ಭೃಂಗ ಭಕ್ತ
ಕಾಮಿತಾರ್ಥದ ಮಂಗಳಾಂಗ
ತಾಮಸಬಲ ನಿಗ್ರಹಣ ಪತಂಗ ಭ
ವಾಮಯಹರ ಭಾರತಿ ಮುಖ ಸಂಗ ಪ.
ಮಾನ ಸೇವರಾತಿ ಭೂಪ
ಭಾನುಸರಣ ಸುಪ್ರತಾಪ ದೈತ್ಯ
ಕ್ಷೋಣಿ ಸಂದರ್ಶಿತ ಕೋಪ
ಜಾನಕಿವರನ ನಿಜಾನುಗನೆನಿಪ ಮ-
ಹಾನುಭಾವ ಪವಮಾನ ದಯಾಪರ 1
ಇಂದು ಕುಲದಿ ತಾ ಜನಿಸಿ ನಿಜ
ಬಂಧುಗಳನು ಸತ್ಕರಿಸಿ
ಇಂದಿರೆಯರಸನ ಒಲಿಸಿ ಜರಾ-
ಸಂಧ ಮುಖರನು ಸಂಹರಿಸಿ
ಒಂದೇ ಕ್ಷಣದಿ ಸೌಗಂಧಿಕ ಕುಸುಮವ
ತಂದು ಮಡದಿಗಾನಂದ ತೋರಿದ 2
ಕಲಿಯುಗದೊಳು ತಾ ಬಂದು ಮಾಯಿ
ಬಲಿ ಭುಜರನು ಗೆಲವಂದು
ಜಲಜನಾಭವ ಕರೆತಂದು ರೌಪ್ಯ
ನಿಲಯದಿ ಸ್ಥಾಪಿಸಿ ನಿಂದು
ಚೆಲುವ ಶೇಷಗಿರಿ ಪತಿಗತಿಯೆಂದು
ನೆಲೆಯ ತೋರಿದ ಪುರುಕರುಣಾಸಿಂಧು 3