ಚರಣವ ತೋರೈ ಚಲುವರಸನೇ
ಚರಣವ ತೋರೈ ಪ
ಸ್ಮರಣೆಮಾತ್ರದಲಿ ಮುಕುತಿಯ ಕೊಡುವ ಚರಣವ ತೋರೈ ಅ.ಪ
ರಮ್ಮೆಯ ಮನಕೆ ಬೆಡಗು ತೋರುವ ಚರಣ
ಬೊಮ್ಮಾದಿಗಳ ಮನಕೆ ನಿಲುಕದ ಚರಣವ ತೋರೈ
ಚಿಮ್ಮಿ ರಾವಣನ ಬಲು ದೂರಗೈದ ಚರಣವ ತೋರೈ
ಘಮ್ಮನೆ ಮೊಸರು ಮೆದ್ದು ಓಡುವ ಚರಣ ತೋರೈ 1
ಗೋಕುಲ ಭೂಮಿಯ ಪಾವನ ಮಾಡಿದ ಚರಣವ ತೋರೈ
ಲೋಕವನೆಲ್ಲಾ ಅಡಗಿಸಿಕೊಂಡಾ ಚರಣವ ತೋರೈ
ಬೇಕೆಂದು ಕುಬುಜಿಯ ಮನೆಗೆ ಪೋದ ಚರಣವ ತೋರೈ
ಭವಾಬ್ಧಿ ಬತ್ತಿಸಿ ಬಿಡುವಾ ಚರಣವ ತೋರೈ 2
ಬಿಡದಲೆ ಸರ್ವಜ್ಞತೀರ್ಥರಿಗೊಲಿದಾ ಚರಣವ ತೋರೈ
ಬಡವರಾಧಾರ ದಿವ್ಯಭೂಷಣವಿಟ್ಟು ಚರಣವ ತೋರೈ
ಕಡು ಮುದ್ದು ಸಿರಿಕೃಷ್ಣ ವಿಜಯವಿಠ್ಠಲ ನಿನ್ನ ಚರಣವ ತೋರೈ
ಪೂಜೆಯಗೊಂಬ ಚರಣವ ತೋರೈ3