ಶೋಧಿಸಿ ನೋಡಿರೋ ಸದಾ
ಬೋಧದ ನಿಜಬೋಧ ಧ್ರುವ
ಸಾಧಿಸಿ ನೋಡಿ ಸದ್ಗುರು ಕೃಪೆಯಿಂದ
ಸಾಧನಕೆದುರಿಡುವುದು ಆನಂದ
ಭೇದಿಸಿ ನೋಡುವದಿದೇ ತನ್ನಿಂದ
ಆದಿ ಅನಾದಿದೇ ಸಹಜಾನಂದ 1
ತಂದುವಿಡಿದರಂತತ್ತೆ ನೋಡಿ
ಎಂತೆಂತೀಹ್ಯ ನಿಜದಂತೆ ಗೂಡಿ
ಅಂತರಾತ್ಮದಲೆ ಅನುಭವ ಬೆರೆದಾಡಿ
ಸಂತತ ಸದಮಲ ಸುಖಸೂರ್ಯಾಡಿ 2
ವಿಹಿತಕೆ ವಿಹಿತಾಗುವ ಸುಪಥ
ದ್ವೈತಾದ್ವೈತಕಿದೆ ರಹಿತ
ಮಹಾಮಹಿಮರ ಆನಂದಭರಿತ
ಮಹಿಪತಿ ಮನೋನ್ಮನದ ಸುವಸ್ತ 3