ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ ಪ
ಜಗದಂತರಂಗ ಹೋ ಹೋಅಪ
ಶೀಕರೆ ಪುಟ್ಟಿದೆ ಮೇದಿನಿಪಾಲಗೆ ಮೆಚ್ಚಿ-ಬಂದನೊ ಹೆಚ್ಚಿ
ಲೀಲಾ ವಿನೋದ
ಸುತ್ತಿ ಪರಿಗೊಲಿದ
ಭೂತಳದೊಳು ಜಾನಕಿಗೆ ನಾಥನಾಗಿ ಮೆರೆದ-
ಕಾಮಿತಗರೆದ ಹೋ ಹೋ 1
ಜಲಜಸಂಭವಭವ ಮಿಕ್ಕಾದವರನು ಗರ್ಭ-ದೊಳಿಟ್ಟ ಸರ್ಬ
ಅಂದು ಪಡೆದ-ಮಗನಿಗೆ ನುಡಿದ
ಪ್ರಳಯಕಾಲದಿ ವಟ ಪತ್ರದ ಮೇಲ್ ಮಲ-ಗಿದ್ದ ಸುಪ್ರಸಿದ್ಧ
ಬಂದ ಪರಮಾ-ನಂದ ಹೋ ಹೋ 2
ಬರುತ ವಿಭೀಷಣ ಕಾವೇರಿ ತೀರಕೆ ಬಂದ, ಉತ್ಸಾಹದಿಂದ
ಪರಮ ಪುರುಷ ಲಂಕೆಗೆ ಪೋಗದೆ ನಿಂತ-ಬಲು ಜಯವಂತ
ಧರಣಿಪತಿ ಧರ್ಮವರ್ಮನ ಮಾತಿಗೆ ನಕ್ಕ-ಕೇಳಾವಾಕ್ಯ
ಪೂಜೆಗೊಂಬ ಸರ್ವರ-ಬಿಂಬ ಹೋ ಹೋ 3
ಕಂಟಕ ದಶಕಂಠನ ವಂಶವ ಕೊಂದ -ಈತ ಮುಕುಂದ
ಮಾಡಿಸಿಕೊಂಡ -ಬಲು ಪ್ರಚಂಡ
ಜಯವೆನುತಿರಲಯೋಧ್ಯಾ-ಆಳ್ದ ಅನಾದ್ಯ
ಕರುಣಾ-ಸಿಂಧು ಹೋ ಹೋ 4
ಮೂಜಗದ್ದಪ್ಪ
ನಕ್ಷತ್ರೇಶ ಸರೋವರತಟ ಪುನ್ನಾಗ-ವೃಕ್ಷದಲ್ಲಿಹ ದಕ್ಷ
ಅಪ್ರಾಕೃತ ಶರೀರ-ಧೃತ ಮಂದಾರ
ವಾಹನ ರಾಜಾಧಿರಾಜ ಹೋ ಹೋ 5