ಒಟ್ಟು 325 ಕಡೆಗಳಲ್ಲಿ , 72 ದಾಸರು , 298 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭಮಂಗಳಂ ಪ ಜಗದೇಕ ವೀರನಿಗೆ ಜಗದುದರ ದೇವನಿಗೆ ಜಗವ ಬಾಯೊಳು ತೋರ್ದ ಮಹಮಹಿಮಗೆ ಜಗವ ಸೃಜಿಸಿದ ಹರಿಗೆ ಜಗವಪಾಲಿಪದೊರೆಗೆ ಜಗವ ಸಂಹರಿಸುವಗೆ ಜಯ ಮಂಗಳಂ ಅ.ಪ ವರಮುನಿಯ ತಾಡನದಿ ಹೊರಡೆ ಲಕ್ಷ್ಮಿಯು ಆಗ ಗಿರಿಗಿಳಿದು ಬಂದು ಹುತ್ತದೊಳಗಿರಲು ಪರಮೇಷ್ಠಿ ಅರಸಿಪಾಲ್ಗರಿಯೆ ಗೋಪಾಲಕನ ವರಕುಠಾರದ ಪೆಟ್ಟಿಗಂಜಿ ನಟಿಸಿದವಗೆ 1 ಗಿರಿಗಿರಿಯ ಸಂಚರಿಸಿ ಅಡವಿಮೃಗ ಬೆನ್ನಟ್ಟಿ ಪರಮಪದ್ಮಾವತಿಯ ಮನದಿ ಕಂಡು ದುರುಳ ಮಾತುಗಳಾಡಿ ಶಿಲೆಯತಾಡಿತನಾಗಿ ಕೊರವಂಜಿ ರೂಪದಿಂ ಕಣಿಯ ಹೇಳಿದಗೆ 2 ಆಕಾಶರಾಜನಿಗೆ ಅಳಿಯನೆನಸಿಕೊಂಡು ಆಕೆ ಪದ್ಮಾವತಿಯ ಕೂಡಿದವ ಬೇಕಾದ ವರಗಳನು ಕೊಡುತ ಭಕ್ತರ ಪೊರೆವಶ್ರೀಕಾಂತ ಕಮಲನಾಭವಿಠ್ಠಲಗೆ 3
--------------
ನಿಡಗುರುಕಿ ಜೀವೂಬಾಯಿ
ನಿನಗಿದು ಘನವೆ-ನಿತ್ಯಾತ್ಮಕವನಜಭವಾದಿಗಳನು ಪಾಲಿಪದೇವಪ ಸದಯನೀನಾದರೆ-ಬದುಕಿಸಿ ಪಶುಗಳ ಮುದವನು ತೋರಿಸು ಮಧುಸೂಧನ ಈಗ 1 ಇದಿರಿಗೆ ನೋಡಲಾರದೆ ನಿನ್ನ ದೂರಿದೆ ಇದುವೊಂದು ತಪ್ಪುಯನ್ನದು ಎಂದು ಮುನ್ನಿಸು 2 ವಿಷದ ನೀರನು ಕುಡಿ-ದಸುವನ್ನು ಕಳಕೊಂಡ ಪಶು ಪಾಲಕರಿಗೆ ನೀನಸುವಿತ್ತು ಪೊರೆದೆ 3 ಹೊಟ್ಟೆಯೊಳಗೆ ಸತ್ತು ಹುಟ್ಟಿದ ಶಿಶುವನ್ನು ಮುಟ್ಟಿ ಜೀವನವಿತ್ತೆ ಕೃಷ್ಣಾಕೃಪಾಕರ 4 ಗುರುಸುತನನು ಯಮ ಪುರದಿಂದ ಕರೆತಂದ ಪರಮ ಶ್ರೀ ಪುಲಿಗಿರಿ ವರದ ವಿಠಲರಾಯ 5
--------------
ಸರಗೂರು ವೆಂಕಟವರದಾರ್ಯರು
ನಿನ್ನ ಕರುಣಕೆಯ ಕಾಣೆನಾ | ವಿಠಲರಾಯಮನ್ನುಜನ್ನ ರೂಪ ಧರಿಪನಾಅನ್ನ ವಸನವಿತ್ತು ಪಿತಗೆ | ಚನ್ನ ಸೇವೆ ಮಾಳ್ಪದೇವೆಘನ್ನ ಸಾಧ್ಯ ಸಾಧನವೆಂದು | ಮನ್ನಣೆಯ ತೋರ್ದೆ ಜಗಕೆ ಅ.ಪ. ಪಂಥ ಜನರ ಸಂದಣೀಯಲಿ | ಮೆರೆಯುತ್ತಿದ್ದಪಂಢರಪುರದ ಸುಪ್ರದೇಶದಿಪುಂಡರೀಕ ನಯನ ಭಕ್ತ | ಬಂಡುಣೀಯ ಮನವ ನೋಡೆಅಂಡಾ ನಂತಕೀಶ ಮನುಜ | ದಿಂಡು ಧರಿಸಿ ಬಂದು ನಿಂತ 1 ಇಂದು ಭಾಗ ಸರಿತು ತೀರದಿ | ಪುಂಡಲೀಕತಂದೆ ಪಾದಸೇವೆ ಭರದಲಿ |ಬಂದ ಮನುಜ ವೇಷ ಹರಿಗೆ | ನಿಂದಿರೆಂದು ಪ್ರಾರ್ಥಿಸುತ್ತಅಂದ ಅನ್ಯ ಪೀಠವಿರದೆ | ಒಂದು ಇಟ್ಟಗಿ ಪೀಠವಿತ್ತ2 ಸಿಂಧು | ಸುಷ್ಠು ಒತ್ತಿಪ ದಯಾಸಿಂಧು3 ಶಾಸ್ತ್ರ ಬಹಳ ಶೃತನು ಎನುತಲೂ | ಶುದ್ಧಮೇಧ ಶಕ್ತಿ ಬಹಳ ಯುತನು ಎನುತಲೂ | ಯುಕ್ತಿಗಾಗ್ಯ ವಲಿವನಲ್ಲ | ಮುಕ್ತಿದಾತ ಲಕ್ಷ್ಮೀನಲ್ಲಭಕ್ತಿ ಮುಡುಪು ಯಿತ್ತು ತುತಿಪ | ಭಕ್ತ ಜನರ ಬಿಡದೆ ಪಾಲಿಪ4 ಭಾವ ದ್ರವ್ಯ ಕ್ರಿಯವು ಎಂಬುದಾ | ಮಹತು ಎನಿಪಈ ವಿಧ ದ್ವೈತತ್ರಯಗಳಾ |ಭಾವದಲ್ಲಿ ಚರಿಸುವಂಥ | ಭಾವವಿತ್ತು ಸಲಹೊ ಗುರುಗೋವಿಂದ ವಿಠಲ ಭಕ್ತಿಪಂಥ | ದೇವನೆಂದು ಮೆರೆವ ವಿಠಲ 5
--------------
ಗುರುಗೋವಿಂದವಿಠಲರು
ನಿನ್ನ ಮಹಿಮೆ ಇದೇನೊ ಕನ್ನಗಾರರ ಗುರುವೆ ಅಳಗಿರಿ ತಿಮ್ಮರಾಯಾ ಪ ಕ್ಷೋಣಿಯೊಳಗುಳ್ಳವರು ಕ್ಷಿಪ್ರದಲ್ಲಿ ನಿನ್ನ ಕಾಣಿವೇನೆಂಬ ತವಕದಲಿ ಬರಲು ಮಾಣದಲೆ ಅವರ ವಸನ ಸುಲಿಸಿ ತಡೆಯದೆ ಮಾನವನು ಕೊಂಬ ಅಭಿಮಾನಗೇಡಿ 1 ಬ್ರಹ್ಮಾದಿಗಳು ಇಲ್ಲಿ ಸುಲಿಸಿಕೊಳಬೇಕೆಂದು ಹೆಮ್ಮೆಯಿಂದಲಿ ನೋಡಿ ಹಿಗ್ಗುವರೋ ಹಮ್ಮಿನದೇವ ನಿನ್ನ ಸೋಜಿಗವೆ ತಿಳಿಯದು ಈ ಮ್ಮಹಿಯೊಳಗೆ ಇಂಥ ಸುಮ್ಮಾನವೇನೊ2 ಹಲವು ಕೇಳಿದರೇನು ನೀಚೋಚ್ಚ ಎಣಿಸಲೆ ಒಲಿಸಿದವರಿಗೆ ನೀನು ಒಲಿದು ಎಲ್ಲಾ ಸುಲಿಗೆಯನು ಯಿತ್ತು ಸಂತತಲವರ ಪಾಲಿಪ ಬಲು ದೈವ ವಿಜಯವಿಠ್ಠಲ ಅಳಗಿರಿ ತಿಮ್ಮಾ3
--------------
ವಿಜಯದಾಸ
ನಿನ್ನನೆ ನಂಬಿದೆ ಅನ್ಯರೊಬ್ಬರ ಕಾಣೆ | ಮಧ್ವರಾಯಾ ಪ ನಿಮ್ಮ ಸಿದ್ಧಾಂತದಿ ಮನವ ನಿಲ್ಲಿಸಯ್ಯ | ಮಧ್ವರಾಯಾ ಅಪ ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲು || ಮಧ್ವರಾಯಾ || ಗತಿಯ ಕಲ್ಪಿಸಿ ಸಜ್ಜನರ ತತಿಗಳ ಕಾಯಿ || ಮಧ್ವರಾಯಾ 1 ತಂದೆ ತಾಯಿ ಬಂಧು ಬಳಗವೆಲ್ಲವು ನೀನೆ | ಮಧ್ವರಾಯಾ | ಎಂದೆಂದಿಗು ನಿಮ್ಮ ಪೋದಿರುವಂತೆ ಮಾಡೈ | ಮಧ್ವರಾಯಾ 2 ಬಾಲಕೃಷ್ಣನ ಸೇವೆ ಮೇಲಾಗಿ ಮಾಡುವ | ಮಧ್ವರಾಯಾ | ಮೂಲ ಮೂವತ್ತೇಳು ಮೇಲು ಗ್ರಂಥಗಳಿತ್ತೆ | ಮಧ್ವರಾಯಾ 3 ಶ್ರೀನಿಧಿ ಕೃಷ್ಣನೆ ಜಗಕೆಲ್ಲ ದೊರೆಯೆಂಬ | ಮಧ್ವರಾಯಾ | ಹೆಸರು ಪೊತ್ತೆ | ಮಧ್ವರಾಯಾ 4 ಅಜಪದಕೆ ಬಂದು ಅಖಿಲರ ಪಾಲಿಪ | ಮಧ್ವರಾಯಾ |ವಿಜಯಸಾರಥಿ ಕೃಷ್ಣ ವಿಜಯವಿಠ್ಠಲಪ್ರಿಯ | ಮಧ್ವರಾಯಾ 5
--------------
ವಿಜಯದಾಸ
ನಿನ್ನಬಿಟ್ಟನ್ಯಬಲ ಮುನ್ನಿಲ್ಲಸ್ವಾಮಿ ಎನ್ನಯ್ಯ ವಿಶ್ವೇಶ ಪನ್ನಂಗಶಾಯಿ ಪ ಇನಚಂದ್ರ ಮಂಗಳಬುಧಗುರು ಭಾರ್ಗವ ಶನಿರಾಹುಕೇತು ನವಮಹರ್ದಶನು ನೀನೆ ಘನನಿಮ್ಮ ಮಹಿಮೆಯಿಂ ವಿಧವಿಧದಿ ಸೃಷ್ಟಿಗೈ ದೊನರುಹ ಭುವನಂಗಳಾಳುವವ ನೀನೆ 1 ನಕ್ಷತ್ರಯೋಗಾದಿಕರಣಂಗಳು ನೀನೆ ಪಕ್ಷಮಾಸ ಸರ್ವಕಾಲ ವಾರ ತಿಥಿ ನೀನೆ ಸುಕ್ಷೇತ್ರಯಾತ್ರ ಮಹಪುಣ್ಯತೀರ್ಥವು ನೀನೆ ಸಾಕ್ಷಾತ ನಿಖಿಲ ಶುಭಮುಹೂರ್ತಗಳು ನೀನೆ 2 ಪರಮವೇದ ಪುಣ್ಯಪುರಾಣಕಥೆ ನೀನೆ ವರ ನಿಖಿಲ ಶಾಸ್ತ್ರರ್ಥ ಮೂಲವಿಧಿ ನೀನೆ ಚರಣದಾಸರ ಪ್ರಾಣಪದಕ ಶ್ರೀರಾಮಯ್ಯ ಸ್ಥಿರಮೋಕ್ಷ ಪಾಲಿಪ ಶ್ರೀಗುರುವು ನೀನೆ 3
--------------
ರಾಮದಾಸರು
ನಿರ್ಭಯವಾಯ್ತಿನ್ನು ಎನಗೆ ರತ್ನ ಗರ್ಭ ಲಕ್ಷ್ಮಿಕಾಂತ ಹೊಣೆಯಾದ ಮನೆಗೆ ಪ. ಮೂರಾವಸ್ತೆಗಳಲ್ಲಿ ಕಾವ ವಾರಿಧಿ ವಾಸ ಸ್ವಭಕ್ತ ಸಂಜೀವ ಕ್ರೂರ ವೈರಿಗಳು ದುರ್ಭಾವ ದೂರ ಹಾರಿಸಿ ಸುಖವನ್ನು ತಾನೆ ತಂದೀವ 1 ಕರ್ಣಾಮೃತರಸ ಸುರಿದು ನಿತ್ಯ ಸ್ವರ್ಣಲಾಭ ಧಾರೆ ಸುಲಭದಿ ಕರದು ನಿರ್ನಿತ ದೋಷವ ತರಿದು ದು- ಗ್ದಾರ್ಣವ ಮಂದಿರ ತೋರುವ ಬಿರುದು 2 ವಿಧಿಭವ ಶಕ್ರಾದಿರಾಜ ಹೃದ್ಗತ ಸದನದಿ ನೆಲೆಗೊಂಡಾಶ್ರೀಕಲ್ಪಭೂಜಾ ಸದೆವ ವೈರಿಗಳ ಸಮಾಜ ಬೇಗ ಒದಗಿ ಪಾಲಿಪ ನಮ್ಮ ವೆಂಕಟರಾಜ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಿರ್ವಿಘ್ನವನೆ ನೀಡೋ ನಭಕೀಶ ಪ ಉರ್ವಿಯೊಳಗೆ ಕಾರ್ಯ ಪ್ರಾರಂಭಿಕ್ಕೀಶ ಅ.ಪ. ಶೈಲಜೆ ಶರೀರ ಮಲಜನೆಂದೆನಿಸುತ್ತಶೀಲ ಸತ್ಕರ್ಮಾಳಿ ಪ್ರಾರಂಭದೀ |ಮಾಲೋಲನಾಜ್ಞಾದಿ ಪೂಜೆಯ ಕೊಳ್ಳುತ್ತಪಾಲಿಪೆ ಭಕುತರಾಭೀಷ್ಟವ ದಯದಿ 1 ಗಮನ ಪಿತ ಶ್ರೀಶಾನುಗ್ರಹ ಪಾತ್ರಾ 2 ವಿಶ್ವ ಮೂರುತಿಯಸತ್ಯ ಮೂರುತಿ ಗುರು ಗೋವಿಂದ ವಿಠಲನಹೃತ್ಪದ್ಮದಲಿ ತೋರಿ ಕೃತಕೃತ್ಯನೆನಿಸೋ 3
--------------
ಗುರುಗೋವಿಂದವಿಠಲರು
ನೀನೆ ಕಾಮಿಸಿ ನಿರುತವು ಕೆಡುವೆ ಪ ಸ್ವರೂಪವರಿಯದೆ ನೀ ಕರೆಕರೆ ಪಡುವೆ 1 ಭ್ರಾಂತಿಯಪಡುತಲಿ ಬಾಯಿ ಬಾಯಿ ಬಿಡುವೆ 2 ನಾಯಂದದಿ ಪರಸ್ತ್ರೀಯರ ಬಯಸುತ ಹೇಯನೆನಿಸಿಕೊಂಡು ನೊಯ್ಯುವೆಯಲ್ಲದೆ 3 ಮಲಮೂತ್ರದಿ ನೀ ಮಲಗಿರಲಿಲ್ಲವೇ ಮರೆತು ಯೌವ್ವನ ಗರ್ವದಲಿ ತಲೆ ತೂಗುತ4 ಪರಿಪರಿವಿಧದಲಿ ಭಕ್ತರ ಪಾಲಿಪ ಗುರುರಾಮವಿಠಲನ ಚರಣವ ನಂಬದೆ 5
--------------
ಗುರುರಾಮವಿಠಲ
ನೀನೆ ದಯಾಶರಧಿ ತ್ರಿಜಗದಿ ಧ್ಯಾನದಾಯಕ ಮಮಪ್ರಾಣ ಜಾನಕೀ ಜೀವ ಪ ದೀನರ ಪಾಲಿಪ ಜಾಣ ಮಹಿಮ ಪ್ರಭು ಕ್ಷೋಣಿಯೋಳ್ನಿನ್ನ ಸಮಾನ ದೇವರ ಕಾಣೆ 1 ಒಲಿದು ಕಂಬದಿ ಬಂದಿ ಬಲಿಯ ಬಾಗಿಲ ಕಾಯ್ದಿ ಲಲನಾಮಣಿಗೆ ಒಲಿದು ಕುಲವನುದ್ಧರಿಸಿದಿ 2 ಕರಿಯು ಕರೆಯಲು ಬಂದಿ ತರುಣಿ ಬೆಂಬಲ ನಿಂದಿ ಚರಣದಾಸರ ಪ್ರಿಯ ಕರುಣಿ ಶ್ರೀರಾಮ 3
--------------
ರಾಮದಾಸರು
ನೆನೆಯ ಬಾರದೆ ಮನವೆ ಪರಮಪಾವನನ ಪ ಸಾಕಾರದಿಂದ ಸರ್ವವನು ರಕ್ಷಿಪನಜೋಕೆಯಲಿ ತನ್ನ ನೆನೆವವರ ಪಾಲಿಪನ - ಅ-ನೇಕ ಮೂರುತಿ ಸೂರ್ಯನಾರಾಯಣನ 1 ಬ್ರಹ್ಮಾಂಡ ಕೋಟಿ ತಿಮಿರವ ಗೆಲುವವನಒಮ್ಮೆ ನೆನೆಯಲು ಪ್ರಸನ್ನನಾದವನಧರ್ಮಕ್ಕೆ ಸಾಕ್ಷಾತ್ ರೂಪಾಗಿ ತೋರುವನನಿರ್ಮಲಾತ್ಮಕವಾಗಿ ಥಳಥಳಿಸುವವನ 2 ಹರಗೆ ನಯನವಾಗಿ ಮಕುಟವ ಬೆಳಗುವನತರುಣಿಯೈವರ ಲಜ್ಜೆ ಕಾಯ್ದವನದುರಿತಕೋಟಿಗಳನುದ್ಧರಿಸುವವನಪರಬ್ರಹ್ಮ ಕಾಗಿನೆಲೆಯಾದಿಕೇಶವನಮರೆಯದೆ ಭಜಿಪರ ಕಾಯುವವನ 3
--------------
ಕನಕದಾಸ
ನೆಲೆಯಾಗಿ ನಿಲಿಸೆನ್ನ ನಿಲಯದಿ ಶ್ರೀಕಾಂತ ಸಿರಿ ಲಲನೆಯರೊಡಗೂಡಿ ಪ. ಸೂಕ್ತ ಪುರಾಣ ಭಾರತಗಳು ಪೊಗಳುವ ಭಕ್ತ ವತ್ಸಲತೆಯ ಬಹುಮತಿಯ ನಿತ್ಯ ಕೊಂಡಾಡುವ ಭೃತ್ಯಜನರ ಬೇಗ ಹೆತ್ತ ತಾಯಿವೊಲೆತ್ತಿ ಪಾಲಿಪ ಹರಿ 1 ವಿಧಿ ವಿಹಿತಗಳಾದ ಸದಮಲ ಕೃತಗಳ ಮುದದಿ ಮಾಡುವ ಸರ್ವ ಬುಧ ಜನರ ಸದನಕ್ಕೆ ಕರತಂದು ವಿಧವಿಧ ಪೂಜೆಯ ಒದಗಿ ಮಾಡುವ ಪೂರ್ಣ ನಿಧಿಮತಿಗಳನಿತ್ತು 2 ಬಂದ ಅತಿಥಿಗಳ ನಿಂದಿಸದಲೆ ಅಭಿ ವಂದಿಸಿ ಸತ್ಕರಿಸುತ ಫಲವ ಕುಂದಿಲ್ಲದಾನಂದ ಸಂದೋಹದಾಯಿ ಮುಕುಂದಗರ್ಪಿಸಿ ಸುಖದಿಂದ ಚರಿಸುವಂತೆ 3 ಅಹಿತಲ್ಪ ಶಯನನೀ ವಹಿಸಿದ ದಾಸರ ಸುರರು ಸಂಗ್ರಹಿಸುವರು ಕುಹಕ ವೈರಿಗಳನ್ನು ಬಹು ದೂರೋಡಿಸಿ ಮಹಾಮಹಿಮ ನೀ ಕರುಣದಿ 4 ಚತುರ ಹಸ್ತಗಳಿಂದ ಚತುರ್ವಿಧ ಫಲರಸ ಸ್ತುತಿಸುವ ದಾಸರೀ ಗತಿ ಬೇಗದಿ ಸತತ ಸುರಿವ ನಾಗಪತಿ ಗಿರಿನಿಲಯ ಶ್ರೀ ಪತಿ ನೀನೆ ಎನಗೆ ಸದ್ಗತಿಯಾಗಿ ಪೊಳವುತ್ತ 5
--------------
ತುಪಾಕಿ ವೆಂಕಟರಮಣಾಚಾರ್ಯ
ನೋಡಿ ನಿಮ್ಮೊಳು ನಿಜಾನಂದಬೋಧ ಕೂಡಿ ಕರುಣಾಸಿಂಧು ಶ್ರೀಗುರುಪಾದ ಧ್ರುವ ಇಡಾ ಪಿಂಗಳ ಮಧ್ಯ ನೋಡಿ ಈಗ ನಾಡಿ ಸುಷಮ್ಮವಿಡಿದು ಕೂಡಿ ಬ್ಯಾಗ ನೋಡಬಲ್ಲಿದೆ ಬ್ರಹ್ಮಾನಂದ ಭೋಗ ಗೂಢವಿದ್ಯವಿದು ತಾ ರಾಜಯೋಗ ಒಡನೆ ತಿಳಿಯುವದಲ್ಲ ಷಡಚಕ್ರ ಭೇದವಲ್ಲ ಬಡವರಿಗಳವಲ್ಲ ಗೂಢಿನ ಸೊಲ್ಲ 1 ಪಿಡಿದು ಮನಮಾಡಿ ದೃಢನಿಶ್ಚಯ ಬಿಡದೆ ಭೇದಿಸಿನೋಡಿ ಸುಜ್ಞಾನೋದಯ ಇಡದು ತುಂಬ್ಯದೆ ವಸ್ತು ಜ್ಯೋತಿರ್ಮಯ ಪಡೆದುಕೊಳ್ಳಿರೊ ಗುರು ಕರುಣ ದಯ ಮನ ಉನ್ಮನ ಮಾಡಿ ಘನಸುಖದೊಳು ಕೂಡಿ ಅನುದಿನ ನಲಿದಾಡಿ 2 ಮೂರುಗುಣರಹಿತ ಮೂಲರೂಪ ತೋರುತಿಹ್ಯದು ನಿಜ ನಿರ್ವಿಕಲ್ಪ ತರಳ ಮಹಿಪತಿ ಪ್ರಾಣ ಪಾಲಿಪ ಹೊರೆದು ಸಲಹುವ ಗುರುಕಲದೀಪ ಭಾವಿಕರಿಗೆ ಜೀವ ಕಾವ ಕರುಣದೇವ ವಾಸುದೇವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡುವೆ ನೋಟದಲಿ ನೋಡುವೆ ನೋಟದಲಿ ಪ ಗಂಗೆ ಯಮುನೆಗಳ ಸಂಗಮದೀ ಮಿಂದು ಅಂಗ ಸಂಗ ರಹಿತಾಂಗನದೇ ಮಂಗಳಾಂಗ ದಿವ್ಯಾಂಗಪೂಜೆಯ ಮಾಡಿ ರಂಗ ಮಂಟಪ ಪಾಂಡುರಂಗನಿಗೆ 1 ಈಡೆ ಪಿಂಗಳೆಗಳ ಜೋಡುಗೂಡಿ ಮೂಡು ರವಿಶಶಿ ಸೂಡಿ ಮಧ್ಯಿರುವಾಗ್ನಿ ಗೂಡಿನೋಳಾಡುವಜೀವನ ವಿಚಾರೋನ್ಮೂರ್ತಿಗೆ 2 ಹೃದಯದಿ ಬೆರಿತು ಹಂಸನ ಭರದಿ ತಿರುಗಿತಲೆರಡೊಂದೊಂಕಾರದಿ ಎರಕವಾಗಿ ಸಸ್ವರದಿ ಮನ ಪರಮ ಪುರುಷ ದಿವ್ಯಾಂಗನಿಗೆ 3 ಒಳಹೊರಗೊಂದಾಗಿ ದೇವಾ ಸುಲಭದಿ ಭಕ್ತರ ಸುಖವೀವಾ ಬೆಳಗುವ ನಲಿನಲಿದಾಡಿ4 ಆರು ಚಕ್ರಗಳ ಮೀರಿ ಮುಂದಣ ಸಣ್ಣ ದಾರಿಹಿಡಿದು ಹಿಂದಕೆ ನಡೆದು ತೋರುವ ಪರಿಪೂರ್ಣ ತಾರಕ ಬ್ರಹ್ಮನ ಸೇರಿ ನಿರ್ಬಯಲಾ ಚಿದ್ರೂಪಗೆ 5 ಅಂತರ್ಯಾಮಿ ಪೂರ್ಣಾಂತರದಿ ಮೂರ್ತಿ ಹೃದಯಾಂತರದಿ ಸಂತ ಸಾಧು ನಿಜ ಶಾಂತಿ ಪಾಲಿಪ ಗುರು ಚಿಂತೆರಹಿತ ನಿಶ್ಚಿಂತದಲಿ 6
--------------
ಶಾಂತಿಬಾಯಿ
ಪತಿ ವಿಠಲ | ಶ್ರೀನಿವಾಸ ಪ ದೀನ ಜನ ಮಂದಾರ | ನೀನಿವನ ಸಲಹೋ ಅ.ಪ. ಮೋದ ಉಣಿಸಿವಗೇ 1 ಪ್ರಾಚೀನ ಕರ್ಮಾಂಧ | ಕೂಪದಲಿ ಬಿದ್ದಿಹೆನೊಖೇಚರೊತ್ತಮ ಪ್ರಾಣ | ಮತದಿ ಬಂದಿಹನೋವಾಚಿಸುತ ಇವನಲ್ಲಿ | ನಿಚೋಚ್ಚ ತರತಮನಮೋಚಿಸೋ ದುಷ್ಕರ್ಮ | ಕೀಚಕಾರಿ ಪ್ರಿಯಾ 2 ದಾಸ ದೀಕ್ಷೆಯಲಿ ಮನ | ದಾಶಿ ಬಲು ಇಟ್ಟಿಹೆನೊಶ್ರೀಶ ತ್ಯೆಜಸನೀನೆ | ಲೇಸು ಸತ್ಪಂಥಾ |ಸೂಸಿ ತೋರಿಹೆ ಹರಿಯೇ | ಹೇ ಸದಾಶಿವ ವಂದ್ಯಕ್ಲೇಶ ನಾಶನ ಕಾಯೊ | ವಾಸವಾನುಜನೇ 3 ತೈಜಸನೆ ನೀ ತೋರ್ದ | ತೇಜರೂಪೋಪಾಸಾಮಾಜದಲೆ ಪೇಳಿರುವೆ | ವಾಜಿವದನಾ |ಸೋಜಿಗದ ತರಳನಿಗೆ | ಓಜಸ್ಯ ಪಾಲಿಸುತರಾಜಿಸೋ ಇವನಲ್ಲಿ | ಮೂಜಗತ್ಪತಿಯೇ 4 ಸರ್ವಾಂತರಾತ್ಮ ತವ | ದಿವ್ಯ ಸಂಸ್ಕøತಿಯನ್ನಸರ್ವತ್ರ ಸರ್ವದಾ | ಓವಿ ಪಾಲಿಪುದೋ |ದುರ್ವಿ ಭಾವ್ಯನೆ ಗುರೂ | ಗೋವಿಂದ ವಿಠಲಯ್ಯದರ್ವಿ ಜೀವಿಯ ಕಾಯೊ | ಬಿನ್ನವಿಪೆ ಹರಿಯೇ 5
--------------
ಗುರುಗೋವಿಂದವಿಠಲರು