ಏನೋ ಮನವೇ ನೀಹೀಂಗಾದಿ ಧ್ರುವ
ಏನೋ ಮನವೇ ನೀ ಹೀಂಗಾದಿ |
ಸ್ವಾನಂದ ಸುಖ ತಿಳಿಯದೆ ಬಳದಿ |
ಮಾನುಭವರ ವಿಡಿನಿಜ ಹಾದಿ |
ಭವ ವ್ಯಾಧಿ 1
ಮಂದ ಮತಿತನ ಬಿಡು ಗುಣದಾ |
ಹೊಂದೋ ಸದ್ಗುರುವಿನ ಪಾದಾ |
ಛಂದದಿ ಪಡಿಯೋ ನಿಜ ಬೋಧಾ |
ಸಂದೇಹ ಬಿಡಿಸೆಚ್ಚರಿಸುವದಾ2
ಹೊಗೆ ಅಗ್ನಿಯ ಮುಸುಕಿಹ ಪರಿಯಾ |
ಮಾಯಾ |
ಬಿಗಿದಾವರಿಸಿಹುದು ನೋಯಾ |
ಬ್ಯಾಗನೆ ತಿಳಿ ಗೆಲುವ ಉಪಾಯಾ 3
ಮುಂದ ಹಾಕಿದ ಹೆಜ್ಜೆಯನು |
ಹಿಂದಕ ತಿರುಗಿಸದಿರು ನೀನು |
ನಿಂದಿಸಲೊಂದಿಸಲಾರೇನು |
ಮುಂದಗಿಡದೆ ಬೆರಿ ವಸ್ತವನು 4
ನಿನ್ನ ಸುದ್ದಿಯು ತಾ ನಿನಗಿಲ್ಲಾ |
ಇನ್ನಾರೆ ತಿಳಿತನು ಸ್ಥಿರವಲ್ಲಾ |
ಮುನ್ನಿನ ಪರಿಕೆಡುವುದು ಸಲ್ಲಾ |
ಮನ್ನಿಸು ಮಹಿಪತಿ ಜನ ಸೊಲ್ಲಾ 5