ದಾಸವರವರದ ವಿಠಲ | ಸಲಹೊ ಇವಳಾ ಪ
ಈಶಾದಿ ದಿವಿಜೇಡ್ಯ | ವಾಸವಾನುಜನೇ ಅ.ಪ.
ಕ್ಲೇಶನಾಶನನೆ ಮ | ಧ್ವೇಶ ನಿನ್ನಡಿ ದಾಸ್ಯಆಶಿಸೂವಳ ಬಿಡದೆ | ಶ್ರೀಶ ಕೈಪಿಡಿದೂದೋಷರಾಶಿಯ ಕಳೆದು | ಪೋಷಿಸಲು ಬಿನ್ನವಿಪೆಹೇಸದಾಶಿವ ವಂದ್ಯ | ಮೇಶ ಮಹಿದಾಸಾ 1
ಪತಿಸೇವೆ ಗುರುಸೇವೆ | ಹಿತದಿಂದ ಮಾಳ್ಪಂಥಮತಿಯನೆ ಕರುಣಿಸುತ | ಕ್ಷಿತಿರಮಣ ನಿನ್ನಾಸ್ಮøತಿಯ ಕೊಡು ಸತತ ಸಂ | ಸೃತಿಯನೇ ಕಳೆಯಲ್ಕೆಗತಿಗೋತ್ರ ನೀನಾಗಿ | ಪಥದೋರೊ ಹರಿಯೇ 2
ಏಕಮೇವನೆ ದೇವ | ಪ್ರಾಕ್ಕು ಕರ್ಮವ ಕಳೆದುನೀ ಕೊಡುತ ಸುಜ್ಞಾನ | ಭಕುತಿ ವೈರಾಗ್ಯಕಾಕು ಸಂಗವ ಕೊಡದೆ | ನೀಕೊಟ್ಟು ಸತ್ಸಂಗಮಾಕಳತ್ರನೆ ಸಲಹೊ | ಈಕೆ ಕೈ ಪಿಡಿದೂ 3
ಖೇಚರೋತ್ತಮ ವಾಹ | ಕೀಚಕಾರಿ ಪ್ರಿಯನೆಮೋಚಕೇಚ್ಛೆಲಿ ಸವ್ಯ | ಸಾಚಿಸಖಕೃಷ್ಣಾ |ವಾಚಾಮಗೋಚರನೆ | ನೀಚೋಚ್ಚ ತರತಮವವಾಚಿಸುತ ಇವಳಲ್ಲಿ | ಮೋಕ್ಷಪ್ರದನಾಗೋ 4
ದೇವವರ ಭವ್ಯಾತ್ಮ | ಭಾವಕೊಲಿಯುವ ಹರಿಯೆನೀವೊಲಿಯದಿನ್ನಿಲ್ಲ | ಆವ ಈ ಜಗದೀ |ಕಾವುದಿವಳನು ಎಂದು | ಭಾವದಲಿ ಭಿನ್ನೈಪೆಭಾವುಕರ ಪಾಲ ಗುರು | ಗೋವಿಂದ ವಿಠಲಾ 5