮಾದಿ ವಿ- ಲಕ್ಷಣ ರಕ್ಷಣಕಾರಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ನ್ಯಾಯದ ನುಡಿ ನರಲೀಲೆಗಿದು ಬಲ್ಲವರಲಿ ಸಲ್ಲದು ನ್ಯಾಯದ ನುಡಿ ನರಲೀಲೆಗಿದು ಪ. ಮಾಯಾತೀತ ಮನೋಭವತಾತ ಪ ರಾಯಣ ತವ ಗುಣ ನಾನೆಂತರಿವೆನು ಅ.ಪ. ಪಾದ ಶ್ರೀದ ಚೆಲುವೆ ರಮಾಕರನಳಿನಾಶ್ರಯಕರಮಾದ ಜಲಜಭವಾದಿ ಸುರಾಳಿಗಳರ್ಚಿಪ ಸುಲಲಿತ ತವ ಪದದೊಲವೆಂತರಿವೆನು 1 ಶರಣಾಗತಜನ ದುರಿತನಿವಾರಣ ನೀನು ಇನ್ನೇನು ತರುಣೀಮಣಿಯಳ ಸೆರೆಯನು ಬಿಡಿಸುವದಿನ್ನು ಕರುಣಾಕರ ನಿನ್ನ ಸ್ಮರಿಸುವಳನುದಿನ ಸ್ಥಿರಚರ ಜೀವಾಂತರ ಪರಿಪೂರ್ಣನೆ2 ಆಕ್ಷೇಪಿಸದಿರು ರಕ್ಷಿಸು ರಘುಕುಲಚಂದ್ರ ರಾಜೇಂದ್ರ ಲಕ್ಷ್ಮೀನಾರಾಯಣ ಸದ್ಗುಣ ಗಣಸಾಂದ್ರ ಈಕ್ಷಿಸು ಕರುಣಾಕಟಾಕ್ಷದಿ ಪೂರ್ವದ ಲಕ್ಷಣ ಹೊಂದಲಿ ಲಕ್ಷ್ಮಣಾಗ್ರಜನೆ3
--------------
ತುಪಾಕಿ ವೆಂಕಟರಮಣಾಚಾರ್ಯ
ಪರಮೇಶ್ವರಿ ಪಾರ್ವತಿಸತಿ ವರದೆ ಶ್ರೀವನದುರ್ಗಾ ಪ. ತರುಣಾರುಣಶತಕೋಟಿ ಕರುಣಾನನೆ ಮಾಂ ಪಾಹಿ ಅ.ಪ. ಜಗದ್ಭರಿತೆ ಜನಾರ್ದನಿ ಜಗದೇಕ ಶರಣ್ಯೆ ನಿಗಮಾಗಮಶಿರೋರತುನೆ ಮಿಗೆ ಕೈಯುಗಮಂ ಮುಗಿವೆಯಗಜೆ ಶ್ರೀಜಗದಂಬಿಕೆ 1 ಸದಾನಂದೆ ಸರೋಜಾಕ್ಷಿ ಸದಾವಳಿಸನ್ನುತೆ ತ್ರಿದಶಾರ್ಚಿತೆ ತ್ರಿಗುಣಾತ್ಮಕಿ ಸದಯೆ ಹೃದಯೆ ಮುದದಿಂ ಪದನಂಬಿದೆ ಪದುಮಾಲಯೆ2 ವಿರಾಜಿಸುವ ವಿಶ್ವೋತ್ತಮ ವರಚಿತ್ರಪುರೇಶ್ವರಿ ಹರಿಲಕ್ಷ್ಮೀನಾರಾಯಣಿ ಕರುಣಾಭರಣೆ ಶರಣೋದ್ಧರಣೆ ಶ್ರೀಚರಣಾಂಬುಜೆ3
--------------
ತುಪಾಕಿ ವೆಂಕಟರಮಣಾಚಾರ್ಯ
ಪರಾಕು ಮಹಾಸ್ವಾಮಿ ಸಜ್ಜನಪ್ರೇಮಿಪ. ಕ್ಷೀರಸಾಗರಶಯನ ನಿವಾಸಾಪಾರಗುಣಗಣಾಶ್ರಯ ಚಾರು ಪದಾಬ್ಜದ್ವಯ ದನು- ಜಾರಿ ಧನಂಜಯಪ್ರಿಯ ಮದವಾರಣಕೃತನಿರ್ಭಯ ನಮ್ಮ ದೂರನು ಲಾಲಿಸು ಚಿನ್ಮಯ ಜಯ1 ದುಷ್ಟ ನಿಶಾಚರರಟ್ಟುಳಿ ಘನ ಕಂಗೆಟ್ಟುದು ಸುರಮುನಿಗಣ ಆ ಭ್ರಷ್ಟರು ಮಾಡುವ ನಿಷ್ಠುರಕೆ ಮೈಗೊಟ್ಟೆವು ಸಂಕರ್ಷಣ ನಾವಿ- ನ್ನೆಷ್ಟೆಂಬುದು ದುರ್ಗುಣವಶ ಬಿಟ್ಟೆವು ಸುರಪಟ್ಟಣ ನಮ್ಮ ಕಷ್ಟವು ಪದಕರ್ಪಣ ಪರಾಯಣ 2 ಅಂತರಂಗ ಬಹಿರಂಗ ಭ್ರಷ್ಟದನುಸಂತತಿ ಸಂತತಿ ಭಾರಿ ಬಲು ಧುರೀಣರ್ಸಂತಾಪಿಪರು ಮುರಾರಿ ನಮ್ಮ ಶೌರಿ ಜಗ- ದಂತ ವಿಹಾರಿ ನಿರಂತ ಪರಂತಪ3 ಚೆನ್ನಕೇಶವ ಚರಾಚರಾತ್ಮ ಚೈತನ್ಯರೂಪ ಶ್ರೀರಂಗ ನಮ್ಮ ಸನ್ನುತ ಶುಭಾಂಗ ಸ- ತಿಮಿರ ಪತಂಗ ಸುಪ್ರ ವಿಹಂಗ ತುರಂಗ4 ಕಾಲನಿಯಾಮಕ ಪ್ರಾಣ ನಿ ನ್ನೋಲಗ ಸೇವಕರಾಳಿಯೂಳಿಗವ ಕೇಳು ತ್ರಿಲೋಕತ್ರಾಣ ನತ ಪಾಲ ಪರೇಶ ಪುರಾಣ ಶ್ರೀಲೋಲ ವಿಗತ ಪರಿಮಾಣ ಹೃದ- ಯಾಲಯಮಣಿ ಲಕ್ಷ್ಮೀನಾರಾಯಣ 5
--------------
ತುಪಾಕಿ ವೆಂಕಟರಮಣಾಚಾರ್ಯ
ಪರಾಕು ಸಜ್ಜನಪ್ರೇಮಿ ಪ. ಕರುಣಾಕರ ಕೋಟಿದಿವಾಕರ ಪೂರ್ಣ ಸುಧಾ- ಕರ ಮಕುಟಲಲಾಮ ಅ.ಪ. ಭೋಗೀಂದ್ರ ಫಣಾಮಣಿಮಂಡನ ಸ- ದ್ಯೋಗೀಂದ್ರ ಮನೋವಿಶ್ರಾಮಿ ಭಾಗೀರಥಿ ಸುತರಂಗೊತ್ತುಂಗ ಮಹಾ ಸಾಗರ ತೇ ನೌಮಿ 1 ಕೇವಲ ಪಾಪಿ ಸದಾವ್ರತಹೀನನ ಕಾವುದು ಗೋಪತಿಗಾಮಿ ನೀನೊಲಿದರೆ ಮತ್ತಾವುದು ಭಯ ಮಹಾ- ದೇವ ವಶೀಕೃತಕಾಮಿ 2 ಲಕ್ಷ್ಮೀನಾರಾಯಣದಾಸಾರ್ಯ ಮ- ಹೋಕ್ಷಧ್ವಜ ಸುರಸುಕ್ಷೇಮಿ ದಕ್ಷಾಧ್ವರಹರ ವರಪರಮೇಶ ಮು- ಮುಕ್ಷುಜನಾಂತರ್ಯಾಮಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪರಾತ್ಪರ ಪರಮ ಪಾವನನೆ ಪರಾಕು ಫಣಿಶಯನ ಪಾಪಘ್ನ ಪ. ಸುರಾಸುರಾರ್ಚಿತ ಪುರಾಣಪುರುಷೇ- ಷ್ಟರ ನಿರಾಮಯ ಮುರಾರಿ ಶ್ರೀಹರಿ ಅ.ಪ. ನಯವೀತಭಯ ಪಾರ್ಥಪ್ರಿಯ ಸರ್ವ ನಿಯಾಮಕ ಚಿನ್ಮಯ ದಯಾವಂತ ಜಯಾಕಾಂತ ಹಯಾಸ್ಯ ಪಯೋಬ್ಧಿಶಯನ ವಿಯಾನ 1 ರಮಾರಮಣ ನಮಸ್ತೇ ನಿರುಪಮ ಮಹಿಮ ಮಮಾಪರಾಧ ಕ್ಷಮಾ ಕುರು ವಿ- ರಾಮ ನಿಯಮ ಪದುಮದಳನಯನ 2 ಗುಣಾರ್ಣವ ಶರಣಾಗತಭರಣ ನಿ- ರ್ಗುಣ ಶ್ರೀ ಲಕ್ಷ್ಮೀನಾರಾಯಣ ಪ್ರಾಣ ಸುತ್ರಾಣ ದೇವ ಗಣಾಗ್ರಣಿಯಾನಂದ ಗೋವಿಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪಾಲಿಸು ನಮ್ಮನು ಪರಬ್ರಹ್ಮ ಶ್ರೀ- ಲೋಲಾನಂತ ಗುಣಾಲಯನೇ ಪ. ನೀಲಾಭ್ರದಾಭ ಕಾಲನಿಯಾಮಕ ಮೂಲೇಶ ಪುರುಷ ಮೂರ್ಲೋಕಾಧಿಪ ಅ.ಪ. ಉತ್ತಮ ಗುಣಗಳು ಬತ್ತಿಪೋದುವೈ ದೈತ್ಯರ ಗುಣವು ಪ್ರವರ್ಧಿಪುದು ಚಿತ್ತಸಾಕ್ಷಿ ತವ ಭಕ್ತಿಕಥಾಮೃತ ನಿತ್ಯ ಸವಿಸುತ್ತ ಹಿಂಬಾಲಿಸೆ1 ಭಾಗವತ ಜನರ ಯೋಗಕ್ಷೇಮ ಸಂ ಯೋಗೋದ್ಯೋಗಿ ನೀನಾಗಿರಲು ಕೂಗುವಾಸುರರ ಕೂಡೆ ಕೂಡಿಸದೆ ಭೋಗಿಶಯನ ಭವರೋಗಭೇಷಜನೆ2 ಪಾವನಕರ ನಾಮಾವಳಿ ವರ್ಣಿಪ ಸೇವಕ ಜನರ ಸಂಭಾವಿಸುವ ಕೇವಳಾನಂದ ಠೀವಿಯ ಪಾಲಿಸು ಶ್ರೀವಾಸುದೇವ ದೇವಕೀತನಯ]3 ಶುದ್ಧತಮೋಗುಣಬದ್ಧ ದೈತ್ಯ ಪ್ರ- ಸಿದ್ಧರಾಗಿಹರು ಮದ್ಯಪರು ಬುದ್ಧಿಜ್ಞಾನ ಸಮೃದ್ಧಿ ಭಕ್ತಿಯಿಂ- ದುದ್ಧರಿಸೈ ಗುರು ಮಧ್ವವಲ್ಲಭನೆ4 ಕೇಶವಾಚ್ಯುತ ಪರೇಶ ಹೃದ್ಗುಹನಿ- ವಾಸ ವಾಸವಾದ್ಯಮರನುತ ಶ್ರೀಶ ಶ್ರೀವೆಂಕಟೇಶ ಭಕ್ತಜನ ರಾಶ್ರಯಸ್ಥಿತ ದಿನೇಶ ಶತಪ್ರಭ 5 ಮಂಗಲ ಜಗದೋತ್ತುಂಗರಂಗ ಮಾ ತಂಗವರದ ನೀಲಾಂಗ ನಮೋ ಅಂಗಜಪಿತ ಲಕ್ಷ್ಮೀನಾರಾಯಣ ವಿಹಂಗ ತುರಂಗನೆ 6
--------------
ತುಪಾಕಿ ವೆಂಕಟರಮಣಾಚಾರ್ಯ