ಒಟ್ಟು 119 ಕಡೆಗಳಲ್ಲಿ , 42 ದಾಸರು , 111 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನೆಯೊಳಗಾಡೊ ಗೋವಿಂದ-ನೆರೆ-|ಮನೆಗಳಿಗೇಕೆ ಪೋಗುವೆಯೊ ಮುಕುಂದ ಪನೊಸಲಿಗೆ ತಿಲಕವನಿಡುವೆ-ಅಚ್ಚ-|ಹೊಸಬೆಣೆಯಿಕ್ಕಿ ಕಜ್ಜಾಯವ ಕೊಡುವೆ ||ಹಸನಾಧಾಭರಣಗಳಿಡುವೆ-ಚಿಕ್ಕ-|ಹಸುಳೆ ನಿನ್ನನು ನೋಡಿ ಸಂತೋಷಪಡುವೆ 1ಅಣ್ಣಯ್ಯ ಬಲರಾಮಸಹಿತ-ನೀ-|ನಿನ್ನೆಲ್ಲಿಯಾದರೂ ಆಡುವುದು ವಿಹಿತ ||ಹೆಣ್ಣುಗಳೇಕೋ ಸಂಗಾತ-ರಂಗ |ಬಿನ್ನಪಪರಿಪಾಲಿಸೊ ಜಗನ್ನಾಥ2ಜಾರನೆನಿಸಿಕೊಳಲೇಕೆ-ರಂಗ-|ಚೋರನೆನಿಸಿಕೊಂಬ ದೂರು ನಿನಗೇಕೆ ||ವಾರಿಜಾಕ್ಷಿಯರ ಕೂಡಲೇಕೆ-ನಮ್ಮ-|ಪುರಂದರವಿಠಲರಾಯ ಎಚ್ಚರಿಕೆ 3
--------------
ಪುರಂದರದಾಸರು
ಯಾರಲಿ ದೂರುವೆನೋ ಗಿರಿಯ ರಾಯಾಯಾರೆನ್ನ ಸಲಹುವರೋ ಪಸಾರಿದ ಭಕ್ತ ಸಂಸಾರಿ ನಿನ್ನಯ ಪದವಾರಿಜವನು ತೋರೋ ಕಾರುಣ್ಯ ನಿಧಿ ಬೇಗ ಅ.ಪಕಷ್ಟಜನ್ಮಕೆ ಬಂದೆನೋ-ಧಾರಿಣಿಯೊಳುದುಷ್ಟರಿಂದಲಿ ನೊಂದೆನೋ ||ನಿಷ್ಠುರ ಬೇಡವೊ ನಿನ್ನ ನಂಬಿದ ಮೇಲೆಸೃಷ್ಟಿಗೊಡೆಯ ಎನ್ನ ಬಿಟ್ಟು ಕಳೆಯಬೇಡ 1ಹಿಂದೆ ಮಾಡಿದ ಕರ್ಮವು ಈ ಭವದೊಳುಮುಂದಾಗಿ ತೋರುತಿದೆ ||ಇಂದೇನುಗತಿಅದರಿಂದ ನೊಂದೆನು ನಾನುಮಂದರಧರಗೋವಿಂದ ನೀನಲ್ಲದೆ2ಹಗಲು ಕತ್ತಲೆ ಸುತ್ತಿದೆ ಕಂಗೆಡಿಸುತಹಗೆಗಳ ನಗಿಸುತಿದೆ ||ಉಗುರಲಿ ಸೀಗೆ ಮುಳ್ಳುಗಳೀಗ ನೆಡುತಿವೆಸೊಗವ ಹಾರಿಸಿ ಎದೆ ದಿಗಿಲುಗೊಳಿಸುತಿದೆ 3ಬಾಡಿದರಳಿಸಸಿಯ ಕಲ್ಲಿನ ಮೇಲೆಈಡಾಗಿ ನಾಟಿದರೆ ||ಬೇಡಿಕೊಂಡರೆತಳಿರುಮೂಡಿ ಬರುವುದುಂಟೆರೂಢಿಗೊಡೆಯ ನೀನು ನೋಡದಿದ್ದ ಮೇಲೆ 4ಹಲವು ಪರಿಯ ಕಷ್ಟವ ನಿನ್ನಯಪಾದಜಲಜದ ಕರುಣದಲಿ ||ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲಒಲವಾಗು ಎನ್ನೊಳು ಪುರಂದರವಿಠಲ 5
--------------
ಪುರಂದರದಾಸರು
ರಂಗ ಬಾ ಮೋಹನಾಂಗ ಬಾ ದೇವೋತ್ತುಂಗ ಬಾರೆಂದು ಕರೆದಳುಗೋಪಿಪ.ಚೀರುತ ಬಂದ ಚಿನ್ನ ಹಸಿದನೆಂದುಘೃತಕ್ಷೀರವೆರೆಸಿ ಕೊಟ್ಟರೆ ಒಲ್ಲದೆಚೋರತನಕೆ ಮೆಚ್ಚಿ ಪೋಗುವೆ ನಿನ್ನನುದೂರುತ ನಿರುತ ಬಾಹರು ಗೋವಳೆಯರು 1ತುರುಗಾವೊ ನೆವದಲಿ ಪೋಗಿ ಗೋಪಾಲರಕುರುಳಿಗೆ ತುರದ ಬಾಲಕೆ ಗಂಟಿಕ್ಕಿದÀುರುಳತನಗಳನ್ನು ಮಾಡಿ ಮಾಡಿ ಮತ್ತ್ತೆಅರಿಯದಂತೆ ಬಿಕ್ಕಿ ಬಿರಿಯಬೇಡೆಲೆ ಕಂದ 2ಚೆಲ್ಲೆಗಂಗಳೆಯರ ಶಯನಕೆ ಪೊಂದಿಹನಲ್ಲರ ಬಡಿದೋಡಿ ಬರುತಲಿಹೆಸಲ್ಲದು ನಿನಗಿದು ಬಾಲಕತನದೊಳುಫುಲ್ಲಲೋಚನ ಮುದ್ದು ಗೋಪಾಲಕೃಷ್ಣ 3ಶಕಟ ಪೂತನಿತೃಣಾವರ್ತಮೊದಲಾದಶಕುತ ದನುಜರ ಮರ್ದನ ಕೃಷ್ಣಯ್ಯಭಕುತರ ಬವಣೆಯನಳಿಯದಿದ್ದರೆ ಗಡಸಕಲರುಜಾರಚೋರೆಂದು ಸಾರುವರೊ4ಎನ್ನ ಬೇಡು ನೀ ಮನದಣಿ ನೀಡುವೆಅನ್ಯರ ಮನೆಗೆ ಪೋಗಲಿ ಬೇಡವೊಚಿನ್ಮಯ ಮೂರುತಿ ಪ್ರಸನ್ವೆಂಕಟ ಕೃಷ್ಣನನ್ನಾಣೆ ಮನೆಯ ಬಿಟ್ಟಗಲದಿರೊ 5
--------------
ಪ್ರಸನ್ನವೆಂಕಟದಾಸರು
ಶ್ರೀ ಸತ್ಯಧ್ಯಾನರುನಿತ್ಯದಿತಿಜರು ಕಲಿಗೆ ದೂರುತಿಹರೋಸತ್ಯಧ್ಯಾನರ ಕಾಟ ತಾಳಲರೆವೊಯಂದು ಪನೀಕಲಿಸಿದಾಟವನು ತಾ ಕಳೆದು ಜನರ ಅಘನೂಕಿಜಗಸತ್ಯ ಶ್ರೀಹರಿಯು ಪರನುಶ್ರೀ ಕಮಲಭವರೆಲ್ಲ ದಾಸರೆಂದರು ಪಲುತಾ ಕಲ್ಪಿಸಿದ ಪಾಠಶಾಲೆ ಸಭೆಗಳನೆಂದು 1ಭೂಸೂರರಿಗನ್ನ ಧನ ಭೂಷಣಗಳಿತ್ತುಅಭ್ಯಾಸಗೈಸಿದ ಸಕಲ ವೇದಶಾಸ್ತ್ರವೀಸುವಿದ ಯತ್ನಗಳು ನಾ ಮಾಡಿದರು ಜಯಲೇಸುಕಾಣದೆ ನಿನ್ನ ಬಳಿಗೆ ಬಂದೆವು ಎಂದು 2ಇಂತು ತಾಮಾಡಿದನು ಪಿಂತಿನಾಶ್ರಮದಿಈಗಂತು ನಮ್ಮವರಾದ ವದುಮತ್ಸರಾಕಂತುಕೋಪಾದಿಗಳಿಗಂತಕನು ಯನಿಸಿಮುನಿ ಸಂತತಿಪನಾಗಿರುವದೆಂತು ನೋಳ್ಪೆವು ಎಂದು3ತಾಪಸೋತ್ತಮ ಸತ್ಯಧ್ಯಾನದಿಂ ಭೂತಳದಿಪಾಪ ಸರಿದಿತು ಪುಣ್ಯವೆಗ್ಗಳಿಸಿತುಲೇಪಿಸದು ಖತಿಜನಕ ಇವರ ದಯದಿಂದೆಮ್ಮವ್ಯಾಪಾರ ಧರೆಯೊಳಗೆ ಭೂಪ ಇನ್ಯಾಕೆಂದು 4ನಿರುತ ಸಿರಿಗೋವಿಂದ ವಿಠಲನ್ನ ಸೇವಿಸುತಾಪರಹಿಂಸೆ ಧನ ಯುವತಿ ದ್ಯೂತ ತೊರದಾವರಯತಿಯ ಮೋಹಿಸುವ ಶಕ್ತಿ ತನಗಿಲ್ಲೆಂದುಅರುಹಿದನು ಭೃತ್ಯರಿಗೆಕಲಿಮನನೊಂದು 5
--------------
ಸಿರಿಗೋವಿಂದವಿಠಲ
ಸಾಕು ಮಾಡಿರವ್ವ ರಂಗನ | ಏಕೆ ದೂರುವಿರೆ? ಪಬೆಟ್ಟು ಬಾಯೊಳಗಿಟ್ಟರೆ ರಂಗ - ಕಚ್ಚಲರಿಯನೆ |ಕಟ್ಟಿರುವೆಯನು ಕಂಡರೆ ಬವ್ವೆಂದು - ಚಿಟ್ಟನೆ ಚೀರುವನೆ ||ರಟ್ಟೆಯ ಹಿಡಿದು ನಡಸಲು ರಂಗ -ದಟ್ಟಡಿಇಕ್ಕುವನೆ |ಭ್ರಷ್ಟ ಮಾತುಗಳನೆಷ್ಟೋ ಕಲ್ಪಿಸಿ |ಪಟ್ಟ ಪಟ್ಟಿಗೆ ರಟ್ಟು ಮಾಡುವುದು 1ಅರಿಯದಂತೆ ನೊರೆಹಾಲನು ಕುಡಿವನೆ -ಕರೆಕರೆಮಾಡುವನೆ |ಇರಲು ಮನೆಯೊಳಗೆ ಬರುತ ನಿಮ್ಮ ಮನೆ - ಮೊಸರನು--------------------ಸುರಿಯವನೆ ||ಸರಸಿಜಾಕ್ಷಿಯರೆ ಪರಿಪರಿಯಿಂದಲಿ |ಹರಲಿ ಮಾಡುವುದಿದು ತರವೇನಮ್ಮ 2ಚಿಕ್ಕ ಚಿಕ್ಕ ಗೋವಕ್ಕಳ ಕೂಡ ಚೆಂಡನಾಡುವಾಗ |----------------------------------------ಸಿಕ್ಕಿತೆನುತ ಬಹು ಚಕ್ಕಂದಾಡುತ |ಗಕ್ಕನೆ ಹೋಗಿ ಕೈಯಿಕ್ಕಿ ತೆಗೆದನೆ 3ಮಾಲೆಗಂಬದೋಪಾದಿಯಲಿ ನೀವು ಬಹಳ ಬೆಳೆದಿರೀಗ |ನೀಲಕುಂತಳೆಯೆ ದಧಿಶೋಧಿಸಿ ಓಲಾಡುತ ಕಡೆವಾಗ ||ಬಾಲಕೃಷ್ಣನಿಗೆ ಜೋಲುವ ಕುಚಗಳು |ನಿಲುಕುವ ಬಗೆ ಹೇಗೆ? ||ಖೂಳಸೆಟವಿಯರು ಕಾಳವಾಗಿಹರು |ಕೇಳಿಕೇಳಿ ಬೇಸತ್ತಿಹೆನಮ್ಮ 4ಫುಲ್ಲನಾಭನಿವ ಒಲ್ಲದನಾದರೆ ಎಲ್ಲ ಒಯ್ದಿಡಬೇಕೆ? |ಖುಲ್ಲತನದಿ ನೀವ್ ನಿಲ್ಲಗೊಡದಿಹಿರಿ ಗುಲ್ಲುತನವು ಸಾಕೆ ||--------------------ಸಲ್ಲದು ಈ ನುಡಿ ಪುರಂದರವಿಠಲಗೆ |ಹಲ್ಲೊಳಗಾತನ ಇಟ್ಟಿರಬೇಡಿ 5
--------------
ಪುರಂದರದಾಸರು
ಹರಿ ನಿನ್ನೊಲುಮೆಯು ಆಗುವತನಕ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಅರಿತು ಸುಮ್ಮಗಿರುವುದೆ ಲೇಸು ಪ.ಮರಳಿ ಮರಳಿ ತಾ ಪಡೆಯದ ಭಾಗ್ಯವು |ಮರುಗಿದರೆ - ತನಗಾದೀತೆ ? ಅಪದೂರು ಬರುವ ನಂಬಿಗೆಯನು ಕೊಟ್ಟರೆ |ದುರ್ಜನ ಬರುವುದು ತಪ್ಪೀತೆ ||ದೂರ ನಿಂತು ಮೊರೆಯಿಟ್ಟು ಕೂಗಿದರೆ |ಚೋರರಿಗೆ ದಯ ಪುಟ್ಟೀತೆ |ಜಾರನಾರಿ ತಾ ಪತಿವ್ರತೆ ಎನ್ನಲು |ಜಾಣರಿಗೆ - ನಿಜ ತೋರೀತೆ ||ಊರ ಬಿಟ್ಟು ಬೇರೂರಿಗೆ ಹೋದರೆ |ಪ್ರಾರಬ್ಧವು ಬೇರಾದೀತೆ 1ಪಾಟುಪಡುವುದು ಪಣೆಯಲ್ಲಿರಲು |ಪಟ್ಟಮಂಚ ತನಗಾದೀತೆ ||ಹೊಟ್ಟೆಯಲ್ಲಿ ಸುತರಿಲ್ಲೆಂದು ಹೊರಳಲು |ಹುಟ್ಟು ಬಂಜೆಗೆ ಮಕ್ಕಳಾದೀತೆ ?||ಬೆಟ್ಟದ ನವಿಲಿಗೆ ಕಣ್ಣೀರು ಬಂದರೆ |ಬೇಟೆಗಾರಗೆ ದಯ ಪುಟ್ಟೀತೆ ||ಕೆಟ್ಟ ಹಾವು ತಾ ಕಚ್ಚಿದ ವಿಷವದು |ಬಟ್ಟೆಯಲೊರಸಲು ಹೋದೀತೆ 2ಧನಿಕನ ಕಂಡು ಪಾಡಿ ಪೊಗಳಿದರೆ |ದಾರಿದ್ರ್ಯವು ತಾ ಹಿಂಗೀತೆ ||ದಿನದಿನ ನೊಸಲೊಳು ನಾಮವನಿಟ್ಟರೆ |ದೇವರಿಗೆ ತೃಪ್ತಿಯಾದೀತೆ ||ಎಣಿಸಿಕೊಂಡು ಎಳ ಹಂಜಿಯ ನೂತರೆ |ಅಣೆಯದ ಸಾಲವು ತೀರೀತೆ |ಅನುದಿನದಲಿ ಶ್ರೀ ಪುರಂದರವಿಠಲನ |ನೆನೆಯದಿದ್ದರೆಭವಹಿಂಗೀತೆ3
--------------
ಪುರಂದರದಾಸರು