ನಾಮವೆ ಗತಿಯೆನಗೇ ಕೇಶವ ನಿನ್ನ
ಪ್ರೇಮವೆ ಗತಿಯೆನಗೇ ಪ
ರಾಮ ನಿನ್ನಯ ನಾಮವ
ಸುಮತಿ ಸ್ಮರಿಸಲು
ಭೂಮಿಗಭಯವಿತ್ತ ಸ್ವಾಮಿಯೇ ನಿನ್ನ ಅ.ಪ.
ತರುಣ ಪ್ರಹ್ಲಾದ ನನೀಲ ದ್ರೌಪದಿ ಮತ್ತೆ
ದುರುಳ ವಾಲ್ಮೀಕ ವಿಭೀಷಣರನ್ನು
ಕಿನ್ನರ ಮರುತಾತ್ಮಜ ಋಷಿಗಳ
ಪೊರೆದಂಥ ನರಹರಿ ಕೇಶವನೆಂಬ 1
ಇಂತೀ ಭಕ್ತರ ಸಲಹಿದ ಪರಿಯ
ಸತತ ಭಜಕರ ಪೊರೆವ ಶ್ರೀಧರನ
ಕಂತುಪಿತನ ನಾಮ ಸ್ಮರಿಸುವ ದಾಸರ
ಅಂತಾರಾತ್ಮವ ಶುದ್ಧಿಗೊಳಿಸುವ ಹರಿಯ 2
ಅಂತ್ಯಕಾಲದಲಿ ಬಂದೊದಗುವ ಪರಿಯ
ಕುಂತಿಯ ಸುತರನ್ನು ಸಲಹಿದ ಪರಿಯ
ಸಂತತ ದೂರ್ವಾಪಟ್ಟಣದಲ್ಲಿ ಮೆರೆಯುವ
ಅಂತ್ಯಾದಿರಹಿತ ಶ್ರೀ ಚನ್ನಕೇಶವನ 3