ಹೆಡಗುಡಿ ಕಟ್ಟಿ ಹೊಡೆಯಿರಿ ಇವನ | ಬಡತನ ಸಂತರಿಗ್ಹೇಳುವನ ಪ
ಸೆಡಗರದಲಿ ಸಂಸಾರವ ಮಾಡುತ ಬಿಡದಾಶೆಯಲೀ ಮರಗುವನ ಅ. ಪ
ಅನ್ನವ ಬೇಡುವ ಅತಿಥಿಯು ಬಂದರೆ | ನಿನ್ನೆ ನಾ ಉಪವಾಸೆಂಬುವನ | ಅನ್ಯಾಯದಲಿ ಪಾಪವ ಗಳಿಸಿ |ನಾಯ್ ಕುನ್ನಿಯಂತೆ ಎಲ್ಲರ ಬೊಗಳುವನ 1
ವಸ್ತ್ರವ ಕೊಡು ಎಂದವರಿಗೆ ಹರಕೊಂ- | ದೊಸ್ತ್ರವ ತೆರೆದು ತೋರುವನ | ವೇಶ್ಯಾ ಸ್ತ್ರೀಯರ ಕಂಡರೆ ಕರೆದು | ಉತ್ತಮ ವಸ್ತ್ರವನೀಯುವನ 2
ಮಂತ್ರವ ಅರಿಯದೆ | ತಂತ್ರವ ಮಾಡುತ | ಅಂತರ ಪೂಜೆಯ ಅರಿಯದವನ | ಅಂತರಂಗದಿ ಭವತಾರಕನಂಘ್ರಿಯ | ಶಾಂತದಿಂದಲಿ ಧ್ಯಾನಿಸದವನ 3