ಜಗದೀಶ ವಿಠ್ಠಲನೆ | ಮಗುವ ಕಾಯೋ ಪ
ಹಗಲಿರುಳು ಬೆಂಬಲಿಗ | ನಾಗಿ ನೀ ಕರುಣದಲಿಬಗೆಬಗೆಯ ಸುಖವಿತ್ತು | ಹಗರಣವ ಕಳೆಯೋ ಅ.ಪ.
ಮರುತ ಮತ ತತ್ವಗಳ | ಅರಿವಿಕೆಯ ಕೊಡು ಇವಗೆಹರಿಗುರೂ ಸತ್ಸೇವೆ | ಪರಮ ಹರುಷದಲೀನಿರುತ ಗೈಯ್ಯು ಮನವ | ಕರುಣಿಸುವುದೆಂದೆನುತಪರಿಪರಿಯ ಪ್ರಾರ್ಥಿಸುವೆ ಶರಧಿಜೆಯ ರಮಣಾ 1
ಕಾಕು ಸಂಗವ ಕೊಡದೆ | ನೀ ಕೊಟ್ಟು ಸತ್ಸಂಗತೋಕನನು | ಪೊರೆಯೆಂದು | ನಾ ಕೇಳ್ವೆ ಹರಿಯೇಬೇಕಾದ ವರ ಇವಗೆ | ನೀ ಕೊಡುತ ಕಾಯುವುದುಶ್ರೀಕಾಂತ ಬೇಡುವೆನೊ ನೀ ಕರುಣಿ ಎನುತಾ 2
ಪಾವಪಾನಿಯ ಪ್ರೀಯ | ಝಾವ ಝಾವಕೆ ನಿನ್ನಪಾವನ ಸ್ಮøತಿಯಿತ್ತು | ಕಾವುದೈ ಹರಿಯೇಪಾವು ಮದ ಹರ ಗುರೂ | ಗೋವಿಂದ ವಿಠ್ಠಲನೆನೀವೊಲಿವುದಿವಗೆಂದು | ಭಾವದಲಿ ಬೇಡ್ವೆ 3