ಕರುಣದೆನ್ನ ಕರಪಿಡಿ ಕಾಯೋ ಪ
ಸಿರಿನಾರಾಯಣ ಶರಣೆಂಬೆ ಅ.ಪ
ಮೇಲ್ ಮೇಲ್ ಗುಣಗಾನವ ಮಾಡೆ
ಬಾಲ್ಯಮೊದಲು ಮುದಿತನ ದೊಳಗುಂ ಸೌ
ಶೀಲ್ಯ ಸ್ತುತಿಪೆ ಶುಕನುಡಿಯಂತೆ 1
ದಶರೂಪಗಳಂ ಧರಿಸುತ ಮರೆಸಲು
ವಿಶ್ವವ್ಯಾಪಕಗುರು ತರವೇ
ಕೃಷ್ಣನಾಮನಾವೆಯೊಳು ಬಹೇ 2
ವೈನತೇಯನನೊಡಗೊಂಡು ಬಹೆ
ನಿನ್ನ ಸೆರಗ ಪಿಡಿಯುತ ಬರುವೆ3
ಸುಮನಸ ಪೂಜಿತ ನಮಿಸುವೆ ನಾಂ
ಭ್ರಮೆಗಳ ಬಿಡಿಸುತ ಭವಭಯ ಹರ¸
ಕಮಲನಯನ ಹೆಜ್ಜಾಜೀಶ 4